ಹೊಸದಿಲ್ಲಿ: ರಾಷ್ಟ್ರೀಯ ಚರ್ಚೆಯ ಮಾನದಂಡದಲ್ಲಿ ಸತ್ಯ ಮಾತನಾಡುವುದು 'ಕ್ರಾಂತಿಕಾರಿ ಕೃತ್ಯ''ವಾಗಿದೆ ಎಂದು ಇತ್ತೀಚೆಗೆ ಲೋಕಸಭೆಯಲ್ಲಿ ಬಿರುಸಿನ ಭಾಷಣದ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ NDTV ಗೆ ತಿಳಿಸಿದ್ದಾರೆ.
ಭಾರತದ ಮಾಜಿ ಮುಖ್ಯ ನ್ಯಾಯಾಧೀಶರ ಕುರಿತು ಸಂಸತ್ತಿನಲ್ಲಿ ಮಾತನಾಡಿದ್ದಕ್ಕೆ ಬಿಜೆಪಿಯ ಇಬ್ಬರು ಸಂಸದರು ತನ್ನ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮೊಯಿತ್ರಾ, ಇದು ಬಿಜೆಪಿಯ ಕೊಳಕು ಹಾಗೂ ಅಪಪ್ರಚಾರದ ತಂತ್ರವಾಗಿದೆ ಎಂದರು.
ಇದು ಬಿಜೆಪಿಯ ಸಾಮಾನ್ಯ ತಂತ್ರವಾಗಿದೆ. ನೀವು ಸಿಬಿಐ ಅಥವಾ ಈಡಿಯ ಮೂಲಕ ಸಿಲುಕದಿದ್ದರೆ ಇಂತಹ ಕೊಳಕು ತಂತ್ರಗಳು ಅವರಲ್ಲಿ ಇರುತ್ತವೆ. 2019ರ ಜೂನ್ ನಲ್ಲಿ ನಾನು ಮೊದಲ ಬಾರಿ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾಗ ಅದು ವೈರಲ್ ಆದಾಗ ಮೊದಲಿಗೆ ಬಿಜೆಪಿಯವರಿಗೆ ಅರ್ಥವಾಗಿರಲಿಲ್ಲ.
ಒಂದೆರಡು ದಿನಗಳ ಬಳಿಕ ನನ್ನ ಭಾಷಣ ಅರ್ಥವಾದಾಗ ತಕ್ಷಣವೇ ತಮ್ಮ ನೆಚ್ಚಿನ ಚಾನೆಲ್ ಗಳ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡಲು ಆರಂಭಿಸಿದ್ದವು. ನನ್ನ ಈ ಭಾಷಣವೂ ಕೂಡ ಅವರಿಗೆ ಅರ್ಥವಾಗಲು 48 ಗಂಟೆಗಳು ಬೇಕಾದವು. ಇದೀಗ ಅವರು ಪ್ರಚಾರದ ಯಂತ್ರಗಳು, ಕೊಳಕು ತಂತ್ರಗಾರಿಕೆಯ ಮೂಲಕ ಆಟ ಆಡಲು ಆರಂಭಿಸಿದ್ದಾರೆ. ಇದೀಗ ಇಬ್ಬರು ಸದಸ್ಯರು ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ ಎಂದು ಮೊಯಿತ್ರಾ ಹೇಳಿದ್ದಾರೆ.
(ಮಾಹಿತಿ ಕೃಪೆ ವಾರ್ತಾಭಾರತಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ