I have shared in the popular news in dodmane photo studio uploaded in Bairava in all posted by all news papers in online upded news in kannada....
Contact number 9844043679
ರಾಬರ್ಟ್ ಸಿನಿಮಾ ನಿರ್ಮಾಪಕರ ಹತ್ಯೆಗೆ ಸಂಚು: ಏಳು ಮಂದಿ ಸೆರೆ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ
ರಾಬರ್ಟ್ ಸಿನಿಮಾ ನಿರ್ಮಾಪಕ, ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್‌ಗಳ ಹತ್ಯೆಗೆ
ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿ ಭಾನುವಾರ ಮುಂಜಾನೆ ದಕ್ಷಿಣ ವಿಭಾಗ
ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ದರ್ಶನ್, ಗಿರೀಶ್, ಮೋಹನ್, ರಾಜನ್
ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಪ್ರಮುಖ ಆರೋಪಿ ಬಾಂಬೆ ರವಿ ಮತ್ತು
ನೀಲಸಂದ್ರದ ಮಂಜುನಾಥ್ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ
ಮುಂದುವರಿದಿದೆ.
ಆರೋಪಿಗಳು ಜಯನಗರದ
ನ್ಯಾಷನಲ್ ಕಾಲೇಜು ಸಮೀಪದಲ್ಲಿ ಕಾರೊಂದರಲ್ಲಿ ಕುಳಿತು ರಾಬರ್ಟ್ ಸಿನಿಮಾ ನಿರ್ಮಾಪಕ
ಉಮಾಪತಿ ಶ್ರೀನಿವಾಸ್, ಅವರ ಸಹೋದರ ದೀಪಕ್, ರೌಡಿಶೀಟರ್‌ಗಳಾದ ಸೈಕಲ್ ರವಿ, ಬೇಕರಿ
ರಘು ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ
ನೀಡಿದರು. ಈ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಭಾನುವಾರ
ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್ ಗಸ್ತಿನಲ್ಲಿದ್ದರು. ಆಗ
ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ
ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ
ಇನ್‌ಸ್ಪೆಕ್ಟರ್ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು
ಚಾಲನೆ ಮಾಡಿ ಪೊಲೀಸ್ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಅನಂತರ ಪೊಲೀಸ್
ಜೀಪ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಸೂಚಿಸಲಾಗಿದೆ. ಆಗ
ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ
ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು
ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ
ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ
ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.(ಮಾಹಿತಿ ಕೃಪೆಉದಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ