WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, May 11, 2021

ಇಂದಿರಾ ಕ್ಯಾಂಟೀನ್​ನಲ್ಲಿ ಉಚಿತ ಆಹಾರ ಪೂರೈಕೆಗೆ ರಾಜ್ಯ ಸರ್ಕಾರದಿಂದ ಸೂಚನೆ

 

ರಾಜ್ಯದಲ್ಲಿ ಕೊರೊನಾ 2ನೇ ನಿಯಂತ್ರಣದ ಹಿನ್ನೆಲೆಯಲ್ಲಿ ಮೇ 24ರವರೆಗೂ ರಾಜ್ಯ ಸರ್ಕಾರ ಲಾಕ್​ಡೌನ್​ ಆದೇಶ ವಿಧಿಸಿದೆ. ಈ ಸಮಯದಲ್ಲಿ ಯಾರೂ ಉಪವಾಸದಿಂದ ಇರಬಾರದು ಎಂಬ ಕಾರಣಕ್ಕೆ ಇಂದಿರಾ ಕ್ಯಾಂಟೀನ್​ನಲ್ಲಿ ಸಾರ್ವಜನಿಕರಿಗೆ ಉಚಿತ ಆಹಾರ ಒದಗಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ರಾಜ್ಯದಲ್ಲಿ ಮೇ 10ರಿಂದ ಮೇ 24ನೇ ತಾರೀಖಿನಿವರೆಗೆ ಲಾಕ್​ಡೌನ್​ ಆದೇಶ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟವನ್ನ ಎದುರಿಸುವ ದಿನಗೂಲಿ ಕಾರ್ಮಿಕರು ಸೇರಿದಂತೆ ಬಡತನ ರೇಖೆಯ ಕೆಳಗಿರುವ ಯಾರೂ ಸಹ ಉಪವಾಸದಿಂದ ಇರಬಾರದು. ಹೀಗಾಗಿ ಇಂದಿರಾ ಕ್ಯಾಂಟೀನ್​ನಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನ ಉಚಿತವಾಗಿ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಅನ್ವಯವಾಗುವಂತೆ ಸುತ್ತೋಲೆಯನ್ನ ಪ್ರಕಟಿಸಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ

 )

Saturday, May 8, 2021

ರಾಜ್ಯದಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುಲು ಪ್ರಮುಖಾoಶಗಳು


 

ಮೇ 10ರಿಂದ 14 ದಿನಗಳ ಕಾಲ ಕರುನಾಡು ಸ್ತಬ್ಧ: ಲಾಕ್ ಡೌನ್ ಆದೇಶ ಹೊರಡಿಸಿದ ಸಿಎಂ ಬಿಎಸ್ ವೈ


 ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹಾಗೂ ಮೃತರ ಸಂಖ್ಯೆ ದಿನೇ ಏರುಗತಿಯಲ್ಲಿ ಸಾಗುತ್ತಿರುವುದರಿಂದ, ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮೇ 10ರಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. 
ಸಚಿವರು ಮತ್ತು ಅಧಿಕಾರಿಗಳೊಂದಿಗಿನ ಹಲವು ಸುತ್ತಿನ ಸಭೆಯ ನಂತರ ಸಿಎಂ ಯಡಿಯೂರಪ್ಪ ಅಧಿಕೃತ ನಿರ್ಧಾರವನ್ನು ಇಂದು ಸಂಜೆ 7:30ಕ್ಕೆ ಪ್ರಕಟಿಸಿದ್ದಾರೆ. ಕರ್ನಾಟಕದಲ್ಲಿ ದಿನವೊಂದಕ್ಕೆ ಅರ್ಧ ಲಕ್ಷದಷ್ಟು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಈಗಾಗಲೇ ಮೇ 12ರವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಇದರಿಂದಲೂ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ರಾಜ್ಯಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. 

ಮಾರ್ಗಸೂಚಿ: 

ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ 

ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ 

ಕೂಲಿ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುವಂತಿಲ್ಲ. 

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯಲ್ಲಿ ತರಕಾರಿ-ಹಣ್ಣುಗಳನ್ನು ಮಾರಲು ಅವಕಾಶ ನೀಡಲಾಗಿದೆ. 

ಕೈಗಾರಿಕೆ ಹೊಟೇಲ್, ಪಬ್, ಬಾರ್ ಕ್ಲೋಸ್.ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು. 

ಸರ್ಕಾರಿ ಕಚೇರಿ ಭಾಗಶ‍ಃ ಕೆಲಸ ಮಾಡಲಿದೆ. 

ಅಗತ್ಯವಸ್ತು ಸಾಗಿಸುವ ವಾಹನಗಳಿಗೆ ಅವಕಾಶವಿದೆ. 

ಅಂತರ್ ಜಿಲ್ಲಾ ಸಂಚಾರಕ್ಕೆ ಸಂಪೂರ್ಣ ನಿಷೇಧ 

ಮೇ 10 ರಿಂದ ರಾಜ್ಯಾದ್ಯಂತ ಎಲ್ಲಾ ಕಾರ್ಖಾನೆಗಳಿಗೆ ಬೀಗ 

ವಿಮಾನ ರೈಲು ಸಂಚಾರಕ್ಕೆ ಅನುಮತಿ 

ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆಗೆ ಮದ್ಯ ಮಾರಾಟಕ್ಕೆ ಅವಕಾಶ 

ಟ್ಯಾಕ್ಸಿ, ಅಟೋ ತುರ್ತು ಸೇವೆಗಳಿಗೆ ಅವಕಾಶ 

ಸಿನಿಮಾ, ಮಾಲ್, ಜಿಮ್ ಎಲ್ಲವೂ ಮೇ 24 ರವರೆಗೂ ಬಂದ್ 

ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. 

ಎಲ್ಲ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. 

ತಳ್ಳುಗಾಡಿಗಳಲ್ಲಿ ತರಕಾರಿ ಮಾರಲು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ 

ಎಲ್ಲ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. 

ಕ್ರೀಡಾ ಸಮುಚ್ಛಯ, ಸಾರ್ವಜನಿಕ ಈಜುಕೊಳ ಸಂಪೂರ್ಣ ಬಂದ್ 

ಈಗಾಗಲೇ ನಿಗದಿಯಾಗಿದ್ದ ಮದುವೆಗಳಿಗೆ ಅವಕಾಶ 
ಮದುವೆ ಸಮಾರಂಭಗಳಿಗೆ 50 ಜನರಿಗೆ ಮಾತ್ರ ಅವಕಾಶ 
ರಸ್ತೆ ಕಾಮಗಾರಿಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. 
ಆಸ್ಪತ್ರೆಗಳು, ಮೆಡಿಕಲ್​ ಶಾಪ್​ಗಳು, ಬ್ಯಾಂಕ್​ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. 
ಯಾವುದೇ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರುವುದಿಲ್ಲ. 
ಕೈಗಾರಿಕೆಗಳಿಗೆ ಷರತ್ತು ಬದ್ಧ ಅನುಮತಿ 
ಇ-ಕಾಮರ್ಸ್ ಸೇವೆಗಳಿಗೆ ಅವಕಾಶ 
ಹೊಟೇಲ್ ಗಳಿಂದ ಪಾರ್ಸೆಲ್ ತರಲು ಹೋಗಬೇಕಾದರೆ ನಡೆದುಕೊಂಡೆ ಹೋಗಬೇಕು. ವಾಹನಗಳಲ್ಲಿ ಹೋದರೆ ಶಿಕ್ಷೆ 
ಅಗತ್ಯ ಸೇವೆಗಳಿಗೆ ಬಿಟ್ಟು ಅನವಶ್ಯಕವಾಗಿ ವಾಹನಗಳನ್ನು ಚಲಾಯಿಸುವಂತಿಲ್ಲ. 
ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು. 
ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು. 
ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ. 
ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲುಗೊಳ್ಳಲು ಅವಕಾಶ. 
ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿ, ಧಾರ್ಮಿಕ ಕಾರ್ಯಕ್ರಮಗಳು ಮೊದಲಾದ ಹೆಚ್ಚಿನ ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ.
(ಮಾಹಿತಿ ಕೃಪೆ ಉದಯವಾಣಿ)

Friday, May 7, 2021

ಕೊರೋನಾ ನಿಯಂತ್ರಿಸಲು ಭಾರತಕ್ಕೆ 10,000 ಆಮ್ಲಜನಕ ಸಾಂದ್ರಕಗಳು , ಮಾಸ್ಕ್ ಕಳುಹಿಸಿದ ವಿಶ್ವಸಂಸ್ಥೆ

 ಯುನೈಟೆಡ್​ ನೇಷನ್ಸ್​: ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ಹಲವು ಸಂಸ್ಥೆಗಳು ಸುಮಾರು 10,000 ಆಮ್ಲಜನಕ ಸಾಂದ್ರಕಗಳು ಮತ್ತು ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳನ್ನು ಭಾರತಕ್ಕೆ ತಲುಪಿಸಿವೆ ಎಂದು ಯುಎನ್ ವಕ್ತಾರರು ತಿಳಿಸಿದ್ದಾರೆ.

ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಮತ್ತು ಯುಎನ್ ಜನಸಂಖ್ಯಾ ನಿಧಿ (ಯುಎನ್‍ಎಫ್‍ಪಿಎ) ಸುಮಾರು 10,000 ಆಮ್ಲಜನಕ ಸಾಂದ್ರಕಗಳು, ಸುಮಾರು 10 ದಶಲಕ್ಷ ವೈದ್ಯಕೀಯ ಮಾಸ್ಕ್​ಗಳು ಮತ್ತು 1.5 ದಶಲಕ್ಷಕ್ಕೂ ಹೆಚ್ಚು ಫೇಸ್​ ಶೀಲ್ಡ್​, ವೆಂಟಿಲೇಟರ್, ಆಮ್ಲಜನಕವನ್ನು ಉತ್ಪಾದಿಸುವ ಸ್ಥಾವರ, ಕೋಲ್ಡ್ ಚೈನ್ ಉಪಕರಣಗಳನ್ನು ಸಹ ರವಾನಿಸಿದೆ' ಎಂದು ಹೇಳಿದ್ದಾರೆ.

'ನಮ್ಮ ತಂಡವು ವಿಮಾನ ನಿಲ್ದಾಣದ ಥರ್ಮಲ್ ಸ್ಕ್ಯಾನರ್, ಟೆಸ್ಟಿಂಗ್​ ಕಿಟ್​ಗಳನ್ನು ಕಳುಹಿಸಿದೆ, ಜೊತೆಗೆ ತಾತ್ಕಾಲಿಕ ಡಬ್ಲ್ಯುಎಚ್‍ಒ ಟೆಂಟ್ ಮತ್ತು ಬೆಡ್​ಗಳನ್ನು ಕೂಡಾ ಒದಗಿಸುತ್ತಿದೆ. ಜೊತೆಗೆ ಸಾವಿರಾರು ಸಾರ್ವಜನಿಕ ಆರೋಗ್ಯ ತಜ್ಞರನ್ನು ನಿಯೋಜಿಸಿದೆ' ಎಂದು ಹೇಳಿದ್ದಾರೆ.

(ಮಾಹಿತಿ ಕೃಪೆ Kannada News Now )

ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ ತಪ್ಪಿದ ಭಾರಿ ಅನಾಹುತ

 ಬೆಳಗಾವಿ.ಮೇ.7 ಜೀವಾಮೃತ ಆಕ್ಸಿಜನ್ ಲಿಕ್ವಿಡ್ ಸಾಗಿಸುತ್ತಿದ್ದ ಟ್ಯಾಂಕರ್ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ. ಬೆಳಗಾವಿ ತಾಲೂಕಿನ ಮುತ್ನಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ನಾಲ್ಕರಲಗಲಿ ಅಪಘಾತ ನಡೆದಿದೆ.ಬೆಳಗಾವಿಗೆ ಆಕ್ಸಿಜನ್ ಲಿಕ್ವಿಡ್ ತುಂಬಿ ಕೊಂಡು ತೆರಳುತ್ತಿದ್ದಾಗ ಒವರ್ ಟೆಕ್ ಮಾಡುವ ಭರದಲ್ಲಿ ಮುಂದೆ ಚಲಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಟ್ಯಾಂಕರ್ ನ ಮುಂದಿನ ಟೈಯರ್ ಬ್ಲಾಸ್ಟ್ ಆಗಿದ್ದು ಆಯಕ್ಸಲ್ ಕೂಡ ಕಟ್ಟಾಗಿದೆ.ಒಂದು ವೆಳೆ ಆಯಕ್ಸಿಜನ್ ಸೊರಿಕೆ ಯಾಗಿದ್ದರೆ ಭಾರಿ ಅನಾಹುತವೆ ಸಂಭವಿಸುತ್ತಿತ್ತು ಅದೃಷ್ಟ ವಶಾತ್ ಯಾವುದೆ ಅನಾಹುತ ಸಂಭವಿಸಿಲ್ಲ.

ಸುಮಾರು.16 ಕೆ ಎ ಎಲ್ ಸಾಮಥ್ರ್ಯ ದ ಆಕ್ಸಿಜನ್ ಸಾಗಿಸಲಾಗುತ್ತಿತ್ತು.ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂದ ಪಟ್ಟ ಅಧಿಕಾರಿಗಳು.ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶಿಲನೆ ನಡೆಸಿ ಮತ್ತೊಂದು ಟ್ಯಾಂಕರ್ ನಲ್ಲಿ ಆಕ್ಸಿಜನ್ ಸ್ಥಳಾಂತರಿಸುವ ಸಿದ್ದತೆ ಕೈಗೊಂಡಿದ್ದಾರೆ.

(ಮಾಹಿತಿ ಕೃಪೆ ಈ ಸಂಜೆ )

Thursday, May 6, 2021

ಮದುವೆ ಸಮಾರಂಭಗಳಿಗೆ ಇ-ಪಾಸ್ ಪಡೆಯುವುದು ಹೇಗೆ?

 

ಧಾರವಾಡ, ಮೇ 06; ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 12ರ ಬೆಳಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಮದುವೆಗಳನ್ನು ನಡೆಸಲು ಆಯಾ ಜಿಲ್ಲಾಡಳಿತದ ವತಿಯಿಂದ ಅನುಮತಿ ಪಡೆಯಬೇಕು.

ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಅವಧಿಯಲ್ಲಿ ಮದುವೆ ಸಮಾರಂಭಗಳನ್ನು ಮಾಡುವವರು ಜಿಲ್ಲಾಡಳಿತದ ವೆಬ್‍ಸೈಟ್ ಮೂಲಕ ಇ-ಪಾಸ್ ಪಡೆಯಬಹುದು.

ಆನ್‍ಲೈನ್ ಮೂಲಕ ಇ-ಪಾಸ್ ಪಡೆಯಲು ಮದುವೆ ಆಮಂತ್ರಣ ಪತ್ರಿಕೆ, ಪರವಾನಿಗೆ ಪಡೆಯುವವರ ಗುರುತಿನ ಚೀಟಿ (ಆಧಾರ್ ಕಾರ್ಡ್, ಪಾಸ್‍ಪೆÇೀರ್ಟ್, ಡ್ರೈವಿಂಗ್ ಲೈಸನ್ಸ್) ಮುಂತಾದವುಗಳನ್ನು ಅಪ್‍ಲೋಡ್ ಮಾಡಬೇಕು.

ಇ-ಪಾಸ್ ಧಾರವಾಡ ಜಿಲ್ಲೆ ವ್ಯಾಪ್ತಿಯೊಳಗೆ ಮಾತ್ರ ಅನ್ವಯ. ಮದುವೆಗಳಿಗೆ ಕನಿಷ್ಠ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮದುವೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

ಸಮಾರಂಭದಲ್ಲಿ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದಲ್ಲಿ ಪರವಾನಿಗೆ ಪಡೆದ ವ್ಯಕ್ತಿ ಸಂಪೂರ್ಣ ಜವಾಬ್ದಾರ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ (1077) ಸಹ ಆರಂಭಿಸಲಾಗಿದೆ.

ಮದುವೆಗೆ ಅನುಮತಿ ಪಡೆದ ವ್ಯಕ್ತಿಗಳಿಗೆ ಮದುವೆ ಕಾರ್ಯಕ್ರಮದಲ್ಲಿ 50 ಜನರ ಮಿತಿ ನಿರ್ವಹಿಸಲು ಕೈಗಳಿಗೆ ಧರಿಸಲು ಕೈ ಬ್ಯಾಂಡ್‍ಗಳನ್ನು ತಹಶೀಲ್ದಾರ್ ಕಚೇರಿ ಅಥವಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ವಲಯ ಸಹಾಯಕ ಆಯುಕ್ತರ ಕಚೇರಿಯಿಂದ ಪಡೆಯಬಹುದು.

(ಮಾಹಿತಿ ಕೃಪೆ ಓನ್ ಇಂಡಿಯಾ)

ಮುಂದಿನ ತಿಂಗಳು 15 ರಿಂದ ಶಾಲೆ ಶುರು: ಬೇಸಿಗೆ ರಜೆ, ಶೈಕ್ಷಣಿಕ ವರ್ಷ ಆರಂಭದ ದಿನಾಂಕ ಘೋಷಣೆ

 

ಬೆಂಗಳೂರು: ಜೂನ್ 15 ರಿಂದ ಹೊಸ ಶೈಕ್ಷಣಿಕ ವರ್ಷ ಶುರುವಾಗಲಿದೆ. ಈ ಬಾರಿ ಶಾಲೆಗಳ ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷ ಆರಂಭದ ದಿನಾಂಕವನ್ನು ಘೋಷಣೆ ಮಾಡಲಾಗಿದೆ. 

ಜೂನ್ 14 ರವರೆಗೆ ಪ್ರಾಥಮಿಕ ಮತ್ತು ಎಸ್‍ಎಸ್‍ಎಲ್ಸಿ ಹೊರತುಪಡಿಸಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ಇರುತ್ತದೆ. ಜೂನ್ 1 ರಿಂದ 14 ರವರೆಗೆ ಎಸ್‍ಎಸ್‍ಎಲ್ಸಿ ಮಕ್ಕಳಿಗೆ ಪುನರ್ಮನನ ತರಗತಿಗಳು ನಡೆಯಲಿವೆ. 

ಶಿಕ್ಷಕರು ರಜೆ ಅವಧಿಯಲ್ಲಿ ಎಸ್‍ಎಸ್‍ಎಲ್ಸಿ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನಹರಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಜೂನ್ 15 ರಿಂದ 2021 - 22 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ವಾರದಲ್ಲಿ ಒಂದು ದಿನ ಮಾತ್ರ ವರ್ಕ್ ಆಗುತ್ತೆ ಈ ಆಪ್.

 

ಪ್ರೀತಿಯ ಹುಡುಕಾಟದಲ್ಲಿ ಇರುವವರಿಗೆ ಡೇಟಿಂಗ್​ ಅಪ್ಲಿಕೇಶನ್​ಗಳು ಉತ್ತಮ ವೇದಿಕೆಗಳಾಗಿ ಬದಲಾಗುತ್ತದೆ. 

ಇದೇ ರೀತಿ ಹೊಸ ಡೇಟಿಂಗ್​ ಅಪ್ಲಿಕೇಶನ್ ​ಒಂದು ಇದೀಗ ಗ್ರಾಹಕರ ಬಳಕೆಗೆ ಲಭ್ಯವಾಗಿದ್ದು ಇದು ವಾರದಲ್ಲಿ ಕೇವಲ ಒಂದು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಹೌದು..! ವಾರದ ಆರು ದಿನ ಅಪ್ಲಿಕೇಶನ್​ ಕಾರ್ಯ ನಿರ್ವಹಿಸೋದಿಲ್ಲ. 

ಲಂಡನ್​ ಮೂಲದ ಡಿಜಿಟಲ್​ ಫ್ಲಾಟ್​ಫಾರಂ ಥರ್ಸ್ ಡೇ ಯನ್ನ ಲಂಡನ್​ ಹಾಗೂ ನ್ಯೂಯಾರ್ಕ್​ನಲ್ಲಿ ಮಾರ್ಚ್​ 13ರಂದು ಲಾಂಚ್​ ಮಾಡಲಾಗಿದೆ. ಈ ಅಪ್ಲಿಕೇಶನ್​ ಈಗಾಗಲೇ 1.1 ಲಕ್ಷ ಬಳಕೆದಾರರನ್ನ ಹೊಂದಿದೆ. ಈ ಅಪ್ಲಿಕೇಶನ್​ನ್ನು ಕೇವಲ ಗುರುವಾರ ಮಾತ್ರ ಬಳಕೆ ಮಾಡಬಹುದಾಗಿದೆ. 

ಜನರು ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಅನ್ನೋದು ಸದ್ಯದ ವಾಸ್ತವವಾಗಿದೆ. ಇದರಿಂದಾಗಿ ಪ್ರೀತಿ ಪಾತ್ರರನ್ನ ಹುಡುಕೋದ್ರಲ್ಲಿ ಅವರಿಗೆ ಬೇಸರ ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ನಮ್ಮ ಅಪ್ಲಿಕೇಶನ್​ ಗುರುವಾರ ಮಾತ್ರ ನಿಮಗಾಗಿ ಬಾಗಿಲು ತೆರೆಯಲಿದೆ. ಅಲ್ಲದೇ ಡೇಟಿಂಗ್​ ಅಪ್ಲಿಕೇಶನ್​ ಹೊರತೂಪಡಿಸಿಯೂ ಜೀವನ ಇರೋದ್ರಿಂದ ಕೇವಲ ಒಂದು ದಿನ ಮಾತ್ರ ಡೇಟಿಂಗ್​ ಅಪ್ಲಿಕೇಶನ್​ ಸಮಯ ನೀಡಿದ್ರೆ ಸಾಕು ಎಂದು ಈ ಅಪ್ಲಿಕೇಶನ್​ ಮಾಲೀಕರು ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಬೆಂಗಳೂರು; 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಇಂದು ಉದ್ಘಾಟನೆ

 

ಬೆಂಗಳೂರು, ಮೇ 06; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕಿತರು ಬೆಡ್‍ಗಳನ್ನು ಪಡೆಯಲು ಹರಸಾಹಸ ಪಡಬೇಕಿದೆ. ಜಾಲಹಳ್ಳಿಯಲ್ಲಿ ಇಂದು 100 ಹಾಸಿಗೆಯ ಆಸ್ಪತ್ರೆ ಉದ್ಘಾಟನೆಯಾಗುತ್ತಿದೆ. 

ಜಾಲಹಳ್ಳಿಯ ಏರ್ ಫೆÇೀರ್ಸ್ ಸ್ಟೇಷನ್‍ನಲ್ಲಿ 100 ಹಾಸಿಗೆಗಳ ಕೋವಿಡ್ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಸಾಮಾನ್ಯ ಜನರನ್ನು ಸಹ ಈ ಸೇನಾ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಏರ್ ಫೆÇೀರ್ಸ್‍ನ ಕಮಾಂಡ್ ಆಸ್ಪತ್ರೆ ಸಿಬ್ಬಂದಿ ಇದರ ನಿರ್ವಹಣೆ ನೋಡಿಕೊಳ್ಳಲಿದ್ದಾರೆ. 

ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸೂಚಿಸುವ ಜನರು ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಆಕ್ಸಿಜನ್ ವ್ಯವಸ್ಥೆ ಹೊಂದಿರುವ ಬೆಡ್‍ಗಳು ಸಹ ಈ ಆಸ್ಪತ್ರೆಯಲ್ಲಿವೆ. ನಗರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನಲೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. 

ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಏಪ್ರಿಲ್ 27ರಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಮೇ 12ರ ಬೆಳಗ್ಗೆ 6 ಗಂಟೆಯ ತನಕ ಲಾಕ್ ಡೌನ್ ಜಾರಿಯಲ್ಲಿರಲಿದೆ. ಲಾಕ್ ಡೌನ್ ಇದ್ದರೂ ರಾಜ್ಯದಲ್ಲಿ ಬುಧವಾರ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯನ್ನು ದಾಟಿದೆ.


'ಸೌಂದರ್ಯ' ದುಪ್ಪಟ್ಟುಗೊಳಿಸುವ ಲೋಳೆಸರ

 

ಲೋಳೆಸರ ಇದು ಹಳ್ಳಿಗಳ ಮನೆಯಂಗಳದಲ್ಲಿ ನಳನಳಿಸುವ ಬಹು ಉಪಯೋಗಿ ಸಸ್ಯ ಪ್ರಬೇಧ. ಲೋಳೆ ಇರುವ ಹಸಿರು ಬಣ್ಣದ ಎಲೆ ಹೊಂದಿರುವ ಇದನ್ನು ಅಲೋವೆರಾ ಎಂದೂ ಕರೆಯಲ್ಪಡುತ್ತಿದ್ದು, ಆಯುರ್ವೇದದಲ್ಲಿ ಇದರ ಬಳಕೆ ವ್ಯಾಪಕವಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಗಾಯ, ಸುಟ್ಟ ಗಾಯ ಮತ್ತು ಚರ್ಮದ ಸೋಂಕಿಗೆ ಬಳಸಲಾಗುವ ಅಲೋವೆರಾವನ್ನು ಸೌಂದರ್ಯವರ್ಧಕವಾಗಿಯೂ ಬಳಸುತ್ತಾರೆ. ಆಲೋವೆರಾದಲ್ಲಿರುವ ಆಯಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿರುವ ವಿಷವನ್ನು ಹೊರಹಾಕುವ ಜೊತೆಗೆ ದೇಹದಲ್ಲಿನ ಹಾನಿಗೊಳಗಾಗಿರುವ ಜೀವಕೋಶಗಳು ಮತ್ತು ಅಂಗಾಂಶಗಳನ್ನು ಸರಿಪಡಿಸುತ್ತದೆ.

ಆಲೋವೆರಾದ ಕ್ರೀಮ್ ಅನ್ನು ಮುಖದ ಮೇಲೆ ಲೇಪಿಸುವುದರಿಂದ ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ ಮುಖದ ಕಾಂತಿ ವೃದ್ದಿಸುತ್ತದೆ. ಅಲ್ಲದೇ ಇದರ ಜ್ಯೂಸ್ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಅಗಾಧ ಪ್ರಮಾಣದ ಪೌಷ್ಠಿಕಾಂಶ, ಮಿನರಲ್ ಮತ್ತು ವಿಟಮಿನ್ ಗಳನ್ನು ಒದಗಿಸುತ್ತದೆ. ಈ ಜ್ಯೂಸ್ ನಲ್ಲಿ ಅಧಿಕ ಪ್ರಮಾಣದ ಅಮಿನೋ ಆಯಸಿಡ್ ಮತ್ತು ಫ್ಯಾಟಿ ಆಯಸಿಡ್ ಇದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ ವೈದ್ಯರದ್ದು.

MAIN NEWS: ಕೊರೊನಾದಿಂದ ರಕ್ಷಣೆ ಪಡೆಯುವ ಸುಲಭ ವಿಧಾನ ಹೇಳಿದ ಆಯುಷ ಆಯುಷ್ ಸಚಿವಾಲಯ

 

ಪ್ರಸ್ತುತ ಲಕ್ಷಾಂತರ ಮಂದಿ ಕೊರೊನಾಗೆ ಬಲಿಯಾಗ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಮಹತ್ವ ಗೊತ್ತಾಗ್ತಿದೆ. ಶಕ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ಸೋಂಕಿನಿಂದ ಬೇಗ ಮುಕ ಮುಕ್ತಿ ಪಡೆಯಬಹುದು. ಯಾವುದೇ ಅಪಾಯವಿಲ್ಲದೆ ಕೊರೊನಾ ಗೆದ್ದು ಬರಬಹುದು.

ಕೊರೊನಾ ವೈರಸ್ ನಿಂದ ರಕ್ಷಿಸಲು ಮತ್ತು ರೋಗ ಶಕ್ತಿಯನ್ನು ಬಲಪಡಿಸಲು ದೇಶದ ಆಯುಷ್ ಕೆಲವು ಸಲಹೆಗಳನ್ನು ನೀಡಿದೆ. ವೇದ್ವೇದ ವಿಧಾನಗಳನ್ನು ಅನುಸರಿಸುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ರೋಗವನ್ನು ಗೆಲ್ಲಬಹುದು.

ದೇಹದ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕ ವಿಧಾನಗಳಿಂದ ಬಲಪಡಿಸಬಹುದು.

ಪ್ರತಿದಿನ ಚ್ಯವನ್‌ಪ್ರಶ್ ಸೇವಿಸಬೇಕು.

ಹಾಲನ ಹಾಲನ್ನು ದಿನಕ್ಕೆ 1 and 2 ಸೇವಿಸಬೇಕು ಸೇವಿಸಬೇಕು.

ಚಹಾ ಚಹಾ ಅಥವಾ ತುಳಸಿ, ದಾಲ್ಚಿನ್ನಿ, ಕರಿಮೆಣಸು, ಮತ ಶುಂಠಿ್ತು ಒಣ ದ್ರಾಕ್ಷಿಯಿಂದ ಮಾಡಿದ 1-2 ಬಾರಿ ಕುಡಿಯಿರಿ.

ಕೊರೊನಾ ವೈರಸ್ ದೇಶಾದ್ಯಂತ ಹರಡಿದ್ದು, ತಣ್ಣೀರು ಅಥವಾ ತಣ್ಣನೆಯ ವಸ್ತುಗಳನ್ನು ಸೇವಿಸುವುದನ್ನು. ಗಂಟಲು ಹಾಳಾಗುವ ಆಹಾರ ಸೇವನೆ ಮಾಡಬಾರದು. ದಿನಕ್ಕೆ ಹಲವಾರು ಬಾರಿ ಬಿಸಿ ನೀರು ಕುಡಿಯಿರಿ. ಬಿಸಿ ನೀರಿಗೆ ಒಂದು ಚಿಟಿಕೆ ಉಪ್ಪು ಮತ್ತು ಅರಿಶಿನ ಸೇರಿಸಿ ಗಾರ್ಗಲ್ ಮಾಡಿ. ಲಿ್ಲಿ ಮಾಡಿದ ಆಹಾರವನ್ನೇ ಈ ಸಮಯದಲ್ಲಿ ಸೇವನೆ ಮಾಡಿ. ತಿಂಡಿಯನ್ನು ಸೇವಿಸಬೇಡಿ. ಕೆ್ಕೆ ಅರಿಶಿನ, ಜೀರಿಗೆ, ಬೆಳ್ಳುಳ್ಳಿ, ಶುಂಠಿ ಮತ್ತು ಕೊತ್ತಂಬರಿ ಮುಂತಾದ ಮಸಾಲೆ ಸೇರಿಸಿ. ಈ ಆಹಾರ ಸ್ವಾಭಾವಿಕವಾಗಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಮನೆಯಲ್ಲಿಯೇ ಯೋಗ ಮಾಡಬೇಕು. ಯೋಗ, ಪ್ರಾಣಾಯಾಮ, ಅನುಲೋಮ-ವಿಲೋಮ, ಆಳವಾದ ಉಸಿರಾಟದ ವ್ಯಾಯಾಮ ಮಾಡುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ದಿನಕ್ಕೆ ಒಂದು ಅಥವಾ ಎರಡು ಎರಡು ಬಾರಿ ಉಗಿ ತೆಗೆದುಕೊಳ್ಳಿ. ಪುದೀನಾ ಎಲೆಗಳನ್ನು ಹಾಕಿ ಉಗಿ ತೆಗೆದುಕೊಳ್ಳಬೇಕು. ಮು್ಮು ಕಾಡುತ್ತಿದ್ದರೆ ಲವಂಗದ ಪುಡಿಯನ್ನು ಜೇನು ತುಪ್ಪಕ್ಕೆ ಬೆರೆಸಿ ಸೇವನೆ ಮಾಡಬೇಕೆಂದು ಆಯುಷ್ ಸಚಿವಾಲಯ ಹೇಳಿದೆ. ಹೇಳಲಾಗಿದೆ ವೇಳೆ ಕೆಮ್ಮು ಜಾಸ್ತಿಯಿದ್ದರೆ ವೈದ್ಯರನ್ನು ಭೇಟಿಯಾಗುವಂತೆ ಹೇಳಲಾಗಿದೆ. ಫುಲ್ ಫುಲ್ಲಿಂಗ್ ಕೂಡ ಒಳ್ಳೆಯದು ಎಂದು ಆಯುಷ್ ಸಚಿವಾಲಯ ಹೇಳಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)


Wednesday, May 5, 2021

ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ನಾಲ್ವರು ಅರೆಸ್ಟ್, ದಂಧೆಯಲ್ಲಿ ಭಾಗಿಯಾಗಿದ್ಯಾರು ಗೊತ್ತಾ.?

ಬೆಂಗಳೂರು: ಬೆಂಗಳೂರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸೋಂಕಿತರ ಹೆಸರಲ್ಲಿ ಬೆಡ್ ಕಾಯ್ದಿರಿಸಿ ಬೇರೆಯವರಿಂದ ಹಣ ಪಡೆದು ಬೆಡ್ ಗಳನ್ನು ಕೊಡುತ್ತಿದ್ದ ತಂಡ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಾಲದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಗಮನಸೆಳೆದಿದ್ದರು. ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದ್ದು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಲಯ ಕೋವಿಡ್ ವಾರ್ ರೂಮ್ ಉಸ್ತುವಾರಿ ಡಾ. ಸುರೇಶ್, ದಕ್ಷಿಣ ವಲಯ ವಾರ್ ರೂಮ್ ಉಸ್ತುವಾರಿ ಡಾ. ರೆಹಾನ್ ಭಾಗಿಯಾಗಿರುವ ಮಾಹಿತಿ ಗೊತ್ತಾಗಿದ್ದು, ಸುರೇಶ್ ಸೋಂಕು ತಗುಲಿ ಹೋಮ್ ಐಸೋಲೇಷನ್ ನಲ್ಲಿರುವುದರಿಂದ ರೆಹಾನ್ ಅವರನ್ನು ವಶಕ್ಕೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಲಾಗಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ )