ಬಿಹಾರದ ಪಾಟ್ನಾದ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಮೂವರು ಮಹಿಳಾ ಶಿಕ್ಷಕರನ್ನು ನೆಲದ ಮೇಲೆ ಉರುಳಿಸಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ್ಯೋಪಾಧ್ಯಾಯಿನಿಯರ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಶಿಕ್ಷಕರು ಹಾಗೂ ಶಾಲೆಯ ಮಕ್ಕಳು ಸಹ ಕಿಟಕಿಯ ಬಳಿ ನಿಂತು ಶಿಕ್ಷಕರ ಜಗಳವನ್ನು ವೀಕ್ಷಿಸುತ್ತಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ.
ಒಬ್ಬರು ತರಗತಿಯ ಕಿಟಕಿಗಳನ್ನು ಮುಚ್ಚಲು ಕೇಳಿದರೆ, ಇನ್ನೊಬ್ಬರು ಕಿಟಕಿ ಮುಚ್ಚಲು ನಿರಾಕರಿಸಿದರು. ಈ ವಿಚಾರವಾಗಿ ಆರಂಭವಾದ ವಾಗ್ವಾದ ಮಾರಾಮಾರಿವರೆಗೂ ತಲುಪಿತ್ತು.ತರಗತಿಯೊಳಗೆ ಆರಂಭವಾದ ಜಗಳದ ನಂತರ ಅವರು ನೆಲದ ಮೇಲೆ ಬಿದ್ದು ಶಾಲೆಯ ಅಂಗಳದಲ್ಲಿ ಪರಸ್ಪರ ಹೊಡೆದಾಡಿಕೊಂಡರು. ಅಲ್ಲಿದ್ದವರೊಬ್ಬರು ಹೊಡೆದಾಟದ ವಿಡಿಯೋ ಮಾಡಿದ್ದಾರೆ.
ಮುಖ್ಯಶಿಕ್ಷಕಿ ಕಾಂತಿ ಕುಮಾರಿ ಹಾಗೂ ಶಿಕ್ಷಕಿ ಅನಿತಾ ಕುಮಾರಿ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಮತ್ತೋರ್ವ ಶಿಕ್ಷಕಿ ಚಪ್ಪಲಿಯಿಂದ ಮುಖ್ಯಶಿಕ್ಷಕಿಯರಿಗೆ ಹೊಡೆದಿದ್ದಾರೆ. ಆಗ ಮತ್ತೊಬ್ಬ ಕೂಡ ಬಂದು ಮುಖ್ಯೋಪಾಧ್ಯಾಯಿನಿಯನ್ನು ದೊಣ್ಣೆಯಿಂದ ಹೊಡೆದಿದ್ದಾನೆ.
ವೈರಲ್ ಆಗಿರುವ ಹೊಡೆದಾಟದ ವಿಡಿಯೋ ವೀಕ್ಷಿಸಿದ ಬ್ಲಾಕ್ ಶಿಕ್ಷಣಾಧಿಕಾರಿ ನರೇಶ್ ಮಾತನಾಡಿ, ಇಬ್ಬರು ಶಿಕ್ಷಕರ ನಡುವೆ ವೈಯಕ್ತಿಕ ಜಗಳ ನಡೆದಿದ್ದು, ಶಾಲೆಯಲ್ಲಿ ಘರ್ಷಣೆ ನಡೆದರೆ ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಸದ್ಯ ಈ ವಿಡಿಯೋ ಮೊಬೈಲ್‌ನಿಂದ ಮೊಬೈಲ್‌ಗೆ ಹಬ್ಬಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಕ್ಕಳಿಗೆ ಪಾಠ, ನೈತಿಕ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಈ ರೀತಿ ಜಗಳವಾಡುತ್ತಿದ್ದಾರಾ ಎಂದು ಮಕ್ಕಳ ಸ್ಥಿತಿ ಏನು ಎಂದು ಪಾಲಕರು ಪ್ರಶ್ನಿಸಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ