ಬೆಂಗಳೂರು: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಗರದಲ್ಲಿಂದು ಪ್ರತಿಭಟನೆ ನಡೆಸಿತು.
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸೌದೆ ಒಲೆಯಲ್ಲಿ ಅಡುಗೆ ಮಾಡಿ ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳದಲ್ಲಿಯೇ ಎತ್ತಿನಗಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.
ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾತನಾಡಿ, "ಮೋದಿ ದಬ್ಬಾಳಿಕೆಯ ಮೂಲಕ ದೇಶ ಆಳುತ್ತಿದ್ದಾರೆ. ಏರಿಕೆ ಮಾಡಿರುವ ಪೆಟ್ರೋಲ್ ಬೆಲೆಯಲ್ಲಿ 33 ರೂ. ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಆಗಿದ್ದರೂ ಕೇಂದ್ರ ಸರ್ಕಾರ ತೆರಿಗೆ ಜಾಸ್ತಿ ಮಾಡಿದೆ. ಇದರಿಂದ ಎಲ್ಲಾ ಬೆಲೆ ಜಾಸ್ತಿಯಾಗಿದೆ. ಪ್ರಧಾನಿ ಹಿಟ್ಲರ್ ಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹೆಚ್ಚು ದಿನ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ದೇಶ ತಪ್ಪು ದಾರಿಯಲ್ಲಿ ಹೋಗುತ್ತಿದೆ. ದೇಶ ಒಗ್ಗೂಡಿಸುವುದು ಕಾಂಗ್ರೆಸ್ ಕಾರ್ಯಕರ್ತರ ಜವಾಬ್ದಾರಿ. ಎಲ್ಲರೂ ಸೇರಿ ಒಟ್ಟಾಗಿ ಜನರಿಗೋಸ್ಕರ ಹೋರಾಟ ಮಾಡೋಣ" ಎಂದು ಕರೆ ನೀಡಿದರು.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಹದ್ ಮಾತನಾಡಿ, "ಡಿಸೇಲ್ ಕಳ್ಳ ಉಪಮುಖ್ಯಮಂತ್ರಿ ಸವದಿ, ಸರ್ಕಾರಿ ಬಸ್ ಗಳಿಗೆ ಹಾಕಬೇಕಾದ ಡಿಸೇಲ್ ತಮ್ಮ ಕಾರಿಗೆ ಹಾಕಿಸಿಕೊಂಡಿದ್ದಾರೆ. ಇಂತಹ ಲಜ್ಜೆಗೆಟ್ಟ ಸರ್ಕಾರವನ್ನು ನೋಡಿಯೇ ಇಲ್ಲ. ರವೀಂದ್ರನಾಥ್ ಟ್ಯಾಗೂರ್ ತರಲು ಕಾಣಲು ಮೋದಿ ದೊಡ್ಡಗಡ್ಡ ಬಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಇದು ಲಾಭವಾಗಬಹುದು ಎಂಬ ದುರಾಲೋಚನೆಯಿಂದ ರೀತಿ ಗಡ್ಡ ಬಿಟ್ಟಿದ್ದಾರೆ. ಮೋದಿ ಬಹಳ ಬಲಿಷ್ಠ ನಾಯಕ ಎಂದು ಹೇಳುತ್ತಾರೆ, 56 ಇಂಚಿನ ಎದೆ ಇರುವ ಮೋದಿ ಎಂದು ಬೊಗಳೆ ಬಿಡುತ್ತಾರೆ. ಆದರೆ ರೈತರ ಬಗ್ಗೆ ಅವರ ಕಾಳಜಿ ಎಲ್ಲಿ ಹೋಯಿತು, ಬಡವರ ಬಗ್ಗೆ ಅವರ ಕಳಕಳಿ ಎಲ್ಲಿ ಹೋಯಿತು?" ಎಂದು ಪ್ರಶ್ನಿಸಿದರು.
(ಮಾಹಿತಿ ಕೃಪೆ ಕನ್ನಡ ಪ್ರಭ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ