WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, May 26, 2021

ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ 'ಕೂ'ಗೆ 30 ಮಿಲಿಯನ್ ಡಾಲರ್ ಹೂಡಿಕೆ!

 

ಬೆಂಗಳೂರು: ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ ಕೂ'ಸಾಮಾಜಿಕ ಜಾಲತಾಣದ ಆಪ್ ಗೆ ಹೂಡಿಕೆ ಹರಿದುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂ'ಗೆ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಸೀರೀಸ್ ಸಿ ರೌಂಡ್ ನಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಟೈಗರ್ ಗ್ಲೋಬಲ್ ಈಗಿರುವ ಹೂಡಿಕೆ ಸಂಸ್ಥೆಗಳಾದ ಆಕ್ಸೆಲ್ ಪಾರ್ಟ್ನರ್ಸ್, ಕಲಾರಿ ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್ ಹಾಗೂ ಡ್ರೀಮ್ ಇನ್ಕ್ಯುಬೇಟರ್ ಗಳೊಂದಿಗೆ ಹೂಡಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಈ ಸುತ್ತಿನಲ್ಲಿ ಐಐಎಫ್‌ಎಲ್ ಹಾಗೂ ಮಿರೀ ಅಸೆಟ್ಸ್ ಹೊಸದಾಗಿ ಹೂಡಿಕೆ ಮಾಡಿದ್ದು, ಒಟ್ಟು 30 ಮಿಲಿಯನ್ ಡಾಲರ್ ಹೂಡಿಕೆ ಹರಿದುಬಂದಿದೆ ಎಂದು ಹೇಳಿದೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೂ'ಆಪ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಬುಕ್ ಮೈ ಶೋ ಸ್ಥಾಪಕ ಆಶೀಶ್ ಹೇಮರಂಜನಿ, ಉಡಾನ್ ನ ಸಹ ಸಂಸ್ಥಾಪಕ ಸುಜೀತ್ ಕುಮಾರ್, ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ಝಿರೋದಾ ಸ್ಥಾಪಕ ನಿಖಿಲ್ ಕಾಮತ್ ಚೀನಾದ ಶುನ್ವೈ ಕ್ಯಾಪಿಟಲ್ ನ ಶೇ.9 ರಷ್ಟು ಪಾಲನ್ನು ಹೂಡಿಕೆ ಮೂಲಕ ಖರೀದಿಸಿದ್ದಾರೆ.

"ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕ ಮಟ್ಟದ ಸಾಮಾಜಿಕ ಜಾಲತಾಣವಾಗಿ ಬೆಳೆಯುವುದಕ್ಕೆ ತೀವ್ರವಾದ ಯೋಜನೆಗಳನ್ನು ಹೊಂದಿದೆ ಎಂದು ಕೂ' ಸಂಸ್ಥೆ ತಿಳಿಸಿದ್ದು ಈ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಟೈಗರ್ ಗ್ಲೋಬಲ್ ಸಂಸ್ಥೆ ಸರಿಯಾದ ಪಾಲುದಾರ ಸಂಸ್ಥೆ ಎಂದು ಕೂ'ಆಪ್ ನ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡ ಪ್ರಭ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ