ಹೊಸಪೇಟೆ (ವಿಜಯನಗರ): 'ಕೋವಿಡ್-19ನಿಂದ ಮೃತಪಟ್ಟವರ ಶವಗಳನ್ನು ತಾಲ್ಲೂಕಿನ ಹಂಪಿ ರುದ್ರಭೂಮಿಯಲ್ಲಿ ಹೂಳಲು ಅವಕಾಶ ಕಲ್ಪಿಸಬಾರದು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
'ಒಂದುವೇಳೆ ಕೋವಿಡ್‌ನಿಂದ ನಿಧನ ಹೊಂದಿದವರ ಅಂತ್ಯಸಂಸ್ಕಾರ ಹಂಪಿಯಲ್ಲೇ ಮಾಡುವುದೇ ಆದರೆ ಶವಗಳನ್ನು ಸುಡಬೇಕು. ಆದರೆ, ಯಾವುದೇ ಕಾರಣಕ್ಕೂ ಹೂಳಬಾರದು' ಎಂದು ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ಸಂದೇಶ, ಸುರೇಶ, ಸಿದ್ದಪ್ಪ, ರಮೇಶ, ರಾಜೇಶ, ಪರಶುರಾಮ ಮೊದಲಾದವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.
(ಮಾಹಿತಿ ಕೃಪೆ ಪ್ರಜಾವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ