ಡಿಜಿಟಲ್ ಡೆಸ್ಕ್: ರಾಜಸ್ಥಾನದ ರಾಜ್ ಸಮಂದ್ ಎಂಬಲ್ಲಿ ಶಾಕಿಂಗ್ ಸಂಗಿತಿಯೊಂದು ನಡೆದಿದ್ದು, 40 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟನೆಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ ವಾರದ ಬಳಿಕ ಆತ ತನ್ನ ಮನೆಯಲ್ಲಿ ಪ್ರತ್ಯಕ್ಷ್ಯನಾಗಿದ್ದಾನೆ.
ಓಂಕಾರ್ ಲಾಲ್ ಗಾಡುಲಿಯಾ ಅನ್ನೋ ವ್ಯಕ್ತಿಯೊಬ್ಬ ಸಾವನ್ನಾಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅದ್ರಂತೆ, ಸಂಬಂಧಿಕರು ಆಸ್ಪತ್ರೆಯಿಂದ ಮೃತದೇಹ ತಂದು ಅಂತ್ಯಕ್ರಿಯೆ ಮಾಡಿದ್ದಾರೆ. ಆದ್ರೆ, ವಾರದ ಬಳಿಕ ಓಂಕಾರ್ ಲಾಲ್ ಮನೆಗೆ ಹಿಂದಿರುಗಿದ್ದಾರೆ. ಇಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು? ನಿಜವಾಗ್ಲೂ ಆತ ಮೃತಪಟ್ಟಿದ್ನಾ?
ಅಸಲಿಗೆ ಓಂಕಾರ್ ಲಾಲ್ ಗಾಡುಲಿಯಾ ಮದ್ಯ ವ್ಯಸನಿಯಾಗಿದ್ದು, ಮೇ 11ರಂದು ತನ್ನ ಕುಟುಂಬಕ್ಕೆ ತಿಳಿಸದೆ ಉದಯಪುರಕ್ಕೆ ಹೋಗಿದ್ದನಂತೆ. ಯಕೃತ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಯಿಂದಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ದಿನ, ಗೋವರ್ಧನ್ ಪ್ರಜಾಪತ್ ಎನ್ನುವವರನ್ನೂ ಆರ್ ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಆತ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆ.
ಓಂಕಾರ್ ಲಾಲ್ ಕುಟುಂಬ ಸದಸ್ಯರು, ಮೃತ ದೇಹದ ಬಲಗೈ ಮತ್ತು ನೋಟದ ಮೇಲೆ ಇದೇ ರೀತಿಯ ಗಾಯದ ಗುರುತಿದೆ ಎಂದು ಹೇಳಿದ್ದು, ಮೃತದೇಹವನ್ನ ತಪ್ಪಾಗಿ ಗುರುತಿಸಿದ್ದಾರೆ. ಹಾಗಾಗಿ ಪೊಲೀಸರು ಯಾವುದೇ ಮರಣೋತ್ತರ ಮತ್ತು ಡಿಎನ್ ಎ ಪರೀಕ್ಷೆ ನಡೆಸದೆ ಶವವನ್ನು ಹಸ್ತಾಂತರಿಸಿದ್ದಾರೆ.
ಅದ್ರಂತೆ, ಆಸ್ಪತ್ರೆಯಲ್ಲಿ ಮೃತಪಟ್ಟ ಗೋವರ್ಧನ್ ಪ್ರಜಾಪತ್ ಅವ್ರ ಕೊಳೆತ ಶವವನ್ನ ತಪ್ಪಾಗಿ ಸ್ವಾಧೀನಪಡಿಸಿಕೊಂಡ ಓಂಕಾರ್ ಲಾಲ್ ಕುಟುಂಬದವ್ರು, ಮೇ 15ರಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಆದ್ರೆ, ಓಂಕಾರ್ ಲಾಲ್ ಗಾಡುಲಿಯಾ ಮೇ 23ರಂದು ಮನೆಗೆ ಮರಳಿದ್ದಾನೆ. ಸತ್ತನೆಂದು ಭಾವಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ ವ್ಯಕ್ತಿ ಏಕಾಏಕಿ ಮನೆಗೆ ಬಂದಿದ್ದನ್ನ ಕಂಡು ಕುಟುಂಬದವ್ರು ಆಘಾತಕ್ಕೆ ಒಳಗಾಗಿ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಕೈಗೆತ್ತಿಕೊಂಡು ನಿಜ ಸಂಗತಿಯನ್ನ ಬಯಲಿಗೇಳೆದಿದ್ದಾರೆ.
(ಮಾಹಿತಿ ಕೃಪೆ Kannada News Now)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ