ಗಂಗಾವತಿ: ಕೋವಿಡ್ ಪಾಜಿಟೀವ್ ಕುರಿತು ಮಾಹಿತಿ ಹೇಳಲು ಮನೆಯ ಹತ್ತಿರ ಹೋದ ಆಶಾ ಕಾರ್ಯಕರ್ತೆರ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಹಿರೇಜಂತಗಲ್ ಸ್ವಾಗತ ರೈಸ್ ಪ್ರದೇಶದಲ್ಲಿ ಶನಿವಾರ ಮಧ್ಯಹ್ನ ಜರುಗಿದೆ.
ಸಂಗಮೇಶ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಸಂಗಮೇಶ ಕುಟುಂಬದಲ್ಲಿ ಪಾಜಿಟೀವ್ ಬಂದ ಮಾಹಿತಿಯನ್ನು ಕೊಡಲು ಮನೆಯ ಹತ್ತಿರ ತೆರಳಿದ್ದ ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಅನ್ನಪೂರ್ಣ,ಗೌಸಿಯಾ ಇವರನ್ನು ಸಂಗಮೇಶ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಸ್ಥಳೀಯರು ಮಧ್ಯೆ ಪ್ರವೇಶ ಮಾಡಿ ಬಿಡಿಸಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸಂಚಾರಿ ಪಿಐ ಸುವಾರ್ತಾ ಹಾಗೂ ಪೊಲೀಸ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಸಂಗಮೇಶ ಇವರನ್ನು ವಶಕ್ಕೆ ಪಡೆದಿದ್ದಾರೆ.
ಆಗ್ರಹ:ಕೊರೊನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು ಸಂಗಮೇಶ ಎಂಬ ವ್ಯಕ್ತಿ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪೊಲೀಸ ಠಾಣೆಗೆ ದೂರು ನೀಡಲಾಗುತ್ತದೆ ಎಂದು ಆಶಾಕಾರ್ಯಕರ್ತೆ ಲಕ್ಷ್ಮಿದೇವಿ ತಿಳಿಸಿದ್ದಾರೆ
(ಮಾಹಿತಿ ಕೃಪೆ ಉದಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ