
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಯೋಗರಾಜ್ ಭಟ್ ಜತೆಗೆ ಚಿತ್ರವೊಂದನ್ನು ಮಾಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದ್ದು ಭಟ್ರ ಚಿತ್ರಕಥೆಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಶಿವಣ್ಣನ ಜತೆಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಸಹ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸೆನ್ಶೇಷನ್ ಮೂಡಿಸಿದೆ.
ನಾನು ಸ್ಕ್ರಿಪ್ಟ್ ಓದಿದ್ದೇನೆ. ಪ್ರಭುದೇವ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶಿವರಾಜ್‌ಕುಮಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಯೋಗರಾಜ್ ಭಟ್ ಅಸಾಧಾರಣ ಕಥೆಯೊಂದಿಗೆ ಬಂದಿದ್ದಾರೆ. ಕಥಾಹಂದರ ಅನನ್ಯವಾಗಿದೆ. ಅವರು ಪ್ರಭುದೇವ ಮತ್ತು ನನ್ನ ಎರಡೂ ಪಾತ್ರಗಳನ್ನು ಸಮಾನವಾಗಿ ತೋರಿಸಲಿದ್ದಾರೆ. ಪ್ರೀತಿಯ ಅಂಶವು ಇಡೀ ಚಿತ್ರಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ" ಎಂದು ಶಿವಣ್ಣ ಹೇಳುತ್ತಾರೆ. ಪ್ರಭುದೇವ ಕೂಡ ಸ್ಕ್ರಿಪ್ಟ್ ಕೇಳಿದ್ದಾರೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಮೈಸೂರು ಮೂಲದ ಪ್ರಭುದೇವ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ದೇಶಕರಾಗಿದ್ದಾರೆ.
ಪ್ರಭುದೇವ ಕಡೆಯ ಬಾರಿಗೆ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ "ಎಚ್ ಟು ಓ" ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಉಪೇಂದ್ರ ಮತ್ತು ಪ್ರಿಯಾಂಕಾ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದರು. ಪ್ರಸ್ತುತ ಅವರು ಸಲ್ಮಾನ್ ಖಾನ್ ಅಭಿನಯದ "ರಾಧೆ" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಭಟ್ರ ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ 2021 ರಲ್ಲಿ ಪ್ರಾರಂಭವಾಗಲಿದೆ.
"ಆರ್‌ಡಿಎಕ್ಸ್" ಚಿತ್ರದ ಶೂಟಿಂಗ್ ನವೆಂಬರ್ ನಲ್ಲಿ ಪ್ರಾರಂಭವಾಗಬೇಕಿದ್ದದ್ದು ಮುಂದೂಡಿಕೆಯಾಗಿದೆ ಶಿವಣ್ಣ ಅದನ್ನು ಪೂರ್ಣಗೊಳಿಸಬೇಕಿದೆ. ಇದಾಗಲೇ ಶಿವಣ್ನ ನಿರ್ದೇಶಕ ಎ ಹರ್ಷ ಅವರ "ಭಜರಂಗಿ 2" ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಮತ್ತು ಅವರ ಮುಂದಿನ ಯೋಜನೆಗಾಗಿ ನವೆಂಬರ್ ಗೆ ಸಿದ್ದವಾಗಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ರವಿ ಅರಸು ಅವರ "ಆರ್‌ಡಿಎಕ್ಸ್" ಮೊದಲು ತಯಾರಾಗಬೇಕಿತ್ತು. ಆದರೆ ಈಗ ಅದನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಶಿವಣ್ಣ ಈಗ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ಅವರ ಯೋಜನೆಯಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ.
"ಆರ್‌ಡಿಎಕ್ಸ್"ಅನ್ನು ಮುಂದಿನ ಡೇಟ್ ಗೆಮುಂದೂಡಲಾಗಿದೆ. ಹಾಗಾಗಿ ಕೃಷ್ಣ ಸಾರ್ಥಕ್ ನಿರ್ಮಿಸಿದ ನಿರ್ದೇಶಕ ವಿಜಯ್ ಮಿಲ್ಟನ್ ಅವರ ಚಿತ್ರದ ಡೇಟ್ಸ್ ಗಳನ್ನು ನಾನು ನಿಗದಿಪಡಿಸುತ್ತೇನೆ, ಅದು ನವೆಂಬರ್ ಮೂರನೇ ವಾರದಲ್ಲಿ ಇದು ಪ್ರಾರಂಭವಾಗಲಿದೆ. ನಾನು ಏಕಕಾಲದಲ್ಲಿ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇನೆ, ಎಲ್ಲವೂ ದೃಢಪಟ್ಟ ನಂತರ ಅದರ ವಿವರಗಳು ಬಹಿರಂಗಗೊಳ್ಳುತ್ತವೆ 'ಎಂದು ಶಿವಣ್ಣ ಹೇಳಿದ್ದಾರೆ.
(ಮಾಹಿತಿ ಕೃಪೆ ಕನ್ನಡ ಪ್ರಭ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ