ಆತ್ಮೀಯ ಪೋಷಕ ಬಂಧುಗಳೇ, ನಿಮ್ಮ ಮಗು ಸರ್ಕಾರಿ ಶಾಲೆಗೆ ಸೇರುವುದರಿಂದ ಆಗುವ ಲಾಭಗಳು..........
೧. ಉಚಿತವಾದ ಶಿಕ್ಷಣ.
೨. ಪ್ರತಿಭಾವಂತ ಶಿಕ್ಷಕರಿಂದ ಬೋಧನೆ.
೩. ಪೋಷಕರಿಗೆ ಆರ್ಥಿಕ ಹೊರೆ ಇಲ್ಲ.
೪. ಉಚಿತವಾದ ಸಮವಸ್ತ್ರಗಳು.
೫. ಉಚಿತವಾದ ಪಠ್ಯಪುಸ್ತಕಗಳು.
೬. ಉಚಿತವಾದ ಸೈಕಲ್ಗಳು.
೭. ವಾರದ ೫ ದಿನ ಕ್ಷೀರಭಾಗ್ಯ.
೮. ಉತ್ತಮ ಕಂಪನಿಯ ಒಂದು ಜೊತೆ ಶೂ.
೯. ವಿದ್ಯಾರ್ಥಿ ವೇತನ.
೧೦. ವಿಕಲಚೇತನರಿಗೆ ವಿಶೇಷ ಸೌಲಭ್ಯಗಳು.
೧೧. ಗ್ರಂಥಾಲಯ ಸೌಲಭ್ಯ.
೧೨. ಪ್ರಯೋಗಾಲಯ.
೧೪. ಸುಸಜ್ಜಿತ ಕೊಠಡಿಗಳು..
೧೫. ನವೀನ ಶೌಚಾಲಯಗಳು.
೧೬. ಆಟದ ಮೈದಾನ.
೧೭. ಉಚಿತ ಕ್ರೀಡಾ ಸಾಮಗ್ರಿಗಳು.
೧೮. ನಲಿ-ಕಲಿ ಮೂಲಕ ಬೋಧನೆ.
೧೯. ೧ನೇ ತರಗತಿಯಿಂದಲೇ ಇಂಗ್ಲೀಷ್ ಬೋಧನೆ.
೨೦. ಹೊಸದಾಗಿ LKG/UKG ಆರಂಭ.
೨೧. ಪ್ರತಿಭಾಕಾರಂಜಿ ಕ್ರೀಡಾಕೂಟ ಆಯೋಜನೆ.
೨೨. CCE ಮೂಲಕ ಬೋಧನೆ.
೨೩. TLM ಮೂಲಕ ಬೋಧನೆ.
೩೪. ಇನ್ಸಪೈರ್ ಅವಾರ್ಡ್ ಮೂಲಕ ಭಾವಿ ವಿಜ್ಞಾನಿಗಳಿಗೆ ಪ್ರೋತ್ಸಾಹ..
೨೫. ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ ಯೋಜನೆಯಡಿ ಉಚಿತ ಆರೋಗ್ಯ ತಪಾಸಣೆ.
೨೬. ವಿದ್ಯಾರ್ಥಿನಿಯರಿಗೆ ಉಚಿತ ಶುಚಿ ಪ್ಯಾಡ್.
೨೭. ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ.
೨೮. ರೇಡಿಯೋ ಮೂಲಕ ಚುಕ್ಕಿ ಚಿನ್ನ, ಕೇಳಿ ಕಲಿ ಕಾರ್ಯಕ್ರಮ
೨೯. ಉಚಿತವಾದ ಕಂಪ್ಯೂಟರ್ ಶಿಕ್ಷಣ.
೩೦. ಮೌಲ್ಯಶಿಕ್ಷಣ..
೩೧. ಮಕ್ಕಳಿಂದಲೇ ನಿರ್ಮಿತವಾದ ಸುಂದರ ಕೈ ತೋಟ.
೩೨. ಅಕ್ಷರ ಪೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕೆಗೆ ಉಚಿತ ಸಾಮಗ್ರಿಗಳು.
೩೪. ಶಿಕ್ಷಣ ಕಲಿಕೆಯ ತಪಾಸಣೆಗಾಗಿ ದಕ್ಷ ಅಧಿಕಾರಿ/ ಮಾರ್ಗದರ್ಶಕರು.
೩೫. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ.
೩೬. ಮಕ್ಕಳ ಕಲಿಕೆ ಹಾಜರಾತಿ ದಾಖಲಿಸಲು SATS
೩೭. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪರಿಹಾರ ಬೋಧನೆ.
೭೮. ಉಚಿತ ಮಧ್ಯಾಹ್ನದ ಬಿಸಿಯೂಟ ಯೋಜನೆ.
೩೯. ಸಂಸತ್ ರಚನೆಯ ಮೂಲಕ ಪ್ರಜಾಪ್ರಭುತ್ವ ಪರಿಚಯ
೪೦. ಶಾಲೆ ಉಸ್ತುವಾರಿಗಾಗಿ sdmc ರಚನೆ.
೪೧. ವಿವಿಧ ಸಂಘಗಳ ರಚನೆಯ ಮೂಲಕ ಮಕ್ಕಳಲ್ಲಿ ಜಾಗೃತಿ.
೪೨. ಶಾಲಾ ವಾರ್ಷಿಕೋತ್ಸವ
೪೩. ನವೋದಯ ಆದರ್ಶ, ಮೊರಾರ್ಜಿ, ಕಸ್ತೂರಿಬಾ, ಕಿತ್ತೂರು ರಾಣಿ ಚೆನ್ನಮ್ಮ , ಇಂದಿರಾ, ಏಕಲವ್ಯ, ವಾಜಪೇಯಿ kps ವಸತಿ ಶಾಲೆಗಳು.
೪೪. ಮಕ್ಕಳಿಗೆ ಎಲ್ಲ ರೀತಿಯ ಮೌಲ್ಯಗಳ ಬೆಳವಣಿಗೆಗೆ ಮುಕ್ತ ಅವಕಾಶ.
೪೫. ದೈರ್ಯ, ಆತ್ಮವಿಶ್ವಾಸ, ನಾಯಕತ್ವ, ಕಷ್ಟ ಸಹಿಷ್ಣುತೆ, ಬಡತನ ಸಿರಿತನ ಇತ್ಯಾದಿಗಳ ನೈಜ ಅನುಭವ.
೪೬. ಸರ್ಕಾರಿ ವೃತ್ತಿಯಲ್ಲಿ ಕನ್ನಡ ಮಾಧ್ಯಮ, ಗ್ರಾಮಾಂತರ ಕೋಟಾ
ಇಷ್ಟೊಂದು ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗೆ ನಿಮ್ಮ ಮಕ್ಕಳನ್ನು ಸೇರಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ