WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, May 26, 2021

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ

 

ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಾಮಾನ್ಯ ಶೀತ, ಸೀನು ಬರುವುದು, ಗಂಟಲು ಕಿರಿಕಿರಿ ಸಮಸ್ಯೆಗಳು ಕೂಡ ಬಹಳ ಕಾಡಬಲ್ಲದು. ಭಯ, ಆತಂಕ ಸೃಷ್ಟಿಮಾಡಬಹುದು. ಕೊರೊನಾ ಸೋಂಕಿನ ಲಕ್ಷಣಗಳಿಲ್ಲದೆ ಅಥವಾ ಕೊರೊನಾ ಅಲ್ಲ ಎಂದು ವರದಿ ಬಂದ ನಂತರವೂ ಸಣ್ಣ ಪುಟ್ಟ ಶೀತ, ಗಂಟಲು ಕೆರೆತ ನಮ್ಮನ್ನು ಚಿಂತೆಗೀಡುಮಾಡಬಹುದು. ಅಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ಆತಂಕ ಪಡಬೇಕಾಗಿಲ್ಲ. ಮನೆಮದ್ದುಗಳ ಮೂಲಕವೇ ಕೆಲವೇ ದಿನಗಳಲ್ಲಿ ಸಮಸ್ಯೆಯಿಂದ ಪಾರಾಗಬಹುದು.

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ. ಇದು ಸಣ್ಣ ಸಮಸ್ಯೆಯೇ ಆದರೂ ಹಲವರಿಗೆ ಬಹಳ ಕಷ್ಟ ಎಂದು ಅನಿಸಬಹುದು. ಇಂತಹ ತೊಂದರೆಗಳಿಗೆ ಮನೆಮದ್ದು ವಿವರ ಇಲ್ಲಿದೆ.

ಬಿಸಿನೀರ ಪಾನೀಯ ಕುಡಿಯಿರಿ
ಶೀತ ಅಥವಾ ಗಂಟಲು ಕಿರಿಕಿರಿ ಉಂಟಾದರೆ ಸಾದಾ ಬಿಸಿನೀರು ಕುಡಿಯುವುದು ಕೂಡ ಉತ್ತಮವೇ ಆಗಿದೆ.

ಕುದಿಸಿದ ಹದವಾದ ಬೆಚ್ಚಗಿನ ನೀರನ್ನು ಕಾಫಿ ಸೇವಿಸಿದಂತೆ ಸ್ವಲ್ಪಸ್ವಲ್ಪವೇ ಸೇವಿಸಬಹುದು. ಅಥವಾ ಏಲಕ್ಕಿ, ಲವಂಗ, ಲಿಂಬು ರಸ, ದಾಲ್ಚಿನ್ನಿ ಸೇರಿಸಿ ಕುದಿಸಿದ ನೀರಿಗೆ ಹಾಕಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು ನಂತರ ಬಿಸಿಬಿಸಿಯಾಗಿ ಕುಡಿಯಬಹುದು.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ
ಇದು ಕೂಡ ಬಹಳ ಪರಿಣಾಮಕಾರಿ ಮದ್ದು. ಗಂಟಲು ಕಿರಿಕಿರಿ ಅಥವಾ ಗಂಟಲು ನೋವಿನಂತ ಸಮಸ್ಯೆಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಸಮಸ್ಯೆಯು ಬಹು ಬೇಗನೇ ಶಮನವಗುತ್ತದೆ. ದಿನಕ್ಕೆ ಒಂದು ಬಾರಿ ಅಂದರೆ, ರಾತ್ರಿ ಮಲಗುವುದಕ್ಕೆ ಮುಂಚೆ ಅಥವಾ ಅಗತ್ಯವಿದ್ದರೆ ಬೆಳಗ್ಗೆಯೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಉಪ್ಪನ್ನು ಬೆರೆಸಿ, ಗಂಟಲು ಮತ್ತು ಬಾಯಿ ಮುಕ್ಕಳಿಸಬೇಕು. ನಂತರ ಅದನ್ನು ಸೇವಿಸುವುದು ಒಳ್ಳೆಯದಲ್ಲ. ಉಗುಳಬೇಕು.

ಜೇನು ಅಥವಾ ಕಲ್ಲುಸಕ್ಕರೆ ಸೇವಿಸಿ
ಗಂಟಲು ಸಮಸ್ಯೆಗೆ ಜೇನು ಸವಿಯುವುದು ಅಥವಾ ಕಲ್ಲುಸಕ್ಕರೆ ತಿನ್ನುವುದು ಉಪಕಾರಿ. ದಿನಕ್ಕೆ ಎರಡು ಬಾರಿ ಒಂದೊಂದು ಚಮಚ ಜೇನು ಸವಿಯಬಹುದು. ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಗಂಟಲು ಕೆರೆತದಿಂದ ಕೆಮ್ಮು ಬರುವುದು ಕಡಿಮೆ ಆಗುತ್ತದೆ.

ಇವೆಲ್ಲಾ ಮನೆಯಲ್ಲೇ ಮಾಡಬಹುದಾದ ಸರಳ ಮತ್ತು ಸಾಧ್ಯವಿರುವ ಮದ್ದಾಗಿದೆ. ಸಣ್ಣಪುಟ್ಟ ಶೀತ, ಗಂಟಲು ಕೆರೆತಕ್ಕೆ ಇವನ್ನು ಬಳಸಬಹುದು. ಹಾಗೆಂದು ಸಮಸ್ಯೆ ಬಿಗಡಾಯಿಸಿದಾಗಲೂ ಮನೆಯಲ್ಲೇ ಮದ್ದು ಪ್ರಯೋಗಿಸುತ್ತಾ ಕೂರಲು ಇದು ಸೂಕ್ತ ಸಮಯವಲ್ಲ. ಕೊರೊನಾದ ಲಕ್ಷಣಗಳು ಕೂಡ ಶೀತ, ಜ್ವರದಂತಹ ಸಮಸ್ಯೆಗಳೇ ಆಗಿರುವುದರಿಂದ ಲಕ್ಷಣಗಳು ಗಂಭೀರ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವುದು ಅವಶ್ಯಕ. ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದಾದರೆ ಅಥವಾ ಸಾಮಾನ್ಯ ಶೀತ ಎಂದು ಖಚಿತವಿದ್ದರೆ ಅದಕ್ಕೆ ಈ ಪರಿಹಾರೋಪಾಯಗಳನ್ನು ಬಳಸಬಹುದು. ಕೊರೊನಾ ಎಂದಾದರೂ ಸೋಂಕಿಗೆ ಹೆದರಬೇಕಾದ ಅಗತ್ಯವಿಲ್ಲ. ಧೈರ್ಯದಿಂದ, ಜವಾಬ್ದಾರಿಯಿಂದ ಚಿಕಿತ್ಸೆಗೆ ಒಳಗಾದರೆ ಸೋಂಕು ಗೆಲ್ಲಬಹುದು.

(ಮಾಹಿತಿ ಕೃಪೆ ಕನ್ನಡTv9)


No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ