ವಾಷಿಂಗ್ಟನ್: ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಸೋಂಕು ಜಗತ್ತಿನ ಬಹುತೇಕ ದೇಶಗಳಲ್ಲಿ ಹಬ್ಬಿದೆ. ಈ ಮೊದಲು ಕೊರೊನಾ ವೈರಸ್ ಸೋಂಕು ಪೀಡಿತರಲ್ಲಿ ಕೇವಲ ಮೂರು ಲಕ್ಷಣಗಳನ್ನು ಗುರುತಿಸಲಾಗಿತ್ತು. ಸೋಂಕು ಪತ್ತೆಯಾಗಿ ತಿಂಗಳುಗಳು ಕಳೆದ ನಂತರ ಹೊಸದಾಗಿ ಆರು ರೋಗ ಲಕ್ಷಣಗಳನ್ನು ಕಂಡುಹಿಡಿಯಲಾಗಿದೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಕೊರೊನಾ ಸೋಂಕಿನ ಆರು ಹೊಸ ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದೆ ಕೇವಲ ಮೂರು ರೋಗ ಲಕ್ಷಣಗಳನ್ನು ಪಟ್ಟಿ ಮಾಡಲಾಗಿತ್ತು. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಗಳು ಕೊರೊನಾ ಸೋಂಕಿನ ಮೂರು ಲಕ್ಷಣಗಳಾಗಿದ್ದವು.
ಈಗ ಶೀತ, ಮೈ ನಡುಗುವಿಕೆ, ಸ್ನಾಯು ಸೆಳೆತ, ತಲೆ ನೋವು, ಗಂಟಲು ನೋವು ಮತ್ತು ಹಠಾತ್ತನೆ ರುಚಿ ಅಥವಾ ವಾಸನೆ ಕಂಡುಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್‌ನ ಹೊಸ ಲಕ್ಷಣಗಳಾಗಿವೆ.ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ, ಹೊಸ ತೆರನಾದ ಗೊಂದಲ ಅಥವಾ ಎಚ್ಚರ ತಪ್ಪುವಿಕೆ, ತುಟಿಗಳು ಅಥವಾ ಮುಖ ನೀಲಿ ಬಣ್ಣಕ್ಕೆ ತಿರುಗುವಿಕೆ ಕೊರೊನಾ ವೈರಸ್ ಸೋಂಕಿನ ಮುನ್ಸೂಚನೆಗಳೆಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ