
ಬೆಂಗಳೂರು,ಡಿ.12- ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರಿದಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಹೊರಟಿದ್ದ ಮೂರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಕಾಚರಕನಹಳ್ಳಿಯಲ್ಲಿ , ಹೆಣ್ಣೂರು ಬ್ರಿಡ್ಜ್ ಹಾಗೂ ಮೇಡಿ ಅಗ್ರಹಾರದಲ್ಲಿ ಬೆಳಗ್ಗೆ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಯಾಗಿವೆ.
ನಿನ್ನೆ ಒಟ್ಟು 14 ಬಸ್‍ಗಳಿಗೆ ಕಲ್ಲು ಹೊಡೆದಿದ್ದು, ಗಾಜುಗಳು ಜಖಂಗೊಂಡಿವೆ. ನಗರದ ಎಲ್ಲಾ ಡಿಫೋಗಳಿಂದ ಇಂದು 91 ಬಸ್‍ಗಳು ಸಂಚಾರಕ್ಕೆ ಹೊರಟಿವೆ. 34 ಬಸ್‍ಗಳಿಗೆ ಕಲ್ಲು: ನಿನ್ನೆ ವಿವಿಧ ಜಿಲ್ಲೆಗಳಲ್ಲಿ ಕಿಡಿಗೇಡಿಗಳು ಕೆಎಸ್‍ಆರ್‍ಟಿಸಿಯ 34 ಬಸ್‍ಗಳಿಗೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ