WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, June 1, 2021

'ಒಳ ಉಡುಪು ಹರಿದಿದೆ, ಬಟ್ಟೆ ಅಂಗಡಿ ಬಾಗಿಲು ತೆಗೆಸಿ ಸ್ವಾಮಿ' : ಸಿಎಂ 'BSY' ಬಳಿ ವಿಚಿತ್ರ ಬೇಡಿಕೆಯಿಟ್ಟ ವ್ಯಕ್ತಿ.!

 

ಮೈಸೂರು : ರಾಜ್ಯದಲ್ಲಿ ಕೊರೊನಾ ಸ್ಪೋಟವಾದ ಹಿನ್ನೆಲೆ ಜೂನ್ 7 ರವರೆಗೆ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಹಿನ್ನೆಲೆ ಬಟ್ಟೆ ಅಂಗಡಿ ಸೇರಿದಂತೆ ಎಲ್ಲವೂ ಬಂದ್ ಆಗಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭ ಅಗತ್ಯ ವಸ್ತು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ತೆರೆಯಲು ಅವಕಾಶವಿಲ್ಲ.

ಈ ಹಿನ್ನೆಲೆ ಮೈಸೂರಿನಲ್ಲಿ ವ್ಯಕ್ತಿಯೋರ್ವ ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ. ಹೌದು, ಈ ಕುರಿತು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಮೈಸೂರಿನ ಚಾಮರಾಜಪುರದ. ನರಸಿಂಹಮೂರ್ತಿ ಎಂಬವರು, ವಾರಕ್ಕೆ ಒಂದು ಸಲ ಬಟ್ಟೆ ಅಂಗಡಿಯನ್ನು ತೆರೆದು, ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ . ನನ್ನ ಬಳಿ ಇರುವ ಎರಡು ಒಳಉಡುಪು ಹರಿದು ಹೋಗಿದೆ, ದಯವಿಟ್ಟು ಬಟ್ಟೆ ಅಂಗಡಿ ತೆರೆಸಿ ಎಂದು ಬಿ ಎಸ್‌ ಯಡಿಯೂರಪ್ಪರ ಬಳಿ ಮನವಿ ಮಾಡಿದ್ದಾರೆ.

'ಮಾನ್ಯ ಮುಖ್ಯಮಂತ್ರಿಗಳೇ, ಕಳೆದೆರಡು ತಿಂಗಳುಗಳಿಂದ ಎಲ್ಲಾ ಅಂಗಡಿಗಳು ತೆರೆಯುತ್ತಿದ್ದರೂ ಅದೇಕೋ ಬಟ್ಟೆ ಅಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಕೇವಲ ಎರಡು ಜೊತೆ ಒಳ ಉಡುಪುಗಳನ್ನು ಹೊಂದಿರುವ ನನ್ನಂತಹವರ ಒಳ ಉಡುಪುಗಳು ಹರಿಯುತ್ತಿದೆ. ಇನ್ನು ಪಾಪ ಹೆಣ್ಣುಮಕ್ಕಳ ಬಟ್ಟೆಗಳ ಕಥೆಯೂ ಹೀಗೇ ಇರಬಹುದು. ನಮ್ಮ ಕಷ್ಟ ಯಾರ ಬಳಿ ಹೇಳುವುದು,,,,,ತಿಂಗಳಲ್ಲಿ ವಾರಕ್ಕೆ ಒಮ್ಮೆಯಾದರೂ ಬಟ್ಟೆ ಅಂಗಡಿಯನ್ನು ತೆರೆದು ನಮ್ಮ ಒಳ ಉಡುಪಿನ ಸಮಸ್ಯೆಯನ್ನು ಪರಿಹರಿಸಿ ಸ್ವಾಮಿ' ಎಂದು ಸಿಎಂಗೆ ಮನವಿ ಮಾಡಿದ್ದಾರೆ.

(ಮಾಹಿತಿ ಕೃಪೆ Kannada News Now)


'ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ' - ಡಿಕೆ ಶಿವಕುಮಾರ್‌

 

ಬೆಂಗಳೂರು, ಜೂ. 1: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರ ಸುದ್ದಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ದೆಹಲಿಗೆ ಭೇಟಿ ನೀಡಿರುವುದು ಮತ್ತೆ ರಾಜ್ಯ ರಾಜಕೀಯದಲ್ಲಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಬಿ ವೈ ವಿಜಯೇಂದ್ರ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಯಾರು ಎಲ್ಲಿಗೆ ಬೇಕಾದರೂ ಹೋಗಲಿ, ನಾವು ರಾಜಕೀಯವಾಗಿ ಮಾಡಿದ್ದನ್ನೇ ಅನುಭವಿಸುತ್ತೇವೆ, ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ ವಿಜಯೇಂದ್ರ ದೆಹಲಿ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಇವರೆಲ್ಲರೂ ಪವರ್ ಬೆಗ್ಗರ್ಸ್, ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದ್ದಾರೆ.

ಯಾರು ಎಲ್ಲಿ ಬೇಕಾದರೂ ಹೋಗಲಿ. ನಾವು ಆ ಪವರ್ ಬೆಗ್ಗರ್ಸ್ ಬಗ್ಗೆ ಮಾತನಾಡುವುದು ಬೇಡ. ಎಲ್ಲರನ್ನೂ ಯಡಿಯೂರಪ್ಪ ತಮ್ಮ ಪಕ್ಷಕ್ಕೆ ಕರೆತಂದ್ರು. ಈಗ ಅವರು ಅನುಭವಿಸುತ್ತಿದ್ದಾರೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರದ ಕೋವಿಡ್‌ ಪ್ಯಾಕೇಜ್‌ ವಿಚಾರದಲ್ಲಿ ಮಾತನಾಡಿದ ಡಿಕೆಶಿ, ಇದು ರೀಲ್‌ ಪ್ಯಾಕೇಜ್‌, ನಿಜವಾಗಿ ಕಷ್ಟದಲ್ಲಿರುವವರಿಗೆ ಅರ್ಜಿ ಹಾಕಲು ಆಗುತ್ತಾ? ಯಾರು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ? ನಿಜವಾಗಿ ಕಷ್ಟದಲ್ಲಿ ಇರುವ ಹಲವು ಮಂದಿಗೆ ಏನು ವಿಷಯ, ಈ ಅರ್ಜಿ ಹಾಕುವುದು ಹೇಗೆ ಎಂಬುದು ತಿಳಿದಿರಲ್ಲ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.

ಇನ್ನು ಸಂಕಷ್ಟದಲ್ಲಿ ಇರುವವರಿಗೆ ಆನ್‌ಲೈನ್‌ ಅರ್ಜಿ ಹಾಕುವುದು ತಿಳಿದಿದ್ದರೆ, ವಿಧಾನ ಸೌಧಕ್ಕೆ ಬಂದು ಕೆಲಸ ಮಾಡುತ್ತಿದ್ದರು. ಆ ಬಗ್ಗೆ ತಿಳಿಯದ ಕಾರಣದಿಂದ ಅಲ್ಲವೇ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿರುವುದು ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ಕೊಡುತ್ತಿಲ್ಲ ಎಂಬ ಆರೋಗ್ಯ ಸಚಿವ ಸುಧಾಕರ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಸುಧಾಕರ್‌ ಅಣ್ಣ ನೀನು ಮೊದಲು ಔಷಧಿ ಕೊಡಿಸುವುದನ್ನು ನೋಡು. ನಿನಗೆ ಡೆತ್‌ ಆಡಿಟ್‌ ಕಾರ್ಯ ಬೇಡ. ಅದನ್ನು ಮಾಡಲು ಮುನ್ಸಿಪಲ್, ರೆವಿನ್ಯೂ ಡಿಪಾಟ್ರ್ಮೆಂಟ್ ಇದೆ. ಅವರು ಈ ಲೆಕ್ಕಾಚಾರ ನೋಡಿಕೊಳ್ಳುತ್ತಾರೆ. ನೀನು ಈಗ ಔಷಧಿ, ಲಸಿಕೆ ಬಗ್ಗೆ ಗಮನ ಕೊಡು ಎಂದು ಸಿಡಿಮಿಡಿಗೊಂಡರು. ಹಾಗೆಯೇ ರಾಜಸ್ಥಾನದಲ್ಲಿ ಡೆತ್ ಆಡಿಟ್ ಮಾಡಿಸುತ್ತಿದ್ದಾರೆ, ನೀವು ಕೂಡಾ ಮರಣ ಪ್ರಮಾಣ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಇನ್ನು ಉತ್ತರಕರ್ನಾಕದ ರೈತರ ಪರಿಸ್ಥಿತಿ ಶೋಚನೀಯ, ನಾನು ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ರೈತರ ತರಕಾರಿ, ಹೂ ಎಲ್ಲವನ್ನು ಸರ್ಕಾರ ಖರೀದಿ ಮಾಡಬೇಕು ಎಂದು ಸಿಎಂಗೆ ಮನವಿ ಮಾಡಿದರು.

ಈ ಸಂದರ್ಭದಲ್ಲೇ ದೇವೇಗೌಡರ ಬಗ್ಗೆ ಮಾತನಾಡಿ, ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ್ದಾರೆ. ದೇವೇಗೌಡರದ್ದು ಹೋರಾಟದ ಜೀವನ. ದೆಹಲಿಯಲ್ಲಿ ದಕ್ಷಿಣ ಭಾರತದವರು ಉತ್ತರ ಭಾರತದವರ ಎದುರು ರಾಜಕೀಯ ನಡೆಸುವುದು ಅಷ್ಟು ಸುಲಭವಾದ ವಿಚಾರವಲ್ಲ. ಹಾಗಿರುವಾಗ ದೇವೇಗೌಡರು ಪ್ರಧಾನಿಯಾಗಿದ್ದರು. ರಾಜ್ಯದ ಜನರು ನೋವಿಗೆ ಸ್ಪಂಧಿಸುತ್ತಿದ್ದರು ಎಂದು ಶ್ಲಾಘಿಸಿದರು.

(ಒನ್‌ಇಂಡಿಯಾ ಸುದ್ದಿ)


Saturday, May 29, 2021

ಬರಲಿದೆ ಹೊಸ ಐಫೋನ್‌ SE 3; ಫೀಚರ್ಸ್‌ ಏನು, ಬೆಲೆ ಎಷ್ಟು?

 

ಜನಪ್ರಿಯ ಆಪಲ್ ಐಫೋನ್ ಇತ್ತೀಚಿಗೆ ಐಫೋನ್ SE 2020 ಐಫೋನ್‌ ಬಿಡುಗಡೆ ಮಾಡಿದ್ದು, ಆಪಲ್‌ ಪ್ರಿಯರಲ್ಲಿ ಖುಷಿ ಮೂಡಿಸಿತ್ತು. ಈ ಐಫೋನ್‌ ಯಶಸ್ವಿಯ ಮುಂದುವರಿದ ಭಾಗವಾಗಿ ಆಪಲ್‌ ಈಗ ನೂತನವಾಗಿ ಐಫೋನ್‌ SE 3 ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಲು ಸಜ್ಜಾಗಿದೆ. ಬರಲಿರುವ ನೂತನ ಐಫೋನ್‌ ಬಯೋನಿಕ್ A14 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ.

ಹೌದು, ಆಪಲ್‌ ನೂತನವಾಗಿ ಐಫೋನ್‌ SE 3 ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನಿನ ಆಕರ್ಷಕ ಫೀಚರ್ಸ್‌ ಹೊಂದಿರಲಿದೆ ಎಂದು ಲೀಕ್ ಮಾಹಿತಿಯಿಂದ ತಿಳಿದು ಬಂದಿದೆ. ಐಫೋನ್‌ SE 3 ಸ್ಮಾರ್ಟ್‌ಫೋನ್‌ 6.1 ಇಂಚಿನ ಡಿಸ್‌ಪ್ಲೇ ಇರಲಿದ್ದು, ಕಡಿಮೆ ಬೆಜಲ್ ರಚನೆಯೊಂದಿಗೆ ಸೆಂಟರ್ ಪಂಚ್‌ ಹೋಲ್‌ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿರಲಿದೆ ಎನ್ನಲಾಗಿದೆ.

ಐಫೋನ್‌ SE 3 ಸ್ಮಾರ್ಟ್‌ಫೋನ್‌ ಐಫೋನ್ 12 ಮಾದರಿಗಳಂತೆ ಚೌಕಾಕಾರ ಅಂಚಿನ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿರುವ ಏಕ-ಕ್ಯಾಮೆರಾ ಮತ್ತು ಫ್ಲ್ಯಾಷ್ ಅನ್ನು ಮಾತ್ರೆ ಆಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ. ಮುಂಭಾಗದಲ್ಲಿ, ಕನಿಷ್ಠ ಬೆಜೆಲ್‌ಗಳೊಂದಿಗೆ ಕೇಂದ್ರಿತ ಪಂಚ್-ಹೋಲ್ ಪ್ರದರ್ಶನವನ್ನು ಆಡುವುದನ್ನು ಕಾಣಬಹುದು. ಹಾಗೆಯೇ ಈ ಫೋನ್ ವೈಶಿಷ್ಟ್ಯಗಳು ಟಚ್-ಐಡಿ ವೈಶಿಷ್ಟ್ಯಗಳವನ್ನು ಪಡೆದಿರಲಿದೆ. ಇದರೊಂದಿಗೆ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುತ್ತದೆ ಎಂದು ಲೀಕ್ ಮಾಹಿತಿಗಳು ಸುಳಿವು ನೀಡಿವೆ.

ಸ್ಮಾರ್ಟ್‌ಫೋನ್‌ನ ಬೆಲೆಯನ್ನು ನಿಯಂತ್ರಣದಲ್ಲಿಡಲು ಪ್ರದರ್ಶನವು ಎಲ್‌ಸಿಡಿ ರೀತಿಯಿಂದ ದೂರವಿರಬೇಕು. ಐಫೋನ್ SE 3 ನಲ್ಲಿ ಹೆಚ್ಚುವರಿ ಎಲ್‌ಸಿಡಿ ಪ್ರದರ್ಶನಕ್ಕೆ ಮತ್ತೊಂದು ಕಾರಣವೆಂದರೆ ಅದನ್ನು ಉನ್ನತ ಹಂತದ ಐಫೋನ್ಗಳಿಂದ ಬೇರ್ಪಡಿಸುವುದು. ಈ ಫೋನ್ ಐಫೋನ್‌ ಬಯೋನಿಕ್ A14 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಹಿಂದಿನ ಐಫೋನ್‌ SE 2020 ಫೋನ್‌ ಬಯೋನಿಕ್ A13 SoC ಪ್ರೊಸೆಸರ್‌ ಹೊಂದಿದೆ.

ಐಫೋನ್‌ SE 2020 ಫೋನ್‌ ನಂತೆ ನೂತನ ಐಫೋನ್‌ SE 3 ಸ್ಮಾರ್ಟ್‌ಫೋನ್‌ ಸಹ 64GB, 128GB ಮತ್ತು 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಈ ಫೋನ್ 5ಜಿ ಸಪೋರ್ಟ್‌ ಪಡೆದಿರಲಿದ್ದು, ವೈಫೈ 6 ಅನ್ನು ಬೆಂಬಲಿಸುವ ನಿರೀಕ್ಷೆಗಳು ಇವೆ. ಇನ್ನು ಈ ಫೋನ್ ಜೂನ್ 7ರಂದು ನಡೆಯಲಿರುವ WWDC 2021 ಕಾರ್ಯಕ್ರಮದಲ್ಲಿ ಅನಾವರಣ ಆಗುವ ನಿರೀಕ್ಷೆಗಳಿವೆ. ಒಂದು ವೇಳೆ ಲಾಂಚ್ ಆಗದಿದ್ದರೇ ಮುಂದಿನ ವರ್ಷಕ್ಕೆ ಲಾಂಚ್ ಆಗಲಿದೆ ಎನ್ನಲಾಗಿದೆ.

ಐಫೋನ್ SE 3 ಫೋನ್‌ ಪ್ರೈಸ್‌ ದೃಷ್ಠಿಯಿಂದ ಕೆಲವು ಆಂಡ್ರಾಯ್ಡ್ ಫೋಣ್‌ಗಳಿಗೆ ನೇರ ಸ್ಪರ್ಧೆ ಒಡ್ಡಲಿದೆ. ಭಾರತದಲ್ಲಿ ಐಫೋನ್‌ SE 3 ಬೆಲೆ ಸುಮಾರು 45000ರೂ.ಗಳ ಆಸುಪಾಸಿನಲ್ಲಿ ಇರುವ ಸಾಧ್ಯತೆಗಳು ಇವೆ.

(ಮಾಹಿತಿ ಕೃಪೆ Gizbot)

ಬ್ಲಾಕ್ ಫಂಗಸ್ ಗೆ ಕಾರಣವಾಗಬಹುದು ಮನೆಯಲ್ಲಿರುವ ಫ್ರಿಜ್, ಈರುಳ್ಳಿ..! ತಜ್ಞರು ಹೇಳೋದೇನು...?

 

ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಹಾವಳಿ ಹೆಚ್ಚಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗ್ತಿದೆ. ಮನೆಯಲ್ಲಿರುವ ಫ್ರಿಜ್,‌ ಈರುಳ್ಳಿಯಿಂದಲೂ ಬ್ಲಾಕ್ ಫಂಗಸ್ ಬರುತ್ತೆ ಎಂಬ ಸುದ್ದಿ ಹರಡಿದೆ. ಈರುಳ್ಳಿ ಖರೀದಿಸುವ ವೇಳೆ ಗಮನ ನೀಡಿ. ಈರುಳ್ಳಿ ಸಿಪ್ಪೆ ಮೇಲಿರುವ ಕಪ್ಪು ಕಲೆಗಳು ಬ್ಲಾಕ್ ಫಂಗಸ್ ಆಗಿರುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಹಾಗೆ ಫ್ರಿಜ್ ನಲ್ಲಿರುವ ಹಳೆ ಆಹಾರಗಳು ಕೂಡ ಬ್ಲಾಕ್ ಫಂಗಸ್ ಗೆ ಕಾರಣವಾಗುತ್ತೆ ಎಂದು ಹೇಳಲಾಗಿದೆ.

ಇದ್ರ ಬಗ್ಗೆ ತಜ್ಞರಿಂದ ಮಾಹಿತಿ ಪಡೆದಾಗ ಸತ್ಯ ಹೊರಬಿದ್ದಿದೆ. ಈರುಳ್ಳಿ ಮೇಲಿರುವ ಕಪ್ಪು ಕಲೆಗೂ ಬ್ಲಾಕ್ ಫಂಗಸ್ ಗೂ ಸಂಬಂಧವಿಲ್ಲವೆಂಬುದು ಗೊತ್ತಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಮಾತನಾಡಿದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ,‌ ಕೊರೊನಾ ಪ್ರಕರಣಗಳು ಕಡಿಮೆಯಾದಂತೆ, ಬ್ಲಾಕ್ ಫಂಗಸ್ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ನೆನಪಿಡುವ ಪ್ರಮುಖ ವಿಷಯವೆಂದರೆ ಮ್ಯೂಕರ್ ಮೈಕೋಸಿಸ್ ಕಪ್ಪು ಶಿಲೀಂಧ್ರವಲ್ಲ. ಇದಕ್ಕೆ ತಪ್ಪಾಗಿ ಹೆಸರಿಡಲಾಗಿದೆ. ರಕ್ತ ಪೂರೈಕೆಯ ಕೊರತೆಯಿಂದಾಗಿ, ಚರ್ಮದ ಬಣ್ಣವು ಸ್ವಲ್ಪಮಟ್ಟಿಗೆ ಮಸುಕಾಗುತ್ತದೆ. ಈ ಕಾರಣದಿಂದಾಗಿ ಈ ಸ್ಥಳವು ಕಪ್ಪು ಬಣ್ಣಕ್ಕೆ ತಿರುಗಿದೆ. ಹಾಗಾಗಿ ಅದಕ್ಕೆ ಬ್ಲಾಕ್ ಫಂಗಸ್ ಎಂದು ಕರೆಯಲಾಗುತ್ತಿದೆ ಎಂದು ರಂದೀಪ್ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

BIG NEWS: ರಾಜ್ಯದಲ್ಲಿ 1,100 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ..!

 

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, 1,100 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ರಾಜ್ಯದಲ್ಲಿ 1,100 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರಿಗೆ ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೂ ಔಷಧ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ, ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಕೂಡ ನಡೆದಿದೆ. ಇನ್ನು ಅನ್ ಲಾಕ್ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲಾಕ್ ಡೌನ್ ಬಳಿಕ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಪರಿಸ್ಥಿತಿ ನೋಡಿ ನಿರ್ಧರಿಸಲಾಗುವುದು ಎಂದು ಹೇಳಿದರು.

(ಮಾಹಿತಿ ಕೃಪೆ ಕನ್ನಡದುನಿಯಾ)

ಶ್ರೀಲಂಕಾ ಕರಾವಳಿ ತೀರಗಳಲ್ಲಿ ಆಸಿಡ್ ಮಳೆ..!

 

ಕೊಲಂಬೋ,ಮೇ.29-ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್‍ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ ಪರಿಸರ ಇಲಾಖೆ ಕರೆ ನೀಡಿದೆ.ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ್‍ನ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು.

ಹಡಗಿನ ಟ್ಯಾಂಕಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಇತ್ತು. ಇದರ ಜತೆಗೆ 1486 ಟ್ಯಾಂಕರ್‍ಗಳಲ್ಲಿ ನೈಟ್ರಿಕ್ ಆಸಿಡ್ ಸಾಗಿಸಲಾಗುತಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡಾಗ ನೈಟ್ರೋಜನ್ ಆಸಿಡ್ ಹೊರಸೂಸಿದೆ.

ಮಳೆಯಾಗುತ್ತಿದ್ದಾಗ ಅನಿಲ ಸೋರಿಕೆಯಾಗಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆಸಿಡ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರ ವಹಿಸಬೇಕು ಎಂದು ಸಮುದ್ರ ಪರಿಸರ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ದಾರ್ಶನಿ ಲಹಂಡಾಪುರ್ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಈ ಸಂಜೆ)

RBI ಬಿಡುಗಡೆ ಮಾಡ್ತಿರುವ 100 ರೂ. ನೋಟಿನಲ್ಲೇನಿದೆ ವಿಶೇಷ..? ಇಲ್ಲಿದೆ ಈ ಕುರಿತ ಮಾಹ


ಭಾರತೀಯ ರಿಸರ್ವ್ ಬ್ಯಾಂಕ್, ಹೊಸ 100 ರ ನೋಟು ಹೊರ ತರಲು ನಿರ್ಧರಿಸಿದೆ. ಹೊಸ ನೋಟು ಹೊಳೆಯಲಿದ್ದು, ತುಂಬಾ ಬಾಳಿಕೆ ಬರಲಿದೆ. ವಾರ್ನಿಷ್ ಹೊಂದಿರುವ ಈ ನೋಟುಗಳನ್ನು ಮೊದಲು ಪ್ರಯೋಗಾರ್ಥ ಬಿಡುಗಡೆ ಮಾಡಲಾಗುವುದು. ನಂತ್ರ ದೊಡ್ಡ ಪ್ರಮಾಣದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು.

ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವಾರ್ನಿಷ್ ಬಣ್ಣದಿಂದಾಗಿ ಹೊಸ ನೋಟು ನೀರಿನಲ್ಲಿ ಹರಿದು ಹೋಗುವುದಿಲ್ಲ, ಹಾಳಾಗುವುದಿಲ್ಲವೆಂದು ಹೇಳಿದೆ. ರಿಸರ್ವ್ ಬ್ಯಾಂಕ್ ಪ್ರತಿವರ್ಷ ಲಕ್ಷ ಕೋಟಿ ಮೌಲ್ಯದ ಮಣ್ಣಾದ ಅಥವಾ ಹರಿದ ನೋಟುಗಳನ್ನು ಬದಲಾಯಿಸುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು ವಿಶ್ವದ ಅನೇಕ ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿವೆ. ದೃಷ್ಟಿಹೀನರು ಕೂಡ ಈ ನೋಟುಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಆರ್ಬಿಐ ಹೇಳಿದೆ.

ವಾರ್ಷಿಕ ವರದಿಯಲ್ಲಿ 100 ರೂಪಾಯಿ ನೋಟಿನ ಜೊತೆಗೆ ಇನ್ನೂ ಕೆಲ ವಿಷ್ಯಗಳನ್ನು ಆರ್ಬಿಐ ಹೇಳಿದೆ. ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರ್ಬಿಐ ಹೇಳಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಗಂಗಾವತಿ:- ಕೋವಿಡ್ ಮಾಹಿತಿ ಹೇಳಲು ಹೋದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಿಂದನೆ

 

ಗಂಗಾವತಿ: ಕೋವಿಡ್ ಪಾಜಿಟೀವ್ ಕುರಿತು ಮಾಹಿತಿ ಹೇಳಲು ಮನೆಯ ಹತ್ತಿರ ಹೋದ ಆಶಾ ಕಾರ್ಯಕರ್ತೆರ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಹಿರೇಜಂತಗಲ್ ಸ್ವಾಗತ ರೈಸ್ ಪ್ರದೇಶದಲ್ಲಿ ಶನಿವಾರ ಮಧ್ಯಹ್ನ ಜರುಗಿದೆ.

ಸಂಗಮೇಶ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಸಂಗಮೇಶ ಕುಟುಂಬದಲ್ಲಿ ಪಾಜಿಟೀವ್ ಬಂದ ಮಾಹಿತಿಯನ್ನು ಕೊಡಲು ಮನೆಯ ಹತ್ತಿರ ತೆರಳಿದ್ದ ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಅನ್ನಪೂರ್ಣ,ಗೌಸಿಯಾ ಇವರನ್ನು ಸಂಗಮೇಶ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಸ್ಥಳೀಯರು ಮಧ್ಯೆ ಪ್ರವೇಶ ಮಾಡಿ ಬಿಡಿಸಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸಂಚಾರಿ ಪಿಐ ಸುವಾರ್ತಾ ಹಾಗೂ ಪೊಲೀಸ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಸಂಗಮೇಶ ಇವರನ್ನು ವಶಕ್ಕೆ ಪಡೆದಿದ್ದಾರೆ.

                                 

ಆಗ್ರಹ:ಕೊರೊನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು ಸಂಗಮೇಶ ಎಂಬ ವ್ಯಕ್ತಿ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪೊಲೀಸ ಠಾಣೆಗೆ ದೂರು ನೀಡಲಾಗುತ್ತದೆ ಎಂದು ಆಶಾಕಾರ್ಯಕರ್ತೆ ಲಕ್ಷ್ಮಿದೇವಿ ತಿಳಿಸಿದ್ದಾರೆ

(ಮಾಹಿತಿ ಕೃಪೆ ಉದಯವಾಣಿ)

ಸಿಡಿ ಪ್ರಕರಣದಲ್ಲಿ ಆರೋಪಿ ರಕ್ಷಣೆಗೆ ಮುಂದಾಗಿರುವ ಸರಕಾರದ ನಡೆಯನ್ನು ಖಂಡಿಸುತ್ತೇವೆ:ಉಮಾಶ್ರೀ

 

ಬನಹಟ್ಟಿ: ಸಿಡಿ ಬಹಿರಂಗ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯವರನ್ನು ಈ ಕೂಡಲೇ ಬಂಧಿಸಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಸೇರಿದಂತೆ ಪಕ್ಷದ ವಕ್ತಾರಳಾದ ನಾನು ಒತ್ತಾಯಿಸುವುದಾಗಿ ಮಾಜಿ ಸಚಿವೆ, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಉಮಾಶ್ರೀ ಹೇಳಿದರು.

ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿಡಿ ಪ್ರಕರಣದ ಸಂತ್ರಸ್ಥೆ ತನ್ನ ಮೇಲೆ ಅತ್ಯಾಚಾರ ಆಗಿದೆ. ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅನ್ನುವ ಆರೋಪ ಮಾಡಿದ್ದಾಳೆ. ಆಕೆ ತನಗೆ ಆದ ಅನ್ಯಾಯವನ್ನು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾಳೆ. ಅದಕ್ಕೂ ಮೊದಲೂ ಸಿಡಿ ಬಿಡುಗಡೆ ಆದಾಗ ಮಂತ್ರಿಗಳಾದಂತವರು ಇದು ನನ್ನನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರು ಕೆಡಿಸಲು, ವಿರೋಧಿಗಳು ಮಾಡುತ್ತಿದ್ದಾರೆ. ಸಿಡಿಯಲ್ಲಿ ಇರುವುದು ನಾನಲ್ಲ. ಆಕೆಯ ಪರಿಚಯವಿಲ್ಲ, ನಾನು ಆಕೆಯನ್ನು ಭೇಟಿ ಮಾಡಿಲ್ಲ ಎಂದೆಲ್ಲಾ ಹೇಳಿದರು. ಇದಾದ ನಂತರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಿತು. ಆಕೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ನೀಡಿದಳು, ಅಲ್ಲದೇ ಎಸ್‌ಐಟಿ ಮುಂದೆ ತನ್ನ ಲಿಖಿತ ಹೇಳಿಕೆ ನೀಡಿದ್ದಾಯಿತು. ಈ ಕಡೆ ಗೃಹ ಮಂತ್ರಿಗಳೇ ಹೇಳಿರುವಂತೆ ಆಕೆ ಬಂದು ದೂರು ಕೊಟ್ಟರೆ ಎಫ್‌ಐರ್ ದಾಖಲಿಸುತ್ತೇವೆ ಎಂದಿದ್ದರು. ಅದರಂತೆ ಸೆಕ್ಸೆನ್ 376 ಅಡಿಯಲ್ಲಿ ಎಫ್‌ಐರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ನಂತರ ಅತ್ಯಾಚಾರದ ಆರೋಪವನ್ನು ಹೊತ್ತಿರುವ ಆರೋಪಿ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಒಡಾಡಲು ಸಾಧ್ಯವಿಲ್ಲ. ಸಾಮಾನ್ಯದವರಾದರೆ ಕೂಡಲೇ ಬಂದಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಿಲ್ಲ ಏಕೆ ತಿಳಿಯಲಿಲ್ಲ. ಅದಕ್ಕೆ ಕೊರೋನಾ ಕಾರಣ ನೀಡಿದ್ದರು. ಅದಾದ ನಂತರವು ಅವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೂ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಇದೆಲ್ಲವನ್ನು ನೋಡಿದಾಗ ಸರಕಾರ ಅವರ ರಕ್ಷಣೆಗೆ ನಿಂತಿದೆ ಎನ್ನುವ ಅನುಮಾನ ಉಂಟಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಉಮಾಶ್ರೀ ಹೇಳಿದರು.

ಒಬ್ಬ ಜನ ಪ್ರತಿನಿಧಿಗಳು, ಸಮಾಜ ಸೇವಕರು ಹೇಳಿದ ಮಾತಿಗೆ ಬದ್ಧರಾಗಿರಬೇಕು. ಆರೋಪಿ ಸ್ಥಾನದಲ್ಲಿರುವಂತಹವರು ಕಾಂಗ್ರೆಸ್ ಹಾಗೂ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡಿದರು. ಆ ಸಂತ್ರಸ್ಥೆಯ ಕುಟುಂಬದವರ ಮೇಲೆ ಒತ್ತಡ ಹಾಕಿ ಸಹೋದರನಿಂದ ಹೇಳಿಕೆ ಕೊಡಿಸುವ ಒತ್ತಡ ಹಾಕಿದರು. ಈಗ ಅದೇ ಸಂತ್ರಸ್ಥೆಯ ಕುಟುಂಬಕ್ಕೆ ಎಸ್‌ಐಟಿಯಿಂದ ನೋಟೀಸ್ ಕಳುಹಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂದು ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಹೇಳಿರುವ ಆರೋಪಿ ಸ್ಥಾನದಲ್ಲಿರುವ ಮಹನೀಯರು ಇವತ್ತು ಹೇಗೆ ಆ ಸಿಡಿಯಲ್ಲಿರುವುದು ನಾನೇ, ಅವಳು ಅವಳೇ ಎನ್ನುತ್ತಿರುವುದು ನೋಡಿದರೆ ಇಷ್ಟು ದಿನ ಹೇಳಿದ್ದು ಬರೀ ಸುಳ್ಳು, ಆಕೆಯೊಂದಿಗೆ ಸಂಪರ್ಕ ಇದ್ದದು ನಿಜ, ಆಕೆಯೊಂದಿಗೆ ದುರುಪಯೋಗ ಮಾಡಿಕೊಂಡಿರುವುದು ನಿಜ. ಈಗ ಅವರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧಗಳನ್ನು ಮಾಡಿದ್ದೇವೆ ಎಂಬ ಮಾತನ್ನು ಆಡಿದ್ದಾರೆ. ಅವರು ಆಡಿದ ಮಾತಿಗೆ ಬದ್ದತೆಯಿಲ್ಲ. ತಪ್ಪು ಮಾಡಿದ್ದಾರೆ ಎಂದು ಅವರು ಮನಸ್ಸಿಗೆ ಗೊತ್ತಿದೆ ಎಂದರು.

ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನುನೂ ಇದೆ. ಸಣ್ಣವರು ಯಾವುದೋ ಒಂದು ತಪ್ಪ ಮಾಡಿದರೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗದುಕೊಳ್ಳುತ್ತಾರೆ. ಆದರೆ ಈಗ ಯಾಕೆ ಚಾರ್ಜಶೀಟ್ ಹಾಕುತ್ತಿಲ್ಲ, ಇಂತಹ ಪ್ರಕರಣಗಳು 60 ರಿಂದ 90 ದಿನಗಳೊಳಗಾಗಿ ಮುಗಿಯಬೇಕು. ಆದರೆ 60 ದಿನಗಳು ಕಳೆದು ಹೋದರೂ ಸರಕಾರ ವಿಶೇಷ ತನಿಖಾದಳದ ಅಧಿಕಾರಿಗಳನ್ನು ರಜೆಯ ಮೇಲೆ ಮನೆಗೆ ಕಳುಹಿಸಿದ್ದಾರೆ. ಇದರ ಅರ್ಥ ಆರೋಪಿಯ ರಕ್ಷಣೆಗೆ ಸರಕಾರವೇ ಮುಂದಾಗಿದೆ ಎಂದು ಆರೋಪಿಸಿದರು.

ಪ್ರತಿಬಾರಿ ಏನೇ ನಡೆದರೂ ಕಾಂಗ್ರೆಸ್ ಮೇಲೆ ಗೂಭೆ ಕೂಡ್ರಿಸುವ ಕೆಲಸ ನಡೆದಿದೆ. ಈ ಪ್ರಕರಣದಲ್ಲಿಯೂ ಅದೇ ರೀತಿ ಆಗಿದೆ. ನಮ್ಮ ರಾಜ್ಯದಲ್ಲಿ ರಾಜಕೀಯ ಒತ್ತಡದಿಂದ ಪೊಲೀಸ್‌ರ ಕೈ ಕಟ್ಟಿ ಹಾಕಿದಂತಾಗಿದೆ. ಅವರಿಗೆ ಸ್ವಾತಂತ್ರö್ಯ ಕೊಟ್ಟಿದ್ದರೆ ಇಷ್ಟೋತ್ತಿಗೆ ತಪ್ಪಿತಸ್ಥರನ್ನು ಪೊಲೀಸರು ಬಂದಿಸುತ್ತಿದ್ದರು. ಅವರು ಕೆಲಸ ಮಾಡಲು ಸಾಧ್ಯ ಆಗದೇ ಇರುವ ವ್ಯವಸ್ಥೆ ಇಂದು ನಡೆಯುತ್ತಿದೆ. ಆರೋಪ ಹೊತ್ತಿರುವ ಮಂತ್ರಿಗಳು ಗೃಹ ಮಂತ್ರಿಗಳನ್ನು ಬೇಟ್ಟಿ ಮಾಡಿದ್ದಾರೆ. ಈ ಕುರಿತು ಗೃಹ ಮಂತ್ರಿಗಳು ವಿವರಣೆ ಕೊಡಬೇಕು. ಇಂತಹ ಪ್ರಕರಣದಲ್ಲಿ ಗೃಹಮಂತ್ರಿಗಳು ಇವರನ್ನು ಬಂದಿಸಲು ಆದೇಶ ನೀಡಿ ಬಂದಿಸಿದರೆ ಇವರ ವರ್ಚಸ್ಸು ಇನ್ನೂ ಹೆಚ್ಚಾಗುತ್ತದೆ. ಕಪ್ಪು ಚುಕ್ಕೆ ಬರುವುದಿಲ್ಲ. ಇತಿಹಾಸದಲ್ಲಿ ಉತ್ತಮ ಕೆಲಸ ಮಾಡಿದ ಗೃಹಮಂತ್ರಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾರಣ ಅದು ಆಗಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಡಿಎನ್‌ಎ ಟೆಸ್ಟ್ ಏಕೆ ಮಾಡಿಸಲಿಲ್ಲ: ಅತ್ಯಾಚಾರ ಪ್ರಕರಣದಲ್ಲಿ ಅಂತಹ ಆರೋಪವನ್ನು ಹೊತ್ತವರಿಂದ ಡಿಎನ್‌ಎ ಟೆಸ್ಟ್ ಆಗಲೇ ಬೇಕು ಎಂದು ಹೇಳಿ ಕಾನೂನಿನಲ್ಲಿ ಗಂಭೀರವಾಗಿ ಹೇಳಿದ್ದಾರೆ. ಯಾಕೆ ಅದು ಆಗಲಿಲ್ಲ? ತಮ್ಮ ಆರೋಪಿ ಅದರಲ್ಲಿ ಸಿಲುಕಿಕೊಂಡರೆ ಎನ್ನುವ ಆತಂಕ ಸರಕಾರಕ್ಕಿದೆಯೇ. ಒಬ್ಬ ಉನ್ನತ ಹುದ್ದೆಯಲ್ಲಿದ್ದವರು ಇಂತಹ ದೊಡ್ಡ ಅನ್ಯಾಯನ್ನು ಮಾಡಿದ್ದಾರೆ ಎಂದು ಪದೇ ಪದೇ ಮಹಿಳೆ ಹೇಳಿದರೂ ಅವರ ರಕ್ಷಣೆಗೆ ನೀವು ಬರದೇ ವ್ಯಕ್ತಿಯನ್ನು ರಕ್ಷಣೆ ಮಾಡುತ್ತೀರಿ ಎಂದರೆ ಕಾರಣ ಸ್ಪಷ್ಟವಾಗಿದೆ. ಏಕೆಂದರೆ ಅವರು ಪದೇ ಪದೇ ಹೇಳುವಂತೆ ನಾನು ಇಂತಹ ಸರಕಾರ ತರಬಲ್ಲೇ ಮತ್ತು ಕೆಡವು ಬಲ್ಲೇ ಎಂದು ಹೇಳಿದ್ದಾರೆ. ಕಾರಣ ಅವರು ಈ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣ ಅವರೇ ಎಂದು ಸರಕಾರಕ್ಕೆ ಗೊತ್ತಿರುವ ಕಾರಣ ಅಂತಹ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿರುವ ಸರಕಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಉಮಾಶ್ರೀ ಹೇಳಿದರು.

ನಮ್ಮ ಪಕ್ಷ, ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಒತ್ತಾಯಿಸುವುದೇನೆಂದರೆ ಈ ಕೂಡಲೇ ಅವರನ್ನು ಬಂಧಿಸುವುದರ ಜೊತೆಗೆ ಸರಕಾರ ರಚನೆಗೆ ಸಹಾಯ ಮಾಡಿದ ವ್ಯಕ್ತಿಯ ಋಣ ಸಂದಾಯ ನೀತಿಗೆ ಭಾಗಿಯಾಗದೇ, ಅನ್ಯಾಯಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.

ಆರೋಪಿ ಸ್ಥಾನದಲ್ಲಿದ್ದವರು ಎರಡು ಮುಖ, ಎರಡು ನಾಲಿಗೆ ಇರುವ ಇವರು ಒಂದು ಸಲ ನಾನಲ್ಲ ಎಂದು ಮತ್ತೋಂದು ಸಲ ನಾನೇ ಎಂದರು. ಇಂತಹ ದ್ವಿಮುಖ ನೀತಿಯ ವ್ಯಕ್ತಿಗಳನ್ನು, ಪಕ್ಷ, ರಾಜಕಾರಣದಲ್ಲಿ, ಸರಕಾರದಲ್ಲಿ ಇವರನ್ನು ನೋಡುತ್ತೇವೆಂದರೆ ಅದು ನಮ್ಮ ದೌರ್ಭಾಗ್ಯ. ಆದರಿಂದ ಕೂಡಲೇ ಮಾನ್ಯ ಮುಖ್ಯ ಮಂತ್ರಿಗಳಾಗಲಿ, ಸರಕಾರವಾಗಲಿ, ಕೇಂದ್ರದವರಾಗಲಿ ಯಾರೇ ಆದರೂ ಕೂಡಾ ಇವರ ರಕ್ಷಣೆಗೆ ಬರಬಾರದು ಒಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ಈ ಸಂದರ್ಭಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮುಖಂಡರಾದ ಶಂಕರ ಜಾಲಿಗಿಡದ, ರಾಜು ಭದ್ರನ್ನವರ, ನೀಲಕಂಠ ಮುತ್ತೂರ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಸಂಗಪ್ಪ ಕುಂದಗೋಳ, ನಸೀಮ ಮೋಕಾಸಿ ಸೇರಿದಂತೆ ಅನೇಕರು ಇದ್ದರು.

(ಮಾಹಿತಿ ಕೃಪೆ ಉದಯವಾಣಿ)

ಬಳ್ಳಾರಿ: ಒಂದೇ ದಿನದ ಅಂತರದಲ್ಲಿ ಅಕ್ಕ, ತಮ್ಮ ಕೋವಿಡ್ ಗೆ ಬಲಿ

 

ಬಳ್ಳಾರಿ: ಕೋವಿಡ್ ಸೋಂಕಿನಿಂದ ತಮ್ಮ ಸಾವನ್ನಪ್ಪಿದ ಮರುದಿನ ಅಕ್ಕನೂ ಸೋಂಕಿಗೆ ಬಲಿಯಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಅಕ್ಕ ತಮ್ಮ ಇಬ್ಬರಿಗೂ ಕಳೆದ ವಾರ ಕೋವಿಡ್ ದೃಢಪಟ್ಟಿತ್ತು. ಇವರಲ್ಲಿ ತಮ್ಮ ಸಾವಿಯೋ ಸ್ಮಿತ್‌ (38) ಶುಕ್ರವಾರ ಸಾವನ್ನಪ್ಪಿದ್ದರೆ, ಇಂದು, ( ಶನಿವಾರ) ಅಕ್ಕ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ 8 ದಿನಗಳಿಂದ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ, ತಮ್ಮ ಕೋವಿಡ್ ಮಹಾಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಕಾಂಗ್ರೆಸ್ ಮಹಿಳಾ ಪಟಕ ರಾಜ್ಯ ಕಾರ್ಯದರ್ಶಿಯಾಗಿದ್ದರು.

(ಮಾಹಿತಿ ಕೃಪೆ ಉದಯವಾಣಿ)

ತಾಯಿಗೆ ಕೊರೊನಾ ನೆಗೆಟಿವ್, ನವಜಾತ ಶಿಶುವಿಗೆ ಪಾಸಿಟಿವ್

 

ವಾರಾಣಸಿ, ಮೇ 29: ಹೆರಿಗೆಗೂ ಮುನ್ನ ಗರ್ಭಿಣಿಗೆ ಕೊರೊನಾ ನೆಗೆಟಿವ್ ಬಂದಿದ್ದು, ನವಜಾತ ಶಿಶುವಿಗೆ ಪಾಸಿಟಿವ್ ಬಂದಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಪರೀಕ್ಷೆಗೊಳಗಾದ ಮರುದಿನ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವೇಳೆ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಕೌಶನ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಆರ್‌ಟಿ-ಪಿಸಿಆರ್ ಪರೀಕ್ಷೆಯು ಕೆಲವು ನ್ಯೂನತೆಗಳಿಂದ ಕೂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಿಎಚ್‍ಯು ಮೆಡಿಕಲ್ ಸುಪರಿಂಟೆಂಡೆಂಟ್ ತನಿಖೆಗೆ ಆದೇಶಿಸಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಇಬ್ಬರಿಗೂ ಹೊಸದಾಗಿ ಪರೀಕ್ಷೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಹೆರಿಗೆಗೆ ಮುನ್ನ ತಾಯಿಗೆ ಮೇ 24 ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನಡೆಸಲಾಗಿದೆ. ಈ ವೇಳೆ ನೆಗೆಟಿವ್ ಇರುವುದು ತಿಳಿದುಬಂದಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 1,73,790 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3617ಮಂದಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಒಟ್ಟು 2,77,29,247 ಪ್ರಕರಣಗಳಿವೆ, ಇದುವರೆಗೆ 2,51,78,011 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 3,22,512 ಮಂದಿ ಮೃತಪಟ್ಟಿದ್ದಾರೆ, 22,28,724 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಒಟ್ಟು 20,89,02,445 ಮಂದಿಗೆ ಲಸಿಕೆ ನೀಡಲಾಗಿದೆ. ಮೇ 28ರವರೆಗೆ 34,11,19,909 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಂದೇ ದಿನದಲ್ಲಿ 20,80,048 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

(ಮಾಹಿತಿ ಕೃಪೆ Oneindia)

BIG NEWS: ಜೂನ್ 7ರ ಬಳಿಕ ಲಾಕ್ ಡೌನ್ ಇರುತ್ತಾ.? ಇರಲ್ವಾ..? ಸಿಎಂ ಯಡಿಯೂರಪ್ಪ ಹೇಳಿದ್ದೇನು.?

 

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
5 ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಲವು ಸಲಹೆಗಳನ್ನು ನೀಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಧ್ಯ ಜಾರಿಯಲ್ಲಿರುವ ಲಾಕ್ ಡೌನ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಲಾಕ್ ಡೌನ್ ವಿಸ್ತರಣೆ ಬಗ್ಗೆ ಜೂನ್ 7ರವರೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಬಹುಶಃ ಜೂನ್ 7ರ ನಂತರ ಲಾಕ್ ಡೌನ್ ಅಗತ್ಯವಿರುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಜನರು ಸಹಕಾರ ನೀಡಬೇಕು ಎಂದು ಹೇಳಿದರು.

(ಮಾಹಿತಿ ಕೃಪೆ ಕನ್ನಡದುನಿಯಾ)