ಸಿಂಗಾಪುರ್: ವಿಶ್ವವನ್ನು ವ್ಯಾಪಿಸಿರುವ ಮಹಾಮಾರಿ ಕೊರೋನಾ ವೈರಸ್ ಮುಂದಿನ ತಿಂಗಳಿಗೆ ಅಂತ್ಯವಾಗಲಿದೆ ಎಂದು ಸಂಶೋಧನೆಯೊಂದು ಹೇಳಿದೆ.
ಭಾರತದಲ್ಲಿ ಮೇ 21 ರ ವೇಳೆಗೆ ಕೊರೋನಾ ಸೋಂಕು ಶೇಕಡ 97ರಷ್ಟು ಕಡಿಮೆಯಾಗಲಿದೆ ಎಂದು ಸಿಂಗಾಪುರ್ ದತ್ತಾಂಶ ವಿಶ್ಲೇಷಕರು ಹೇಳಿದ್ದಾರೆ. ಸಿಂಗಾಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯದ ಸಂಶೋಧಕರು ನೀಡಿರುವ ಮಾಹಿತಿಯಂತೆ ಮೇ 21 ಕ್ಕೆ ಭಾರತ ಸೇರಿ ಹಲವು ದೇಶಗಳಲ್ಲಿ ಇದು ಅಂತ್ಯವಾಗಲಿದೆ.
ಕೃತಕ ಬುದ್ಧಿಮತ್ತೆ ಆಧಾರಿತ ದತ್ತಾಂಶ ವಿಶ್ಲೇಷಣೆಯಿಂದ ಹಲವು ದೇಶಗಳಲ್ಲಿ ಮೇ ತಿಂಗಳಲ್ಲಿ ಮುಕ್ತಾಯವಾಗಲಿದೆ. ಶೈಕ್ಷಣಿಕ ಮತ್ತು ಸಂಶೋಧನೆಗೆ ಈ ಅಧ್ಯಯನಕ್ಕೆ ಮಾತ್ರ ಈ ಭವಿಷ್ಯ ಎಂದು ಹೇಳಲಾಗಿದೆ. ಸಂಶೋಧನೆಗೆ ಶಂಕಿತ, ಸೋಂಕಿತ, ಗುಣಮುಖ ಮಾದರಿಯನ್ನು ಬಳಸಲಾಗಿದೆ. ವಿವಿಧ ದೇಶಗಳಲ್ಲಿ ಕೊರೋನಾ ಸೋಂಕು ಮುಕ್ತಾಯವಾಗುವ ದಿನಗಳನ್ನು ದತ್ತಾಂಶ ಆಧಾರದಲ್ಲಿ ಹೇಳಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ