WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, May 28, 2021

ಬ್ಲ್ಯಾಕ್‌ ಫಂಗಸ್ ಗೆ ಕಾರಣಗಳು ಹಲವು

 

ಕೋವಿಡ್ ಸೋಂಕು ಹೆಚ್ಚುತ್ತಿದ್ದಂತೆ ಬ್ಲ್ಯಾಕ್‌ ಫ‌ಂಗಸ್‌ ಕೂಡ ಹೆಚ್ಚುತ್ತಿದೆ. ಇದು ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ, ಮರಣಾಂತಿಕ. ಇದು ಬಂತೆಂದರೆ ಕಣ್ಣು, ಮೂಗು, ಮೂಗಿನ ಹತ್ತಿರದ ಮಾಂಸ, ಮೂಳೆಯನ್ನು ತೆಗೆಯಬೇಕಾದ ಅಪಾಯವಿದೆ.

ಮಧುಮೇಹ ಅಧಿಕ ಇದ್ದವರಿಗೆ ಬ್ಲ್ಯಾಕ್‌ ಫ‌ಂಗಸ್‌ (ಮ್ಯೂಕರ್‌ಮೈಕೋಸಿಸ್‌) ಬರುತ್ತದೆ. ಸ್ಟಿರಾಯ್ಡ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೊನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತದೆ. ಮಧುಮೇಹ ನಿಯಂತ್ರಣದಲ್ಲಿದ್ದ ವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕ ವಾಗುತ್ತದೆ. ಕೊರೊನಾ ನಿಯಂತ್ರಿಸಲು ಸ್ಟಿರಾಯ್ಡ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್‌ ಮೈಕೋ ಸಿಸ್‌ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆಯಾಗುತ್ತಿದೆ. ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲ ಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿ ಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು.

ಇತ್ತೀಚೆಗಿನ ಅಧ್ಯಯನವೊಂದರ ವರದಿಯ ಪ್ರಕಾರ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಳ್ಳಲು ಕೊರೊನಾ ಸೋಂಕಿನ ಪರೀಕ್ಷೆಯ ವೇಳೆ ಗಂಟಲ ದ್ರವ ಸಂಗ್ರಹಿ ಸಲು ಬಳಸಲಾಗುವ ನೈರ್ಮಲ್ಯ ಯುತ ವಾಗಿರದ ನಾಳಗಳೂ ಕಾರಣವಾಗುತ್ತಿ ರುವುದು ಸಾಬೀತಾಗಿದೆ. ಅಷ್ಟು ಮಾತ್ರ ವಲ್ಲದೆ ಬ್ಲ್ಯಾಕ್‌ ಫ‌ಂಗಸ್‌ನಿಂದ ಬಾಧಿತ ರಾಗಿರುವ ಶೇ.60ರಷ್ಟು ರೋಗಿಗಳಿಗೆ ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟಿರಾಯ್ಡ ಅಥವಾ ಆಮ್ಲಜನಕವನ್ನು ನೀಡ ಲಾಗಿರಲಿಲ್ಲ ಎಂಬುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಇವೆಲ್ಲವೂ ಗಂಟಲದ್ರವ ಸಂಗ್ರಹಕ್ಕೆ ಬಳಸಲಾಗುವ ನಾಳಗಳು ಕೂಡ ಬ್ಲ್ಯಾಕ್‌ಫ‌ಂಗಸ್‌ ಹರ ಡಲು ಕಾರಣವಾಗುತ್ತಿದೆ ಎಂಬ ಬಲವಾದ ಸಂಶಯ ಮೂಡುವಂತೆ ಮಾಡಿದೆ.

ಅಸುರಕ್ಷಿತ ಮತ್ತು ಅನೈರ್ಮಲ್ಯ ದಿಂದ ಕೂಡಿದ ಪ್ರದೇಶಗಳಲ್ಲಿ ಈ ನಾಳಗಳನ್ನು ತಯಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ದೇಶಾದ್ಯಂತ ಕೋವಿಡ್‌ ಪಸರಿಸು ತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೊರೊನಾ ಪರೀಕ್ಷೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನಾಳಗಳ ತಯಾರಿಕೆ ವೇಳೆ ನೈರ್ಮಲ್ಯದತ್ತ ಗಮನ ಹರಿಸಬೇಕಿದೆಯಲ್ಲದೆ ಗಂಟಲ ದ್ರವ ಸಂಗ್ರಹದ ವೇಳೆ ನಾಳದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯ. ಗಂಟಲ ದ್ರವ ಸಂಗ್ರಹಿಸುವವರಿಗೂ ಸೂಕ್ತ ತರಬೇತಿಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಳವನ್ನು ಮೂಗಿಗೆ ಎರಡು ಸೆಂಟಿಮೀಟರ್‌ ಹಾಕಿದರೆ ಸಾಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಲ್ಕು ಸೆಂಟಿಮೀಟರ್‌ ಆಳದವರೆಗೆ ಹಾಕಿ ತಿರುಗಿಸಿ ದ್ರವ ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ತೀರಾ ಅಪಾಯಕಾರಿ. ಇವೆಲ್ಲದರ ಬಗೆಗೆ ನಿಗಾ ವಹಿಸುವ ಜತೆಯಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಇತ್ತ ಸರಕಾರ ಮತ್ತು ವೈದ್ಯಕೀಯ ತಜ್ಞರು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

(ಮಾಹಿತಿ ಕೃಪೆ ಉದಯವಾಣಿ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ