ಶಿವಮೊಗ್ಗ: ಹಲವು ವರ್ಷಗಳಿಂದ ಶಾಶ್ವತ ನೆಲೆ ಇಲ್ಲದೆ ಅಲೆದಾಡುತ್ತಿದ್ದೇವೆ. ನಮ್ಮ ಸೂರುಗಳನ್ನು ನಾವೇ ನಿರ್ಮಿಸಿಕೊಡಿ ಎಂದು ಹಕ್ಕಿಪಿಕ್ಕಿ ಸಮಾಜದ ಪ್ರಮುಖರಾದ ರಾಜು ಹಾಗೂ ಸಂತ್ರಸ್ತ ಕುಟುಂಬಗಳು ಮಂಗಳವಾರ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಇಲ್ಲಿನ ಶ್ರೀರಾಂಪುರದ ಸಾಗರ ರಸ್ತೆ ಬಳಿಯ ಹಕ್ಕಿಪಿಕ್ಕಿ ಕ್ಯಾಂಪ್ ನಲ್ಲಿ ರಾತ್ರಿ ಸುರಿದ ಮಳೆಗೆ 20ಕ್ಕೂ ಹೆಚ್ಚು ಟೆಂಟ್ ಗಳಿಗೆ ಹಾನಿಯಾಗಿದೆ. ಗಾಳಿಯ ರಭಸಕ್ಕೆ ಟೆಂಟ್ ನಲ್ಲಿಟ್ಟಿದ್ದ ದಿನಸಿ, ಸಾಮಾನುಗಳು ಸಂಪೂರ್ಣ ನಾಶವಾಗಿವೆ. ಇದರ ಹೊರೆಯನ್ನು ಬಡ ನಿವಾಸಿಗಳು ಅನುಭವಿಸಬೇಕಾಗಿದೆ. ಈ ಹಿಂದೆ ವೀರಣ್ಣನ ಬೆನವಳ್ಳಿಯಲ್ಲಿ 150ಕ್ಕೂ ಹೆಚ್ಚು ಹಕ್ಕಿಪಿಕ್ಕಿ ಕುಟುಂಬಗಳು ಡೇರೆಗಳಲ್ಲಿ ವಾಸವಾಗಿದ್ದವು. ಇದಾದ ನಂತರ ಕೆಲವು ಕುಟುಂಬಗಳು ಇಲ್ಲಿಗೆ ಸ್ಥಳಾಂತರಗೊಂಡು ಕಳೆದ ಕೆಲವು ವರ್ಷಗಳಿಂದ ಶ್ರೀರಾಂಪುರದಲ್ಲಿ ವಾಸಿಸುತ್ತಿದ್ದು, ಇದು ಅರಣ್ಯ ಭೂಮಿಯಾಗಿದೆ. ಪಕ್ಕಾ ಮನೆ ಬೇಕು ಎಂದು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇಂದಿಗೂ ಮನೆ ಸಿಕ್ಕಿಲ್ಲ. ಸರಕಾರ ಹಾಗೂ ಜಿಲ್ಲಾಡಳಿತ ನಮಗೆ ಪಕ್ಕಾ ಸೂರು ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ