WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Sunday, June 7, 2026

ವಿಜಯನಗರ : ಜೂ. 20ರಿಂದ ಜು. 29ರವರೆಗೆ ಎಸ್ಐಆರ್


ವಿಜಯನಗರ ಜಿಲ್ಲೆಯಲ್ಲಿ ಜೂನ್ 20ರಿಂದ ಎಸ್ಐಆರ್ ಪ್ರಕ್ರಿಯೆ ಆರಂಭವಾಗಲಿದೆ ಅಂತಾ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಮಾಹಿತಿ ನೀಡಿದರು. ವಿಜಯನಗರದ ಡಿಸಿ‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅರ್ಹ ಮತದಾರರು ಮತದಾನದ ಪಟ್ಟಿಯಿಂದ ಹೊರಗುಳಿಯಬಾರದು ಅಂತಾ ಹೇಳಿದರು.

ಮತದಾರರ ಅರ್ಹತಾ ದಿನಾಂಕ ಅಕ್ಟೋಬರ್ 10 ಆಗಿದ್ದು, ಜೂನ್ 20ರಿಂದ 29ರವರೆಗೆ ಎಸ್ಐಆರ್ ಸಿದ್ಧತೆ ಮತ್ತು ಬಿಎಲ್ಒ ತರಬೇತಿ ನಡೆಯಲಿದೆ. ಆನಂತರ ಜೂನ್ 30ರಿಂದ‌ ಜುಲೈ 29ರವರೆಗೆ ಬಿಎಲ್ಒಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ. ಜುಲೈ 29ರಂದು ಮತಗಟ್ಟೆಗಳ ಪುನರಚನೆ ಆಗಲಿದ್ದು, ಆಗಸ್ಟ್ 5ರಂದು ಪರಿಷ್ಕೃತ ಮತದಾರರ ಪಟ್ಟಿಯ ಕರಡು ಪ್ರಕಟಣೆ ಮಾಡಲಾಗುತ್ತದೆ. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದೆ. ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ಆಕ್ಷೇಪಣೆ ಅರ್ಜಿಗಳ ವಿಚಾರಣೆ ಮತ್ತು ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಕೊನೆಯದಾಗಿ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ ಅಂತ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಅರ್ಹ ಮತದಾರರನ್ನಷ್ಟೇ ಮತದಾರರ ಪಟ್ಟಿಯಲ್ಲಿ ಉಳಿಸುವುದು ವಿಶೇಷ ಸಮಗ್ರ ಪರಿಷ್ಕರಣೆಯ ಮೂಲ ಉದ್ದೇಶ ಅಂತಾ ಹೇಳಿದ ಅವರು, ಅರ್ಹರನ್ನಷ್ಟೇ ಗುರುತಿಸುವ ರೀತಿಯಲ್ಲಿ ಎಸ್ಐಆರ್ ಆಯೋಗದಿಂದ ರೂಪಿಸಲಾಗಿದೆ ಅಂದರು.

ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಮತದಾರರಿಗೂ ಗಣತಿಯ ನಮೂನೆ (ಎನ್ಯುಮರೇಷನ್ ಫಾರ್ಮ್) ಅನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುತ್ತದೆ. ಅದನ್ನು ಮತದಾರರು ಭರ್ತಿ ಮಾಡಿ ಬಿಎಲ್ಒಗೆ ಸಲ್ಲಿಸಿದವರೆಲ್ಲರೂ ಮತದಾರರ ಕರಡು ಮತದಾರರ ಪಟ್ಟಿಯಲ್ಲಿ ಉಳಿಯುತ್ತಾರೆ. ಗಣತಿ ನಮೂನೆ ಸಲ್ಲಿಕೆ ಮಾಡದವರಷ್ಟೇ ಮತದಾರರ ಪಟ್ಟಿಯಿಂದ ಹೊರಗಡೆ ಉಳಿಯುತ್ತಾರೆ ಅಂತಾ ಡಿಸಿ ಮಾಹಿತಿ ನೀಡಿದರು.

ಬಿಎಲ್ಒ ಗಳ‌ ಪಾತ್ರ ತುಂಬಾ ಮುಖ್ಯ ಆಗುತ್ತದೆ. ಪ್ರತಿಯೊಬ್ಬ ಬಿಎಲ್ಒ ಮತದಾರನ ಮನೆಗೆ ಕಡ್ಡಾಯವಾಗಿ ಮೂಲ ಕನಿಷ್ಟ ಮೂರು ಬಾರಿಯಾದರೂ ಭೇಟಿ ನೀಡಬೇಕು. ಅಲ್ಲದೇ, ಮತದಾರರೇ ಆನ್ ಲೈನ್ ನಲ್ಲೆ ಅರ್ಜಿ ಸಲ್ಲಿಸಿದರೂ ಅವರ ಮನೆಗೆ ಹೋಗಿ ಬಿಎಲ್ಒಗಳು ಹೋಗಿ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಬೇಕು ಅಂತಾ ಡಿಸಿ ಸೂಚನೆ ನೀಡಿದರು.

ಮತದಾರರು ತಮ್ಮ ಅರ್ಹತೆ ಸಾಬೀತುಪಡಿಸಲು ಸರ್ಕಾರಿ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮಾತ್ರ ಬಳಸಬಹುದು. ಆದರೆ ಪೌರತ್ವದ ಪುರಾವೆಯಾಗಿ ಅಲ್ಲ. ವೃದ್ಧರು, ಅಂಗವಿಕಲರುಗಳಿಗೆ ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡಲು ಸ್ವಯಂ ಸೇವಕರನ್ನು ನಿಯೋಜನೆ ಮಾಡಲಾಗುವುದು ಅಂತಾ ಜಿಲ್ಲಾಧಿಕಾರಿಗಳು ಹೇಳಿದರು.




No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ