ಬಳ್ಳಾರಿ: ಕೋವಿಡ್ ಸೋಂಕಿನಿಂದ ತಮ್ಮ ಸಾವನ್ನಪ್ಪಿದ ಮರುದಿನ ಅಕ್ಕನೂ ಸೋಂಕಿಗೆ ಬಲಿಯಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಅಕ್ಕ ತಮ್ಮ ಇಬ್ಬರಿಗೂ ಕಳೆದ ವಾರ ಕೋವಿಡ್ ದೃಢಪಟ್ಟಿತ್ತು. ಇವರಲ್ಲಿ ತಮ್ಮ ಸಾವಿಯೋ ಸ್ಮಿತ್ (38) ಶುಕ್ರವಾರ ಸಾವನ್ನಪ್ಪಿದ್ದರೆ, ಇಂದು, ( ಶನಿವಾರ) ಅಕ್ಕ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದ 8 ದಿನಗಳಿಂದ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ, ತಮ್ಮ ಕೋವಿಡ್ ಮಹಾಮಾರಿಗೆ ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಕಾಂಗ್ರೆಸ್ ಮಹಿಳಾ ಪಟಕ ರಾಜ್ಯ ಕಾರ್ಯದರ್ಶಿಯಾಗಿದ್ದರು.
(ಮಾಹಿತಿ ಕೃಪೆ ಉದಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ