ಹೊಸಪೇಟೆ_ತಾಲೂಕು ಸಾಹಿತಿಗಳು, ಕವಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಅವರ ಸಾಹಿತ್ಯ ಸೇವೆ ಅಪಾರ ಮತ್ತು ಅನನ್ಯ. ದುರಂತ ನೋಡಿ, ಹೊಸಪೇಟೆ ತಾಲೂಕಿನ ಸಾಹಿತಿಗಳ, ಕವಿಗಳ, ಲೇಖಕರ ಪುಸ್ತಕಗಳು ಒಂದು ಕಡೆ ಕಪಾಟಿನಲ್ಲಿ ಸಿಗುವಂತೆ ಮತ್ತು ಪಟ್ಟಿ ಮಾಡಿ ಲಗತ್ತಿಸುವಂಥ ಕೆಲಸಗಳನ್ನೇ ಇಂದಿಗೂ #ಹೊಸಪೇಟೆ_ನಗರ_ಕೇಂದ್ರ_ಗ್ರಂಥಾಲಯ ದವರು ಮಾಡಲಿಲ್ಲ. ಇದು ಇಲ್ಲಿನದೊಂದೇ ಸಮಸ್ಯೆಯಲ್ಲ. ಕರ್ನಾಟಕದ ಎಲ್ಲೆಡೆ ಈ ಸಮಸ್ಯೆ ಇದ್ದೇ ಇದೆ.
ಎಲ್ಲಾ ಸಮಸ್ಯೆಗಳ ಕರ್ತೃಗಳು, ಸೃಷ್ಟಿಕರ್ತರು ಆಡಳಿತ ನಡೆಸುವ #ಜನಪ್ರತಿನಿಧಿ ಗಳು ಮತ್ತು ಅಧಿಕಾರಿಗಳು ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲೂ ಆಯಾ ಫಲಾನುಭವಿಗಳ ಆಯಾ ಸೇವೆ ಪರಿಪೂರ್ಣವಾಗಿ ತಲುಪಬೇಕೆಂಬುದು ನಮ್ಮ ಆಶಯ. ಹೊಸಪೇಟೆ ಸಾಹಿತಿಗಳ, ಲೇಖಕರ ಪುಸ್ತಕಗಳನ್ನು ಒಂದೇ ಕಪಾಟಿನಲ್ಲಿ ಸಿಗುವಂತೆ, ಕೈಗೆಟುಕುವಂತೆ ಕ್ರಮ ಕೈಗೊಳ್ಳಲು ಹೊಸಪೇಟೆ ನಗರ ಕೇಂದ್ರ ಗ್ರಂಥಾಲಯದ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಸೂಚಿಸಿದ್ದೇನೆ.
ಅಂದ ಹಾಗೆ, ಹೊಸಪೇಟೆ ನಗರ ಕೇಂದ್ರ ಗ್ರಂಥಾಲಯ ನಳನಳಿಸುವ ಹೊಸ ಕಟ್ಟಡಕ್ಕೆ ಹೋಗುತ್ತಿದೆ. ಮಾಚ್೯ 26 ರಂದು ನೂತನ ಕಟ್ಟಡ ಉದ್ಘಾಟನೆ ಕಾಣಬೇಕಿತ್ತು. ದುರಂತವೆಂದರೆ, ಅದಾಗಿ ಆರು ತಿಂಗಳಾದರೂ ಉದ್ಘಾಟನೆಯ ಭಾಗ್ಯ ಪ್ರಾಪ್ತವಾಗಿಲ್ಲ. ಎಲ್ಲಾ ಕ್ಷೇತ್ರಗಳ ಸಮರ್ಪಕ ನಿರ್ವಹಣೆ ಮತ್ತು ಸುಧಾರಣೆಗಳನ್ನು ಭ್ರಷ್ಟಾಚಾರ ಮುಕ್ತ ಕರ್ನಾಟಕ ಬಯಸುತ್ತದೆ ಮತ್ತು ಒತ್ತಾಯಿಸುತ್ತದೆ. ನಿಮ್ಮದೊಂದು ಹರಕೆಯಿರಲಿ...
#ಪ_ಯ_ಗಣೇಶ
ರಾಜ್ಯಧ್ಯಕ್ಷ, #ಭ್ರಷ್ಟಾಚಾರ_ಮುಕ್ತ_ಕರ್ನಾಟಕ
ಹೊಸಪೇಟೆ.
9481 711 600.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ