ಲಾಕ್‌ಡೌನ್ ಮುಗಿದಿದೆ. ಆದರೆ ಕೊರೊನಾ ಮುಗಿದಿಲ್ಲ. ಕೊರೊನಾ ಔಷಧಿ ಸಿಗುವವರೆಗೂ ನಾವು ಉಡಾಫೆ ಮಾಡದೇ ಹೋರಾಟ ಮುಂದುವರೆಸಬೇಕಾಗಿದೆ. ಇದು ಹಬ್ಬಗಳ ಸಮಯವಾಗಿದೆ. ಸಂತೋಷದ ಸಮಯವಾದರೂ ಸಹ ನಾವು ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಮೋದಿ ತಿಳಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು “ಕೊರೊನಾ ವಿರುದ್ಧದ ಹೋರಾಟದಲ್ಲಿ ಜನತಾ ಕರ್ಫ್ಯೂನಿಂದ ಹಿಡಿದು ಇಲ್ಲಿಯವರೆಗೂ ಭಾರತೀಯ ಜನರು ಹೋರಾಟ ನಡೆಸಿದ್ದಾರೆ. ನಾವು ಕೊರೊನಾಗೆ ಔಷಧಿ ಕಂಡುಹಿಡಿಯಲು ಯೋಜನೆ ರೂಪಿಸಿದ್ದೇವೆ. ಈ ಎಂಟು ತಿಂಗಳಿನ ನಂತರ ಕೊರೊನಾ ಚೇತರಿಕೆಯ ಪ್ರಮಾಣ ಹೆಚ್ಚಾಗಿದೆ. ಮರಣ ಪ್ರಮಾಣ ಕಡಿಮೆಯಾಗಿದೆ ಎಂದರು.
ಸೇವಾ ಪರಮೋಧರ್ಮ ಮಂತ್ರದ ಆಧಾರದಲ್ಲಿ ವೈದ್ಯರು, ನರ್ಸ್‌ಗಳು, ಕೊರೊನಾ ವಾರಿಯರ್ಸ್, ಪೌರಕಾರ್ಮಿಕರು ಕೊರೊನಾ ವಿರುದ್ಧ ಹೋರಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ತಿಳಿಸಬೇಕು ಎಂದರು.
ಇದು ಹಬ್ಬಗಳ ಸಮಯ. ನವರಾತ್ರಿ, ದಸರಾ, ಈದ್, ದೀಪಾವಳಿ, ದುರ್ಗಾಪೂಜಾ, ಷಡ್‌ಪೂಜಾ, ಗುರುನಾನಕ್ ಜಯಂತಿ ಬರುತ್ತಿವೆ. ಹಾಗಾಗಿ ಕೊರೊನಾ ಉಲ್ಭಣಿಸದಂತೆ ಮುಂಜಾಗ್ರತೆಯಿಂದ ನಡೆದುಕೊಳ್ಳಬೇಕು ಎಂದು ಮೋದಿ ಕರೆ ನೀಡಿದರು.
ಪ್ರಧಾನಿ ಭಾಷಣಕ್ಕೂ ಮೊದಲು “ಆತ್ಮೀಯ ಪ್ರಧಾನಿಗಳೆ, ನಿಮ್ಮ ಸಂಜೆ 6 ಗಂಟೆಯ ಭಾಷಣದಲ್ಲಿ ನೀವು ಚೀನಿಯರನ್ನು ಭಾರತೀಯ ಭೂಪ್ರದೇಶದಿಂದ ಹೊರಹಾಕುವ ದಿನಾಂಕವನ್ನು ದಯವಿಟ್ಟು ದೇಶಕ್ಕೆ ತಿಳಿಸಿ. ಧನ್ಯವಾದಗಳು” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು.
(ಮಾಹಿತಿ ಕೃಪೆ ನಾನು ಗೌರಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ