WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, December 25, 2020

ಹಳೆಗನ್ನಡದ ಪ್ರಮುಖ ಕವಿಗಳ ಸಂಕ್ಷಿಪ್ತ ಮಾಹಿತಿ


 ➤ ಪಂಪ :

• ಕನ್ನಡದ ಆದಿ ಕವಿ ಪಂಪ.
• ಪಂಪನ " ಆದಿಪುರಾಣ" ಕನ್ನಡದ ಮೊದಲ ಕಾವ್ಯವಾಗಿದೆ.
• ಪಂಪನ ತಾಯಿ ಕನ್ನಡನಾಡಿನ ಅಣ್ಣೀಗೇರಿಯ ಜೋಯಿಸ ಸಿಂಘನ ಮಗಳು ಅಬ್ಬಣ್ಣಬ್ಬೆ.
• ಪಂಪನ ತಂದೆ ಭೀಮಪ್ಪಯ್ಯ ತಮ್ಮ ಜಿನವಲ್ಲಭ.
• ಪಂಪನ ಆಶ್ರಯಧಾತ ಚಾಳುಕ್ಯ ಚಕ್ರವರ್ತಿ ಅರಿಕೇಸರಿ.
• ಪಂಪನ ಎರಡು ಪ್ರಮುಖ ಕೃತಿಗಳು-
*' ಆದಿ ಪುರಾಣ' : ಇದು ಪಂಪ ಮಹಾಕವಿಯ ಮೊದಲ ಕಾವ್ಯ. ಇದೊಂದು ಧಾರ್ಮಿಕ ಗ್ರಂಥವಾಗಿದೆ. ಇದರ ವಸ್ತು ಜೈನರ ಮೊದಲ ತೀರ್ಥಂಕರ ಆದಿನಾಥ ಮತ್ತು ಮೊದಲ ಚಕ್ರವರ್ತಿ ಭರತನನ್ನು ಕುರಿತಿ ಬರೆದ ಕೃತಿಯಾಗಿದೆ. ಇದು ಕನ್ನಡದ ಮೊದಲ ಜೈನ ಪುರಾತನವೂ ಆಗಿದೆ. ಕಾವ್ಯಧರ್ಮ ಮತ್ತು ಧರ್ಮದ ಸಾಮರಸ್ಯತೆ ಇದರಲ್ಲಿದೆ.
* ' ವಿಕ್ರಮಾರ್ಜುನ ವಿಜಯ' : ಇದು ಸಾಮಾಜಿಕ ಕೃತಿಯಾಗಿದೆ.

ಇದು ವ್ಯಾಸ ಮಹರ್ಷಿ ವಿರಚಿತ ಮಹಾಭಾರತದಿಂದ ಆನುವಾದಿಸಲಾಗಿದೆ. ಅರ್ಜುನನ್ನು ಇಲ್ಲಿ ತನ್ನ ಆಶ್ರಯಧಾ ಅರಿಕೇಸರಿಯೊಂದಿಗೆ ಹೋಲಿಸಿ ವಿಕ್ರಮಾರ್ಜುನ ವಿಜಯ ಕೃತಿಯನ್ನು ರಚಿಸಿದ್ದಾರೆ.
• ಪಂಪ, ಪೊನ್ನ, ರನ್ನರು "ರತ್ನಾತ್ರಯ"ರು ಎಂಬ ಬಿರುದನ್ನು ಹೊಂದಿದ್ದಾರೆ.

➤ ರನ್ನ
• ರತ್ನತ್ರಯರಲ್ಲಿ ಮೂರನೇಯವರೇ ರನ್ನ.
• ಇವನ ಕಾಲ 949
• ಇವರ ತಂದೆ : ಜೀನೇಂದ್ರವಲ್ಲಭ, ತಾಯಿ : ಅಬ್ಬಲಬ್ಬೆ.
• ಈತ ಮುಧೋಳದ ಜೈನ ಕುಟುಂಬಕ್ಕೆ ಸೇರಿದವನು.
• ಇವನು ಮೊದಲು ಚಾವುಂಡರಾಯರಲ್ಲಿ ಆಶ್ರಯ ಪಡೆದಿದ್ದನು. ನಂತರ ಚಾಳುಕ್ಯ ಚಕ್ರವರ್ತಿ ಸತ್ಯಾಶ್ರಯ ಬಳಿ ಆಶ್ರಯ ಪಡೆದಿದ್ದನು.
• ಈತ ತನ್ನ ಮಗನಿಗೆ ರಾಯ ಎಂದು ಚಾವುಂಡರಾಯ ನೆನಪಿಗಾಗಿ, ಅತ್ತಿಮಬ್ಬೆ ಎಂದು ಮಗಳಿಗೆ ಅತ್ತಿಮಬ್ಬೆ ನೆನಪಿಗಾಗಿ ಹೆಸರಿಟ್ಟನು.
• ಕೃತಿಗಳು :
* ಗದಾಯುದ್ಧ ( ಸಾಹಸ ಭೀಮ ವಿಜಯ)
ಗದಾಯುದ್ದವನ್ನು ತನ್ನ ಆಶ್ರಯಧಾತ ಸತ್ಯಾಶ್ರಯ ಇರುವ ಬಂಡಗನನ್ನು ಭೀನೊಂದಿಗೆ ಅಮೀಕರಿಸಿ ಬರೆದಿದ್ದಾನೆ. ಇದು ಸಿಂಹಾವಲೋಕನ ಕ್ರಮದಲ್ಲಿದೆ. ನಾಯಕ ಭೀಮ, ದುರಂತ ನಾಯಕ ಕರ್ಣನಾಗಿದ್ದಾನೆ.
* ಅಜಿತನಾಥ ಪುರಾಣ ( ಅಜಿತ ತೀರ್ಥಂಕರ ಪುರಾಣ ತಿಲಕಂ) : ಅಜಿತನಾಥ ಪುರಾಣವನ್ನು ಮಹಾಪುರಾಣದಿಂದ ಅನುವಾದಿಸಲಾಗಿದೆ. ಇದರ ವಸ್ತು ಜೈನರ ಎರಡನೇ ತೀರ್ಥಂಕರ ಅಜಿತನಾಥ ಎರಡನೇ ಚಕ್ರವರ್ತಿ ಅಡಗನ ವಿಚಾರವನ್ನು ಹೊಂದಿದೆ.
* ಚಕ್ರೇಶ್ವರ ಚರಿತೆ
* ಪರಶುರಾಮ ಚರಿತ
* ರನ್ನ ಕಂದ

➤ ಪೊನ್ನ :
• ರತ್ನತ್ರಯರಲ್ಲಿ ಎರಡನೇಯವನು ಪೊನ್ನ.
• ಪಂಪನ ವೆಂಗಿ ಮಂಡಲವೇ ಈತನ ಜನ್ಮ ಸ್ಥಳವಾದಂತೆ ತೋರುತ್ತದೆ.
• ಈತ ರಾಷ್ಟ್ರಕೂಟರ ದೊರೆ ಮೂರನೆ ಕೃಷ್ಣನಲ್ಲಿ ಆಶ್ರಯ ಪಡೆದಿದ್ದನು.
• ಇವನಿಗೆ " ಉಭಯ ಚಕ್ರವರ್ತಿ" " ಕೆರುಳ್ಗಳ ಸವಣ" ಎಂಬ ಬಿರುದ್ದುಗಳಿದ್ದವು.
• ಕೃತಿಗಳು :
* ಶಾಂತಿಪುರಾಣ
* ಭುವನೈಕ್ಯ ರಾಮಾಭ್ಯುದಯ
* ಜಿನಾಕ್ಷರ ಮಾಲೆ

➤ ಜನ್ನ :
• ಜನ್ನನ ಕಾಲ 1225
• ಜೈನ ಪರಂಪರೆಗೆ ಸೇರಿದ ಮಾರ್ಗದ ಕವಿ
• ಹೊಯ್ಸಳ ನರಸಿಂಹನಲ್ಲಿ ಕಟಕೋಪಾಧ್ಯಾಯ.
• ಸುಮನೋಬಾಣ ಎಂದು ಪ್ರಸಿದ್ದವಾಗಿದ್ದ ಶಂಕರ ಜನ್ನನ ತಂದೆ, ಗಂಗಾದೇವಿ ತಾಯಿ.
• ಎರಡನೇ ನಾಗವರ್ಮ ಈತನ ಗುರು.
• ಕೃತಿಗಳು :
*ಯಶೋಧರ ಚರಿತೆ: ಯಶೋಧರ ಚರಿತೆಯನ್ನು 1209 ರಲ್ಲಿ ಬರೆದನು. ವಾದಿರಾಜಕೃತ ಸಂಸ್ಕøತದ ಯಶೋಧರ ಚರಿತೆಯ ಆಧಾರದ ಮೇಲೆ ರಚನೆಗೊಂಡಿದೆ. ಈ ಕೃತಿ ಸಂಪೂರ್ಣ ಕಂದ ಪದ್ಯದಿಂದ ಕೂಡಿದೆ.

* ಅನಂತನಾಥ ಪುರಾಣ : ಅನಂತನಾಥ ಪುರಾಣವನ್ನು ಸಂಸ್ಕøತದ ಉತ್ತರ ಪುರಾಣದ ಆಧಾರದ ಮೇಲೆ ರಚಿಸಳಾಗಿದೆ. ಇದು ಜೈನರ 14 ನೇ ತೀರ್ಥಂಕರ ಜೀವನ ಚರಿತ್ರೆಯನ್ನು ಒಳಗೊಂಡಿದೆ.
* ಅನುಭವ ಮುಕುರ
* ಸ್ವರತಂತ್ರ

➤ ಶಿವಕೋಟ್ಯಾಚಾರ್ಯ :
• ಶಿವಕೋಟ್ಯಾಚಾರ್ಯರ ಕಾಲವನ್ನು ಕವಿ ಚರಿತಕಾರರು 1180 ಎಂದು ಗುರುತಿಸಿದ್ದಾರೆ.
• ಶಿವಕೋಟ್ಯಾಚಾರ್ಯರು ಬರೆದ " ವಡ್ಡಾರಾಧನೆ" ಕನ್ನಡದ ಮೊಟ್ಟಮೊದಲ ಗದ್ಯ ಗ್ರಂಥವಾಗಿದೆ.
• ವಡ್ಡಾರಾಧನೆಯನ್ನು ಪ್ರಾಕೃತ ಗ್ರಂಥ ಭಗವತೀ ಆರಾಧನಾದಿಂದ ಅನುವಾದಿಸಲಾಗಿದೆ.
• ವಡ್ಡಾರಾಧನೆಯಲ್ಲಿ 19 ಕಥೆಗಳಿವೆ.
• ಇದಕ್ಕೆ ಉಪಸರ್ಗ ಕೇವಲಿಗಳ ಕಥೆ ಎಂಬ ಮತ್ತೊಂದು ಹೆಸರಿತ್ತು.

➤ ದುರ್ಗಸಿಂಹ :
• ಇವನು ಕರ್ನಾಟಕದ ಕಿಸುನಾಡಿನ ಸೈಯಡಿಯ ಅಗ್ರಹಾರದವನು.
• ಈಶ್ವರಾರ್ಯ ಮತ್ತು ರೇವಕಬ್ಬೆಯರ ಮಗನಾಗಿ ದುರ್ಗಸಿಂಹ ಜನಿಸಿದ.
• ದುರ್ಗಸಿಂಹ ಒಂದನೇ ಜಯಸಿಂಹ ಜಗದೇಕ ಮಲ್ಲನಲ್ಲಿ ಸಂಧಿ ವಿಗ್ರಹಿಯಾಗಿದ್ದನು.
• ಸುಮಾರು 1031 ಈತನ ಗ್ರಂಥ ರಚನಾ ಕಾಲ.
• ವಸುಭಾಗಭಟ್ಟ ಮತ್ತು ಇತರರ ಪಂಚತಂತ್ರಗಳನ್ನು ಆಧಾರವಾಗಿಟ್ಟುಕೊಂಡು ದುರ್ಗಸಿಂಹ ಕನ್ನಡದಲ್ಲಿ "ಪಂಚತಂತ್ರ" ಕೃತಿಯನ್ನು ರಚಿಸಿದ್ದಾನೆ. ಇದೊಂದು ಚಂಪೂ ಗ್ರಂಥವಾಗಿದೆ.

➤ ಚಾವುಂಡರಾಯ :
• ಗಂಗರ ಅರಸ ನಾಲ್ವಡಿ ರಾಚಮಲ್ಲನಲ್ಲಿ ಮಂತ್ರಿಯಾಗಿದ್ದನು.
• ಇವನು ತನ್ನ ಶೌರ್ಯಗಳಿಂದ ಸಮರ ಪರಶುರಾಮ, ವೀರಮಾರ್ತಾಂಡ, ಪ್ರತಿಪಕ್ಷ ರಾಕ್ಷಸ ಎಂಬ ಬಿರುದುಗಳನ್ನು ಹೊಂದಿದ್ದನು.
• ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಕೀರ್ತಿ ಇವನದಾಗಿದೆ. ಆದ್ದರಿಂದ ಇವನಿಗೆ " ಗೋಮ್ಮಟರಾಯ" ಎಂಬ ಬಿರುದು ಇತ್ತು.
• ಕೃತಿಗಳು :
*ಚಾವುಂಡರಾಯ ಪುರಾಣ
ಚಾವುಂಡರಾಯ ಪುರಾಣಕ್ಕೆ ಕವಿ ಪರಮೇಷ್ಟ್ರಿಯ ವಾಗಾರ್ಥ ಸಂಗ್ರಹದ ಪ್ರೇರಣೆಯಿದೆ. ಈ ಕೃತಿಗೆ ತ್ರಿಷಷ್ಠ ಲಕ್ಷಣ ಮಹಾಪುರುಷ ಎಂಬ ಹೆಸರು ಇದೆ.

➤ 1 ನೇ ನಾಗವರ್ಮ :
• ಈತ ಸುಮಾರು 10 ನೆ ಶತಮಾನದ ಅಂತ್ಯದಲ್ಲಿದ್ದನು.
• ಈತನ ಊರು ವೆಂಗಿಪಳುವು ಈತ ಜೈನ ಬ್ರಾಹ್ಮಣ.
• ಕೃತಿಗಳು :
* ಛಂಧೋಬುದ್ದಿ :
ಛಂಧೋಬುದ್ದಿ ಇದು ಕನ್ನಡದ ಮೊದಲ ಛಂಧೋಗ್ರಂಥ. ಈ ಕೃತಿಯಲ್ಲಿ ಅಕ್ಕರ, ಗೀತಿಕೆ, ಏಳೇ ತ್ರಿಪದಿ ಉತ್ಸಾಹ, ಷಟ್ಪದಿ
ಅಕ್ಕರಿಕೆಗಳನ್ನು ಕನ್ನಡದ ಛಂಧೊಜಾತಿ ಎಂದಿದ್ದಾನೆ.
*ಕಾದಂಬರಿ : ಕಾದಂಬರಿ ಇವನ ಮತ್ತೊಂದು ಕೃತಿಯಾಗಿದೆ. ಬಾಣ ಕವಿ ಸಂಸ್ಕøತದಲ್ಲಿ ಬರೆದಿರುವ ಕಾದಂಬರಿಯನ್ನು ನಾಗವರ್ಮ ಅನುವಾದಿಸಿದ್ದಾನೆ. ಆ ಮೂಲಕ ಕನ್ನಡದ ಮೊಟ್ಟ ನೊದಲ ಅನುವಾದಿತ ಕೃತಿ ಕಾದಂಬರಿಯಾಗಿದೆ. ಕಾದಂಬರಿ ಕಾವ್ಯದ ನಾಯಕಿಯ ಹೆಸರೂ ಕಾದಂಬರಿ ಎಂದೇ.

➤ ನಾಗಚಂದ್ರ :
• ನಾಗಚಂದ್ರ 11 ನೇ ಶತಂಆನದ ಕೊನೆ 12 ನೇ ಶತಮಾನದ ಆರಂಭದಲ್ಲಿ ಬದುಕಿದ್ದನು.
• ಕೃತಿಗಳು :
* ರಾಮಚಂದ್ರ ಚರಿತ ಪುರಾಣ : ರಾಮಚಂದ್ರ ಚರಿತ ಪುರಾಣ ಇದು ಕನ್ನಡದ ಮೊಟ್ಟಮೊದಲ ಜೈನ ರಾಮಾಯಣವಾಗಿದೆ. ಪ್ರಾಕೃತಕವಿ ವಿಮಲಸೂರಿಯ ಪಲುಮಚರಿಯ ಕೃತಿಯನ್ನು ಅನುಕರಿಸಿ ಬರೆದಿದ್ದಾನೆ. ಇದು ಧಾರ್ಮಿಕ ಕೃತಿಯಾಗಿದೆ.
* ಮಲ್ಲಿನಾಥ ಪುರಾಣ : ಮಲ್ಲಿನಾಥ ಪುರಾಣದ ವಸ್ತು ಜೈನರ 19ನೇ ತೀರ್ಥಂಕರ ಮಲ್ಲಿನಾಥನನ್ನು ಕುರಿತಾಗಿದೆ.ಇದು ಕೂಡ ಧಾರ್ಮಿಕ ಕೃತಿಯಾಗಿದೆ.

➤ ಶಾಂತಿನಾಥ :
• ಕ್ರಿ.ಶ 1068 ಇವನ ಕಾಲ.
• ಇವನು ಚಾಲಿಕ್ಯ ಚಕ್ರವರ್ತಿ ಭುವನೈಕ್ಯ ಮಲ್ಲಿಚಾಸಾಯಿಸ ದೇವನಾದ ಲಕ್ಷಣ ರಾಜನಲ್ಲಿ ಮಂತ್ರಿಯಾಗಿದ್ದನು.
• ಈತನ ಏಕೈಕ ಗ್ರಂಥ " ಸುಕುಮಾರ ಚರಿತೆ".

➤ ನಯಸೇನ :
• ಕ್ರಿ.ಶ 1112 ರ ಕಾಲಾವಧಿಯಲ್ಲಿ ಮುಳಗುಂದದಲ್ಲಿದ್ದ ಜೈನ ಕವಿ ನಯಸೇನನಾಗಿದ್ದಾನೆ.
• ಈತನ ಕೃತಿ " ಧರ್ಮಾಮೃತ". ಇದು ಜನತೆಗಾಗಿ ಬರೆದ ಮೊದಲ ಜೈನ ಪುರಾಣವಾಗಿದೆ. ಆನಪದ ಕತೆಗಾರನ ವಿಡಂಬನ ಹಾಸ್ಯ ಜನಜೀವನ ಪ್ರಜ್ಞೆ ಇದರಲ್ಲಿ ಅಗಾಧವಾಗಿದೆ.
• ಜನತೆಯ ಕವಿಗಳೆಂದು ಹೆಸರಾದ ಕನ್ನಡದ ಕವಿಗಳಲ್ಲಿ ನಯಸೇನ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ.

➤ ಬ್ರಹ್ಮಶಿವ :
• ಇವನ ಕಾಲ 1100
• ಇವನು ಜೈನ ಕವಿಯಾಗಿದ್ದನು.
• ಇವನ ಗುರು ವೀರನಂದಿ ಆಚಾರಸಾರ.
• ಕೃತಿಗಳು :
*ಸಮಯ ಪರೀಕ್ಷೆ : ತಾತ್ವಿಕ ಪದ್ಯ ಗ್ರಂಥವಾಗಿದೆ. ಕಂದ ವೃತ್ತದಲ್ಲಿ ಕೇವಲ ಪದ್ಯರೂಪದಲ್ಲಿರುವ ಕೃತಿಯಾಗಿದೆ.
* ತ್ರೈಲೋಕ್ಯ ಚೂಡಾಮಣಿ : ಇದರಲ್ಲಿ 36 ಸ್ತೋತ್ರಗಳಿವೆ. ಇದಕ್ಕೆ ಛತೀಸರತ್ನಮಾಲಾ ಎಂಬ ಮತ್ತೊಂದು ಹೆಸರಿದೆ.

➤ 2 ನೇ ನಾಗವರ್ಮ :
• ಇವರ ಕಾಲ- 1042
• ಇವರ ಗುರು ವೀರಭಟ್ಟಾರಕ.
• 2 ನೇ ನಾಗವರ್ಮ ಕನ್ನಡದಲ್ಲಿ ವ್ಯಾಕರಣ ಬರೆದ ಮೊದಲಿಗನಾಗಿದ್ದಾನೆ.
• ಕೃತಿಗಳು :
* ಕವ್ಯಾವಲೋಕನ : ಇದೊಂದು ಅಲಂಕಾರ ಗ್ರಂಥವಾಘಿದ್ದು. ಸೂತ್ರಗಳು ಕಂದ ಪದ್ಯದಲ್ಲಿದೆ.
* ವರ್ಧಮಾನ ಪುರಾಣ : ಇದಕ್ಕೆ ಮಹಾವೀರಚರಿತೆ ಎಂಬ ಮತ್ತೊಂದು ಹೆಸರಿದೆ.
* ಕರ್ನಾಟಕ ಭಾಷಾಭೂಷಣ : ಇದು ಕನ್ನಡದ ಮೊದಲ ವ್ಯಾಕರಣ ಗ್ರಂಥವಾಗಿದೆ.
* ಅಭಿಧಾನ ವಸ್ತುಕೋಶ : ಇದರಲ್ಲಿ ಸಂಸ್ಕøತ ಪದಗಳನ್ನು ಕನ್ನಡದಲ್ಲಿ ವಿವರಿಸಲಾಗಿದೆ.ಸ

➤ ನಿರಂತರ ಅಪ್ಡೇಟ್ಸ್ ಗಾಗಿ ನಮ್ಮ ಟೆಲೆಗ್ರಾಮ್ ಗ್ರೂಪ್ ಸೇರಿಕೊಳ್ಳಿ : https://t.me/spardhatimesgroup ➤ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು 8867161317 ನಂಬರ್ಗೆ REQUEST ಕಳಿಸಿ
(ಮಾಹಿತಿ ಕೃಪೆ ಸ್ಪರ್ಧಾ ಟೈಂಸ್)

Monday, December 21, 2020

ರಾಬರ್ಟ್‌ ಸಿನಿಮಾ ನಿರ್ಮಾಪಕರ ಹತ್ಯೆಗೆ ಸಂಚು: ಏಳು ಮಂದಿ ಸೆರೆ

 

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ನಿರ್ಮಾಪಕ, ಅವರ ಸಹೋದರ ಹಾಗೂ ಇಬ್ಬರು ರೌಡಿಶೀಟರ್‌ಗಳ ಹತ್ಯೆಗೆ ಸಂಚು ರೂಪಿಸಿದ್ದ ಬಾಂಬೆ ರವಿ ತಂಡದ ಏಳು ಮಂದಿ ಭಾನುವಾರ ಮುಂಜಾನೆ ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ನಗರದ ದರ್ಶನ್‌, ಗಿರೀಶ್‌, ಮೋಹನ್‌, ರಾಜನ್‌ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಪ್ರಮುಖ ಆರೋಪಿ ಬಾಂಬೆ ರವಿ ಮತ್ತು ನೀಲಸಂದ್ರದ ಮಂಜುನಾಥ್‌ ಎಂಬುವರು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಆರೋಪಿಗಳು ಜಯನಗರದ ನ್ಯಾಷನಲ್‌ ಕಾಲೇಜು ಸಮೀಪದಲ್ಲಿ ಕಾರೊಂದರಲ್ಲಿ ಕುಳಿತು ರಾಬರ್ಟ್‌ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌, ಅವರ ಸಹೋದರ ದೀಪಕ್‌, ರೌಡಿಶೀಟರ್‌ಗಳಾದ ಸೈಕಲ್‌ ರವಿ, ಬೇಕರಿ ರಘು ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. 
ಈ ಕುರಿತು ಪ್ರತಿಕ್ರಿಯೆ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ, ಭಾನುವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಜಯನಗರ ಇನ್‌ಸ್ಪೆಕ್ಟರ್‌ ಗಸ್ತಿನಲ್ಲಿದ್ದರು. ಆಗ ನ್ಯಾಷನಲ್‌ ಕಾಲೇಜು ಬಳಿ ಕಾರಿನಲ್ಲಿ ಕುಳಿತು ಕೆಲ ವ್ಯಕ್ತಿಗಳು ಕೊಲೆ ಸಂಬಂಧ ಜೋರಾಗಿ ಮಾತನಾಡುತ್ತಿದ್ದಾರೆ ಎಂದು ಬಾತ್ಮೀದಾರರ ಮೂಲಕ ಮಾಹಿತಿವೊಂದು ಸಿಕ್ಕಿದೆ. ಕೂಡಲೇ ಇನ್‌ಸ್ಪೆಕ್ಟರ್‌ ಸ್ಥಳಕ್ಕೆ ಹೋಗಿ, ಪರಿಶೀಲಿಸಲು ಮುಂದಾಗಿದ್ದಾರೆ. ಆಗ ಆರೋಪಿಗಳು ಕಾರು ಚಾಲನೆ ಮಾಡಿ ಪೊಲೀಸ್‌ ಸಿಬ್ಬಂದಿ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಅನಂತರ ಪೊಲೀಸ್‌ ಜೀಪ್‌ನಿಂದ ಕಾರನ್ನು ಅಡ್ಡಗಟ್ಟಿ, ಕಾರಿನಿಂದ ಇಳಿಯುವಂತೆ ಸೂಚಿಸಲಾಗಿದೆ. ಆಗ ಕಾರಿನಲ್ಲಿದ್ದ ಆರೋಪಿಯೊಬ್ಬ ಕಿಟಕಿಯಿಂದಲೇ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ. ಕೂಡಲೇ ಇನ್ನಷ್ಟು ಮಂದಿ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರ ಕಾರು ಪರಿಶೀಲಿಸಿದಾಗ ಹತ್ತಾರು ಮಾರಕಾಸ್ತ್ರಗಳು ಇರುವುದು ಗೊತ್ತಾಗಿದೆ. ವಿಚಾರಣೆ ವೇಳೆ ಒಬ್ಬ ವ್ಯಕ್ತಿಯ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.
(ಮಾಹಿತಿ ಕೃಪೆಉದಯವಾಣಿ)

ನಿಮಗಿದು ಗೊತ್ತೇ? ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ನಿಮ್ಮ ಚರ್ಮವೇ ಹೇಳುತ್ತದೆ!

 

ಚರ್ಮವು ನಿಮ್ಮ ಆರೋಗ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದ್ದು, ಒತ್ತಡದ ಬದುಕು ಕೂಡ ಚರ್ಮದ ಸಮಸ್ಯೆಯನ್ನುಂಟು ಮಾಡುತ್ತದೆ. ಕೊರೋನಾ ಸಾಂಕ್ರಾಮಿಕ ಸಂದರ್ಭ ದಲ್ಲಿ ಆರ್ಥಿಕ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು, ಸಾಕಷ್ಟು ಜನರು ಒತ್ತಡದಲ್ಲಿಯೇ ಜೀವನ ನಡೆಸುವಂತಾಗಿ ಹೋಗಿದೆ.

ವ್ಯಕ್ತಿಯೊಬ್ಬ ಒತ್ತಡಕ್ಕೊಳಗಾದಾಗ ದೇಹದ ಹಾರ್ಮೋನ್ ನಲ್ಲಿಯೂ ಏರುಪೇರಾಗುತ್ತದೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಒತ್ತಡದಿಂದ ಮನುಷ್ಯನಿಗೆ ಎದುರಾಗುವ ಚರ್ಮ ಸಮಸ್ಯೆಗಳು ಈ ಕೆಳಕಂಡಂತಿವೆ...

ದದ್ದುಗಳಾಗುವುದು:
ದದ್ದುಗಳ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಇರಬಹುದು. ದೀರ್ಘಕಾಲದ ದದ್ದುಗಳಾದರೆ ಆಗ ಲಕ್ಷಣಗಳು ತಿಂಗಳುಗಳ ಅಥವಾ ವರ್ಷಗಳ ತನಕ ಇರಬಹುದು.ಕೆಲ ಔಷಧಿಗಳು, ಆಹಾರ, ಹಾಗೂ ಒತ್ತಡದಿಂದಾಗಿ ಚರ್ಮದಲ್ಲಿ ಈ ಸಮಸ್ಯೆಯುಂಟಾಗುತ್ತದೆ. ಈ ದದ್ದು ಸಮಸ್ಯೆಗಳಾದಾಗ ನವೆಯಾಗುವುದು, ದದ್ದಾಗಿರುವ ಭಾಗದಲ್ಲಿ ಚರ್ಮ ಕೆಂಪಗಿರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು 24 ಗಂಟೆಗಳಲ್ಲಿ ವಾಸಿಯಾಗುವುದುಂಟು. ಕೆಲವೊಮ್ಮೆ ದದ್ದುಗಳು ಬಣ್ಣ ಹಾಗೂ ಗಾತ್ರಗಳನ್ನು ಬದಲಾಯಿಸುವುದುಂಟು.

ನಿರ್ಜಲೀಕರಣ ಮತ್ತು ಕಾಂತಿಹೀನ ಚರ್ಮ:
ವಿಶ್ರಾಂತಿಯಿಲ್ಲದೆ ಸುದೀರ್ಘವಾಗಿ ಕೆಲಸ ಮಾಡುವುದು, ಸೂಕ್ತ ಸಮಯಕ್ಕೆ ನಿದ್ರೆ ಮಾಡದಿರುವುದರಿಂದ ಸಾಕಷ್ಟು ಸಮಸ್ಯೆಗಳಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಕೆಲಸದ ಒತ್ತಡದಲ್ಲಿ ದೇಹಕ್ಕೆ ಅಗತ್ಯವಿರುವ ನೀರು, ಆರೋಗ್ಯಕರ ಆಹಾರ ಹಾಗೂ ಆರೋಗ್ಯಕರ ರೀತಿಯಲ್ಲಿ ನಿದ್ರೆ ಮಾಡುವುದನ್ನೇ ಮರೆ ಹೋಗಿದ್ದಾರೆ. ಇದರಿಂದ ಚರ್ಮದ ಕಾಂತಿ ಕೂಡ ಕುಂದುತ್ತಿದೆ.

ಈ ಸಮಸ್ಯೆಯಿಂದ ದೂರ ಉಳಿಯಲು ಹೆಚ್ಚೆಚ್ಚು ನೀರು ಹಾಗೂ ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು. ಸೂಕ್ತ ರೀತಿಯಲ್ಲಿ ಸಮತೋಲಿತ ಆಹಾರ ಸೇವನೆಯಿಂದ ಚರ್ಮದ ಕಾಂತಿಯನ್ನು ಮತ್ತೆ ಪಡೆಯಬಹುದಾಗಿದೆ.

ಪ್ರತಿನಿತ್ಯ 8-10 ಲೀಟರ್ ನೀರನ್ನು ಕುಡಿಯಲು ಪ್ರಯತ್ನಿಸಿ. ಪ್ರತೀ ರಾತ್ರಿ 8 ಗಂಟೆಗಳು ನಿದ್ರೆ ಮಾಡುವುದು ಆರೋಗ್ಯವನ್ನು ಉತ್ತಮವಾಗಿರುವಂತೆ ಮಾಡುತ್ತದೆ.

ರೊಸಾಸಿಯಾ (ಮುಖದಲ್ಲಿ ಮೊಡವೆ ರೀತಿಯ ಗುಳ್ಳೆ):
ಹದಿಹರೆಯದ ವಯಸ್ಸಿನಲ್ಲಿ ಮೊಡವೆ ಸಮಸ್ಯೆಗಳು ಬರುವುದು ಸಾಮನ್ಯ. ಆದರೆ ಕೆಲವರಲ್ಲಿ ಮುಖದಲ್ಲಿ ಕೆಂಪು-ಕೆಂಪು ಗುಳ್ಳೆಗಳು ಏಳುತ್ತವೆ, ಅವುಗಳು ಕೂಡ ನೋಡಲು ಮೊಡವೆ ರೀತಿಯಲ್ಲಿ ಇರುವುದರಿಂದ ನಾವು ಅದನ್ನು ಮೊಡವೆ ಎಂದೇ ಭಾವಿಸುತ್ತೇವೆ. ಆದರೆ ಮೊಡವೆ ರೀತಿಯಲ್ಲಿ ಕಾಣುವ ಅವುಗಳು ಮೊಡವೆಯಲ್ಲ, ಬದಲಿಗೆ ಅವುಗಳು ರೊಸಾಸಿಯಾ(Rosacea) ಆಗಿರುತ್ತವೆ.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು. ಕೆಲವೊಂದು ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಹೋಗಲಾಡಿಸಬಹುದು.

ಇವುಗಳು ಮೊಡವೆ ಆಗಿಯೇ ಮುಖದ ತ್ವಚೆಯನ್ನು ಹಾಳು ಮಾಡುವುದು ಮಾತ್ರವಲ್ಲ ಇವುಗಳು ಬಂದರೆ ಮುಖ ತುಂಬಾ ಇರುತ್ತದೆ. ಹಣೆ, ಕೆನ್ನೆ ಭಾಗಗಳಲ್ಲಿ ರೊಸಾಸಿಯಾ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳನ್ನು ಕೆಲ ಮನೆಮದ್ದು ಹಾಗೂ ಜೀವನಶೈಲಿ ಬದಲಾವಣೆಯಿಂದ ಇವುಗಳನ್ನು ಹೋಗಲಾಡಿಸಬಹುದು. ಸೂರ್ಯನ ಬೆಳಕಿಗೆ ಹೆಚ್ಚು ಹೋಗದಂತೆ, ಧೂಳು ಬೀಳದಂತೆ ಹಾಗೂ ಸಂಸ್ಕರಿಸಿದ ಆಹಾರ ಸೇವನೆ ಮಾಡದೆ, ಸಾವಯವ ಆಹಾರ ಹೆಚ್ಚಾಗಿ ಸೇವನೆ ಮಾಡುವ ಮೂಲಕ ಹಾಗೂ ದಿನದಲ್ಲಿ 8 ತಾಸು ನಿದ್ದೆ, ಸಾಕಷ್ಟು ನೀರು ಕುಡಿಯುವುದರಿಂದ ಈ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ.

ಇಸುಬು (ಎಸ್ಜಿಮಾ):
ಮನುಷ್ಯನ ದೇಹದಲ್ಲಿ ಅತಿ ದೊಡ್ಡ ಅವಯವ (ಅಂಗ) ಚರ್ಮ. ಇದು ದೇಹದ ಹೊರ ಭಾಗಗಳನ್ನು ಕಾಪಾಡುವ ರಕ್ಷಣಾ ಕವಚ. ಆದರೆ ಅಂಥ ರಕ್ಷಣಾ ಕವಚಕ್ಕೆ ಅನೇಕ ರೀತಿಯ ಸೋಂಕು ಉಂಟಾಗುವುದು ಸಹಜ. ಇವುಗಳ ಪೈಕಿ ಎಸ್ಜಿಮಾ (ಇಸುಬು) ಕೂಡ ಒಂದು. ಒಂದು ಅಧ್ಯಯನದ ಪ್ರಕಾರ ಪ್ರಪಂಚದಲ್ಲಿ ಅಂದಾಜು 230 ಮಿಲಿಯನ್‌ನಷ್ಟು ಜನರು ಎಸ್ಜಿಮಾದಿಂದ ಬಳಲುತ್ತಿದ್ದಾರೆ.

ಎಸ್ಜಿಮಾ ಅಂದರೆ ಚರ್ಮವು ಉರಿಯೂತಕ್ಕೆ ಗುರಿಯಾಗುವುದರಿಂದ ಆ ಭಾಗದ ಚರ್ಮವು ಕೆಂಪು ಬಣ್ಣಕ್ಕೆ ತಿರುಗಿ ನವೆ ಶುರುವಾಗುವುದು. ಅವು ಕ್ರಮೇಣ ನೀರಿನ ಗುಳ್ಳೆಗಳಾಗಿ ಮಾರ್ಪಾಡಾಗಿ ಅವುಗಳಿಂದ ದ್ರವ ಪದಾರ್ಥ ಸೋರುತ್ತದೆ. ಆನಂತರ ಈ ಭಾಗವೆಲ್ಲ ಮಚ್ಚೆಯಾಗಿ ಕಾಣಿಸಿಕೊಳ್ಳುವುದಕ್ಕೆ ಎಸ್ಜಿಮಾ ಎನ್ನುತ್ತಾರೆ. ಎಸ್ಜಿಮಾದಲ್ಲಿ ಎಷ್ಟೋ ವಿಧಗಳಿದ್ದರೂ ಸಾಮಾನ್ಯವಾಗಿ 'ಅಟೊಪಿಕ್‌ ಡರ್ಮಟೈಟಿಸ್‌' ಸಮಸ್ಯೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಚಿಕ್ಕಮಕ್ಕಳಲ್ಲಿ ಶೇ.65 ಮತ್ತು ದೊಡ್ಡವರಲ್ಲಿ ಶೇ.85ರಷ್ಟು ಕಾಣಿಸಿಕೊಳ್ಳುತ್ತದೆ. ಕೆಲವರಲ್ಲಿ ಜೀವನದುದ್ದಕ್ಕೂ ಇರುತ್ತದೆ.

ಮುಖ್ಯವಾಗಿ ಒಣ ಚರ್ಮವಿರುವವರಲ್ಲಿ ಎಸ್ಜಿಮಾ ಹೆಚ್ಚಾಗಿ ಕಂಡುಬರುತ್ತದೆ. ಧೂಳು, ವಾತಾವರಣದಲ್ಲಿ ಬದಲಾವಣೆ, ಹೂವಿನ ಪರಾಗ, ಸೋಪು, ಡಿಟರ್ಜೆಂಟ್‌, ಕೆಲವು ಆಹಾರ ಪದಾರ್ಥ (ಉದಾ: ಕೆಲವು ಹಣ್ಣು, ತರಕಾರಿಗಳು), ಹಾಲಿನ ಉತ್ಪನ್ನಗಳು, ಮೊಟ್ಟೆ, ಸೋಯಾ, ಸೌಂದರ್ಯ ಸಾಧನ ಸಾಮಗ್ರಿ, ಕೈಗಡಿಯಾರಗಳು, ಕೆಲವು ಆಭರಣಗಳು, ಸುಗಂಧ ದ್ರವ್ಯಗಳು, ಬೆವರು, ಉಣ್ಣೆ ಉಡುಪು ಮತ್ತು ಕೆಲವು ನವೆ ಉಂಟು ಮಾಡುವ ವಸ್ತುಗಳು ಕೂಡ ಎಸ್ಜಿಮಾವನ್ನು ಪ್ರೇರೇಪಿಸುತ್ತದೆ. ಕೆಲವು ವಿಧದ ಬ್ಯಾಕ್ಟೀರಿಯಾ, ವೈರಸ್‌, ಫಂಗಸ್‌ನಂತಹ ಅಂಶಗಳು, ಮಾನಸಿಕ ಒತ್ತಡ ಮತ್ತು ಹಾರ್ಮೋನ್‌ ವ್ಯತ್ಯಾಸ ಕೂಡ ಎಸ್ಜಿಮಾ ಸಮಸ್ಯೆಯನ್ನು ತೀವ್ರಗೊಳಿಸುತ್ತದೆ. ಇಂತಹ ಸಮಸ್ಯೆ ಎದುರಾದಾಗ ಚರ್ಮ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು.

ಸೋರಿಯಾಸಿಸ್ ಮತ್ತು ಸೆಬೊರ್ಹೆಕ್ ಡರ್ಮಟೈಟಿಸ್:
ಸೋರಿಯಾಸಿಸ್‌ ಆಗಾಗ ಉಲ್ಬಣಗೊಳ್ಳುವ ಒಂದು ದೀರ್ಘ‌ಕಾಲಿಕ ಚರ್ಮಕಾಯಿಲೆ. ಜನಸಮೂಹದಲ್ಲಿ ಸುಮಾರು ಶೇ.2ರಷ್ಟು ಮಂದಿಗೆ ಈ ತೊಂದರೆ ಉಂಟಾಗುತ್ತದೆ. ಈ ಕಾಯಿಲೆಯ ಪ್ರತೀ ಉಲ್ಬಣಾವಸ್ಥೆಗೂ ಚಿಕಿತ್ಸೆಯಿದ್ದು, ಕಳವಳಕ್ಕೆ ಕಾರಣವಿಲ್ಲ.

ನಮ್ಮ ಚರ್ಮ, ಅಂಗಾಂಶ ಮತ್ತು ರಕ್ತದಲ್ಲಿ ಬಿಳಿ ರಕ್ತಕಣಗಳು ಎಂಬ ರಕ್ಷಕ ಜೀವಕೋಶಗಳಿವೆ. ಟಿ ಲಿಂಫೊಸೈಟ್ಸ್‌ ಎಂಬ ರಕ್ಷಕ ಜೀವಕೋಶಗಳ ವಿವಿಧ ಉಪ ಗುಂಪುಗಳಲ್ಲಿ ಅಸಮತೋಲನವಿದ್ದಾಗ ಸೋರಿಯಾಸಿಸ್‌ ಉಂಟಾಗುತ್ತದೆ. ಇಂತಹ ಅಸಮತೋಲನ ಉಂಟಾಗುವುದಕ್ಕೆ ಖಚಿತವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಸೋರಿಯಾಸಿಸ್‌ ಒಂದು ಸಾಂಕ್ರಾಮಿಕವಲ್ಲ, ಸೋಂಕು ರೋಗವೂ ಅಲ್ಲ. ಹೀಗಾಗಿ ಸೋರಿಯಾಸಿಸ್‌ಗೆ ಚಿಕಿತ್ಸೆಯು ಕೆಲವೊಮ್ಮೆ ದೀರ್ಘಾವಧಿಯದ್ದಾಗಿರುತ್ತದೆ ಹಾಗೂ ಚರ್ಮ ಮತ್ತು ರಕ್ತನಾಳಗಳನ್ನು ಪ್ರಚೋದಿಸಿ ಚರ್ಮ ದಪ್ಪಗಟ್ಟುವಿಕೆಗೆ ಕಾರಣವಾಗುವ ಟಿ ಸೆಲ್‌ ಅಸಮತೋಲನದ ಪ್ರಕ್ರಿಯೆ ಉಂಟಾದಾಗಲೆಲ್ಲ ಸೋರಿಯಾಸಿಸ್‌ ಮರುಕಳಿಸುತ್ತದೆ.

ಒಮ್ಮೆ ಪತ್ತೆಯಾದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ವೈದ್ಯಕೀಯ ನೆರವು, ಜೀವನಶೈಲಿಯಲ್ಲಿ ಬದಲಾವಣೆ, ಉತ್ತಮ ಆಹಾರಾಭ್ಯಾಸದಿಂದ ಇದನ್ನು ನಿಯಂತ್ರಣದಲ್ಲಿ ಇಡಬಹುದು. ಚಿಕಿತ್ಸೆಯಿಂದ ಸೋರಿಯಾಸಿಸ್ ಸಂಪೂರ್ಣವಾಗಿ ಕಡಿಮೆಯಾಗಬಹುದು ಅಥವಾ ಸ್ಥಿತಿ ಉತ್ತಮವಾಗಬಹುದು.

ಚಿಕಿತ್ಸೆಯು ರೋಗದ ಪ್ರಮಾಣ, ರೋಗ ನಿರೋಧಕ ಶಕ್ತಿ ಮತ್ತು ರೋಗದ ಹಂತವನ್ನು ಅವಲಂಬಿಸಿರುತ್ತದೆ. ರೋಗಿಗೆ ಆಪ್ತಸಲಹೆ ನೀಡುವುದು ಮತ್ತು ರೋಗದ ಸ್ವರೂಪ, ಗುಣ, ಹರಡುವಿಕೆ, ಅದು ಮರುಕಳಿಸುವ ಸಾಧ್ಯತೆಗಳು ಮತ್ತು ಅದರ ಉಲ್ಬಣಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸುವುದು ಬಹಳ ಮುಖ್ಯವಾಗುತ್ತದೆ.

Thursday, December 17, 2020

8 ವಾರಗಳ ಮಗುವಿಗೆ ಬರೋಬ್ಬರಿ ₹16 ಕೋಟಿ ಇಂಜೆಕ್ಷನ್; ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕಾಯಿಲೆ

 

ಬ್ರಿಟನ್​​ನಲ್ಲಿ ಪುಟ್ಟ ಮಗುವೊಂದು ಜಗತ್ತಿಗೆ ಕಾಲಿಟ್ಟ ಬೆನ್ನಲ್ಲೇ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಕಂದನನ್ನು ಉಳಿಸಿಕೊಳ್ಳಲು ಪೋಷಕರು ಹರಸಾಹಸ ಪಡ್ತಿದ್ದಾರೆ. 8 ವಾರಗಳ ಗಂಡು ಮಗುವಿಗೆ ವಿಶ್ವದಲ್ಲೇ ಅತೀ ದುಬಾರಿಯಾದ ಕೋಟ್ಯಾಂತರ ರೂಪಾಯಿ ಮೌಲ್ಯದ ಇಂಜೆಕ್ಷನ್ ನೀಡಲು ವೈದ್ಯರು ಮುಂದಾಗಿದ್ದಾರೆ. ಅಷ್ಟು ಪುಟ್ಟ ಮಗುವಿಗೆ ಇಷ್ಟೊಂದು ದುಬಾರಿ ಇಂಜೆಕ್ಷನ್ ನೀಡಬೇಕಾದ್ರೆ, ಇದೆಂಥಾ ಕಾಯಿಲೆ ಅಂತ ನಿಮಗೆ ಪ್ರಶ್ನೆ ಮೂಡಬಹುದು. ಅದಕ್ಕೆ ಉತ್ತರ ಜೆನೆಟಿಕ್ ಸ್ಪೈನಲ್ ಮಸ್ಕುಲರ್​​ ಆಟ್ರೋಫಿ(SMA). ಇಂಗ್ಲೆಂಡ್​ನ ಎಸೆಕ್ಸ್​​ ನಿವಾಸಿ ಮೇಘನ್ ಹಾಗೂ ಜಾನ್ ದಂಪತಿಯ ಒಂದೂವರೆ ತಿಂಗಳ ಮಗು ಎಡ್ವರ್ಡ್​ಗೆ ಈ ಕಾಯಿಲೆ ಕಾಣಿಸಿಕೊಂಡಿದೆ.

ಏನಿದು ಸ್ಪೈನಲ್ ಮಸ್ಕುಲರ್​​ ಆಟ್ರೋಫಿ..?
ಸ್ಪೈನಲ್ ಮಸ್ಕುಲರ್​​ ಆಟ್ರೋಫಿ ಒಂದು ಅನುವಂಶಿಕ ಕಾಯಿಲೆ.

ದೇಹದಲ್ಲಿ SMN-1 ಜೀನ್​​​ ಕೊರತೆಯಿಂದ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. SMN ಪ್ರೋಟೀನ್​ ದೇಹದಲ್ಲಿ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ಪೈನಲ್ ಮಸ್ಕುಲರ್​​ ಆಟ್ರೋಫಿ ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಈ ಪ್ರೋಟೀನ್​​ನ ಕೊರತೆಯಿಂದಾಗಿ ಎದೆಯ ಭಾಗದ ಸ್ನಾಯುಗಳು ದುರ್ಬಲಗೊಂಡು, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಇದು ಪುಟ್ಟ ಮಕ್ಕಳಲ್ಲಿ ಕಾಣಿಸುಕೊಳ್ಳುತ್ತದೆ. ಟೈಪ್​​-1 SMA ಕಾಣಿಸಿಕೊಂಡ ಮಗುವಿಗೆ ಕ್ರಮೇಣವಾಗಿ ಸಮಸ್ಯೆ ಉಲ್ಭಣವಾಗಿ ಸ್ನಾಯುಗಳು ಕೆಲಸ ಮಾಡುವುದು ನಿಲ್ಲಿಸುತ್ತವೆ. ಜೊತೆಗೆ ಉಸಿರಾಟದ ಸಮಸ್ಯೆಯಿಂದ ಎರಡು ವರ್ಷ ತುಂಬುವುದರೊಳಗೆ ಮಗು ಸಾವನ್ನಪ್ಪಬಹುದು. ಇಂಗ್ಲೆಂಡ್​​ನಲ್ಲಿ ಈ ಕಾಯಿಲೆಯ ಪ್ರಮಾಣ ಹೆಚ್ಚಿದ್ದು, ಪ್ರತಿ ವರ್ಷ ಸುಮಾರು 60 ಮಕ್ಕಳು ಈ ಕಾಯಿಲೆಯೊಂದಿಗೆ ಜನಿಸುತ್ತಾರೆ ಅಂತ ವರದಿಯಾಗಿದೆ.

ವಿಶ್ವದಲ್ಲೇ ಅತ್ಯಂತ ದುಬಾರಿ ಇಂಜೆಕ್ಷನ್- ಒಂದು ಡೋಸ್​ಗೆ 16 ಕೋಟಿ
ಈ ಅನುವಂಶಿಕ ಕಾಯಿಲೆಯನ್ನ ಗುಣಪಡಿಸಲು ಝೋಲಾಗೆನೆಸ್ಮಾ(zolagenesma) ಅನ್ನೋ ಇಂಜೆಕ್ಷನ್ ನೀಡಬೇಕು. ಈ ಇಂಜೆಕ್ಷನ್​​ ಪ್ರಪಂಚದಲ್ಲೇ ಅತ್ಯಂತ ದುಬಾರಿ. ಒಂದು ಇಂಜೆಕ್ಷನ್​​ನ ಬೆಲೆ 1.7 ಮಿಲಿಯನ್ ಪೌಂಡ್ಸ್​. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 16 ಕೋಟಿ ರೂಪಾಯಿ. ಬ್ರಿಟನ್​ನ ಬಹುತೇಕ ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ರೆ ಈ ಹಿಂದೆ ಇದಕ್ಕೆ ಸೂಕ್ತ ಔಷಧಿ ಇರಲಿಲ್ಲ. ಈಗ ಮೂರು ವರ್ಷಗಳಿಂದ ಈ ಕಾಯಿಲೆಯ ಚಿಕಿತ್ಸೆಗಾಗಿ ಅಮೆರಿಕಾ, ಜರ್ಮನಿ ಹಾಗೂ ಜಪಾನ್​ನಿಂದ ಝೋಲಾಗೆನೆಸ್ಮಾ ಇಂಜೆಕ್ಷನ್​​ ತರಿಸಿಕೊಳ್ಳಲಾಗ್ತಿದೆ. SMA ಕಾಯಿಲೆಯಿಂದ ಬಳಲುತ್ತಿರುವವರಿಗೆ ಒಂದು ಬಾರಿ ಮಾತ್ರ ಈ ಇಂಜೆಕ್ಷನ್ ನೀಡಲಾಗುತ್ತದೆ. ಹೀಗಾಗಿ ಇದರ ಬೆಲೆ ಬಹಳ ದುಬಾರಿ.

ಮಗುವಿನ ಪೋಷಕರು ಚಿಕಿತ್ಸೆಯ ಹಣಕ್ಕಾಗಿ ಕ್ರೌಡ್​ ಫಂಡಿಂಗ್ ಮೂಲಕ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಈವರೆಗೆ 1.7 ಕೋಟಿ ರೂಪಾಯಿ ಸಂಗ್ರಹವಾಗಿದೆ. ನಮ್ಮ ಮಗುವಿನ ಪ್ರಾಣ ನಮಗೆ ಅಮೂಲ್ಯ, ಕಂದನ್ನು ಉಳಿಸಲು ಸರ್ವ ಪ್ರಯತ್ನ ಮಾಡ್ತೀವಿ ಎಂದು ಪೋಷಕರು ಹೇಳಿದ್ದಾರೆ.

(ಮಾಹಿತಿ ಕೃಪೆ News first live)

Wednesday, December 16, 2020

ರಾಜ್ಯ ಸರ್ಕಾರದಿಂದ ವೃದ್ಧರು, ವಿಕಲಚೇತರಿಗೆ ಸಿಹಿಸುದ್ದಿ : ಮನೆ ಬಾಗಿಲಿಗೇ ಬರಲಿದೆ ಪಿಂಚಣಿ

 

ಬೆಂಗಳೂರು : ರಾಜ್ಯದ ಬಡಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಮನೆಬಾಗಿಲಿಗೆ ಪಿಂಚಣಿದಾರರಿಗೆ ಪಿಂಚಣಿ ನೀಡುವ ಸೇವೆಯನ್ನು ಆರಂಭಿಸಿದೆ.

ವೃದ್ಧರು, ವಿಧವೆಯರು, ವಿಕಲಚೇತನರೂ ಸೇರಿದಂತೆ ಅರ್ಹರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರದಿಂದ ಪಿಂಚಣಿ ಒದಗಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಪಿಂಚಣಿ ಸೇವೆಯನ್ನು ಆರಂಭಿಸಿದೆ. ಪ್ರಾಯೋಗಿಕವಾಗಿ ಉಡುಪಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸೇವೆ ಪರಿಚಯಿಸಲಾಗಿದೆ. 2021 ರ ಜನವರಿ ಅಥವಾ ಫೆಬ್ರವರಿಯಲ್ಲಿ ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳಲಿದೆ.

ಇದುವರೆಗೂ ಅರ್ಜಿ ಸಲ್ಲಿಸದೇ ಇದ್ದರೂ ಕೂಡ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. ಅಂತಹ ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಬ್ಬಂದಿ ಆಗಮಿಸಿ ದಾಖಲೆ ಪಡೆಯಲಿದ್ದಾರೆ. ಆಧಾರ್ ಕಾರ್ಡ್ ಹಾಗೂ ಓವರ್ ದಿ ಕೌಂಟರ್ ಸರ್ವೀಸ್ ನಡಿ 60 ವರ್ಷ ತುಂಬಿದವರ ವಿವರ, ಪಿಂಚಣಿ ಪಡೆಯಲು ಮಾನದಂಡವಾಗಿರುವ ವಾರ್ಷಿಕ ವರಮಾನ, ಆಸ್ತಿಯ ವಿವರಗಳು ಲಭ್ಯವಾಗಿದ್ದು, ಅರ್ಹ ಕುಟುಂಬಗಳನ್ನು ಗುರುತಿಸಲಾಗುತ್ತದೆ.ಈ ಮಾಹಿತಿ ಆಧಾರದ ಮೇಲೆ ಗ್ರಾಮ ಲೆಕ್ಕಾಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಪಿಂಚಣಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಿದ್ದಾರೆ.

(ಮಾಹಿತಿ ಕೃಪೆ Kannada News Now) 
 

ರೈಲ್ವೆ ಹುದ್ದೆಗಳ ಆಕಾಂಕ್ಷಿಗಳಿಗೆ ಸಿಹಿಸುದ್ದಿ : 1 ಲಕ್ಷ 40 ಸಾವಿರ ಹುದ್ದೆಗಳ ಭರ್ತಿಗೆ ರೈಲ್ವೆ ಇಲಾಖೆ ಸಿದ್ಧತೆ

 

ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (ಆರ್ ಆರ್ ಬಿ) 1.4 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ತ್ರಿಫೇಸ್ ಮೆಗಾ ನೇಮಕಾತಿ ಅಭಿಯಾನ ಇಂದಿನಿಂದ ಆರಂಭವಾಲಿದ್ದು, ಸಾಮಾಜಿಕ ಅಂತರ, ಮಾಸ್ಕ್, ನೈರ್ಮಲ್ಯಕಗಳನ್ನು ಕಡ್ಡಾಯಗೊಳಿಸುವಿಕೆ, ದಿನಕ್ಕೆ ಕೇವಲ ಎರಡು ಪಾಳಿಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸಲು ಇಲಾಖೆ ಸಿದ್ಧತೆ ಕೈಗೊಂಡಿದೆ.

ಇಂದಿನಿಂದ ಮೊದಲ ಹಂತದ ಪರೀಕ್ಷೆ ಆರಂಭ . ಡಿಸೆಂಬರ್ 28ರಿಂದ 2021ರ ಮಾರ್ಚ್ ವರೆಗೆ ಎನ್ ಟಿಪಿಸಿ ವರ್ಗಗಳನ್ನು ಮತ್ತು 2020ರ ಏಪ್ರಿಲ್ ನಿಂದ 2021ರ ಜೂನ್ ಅಂತ್ಯದವರೆಗೆ ಮೂರನೇ ನೇಮಕಾತಿ ನಡೆಯಲಿದೆ.

ದೇಶದ ವಿವಿಧ ನಗರಗಳಲ್ಲಿ 2.44 ಕೋಟಿ ಅಭ್ಯರ್ಥಿಗಳು ಈ ನೇಮಕಾತಿ ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

RRB ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಾರ್ಗದರ್ಶಿ ಸೂತ್ರಗಳು

ಅಭ್ಯರ್ಥಿಗಳು ಥರ್ಮೋ ಗನ್ ಗಳನ್ನು ಬಳಸಿ ಪ್ರವೇಶದ ತಾಪಮಾನವನ್ನು ಪರೀಕ್ಷಿಸಲಾಗುವುದು.

ನಿಗದಿತ ಮಿತಿಗಿಂತ ಹೆಚ್ಚು ತಾಪಮಾನ ಹೊಂದಿರುವ ಅಭ್ಯರ್ಥಿಗಳಿಗೆ ಪರೀಕ್ಷಾ ಸ್ಥಳದ ಒಳಗೆ ಅವಕಾಶ ವಿರುವುದಿಲ್ಲ.

ಅಂತಹ ಅಭ್ಯರ್ಥಿಗಳ ಮರು-ನಿಗದಿಯಾದ ಪರೀಕ್ಷೆಯ ನಿಖರ ದಿನಾಂಕವನ್ನು ನಂತರ ತಿಳಿಸಲಾಗುವುದು.

ಅಭ್ಯರ್ಥಿಯು ತನ್ನ ಫೇಸ್ ಮಾಸ್ಕ್ ಅನ್ನು ಬಳಸಬೇಕು.

ಅಭ್ಯರ್ಥಿಯು ಪ್ರವೇಶದ ಸಮಯದಲ್ಲಿ ನಿಗದಿತ ನಮೂನೆಯಲ್ಲಿ COVID-19 ಸ್ವಯಂ-ಘೋಷಣೆಯನ್ನು ಹಾಜರುಪಡಿಸಬೇಕಾಗುತ್ತದೆ ಮತ್ತು ಅದೇ ಅನುಪಸ್ಥಿತಿಯಲ್ಲಿ ಪರೀಕ್ಷಾ ಸ್ಥಳದಲ್ಲಿ ಅವರಿಗೆ ಅವಕಾಶ ವಿರುವುದಿಲ್ಲ.

ಪ್ರತಿ ಶಿಫ್ಟ್ ನಂತರ ಮತ್ತೊಂದು ಶಿಫ್ಟ್ ಪ್ರಾರಂಭಿಸುವ ಮೊದಲು ಪರೀಕ್ಷಾ ಕೇಂದ್ರವನ್ನು ನೈರ್ಮಲ್ಯಗೊಳಿಸಲಾಗುತ್ತದೆ

(ಮಾಹಿತಿ ಕೃಪೆ Kannada News Now) 
 

8-9-10 ನೇ ತರಗತಿ ಓದುವ ಮಕ್ಕಳಿಗಾಗಿ ಸರಕಾರದ ಮಾರ್ಗ ಸೂಚಿ.!

 

ಬೆಂಗಳೂರು: ಕೊರೋನಾ ಹಿನ್ನೆಲೆ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮ ಯೋಜನೆಯನ್ನು ಪುನಾರಂಭಿಸಲು ಸರ್ಕಾರ ಸೂಚಿಸಿದೆ.

ಎಸ್‌ಎಸ್‌ಎಲ್ಸಿ ಮಕ್ಕಳಿಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆ.10ರಿಂದ ಮ.12.30ರವರೆಗೆ ಎಲ್ಲಾ ಭಾಷಾ ವಿಷಯಗಳು ಸೇರಿ ಬೇರೆ ವಿಷಯಗಳ ಬೋಧನೆ. 8-9 ನೇ ತರಗತಿ: ಮ.2 ರಿಂದ 4.30ರವರೆಗೆ. 1-3 ನೇ ತರಗತಿ: ಸೋಮವಾರ, ಬುಧವಾರ & ಶುಕ್ರವಾರ ಹಾಗೂ 4 & 5 ನೇ ತರಗತಿ ಮಕ್ಕಳಿಗೆ ಮಂಗಳವಾರ, ಗುರುವಾರ ಮತ್ತು ಶನಿವಾರದವರೆಗೆ ಬೆ.10 ರಿಂದ ಮ.12.30ರವರೆಗೆ ವಿದ್ಯಾಗಮ ನಡೆಸುವಂತೆ ಹೇಳಗಾಗಿದೆ.

 (ಮಾಹಿತಿ ಕೃಪೆ ಬಿಸಿ ಸುದ್ದಿ) 
 

ಡಿ.18-19 ರಂದು ಈ ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ

 

ಬೆಂಗಳೂರು : ಡಿಸೆಂಬರ್ 18 ಹಾಗೂ 19 ರಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಬಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೋಲಾರ, ಮಂಡ್ಯ, ಹಾಸನ, ಕೊಡಗು, ಮೈಸೂರು, ಚಿಕ್ಕಮಗಳೂರು ಹಾಗೂ ರಾಮನಗರದಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

 (ಮಾಹಿತಿ ಕೃಪೆ ಬಿಸಿ ಸುದ್ದಿ) 
 

ಸಚಿವರಿಂದ ಕ್ರೀಡಾಂಗಣ ಕಾಮಗಾರಿ ಪರಿಶೀಲನೆ

 

ಹೊಸಪೇಟೆ: ಜಿಲ್ಲಾ ಖನಿಜ ನಿಧಿ ಅಡಿಯಲ್ಲಿ ಇಲ್ಲಿನ ಕ್ರೀಡಾ ಸಂಕೀರ್ಣದಲ್ಲಿ ಕೈಗೆತ್ತಿಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಮಂಗಳವಾರ ಪರಿಶೀಲಿಸಿದರು.

₹1.44 ಕೋಟಿಯಲ್ಲಿ ಸ್ಕೇಟಿಂಗ್‌ ಅಂಕಣ, ಒಳಾಂಗಣ ಬ್ಯಾಡ್ಮಿಂಟನ್‌ ಕ್ರೀಡಾಂಗಣ ನವೀಕರಣ, ಈಜುಕೊಳ ದುರಸ್ತಿ, ಸಭಾಂಗಣದ ನವೀಕರಣ ಕಾಮಗಾರಿ ವೀಕ್ಷಿಸಿದರು.

'ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು. ಕ್ರೀಡಾಂಗಣಕ್ಕೆ ಬರುವ ಜನರಿಗೆ ಕೂರಲು ಆಸನಗಳ ವ್ಯವಸ್ಥೆ ಮಾಡಬೇಕು' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಿರ್ಮಿತಿ ಕೇಂದ್ರದ ಅಧಿಕಾರಿ ಗನಿ ಸಾಬ್ ಇದ್ದರು.

 (ಮಾಹಿತಿ ಕೃಪೆ ಪ್ರಜಾವಾಣಿ) 
 

ಹೊಸಪೇಟೆ: 41 ಸದಸ್ಯರ ಅವಿರೋಧ ಆಯ್ಕೆ

 

ಹೊಸಪೇಟೆ: ತಾಲ್ಲೂಕಿನ 13 ಗ್ರಾಮ ಪಂಚಾಯಿತಿಗಳಿಗೆ ಡಿ. 22ರಂದು ಚುನಾವಣೆ ನಡೆಯಲಿದೆ. ಆದರೆ, ಅದಕ್ಕೂ ಮುನ್ನವೇ 41 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಪಂಚಾಯಿತಿಗಳ ಒಟ್ಟು 274 ಸ್ಥಾನಗಳಿಗೆ ಸಲ್ಲಿಕೆಯಾಗಿದ್ದ ಒಟ್ಟು ನಾಮಪತ್ರಗಳ ಪೈಕಿ 227 ಜನ ನಾಮಪತ್ರ ಹಿಂಪಡೆದಿರುವುದರಿಂದ ಒಟ್ಟು 653 ಜನ ಅಂತಿಮ ಕಣದಲ್ಲಿದ್ದಾರೆ. ಈ ನಡುವೆ 41 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಅಲ್ಲಿ ಚುನಾವಣೆ ನಡೆಯುವುದಿಲ್ಲ. ಅವರ ಅಧಿಕೃತ ಆಯ್ಕೆ ಘೋಷಣೆ ಹೊರಬೀಳಬೇಕಿದೆ.

ತಾಲ್ಲೂಕಿನ ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಅತಿ ಹೆಚ್ಚು 10 ಜನರು ಅವಿರೋಧವಾಗಿ ಆಯ್ಕೆಯಾದರೆ, ಡಣಾಯಕನಕೆರೆಯಲ್ಲಿ 9, ಮಲಪನಗುಡಿ, ಬೈಲುವದ್ದಿಗೇರಿಯಲ್ಲಿ ತಲಾ 6, ಜಿ. ನಾಗಲಾಪುರ, ಚಿಲಕನಹಟ್ಟಿಗೆ ತಲಾ 3, ನಾಗೇನಹಳ್ಳಿ, 114 ಡಣಾಪುರ, ಬುಕ್ಕಸಾಗರ ಹಾಗೂ ಕಲ್ಲಹಳ್ಳಿಗೆ ತಲಾ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

 (ಮಾಹಿತಿ ಕೃಪೆ ಪ್ರಜಾವಾಣಿ) 
 

ತಪ್ಪು ತಿಳಿವಳಿಕೆ; ಬಿಗುವಿನ ವಾತಾವರಣ

 

 

ಹೊಸಪೇಟೆ: ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂದು ತಪ್ಪು ಭಾವಿಸಿ ನಗರಸಭೆ ಸಿಬ್ಬಂದಿಗೆ ಸ್ಥಳೀಯ ಯುವಕರು ಪ್ರತಿರೋಧ ತೋರಿಸಿ ಅವರ ಕೆಲಸಕ್ಕೆ ಅಡ್ಡಿಪಡಿಸಿದ್ದರಿಂದ ಮಂಗಳವಾರ ಸಂಜೆ ಇಲ್ಲಿನ ಹಜರತ್‌ ಷಾ ವಲಿ ಮಸೀದಿ ಬಳಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.

ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಸ್ಥಳೀಯ ಯುವಕರಿಗೆ ಮನವರಿಕೆ ಮಾಡಿಕೊಟ್ಟ ನಂತರ ವಾತಾವರಣ ತಿಳಿಗೊಂಡಿತು.

'ನಗರಸಭೆಯು ಈ ಹಿಂದೆ ಮಸೀದಿಗೆ ಹೊಂದಿಕೊಂಡಂತೆ ನಿರ್ಮಿಸಿದ್ದ ಕೆಲ ಮಳಿಗೆಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿತ್ತು. ಬಳಿಕ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಕಾರ್ಯಾಚರಣೆ ಕೈಬಿಟ್ಟಿತು. ಕಟ್ಟಡಗಳ ಅವಶೇಷಗಳು ಅಲ್ಲಿಯೇ ಬಿದ್ದದ್ದರಿಂದ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಮಂಗಳವಾರ ಸಂಜೆ ನಗರಸಭೆ ಸಿಬ್ಬಂದಿಯು ಜೆ.ಸಿ.ಬಿ., ಟ್ರ್ಯಾಕ್ಟರ್‌ನೊಂದಿಗೆ ಸ್ಥಳಕ್ಕೆ ತೆರಳಿ, ಅವಶೇಷ ತೆರವುಗೊಳಿಸಲು ಮುಂದಾಗಿದ್ದರು. ತಡೆಯಾಜ್ಞೆಯಿದ್ದರೂ ತೆರವು ಕಾರ್ಯಾಚರಣೆಗೆ ಬಂದಿದ್ದಾರೆ ಎಂದು ತಪ್ಪಾಗಿ ತಿಳಿದು ಅಲ್ಲಿದ್ದ ಯುವಕರು ನಗರಸಭೆಯ ಸಿಬ್ಬಂದಿಗೆ ತಡೆಯೊಡ್ಡಿದ್ದಾರೆ. ಬಳಿಕ ಅವರೊಂದಿಗೆ ವಾಗ್ವಾದ ನಡೆಸಿ, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಯುವಕರಿಗೆ ವಸ್ತುಸ್ಥಿತಿ ತಿಳಿಸಿದ ನಂತರ ಸುಮ್ಮನಾದರು' ಎಂದು ಪೊಲೀಸರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

'ಇದೊಂದು ಆಕಸ್ಮಿಕವಾಗಿ ನಡೆದ ಘಟನೆ. ತಪ್ಪು ತಿಳಿವಳಿಕೆಯಿಂದ ಯುವಕರು ಆವೇಶಭರಿತರಾಗಿ ಆ ರೀತಿ ವರ್ತಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ' ಎಂದು ತಿಳಿಸಿದ್ದಾರೆ.

'ತಪ್ಪಾಗಿ ಭಾವಿಸಿ ನಮ್ಮ ಸಿಬ್ಬಂದಿಯ ಜತೆ ಸ್ಥಳೀಯ ಯುವಕರು ವಾಗ್ವಾದ ನಡೆಸಿ, ನೂಕಾಟ, ತಳ್ಳಾಟ ನಡೆಸಿದ್ದಾರೆ. ಬೇರೇನೂ ಆಗಿಲ್ಲ. ಬಳಿಕ ವಿಷಯ ಗೊತ್ತಾಗಿ ಸುಮ್ಮನಾಗಿದ್ದಾರೆ' ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ತಿಳಿಸಿದ್ದಾರೆ.

 (ಮಾಹಿತಿ ಕೃಪೆ ಪ್ರಜಾವಾಣಿ) 

Monday, December 14, 2020

'ಕರ್ನಾಟಕ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ - 2020' ರ ಎರಡನೇ ಹಂತದ ಮತದಾನ ಡಿಸೆಂಬರ್ 27 ರಂದು ನಡೆಯಲಿದ್ದು,

 'ಕರ್ನಾಟಕ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ - 2020' ರ ಎರಡನೇ ಹಂತದ ಮತದಾನ ಡಿಸೆಂಬರ್ 27 ರಂದು ನಡೆಯಲಿದ್ದು, ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಸಲು ಡಿಸೆಂಬರ್ 16 ಕೊನೆಯ ದಿ‌ನವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಿ,‌ ಗ್ರಾಮಾಭಿವೃದ್ಧಿಗೆ ನೆರವಾಗಿ.

Image

Sunday, December 13, 2020

ನಿಮ್ಮೂರಲ್ಲಿ ಗ್ರಾಮಪಂಚಾಯಿತಿ ಚುನಾವಣೆ ಯಾವಾಗ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್


 ಬೆಂಗಳೂರು: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ಡಿಸೆಂಬರ್‌ 22 ಮತ್ತು 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಡಿಸೆಂಬರ್ 30ರಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮೊದಲ ಹಾಗೂ ಎರಡನೇ ಹಂತದ ಚುನಾವಣಾ ಪ್ರಕ್ರಿಯೆಗಳು ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಿಮ್ಮೂರಿನಲ್ಲಿ ಯಾವ ಹಂತದಲ್ಲಿ ಮತದಾನ ನಡೆಯಲಿದೆ ಎಂಬುದರ ಬಗ್ಗೆ ಚುನಾವಣಾ ಆಯೋಗ ನೀಡಿರುವ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.










(ಮಾಹಿತಿ ಕೃಪೆ kannada news)

Saturday, December 12, 2020

3 ಬಸ್‍ಗಳ ಮೇಲೆ ಕಲ್ಲು ತೂರಾಟ

 

ಬೆಂಗಳೂರು,ಡಿ.12- ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರಿದಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಹೊರಟಿದ್ದ ಮೂರು ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‍ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಕಾಚರಕನಹಳ್ಳಿಯಲ್ಲಿ , ಹೆಣ್ಣೂರು ಬ್ರಿಡ್ಜ್ ಹಾಗೂ ಮೇಡಿ ಅಗ್ರಹಾರದಲ್ಲಿ ಬೆಳಗ್ಗೆ ಬಿಎಂಟಿಸಿ ಬಸ್ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಯಾಗಿವೆ.

ನಿನ್ನೆ ಒಟ್ಟು 14 ಬಸ್‍ಗಳಿಗೆ ಕಲ್ಲು ಹೊಡೆದಿದ್ದು, ಗಾಜುಗಳು ಜಖಂಗೊಂಡಿವೆ. ನಗರದ ಎಲ್ಲಾ ಡಿಫೋಗಳಿಂದ ಇಂದು 91 ಬಸ್‍ಗಳು ಸಂಚಾರಕ್ಕೆ ಹೊರಟಿವೆ. 34 ಬಸ್‍ಗಳಿಗೆ ಕಲ್ಲು: ನಿನ್ನೆ ವಿವಿಧ ಜಿಲ್ಲೆಗಳಲ್ಲಿ ಕಿಡಿಗೇಡಿಗಳು ಕೆಎಸ್‍ಆರ್‍ಟಿಸಿಯ 34 ಬಸ್‍ಗಳಿಗೆ ಕಲ್ಲು ತೂರಾಟ ಮಾಡಿ ಜಖಂಗೊಳಿಸಿದ್ದಾರೆ. 
(ಮಾಹಿತಿ ಕೃಪೆ ಈ ಸಂಜೆ)    

ಈಶ್ವರಪ್ಪ ಸಿಡಿಸಿದ ಹೊಸ ಬಾಂಬ್: ಯಡಿಯೂರಪ್ಪ - ಸಿದ್ದರಾಮಯ್ಯ ತಡರಾತ್ರಿ ಭೇಟಿ ಡಿಕೆಶಿಗೆ ತಿಳಿದಿತ್ತು

 

ದಾವಣಗೆರೆ, ಡಿ 12: "ನಮ್ಮದೇನಿದ್ದರೂ ಓಪನ್, ನಿಮ್ಮ ಹಾಗೇ ತಡರಾತ್ರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿಲ್ಲ"ಎಂದು ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಹೇಳಿದ್ದರು.

ಸಿದ್ದರಾಮಯ್ಯನವರು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿರುವ ವಿಚಾರದ ಬಗ್ಗೆ ಗ್ರಾಮೀಣಾಭಿವೃದ್ದಿ ಖಾತೆಯ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿದ್ದಾರೆ. ಆ ಮೂಲಕ, ಇಬ್ಬರು ಹಿರಿಯ ನಾಯಕರು ಭೇಟಿಯಾಗಿದ್ದನ್ನು ಒಪ್ಪಿಕೊಂಡಿದ್ದಾರೆ.

"ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ತಡರಾತ್ರಿ ಭೇಟಿಯಾಗಿದ್ದರು. ಈ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ತಿಳಿದಿತ್ತು. ನನಗೆ ಗೊತ್ತಿರಲಿಲ್ಲ"ಎಂದು ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, "ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಎನ್ನುವ ಪದಕ್ಕೆ ಇನ್ನೊಂದು ಅನ್ವರ್ಥನಾಮವೇ ಸಿದ್ದರಾಮಯ್ಯ. ನಾಯಕತ್ವ ಬದಲಾವಣೆಯ ಯಾವ ವಿಚಾರವೂ ವರಿಷ್ಠರ ಮುಂದಿಲ್ಲ"ಎಂದು ಈಶ್ವರಪ್ಪ ಸ್ಪಷ್ಟ ಪಡಿಸಿದರು.

 

"ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆನ್ನುವ ಹಗಲು ಕನಸನ್ನು ಕಾಣುತ್ತಿದ್ದಾರೆ. ಆದರೆ, ರಾಜ್ಯದ ಜನತೆ ಮತ್ತೆ ಬಿಜೆಪಿಯನ್ನು ಆಶೀರ್ವದಿಸಲಿದ್ದಾರೆ"ಎನ್ನುವ ವಿಶ್ವಾಸದ ಮಾತನ್ನು ಈಶ್ವರಪ್ಪ ಆಡಿದ್ದಾರೆ.

"ಸಾರಿಗೆ ಸಂಸ್ಥೆಯ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೆ, ಸಮಯ ಸಂದರ್ಭವನ್ನು ಅರಿತು ನೌಕರರು ಪ್ರತಿಭಟನೆ ಮಾಡಬೇಕು"ಎಂದು ಈಶ್ವರಪ್ಪ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

 

(ಮಾಹಿತಿ ಕೃಪೆ Oneindia)  

ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ, ಉಳಿದೆಡೆ ಒಣಹವೆ

 

ಬೆಂಗಳೂರು, ಡಿಸೆಂಬರ್ 12: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಉಳಿದೆಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಮಳೆಯಾಗುವ ನಿರೀಕ್ಷೆ ಇದೆ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ.

ಉಡುಪಿಯ ಕೋಟಾದಲ್ಲಿ 2 ಸೆಂ.ಮೀ, ಮಾಣಿ, ಕದ್ರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಬೀದರ್‌ನಲ್ಲಿ 12.6 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನಗಳಿಂದ ತುಂತುರು ಮಳೆಯಾಗುತ್ತಿದೆ. 

 (ಮಾಹಿತಿ ಕೃಪೆ Oneindia)

 

ನಾವು ನಿಮ್ಮ ಜೊತೆ ಇದ್ದೇವೆ: ಸಾರಿಗೆ ನೌಕರರಿಗೆ ಡಿಕೆಶಿ ಭರವಸೆ

 

ಬೆಂಗಳೂರು: 'ನಾವು ನಿಮ್ಮ ಜತೆ ಇದ್ದೇವೆ' ಎಂದು ಮುಷ್ಕರ ನಿರತ ಸಾರಿಗೆ ನೌಕರರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದಾರೆ.

ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬ ಬೇಡಿಕೆ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ರಾಜ್ಯ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಸಂಸ್ಥೆಗಳ ನೌಕರರನ್ನು ಬನಶಂಕರಿ ಬಸ್ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಭೇಟಿ ಮಾಡಿದ ಶಿವಕುಮಾರ್‌, ನೌಕರರ ಅಹವಾಲು ಆಲಿಸಿದರು.

ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡರು, ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್, ದೊಡ್ಡ ಆಲಹಳ್ಳಿ ಕಾಂಗ್ರೆಸ್ ಮುಖಂಡ ಬಾಬು ಜೊತೆ ಇದ್ದರು.

 (ಮಾಹಿತಿ ಕೃಪೆ ಪ್ರಜಾವಾಣಿ)

ಸಾರಿಗೆ ನೌಕರರ ಬೆಂಬಲಿಸಿದ, ಎಚ್‌ಡಿಕೆ ಟೀಕಿಸಿದ ಕೋಡಿಹಳ್ಳಿ ವಿರುದ್ಧ ಸಿಎಂ ಆಕ್ರೋಶ

 

ಬೆಂಗಳೂರು: ಸಾರಿಗೆ ನೌಕರರನ್ನು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ದುರುದ್ದೇಶದಿಂದ ಎತ್ತಿಕಟ್ಟುತ್ತಿದ್ದಾರೆ. ಅಲ್ಲದೆ, ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರ ವಿರುದ್ಧ ಅವರು ಆಡಿರುವ ಲಘುವಾದ ಮಾತುಗಳು ಸರಿಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಶನಿವಾರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, 'ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಸಮಸ್ಯೆ ಬಗೆಹರಿಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಸೂಚನೆ ನೀಡಲಾಗಿದೆ. ಆದರೆ, ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಅವರು ದುರುದ್ದೇಶದಿಂದ ಕೆಲವು ನೌಕರರನ್ನು ಎತ್ತಿಕಟ್ಟಿ, ಮುಷ್ಕರ ನಡೆಸಲು ಮತ್ತು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿದ್ದಾರೆ,' ಎಂದು ಸಿಎಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  
ಮುಖ್ಯಮಂತ್ರಿ ಮಾಧ್ಯಮ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ವಿರುದ್ಧದ ಕೋಡಿಹಳ್ಳಿ ಅವರ ಟೀಕೆಯನ್ನು ಸಿಎಂ ವಿರೋಧಿಸಿದ್ದಾರೆ. 'ಎಚ್‌.ಡಿ ಕುಮಾರಸ್ವಾಮಿ ಅವರ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್‌ ಅತ್ಯಂತ ಲಘುವಾಗಿ ಮಾತಾಡಿರುವುದು ಖಂಡನೀಯ,' ಎಂದು ಸಿಎಂ ಹೇಳಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ನೌಕರರು ಸತ್ಯಾಗ್ರಹ ನಿಲ್ಲಿಸಿ ಕರ್ತವ್ಯಕ್ಕೆ ಮರಳಿ, ನಂತರ ಸಾರಿಗೆ ಸಚಿವರ ಜೊತೆಗೆ ಚರ್ಚೆಗೆ ಬರಬೇಕು ಎಂದೂ ಸಿಎಂ ಮತ್ತೊಮ್ಮೆ ಮನವಿ ಮಾಡಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

 

Tuesday, December 8, 2020

ಭಾರತ್ ಬಂದ್ | ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ: ಯಡಿಯೂರಪ್ಪ


 ಬೆಂಗಳೂರು: ಕೃಷಿ ಸುಧಾರಣಾ ಕಾಯ್ದೆಗಳನ್ನು ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಭಾರತ್‌ ಬಂದ್‌ ಉದ್ದೇಶಿಸಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ, ಸಚಿವ ಕೆ.ಸುಧಾಕರ್‌ ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದು, ವಿರೋಧ ಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಯಡಿಯೂರಪ್ಪ ಅವರು, ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಸಲುವಾಗಿ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಯಲಿದ್ದು, ರೈತರು ಹೆಚ್ಚಿನ ಲಾಭ ಗಳಿಸಲು ಈ ಕಾಯ್ದೆಗಳು ನೆರವು ನೀಡಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರತಿಪಕ್ಷಗಳು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಕಾಯ್ದೆಗಳನ್ನು ವಿರೋಧಿಸುತ್ತಿವೆ. ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ.

ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ ಎಂದು ಕಿಡಿಕಾರಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

ಹೊಸಪೇಟೆಯಲ್ಲಿ ಬಂದ್‌ಗೆ ಉತ್ತಮ ಬೆಂಬಲ

ಹೊಸಪೇಟೆ: ಕೃಷಿಗೆ ಸಂಬಂಧಿಸಿದ ಮೂರು ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದೇಶದ ವಿವಿಧ ರೈತ ಸಂಘಟನೆಗಳು ಕರೆ ಕೊಟ್ಟಿದ್ದ ಭಾರತ ಬಂದ್‌ಗೆ ಮಂಗಳವಾರ ನಗರದಲ್ಲಿ ಉತ್ತಮ ಬೆಂಬಲ ವ್ಯಕ್ತವಾಯಿತು.

ನಗರದಲ್ಲಿ ಮಂಗಳವಾರ ಬಹುತೇಕ ಮಳಿಗೆ, ಹೋಟೆಲ್‌ಗಳವರು ಬಾಗಿಲು ತೆರೆಯದೇ ಬಂದ್‌ಗೆ ಬೆಂಬಲ ಸೂಚಿಸಿದರು. ಅಲ್ಲಲ್ಲಿ ತೆರೆದಿದ್ದ ಕೆಲ ಮಳಿಗೆಗಳನ್ನು ಪ್ರತಿಭಟನಾಕಾರರು ಮುಚ್ಚಿಸಿದರು. ಸಾರಿಗೆ ಸಂಸ್ಥೆಯ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿದ್ದವು. ಪ್ರತಿಭಟನಾಕಾರರು ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ ನಂತರ ಸಂಚಾರ ಸ್ಥಗಿತಗೊಂಡಿತು. ಪರ ಊರುಗಳಿಗೆ ತೆರಳಬೇಕಿದ್ದವರು ನಿಲ್ದಾಣದಲ್ಲೇ ಕಾದು ಕುಳಿತಿದ್ದರು. ಬೆರಳೆಣಿಕೆಯಷ್ಟು ಆಟೊಗಳು ರಸ್ತೆಗಿಳಿದಿದ್ದವು. ರೈಲುಗಳ ಸಂಚಾರಕ್ಕೆ ಯಾವುದೇ ತೊಡಕು ಉಂಟಾಗಲಿಲ್ಲ.

ಬೆಳಿಗ್ಗೆ ನಗರದ ಸೋಗಿ ಮಾರುಕಟ್ಟೆ, ಎಪಿಎಂಸಿಯಲ್ಲಿ ಎಂದಿನಂತೆ ವಹಿವಾಟು ನಡೆಯಿತು. ಬೆಳಿಗ್ಗೆ 9ರ ನಂತರ ವಹಿವಾಟು ಸ್ಥಗಿತಗೊಂಡಿತು. ಬಂದ್‌ನಿಂದ ಹೆಚ್ಚಿನ ಜನ ಹೊರಬರಲಿಲ್ಲ. ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ಮೆಡಿಕಲ್‌, ಆಸ್ಪತ್ರೆ, ಆಂಬುಲೆನ್ಸ್‌, ಪೆಟ್ರೋಲ್‌ ಬಂಕ್‌ ಸೇರಿದಂತೆ ಇತರೆ ತುರ್ತು ಸೇವೆಗಳಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಬಂದ್‌ ಶಾಂತಿಯುತವಾಗಿದ್ದರೂ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ನಗರದ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಬಳಿ ಸೇರಿದ ಪ್ರತಿಭಟನಾಕಾರರು ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ರೋಟರಿ ವೃತ್ತದ ವರೆಗೆ ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುಕೇಶ್‌ ಅಂಬಾನಿ, ಅದಾನಿ ವಿರುದ್ಧ ಘೋಷಣೆ ಕೂಗಿದರು. ನಂತರ ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ದಲಿತ ಹಕ್ಕುಗಳ ಸಮಿತಿ, ಡಿವೈಎಫ್‌ಐ, ಎಸ್‌ಎಫ್‌ಐ, ಸಿಐಟಿಯು, ದೇವದಾಸಿಯರ ಸಂಘ, ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷ, ವಿಜಯನಗರ ಆಟೊ ಚಾಲಕರ ಸಂಘ, ಆಟೊ ಯೂನಿಯನ್‌ ಬಂದ್‌ಗೆ ಬೆಂಬಲ ಸೂಚಿಸಿ ಅದರ ಮುಖಂಡರು ಪಾಲ್ಗೊಂಡಿದ್ದರು. ಬಿಎಸ್‌ಎನ್‌ಎಲ್‌ ನೌಕರರು, ಬ್ಯಾಂಕ್‌ ಯೂನಿಯನ್‌ನವರು ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಮಾತನಾಡಿ, 'ರೈತರು ನಡೆಸುತ್ತಿರುವ ಹೋರಾಟಕ್ಕೆ ಜಗತ್ತಿನ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು, ಅಲ್ಲಿನವರು ಬೆಂಬಲ ಸೂಚಿಸಿದ್ದಾರೆ. ಆದರೆ, ನಮ್ಮ ಪ್ರಧಾನಿ ಅನ್ನದಾತರ ನೋವಿಗೆ ಸ್ಪಂದಿಸುತ್ತಿಲ್ಲ. ಬದಲಾಗಿ ರೈತರನ್ನು ಹತ್ತಿಕ್ಕಲು ಅವರ ವಿರುದ್ಧ ಯೋಧರನ್ನು ಬಳಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ' ಎಂದು ಟೀಕಿಸಿದರು.

'ಕೇಂದ್ರ ಬಿಜೆಪಿ ಸರ್ಕಾರ ರೈತರ ಪರವಲ್ಲ, ಕಾರ್ಪೊರೇಟ್‌ ಪರವಾದ ಸರ್ಕಾರ ಎನ್ನುವುದನ್ನು ತೋರಿಸಿಕೊಟ್ಟಿದೆ. ರೈತರ ಹಿತ ಬಲಿಕೊಟ್ಟು ಕಾರ್ಪೊರೇಟ್‌ ಕಂಪನಿಗಳಿಗೆ ಅನುಕೂಲವಾಗುವ ಕಾಯ್ದೆಗಳನ್ನು ತಂದು, ರೈತರಿಗೆ ಮರಣ ಶಾಸನ ಬರೆದಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ' ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ದೀಪಕ್‌ ಸಿಂಗ್‌ ಮಾತನಾಡಿ, 'ವಾಸ್ತವದಲ್ಲಿ ಹೇಳಬೇಕೆಂದರೆ ಹೊಸಪೇಟೆಯಲ್ಲಿ ರೈತರೇ ಇಲ್ಲ. ಒಂದುವೇಳೆ ಇದ್ದಿದ್ದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಸುಮ್ಮನಿರುತ್ತಿರಲಿಲ್ಲ. ಐಎಸ್‌ಆರ್‌ ಕಾರ್ಖಾನೆ ಮುಚ್ಚಿ ಏಳು ವರ್ಷಗಳಾಗಿವೆ. ಒಬ್ಬ ರೈತರು ಅದರ ವಿರುದ್ಧ ಧ್ವನಿ ಎತ್ತಿಲ್ಲ' ಎಂದು ಟೀಕಿಸಿದರು.

'ಕಂಡಕ್ಟರ್‌ ಆಗಿದ್ದವರು ಕೋಟ್ಯಧಿಪತಿ'

ಹೊಸಪೇಟೆ: 'ಈ ದೇಶದಲ್ಲಿ ಇಬ್ಬರು ಬಸ್‌ ಕಂಡಕ್ಟರ್‌ಗಳು ಕೋಟ್ಯಧಿಪತಿಗಳಾಗಿದ್ದಾರೆ. ಒಬ್ಬರು ನಟ ರಜನಿಕಾಂತ್‌, ಇನ್ನೊಬ್ಬರು ಅರಣ್ಯ ಸಚಿವ ಆನಂದ್‌ ಸಿಂಗ್. ಇವರಿಬ್ಬರೂ ಈ ಹಿಂದೆ ಬಸ್‌ ಕಂಡಕ್ಟರ್‌ಗಳಾಗಿದ್ದವರು. ಸಿಂಗ್‌ ಅವರು ಹಂಪಿ ವಿರೂಪಾಕ್ಷನ ದಯೆಯಿಂದ ಕೋಟ್ಯಧಿಪತಿ ಆಗಿರಬಹುದು ಅಂದುಕೊಂಡಿದ್ದೆ. ಆದರೆ, ನಿವೃತ್ತ ಲೋಕಾಯುಕ್ತ ಸಂತೋಷ್‌ ಹೆಗಡೆ ಅವರ ಪುಸ್ತಕ ಓದಿದ ನಂತರ ಅವರು ಹೇಗೆ ಕೋಟ್ಯಧಿಪತಿಯಾದರು ಎನ್ನುವುದು ಗೊತ್ತಾಯಿತು' ಎಂದು ದಲಿತ ಹಕ್ಕುಗಳ ಸಮಿತಿ ಮುಖಂಡ ಮರಡಿ ಜಂಬಯ್ಯ ನಾಯಕ ವ್ಯಂಗ್ಯವಾಡಿದರು.

'ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿರುವ ಆನಂದ್‌ ಸಿಂಗ್‌ ಅವರು ಇತ್ತೀಚೆಗೆ ಬಡ ಹೆಣ್ಣು ಮಕ್ಕಳಿಗೆ ಸೀರೆ ಹಂಚಿ ಅವರನ್ನು ಹಂಗಿಸುವ ಕೆಲಸ ಮಾಡಿದ್ದಾರೆ. ನೀವು ಶ್ರೀಮಂತ ಎನ್ನುವುದು ಗೊತ್ತು. ಆದರೆ, ಈ ರೀತಿ ಬಡವರಿಗೆ ಅವಮಾನಿಸುವುದು ಸರಿಯಲ್ಲ. ಸ್ಥಳೀಯ ರೈತರು ಹೋರಾಟ ನಡೆಸುತ್ತಿದ್ದರು. ನಮ್ಮ 'ಚಕ್ರವರ್ತಿ' ಯಡಿಯೂರಪ್ಪ ಬೆನ್ನಿಗೆ ನಿಂತಿರುವುದು ದುರದೃಷ್ಟಕರ' ಎಂದು ಹೇಳಿದರು.

'ತುಘಲಕ್‌ ಆಡಳಿತ'

'ತುಘಲಕ್‌ ಆಡಳಿತದ ಬಗ್ಗೆ ಓದಿ ತಿಳಿದುಕೊಂಡಿದ್ದೆವು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ ಅದನ್ನು ನೋಡುತ್ತಿದ್ದೇವೆ' ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ಹೇಳಿದರು.

'ಈ ದೇಶದ ರೈತರು ಬಹಳ ಕಷ್ಟದಲ್ಲಿದ್ದಾರೆ. ಎರಡು ವಾರಗಳಿಂದ ರೈತರು ವಿಪರೀತ ಚಳಿಯಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಕಷ್ಟ ಸುಖ ಆಲಿಸುವ ಬದಲು ಕೇಂದ್ರ ಗೃಹ ಸಚಿವ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದಲ್ಲಿ ಮಗ್ನರಾಗಿದ್ದರು. ಇದು ಅವರ ಆಡಳಿತದ ವೈಖರಿ ತೋರಿಸಿಕೊಡುತ್ತದೆ' ಎಂದರು.

***

ದೇಶಕ್ಕೆ ಅನ್ನ ಕೊಡುವ ರೈತರಿಗೆ ಹೇಡಿಗಳೆಂದು ಅಪಮಾನಿಸಿರುವ ಕೃಷಿ ಸಚಿವ ಬಿ.ಸಿ. ಪಾಟೀಲರು ₹40 ಕೋಟಿ ಪಡೆದು ಬಿಜೆಪಿಗೆ ಪಕ್ಷಾಂತರ ಆದ ನೀವು ಹೇಡಿ.
-ಜೆ. ಕಾರ್ತಿಕ್‌, ರಾಜ್ಯ ಪ್ರಧಾನ ಕಾರ್ಯದರ್ಶಿ, ರೈತ ಸಂಘ

***

ರೈತರು, ಕಾರ್ಮಿಕರು ಈ ದೇಶದ ಎರಡು ಕಣ್ಣುಗಳಿದ್ದಂತೆ. ಆದರೆ, ಕೇಂದ್ರ ಸರ್ಕಾರ ಆ ಎರಡೂ ಕಣ್ಣುಗಳನ್ನು ತೆಗೆಯಲು ಹೊರಟಿರುವುದು ಸರಿಯಲ್ಲ.
-ಭಾಸ್ಕರ್‌ ರೆಡ್ಡಿ, ಜಿಲ್ಲಾ ಅಧ್ಯಕ್ಷ, ಸಿಐಟಿಯು

(ಮಾಹಿತಿ ಕೃಪೆ ಪ್ರಜಾವಾಣಿ)

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಪರ ಮತ: ಜೆಡಿಎಸ್ ವಿರುದ್ಧ ಹೋರಾಟ, ಸೆರೆ

 


ಬೆಂಗಳೂರು: ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ ವಿರೋಧಿಸಿ ಮತ್ತು ಇದಕ್ಕೆ ಕಾರಣವಾದ ಜೆಡಿಎಸ್ ವಿರುದ್ಧ ರಸ್ತೆಗಿಳಿದು ಪ್ರತಿಭಟನೆ ನಡೆಸಿದ ನೂರಾರು ರೈತ ಹೋರಾಟಗಾರರನ್ನು ಪೊಲೀಸರು ಬಂಧಿಸಿದರು.

ರೈತ ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಗುರುಪ್ರಸಾದ್ ಕೆರಗೋಡು, ಪ್ರಕಾಶ್ ಕಮ್ಮರಡಿ, ಗಾಯತ್ರಿ ಸೇರಿ ಹಲವರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಉಳಿದ ರೈತರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.

ಗಾಂಧಿ ಪ್ರತಿಮೆ ಎದುರು ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ರೈತರು, ವಿಧಾನ ಪರಿಷತ್‌ನಲ್ಲಿ ಮಸೂದೆ ಪರ ಜೆಡಿಎಸ್‌ ಸದಸ್ಯರು ಮತ ಹಾಕಿದ ಸುದ್ದಿ ತಿಳಿಯುತ್ತಿದ್ದಂತೆ ಏಕಾಏಕಿ ರಸ್ತೆಗಿಳಿದು ಹೋರಾಟ ಆರಂಭಿಸಿದರು.

'ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಪ್ರಕಾರ ‌ಒಬ್ಬರು 450 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಬಹುದು. ಇಂತಹ ಕರಾಳ ತಿದ್ದುಪಡಿ ತರಲು ಕಾರ್ಪೋರೇಟ್‌ ಬಂಡವಾಳಶಾಹಿಗಳ ಪರವಾಗಿ ಬಿಜೆಪಿ ಮುಂದಾಗಿದೆ. ಇವರ ಜೊತೆಗೆ ಜೆಡಿಎಸ್ ಕೂಡ ಶಾಮೀಲಾಗಿ ಮಸೂದೆ ಪರ ಮತ ಹಾಕಿದೆ' ಎಂದು ಕಿಡಿ ಕಾರಿದರು.

ಮಸೂದೆ ವಿರೋಧಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ವಿಧಾನ ಪರಿಷತ್ತಿನಲ್ಲಿ ಮಸೂದೆ ಅಂಗೀಕಾರ ಆಗದಂತೆ ಕಾಂಗ್ರೆಸ್ ಜತೆ ಸೇರಿ ಹೋರಾಟ ನಡೆಸಲಾಗುವುದು ಎಂದು ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರು. ಮಾತಿಗೆ ತಪ್ಪಿದ ಜೆಡಿಎಸ್ ಈಗ ಬಿಜೆಪಿ ಪರ ನಿಂತಿದೆ. ರೈತರ ಪರ ಎಂದು ಹೇಳಿಕೊಳ್ಳುಲು ಆ ಪಕ್ಷಕ್ಕೆ ಈಗ ಯಾವುದೇ ನೈತಿಕತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

Thursday, November 19, 2020

5ರಿಂದ 7ನೇ ತರಗತಿ: ನ.23ರಿಂದ ಸಂವೇದಾ ಪಾಠ

 

 

ಬೆಂಗಳೂರು: ಚಂದನ ವಾಹಿನಿಯಲ್ಲಿ ಇದೇ 23ರಿಂದ 5, 6 ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳಿಗೆ 'ಸಂವೇದಾ ಇ-ಕ್ಲಾಸ್' ಕಲಿಕಾ ಕಾರ್ಯಕ್ರಮ ಪ್ರಸಾರವಾಗಲಿದೆ.

'ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗಾಗಲೇ 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಡಿ ಪಾಠಗಳನ್ನು ಕೇಳುತ್ತಿದ್ದು, ಈಗ, 5,6 ಮತ್ತು 7ನೇ ತರಗತಿಗಳಿಗೂ ಇದನ್ನು ವಿಸ್ತರಿಸಲಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದ್ದಾರೆ.

ಈ ತರಗತಿಗಳ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ವಿಡಿಯೊ ಪಾಠಗಳನ್ನು ಪ್ರಸಾರ ಮಾಡಲಾಗುತ್ತದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8ರಿಂದ 9.30 ಮತ್ತು ಸಂಜೆ 5.30ರಿಂದ 6ರವರೆಗೆ ಪಾಠಗಳು ಪ್ರಸಾರವಾಗಲಿವೆ.

ಪ್ರತಿ ದಿನ 4 ಪಾಠಗಳನ್ನು, ಪ್ರತಿ ಪಾಠ 30 ನಿಮಿಷಗಳ ಅವಧಿಯಂತೆ 2 ತಾಸು ನಡೆಸಲಾಗುತ್ತದೆ. ಈ ವೇಳಾಪಟ್ಟಿಯಂತೆ ಡಿ.25ರವರೆಗೆ ಪ್ರಸಾರ ಮಾಡಲಾಗುತ್ತದೆ.

(ಮಾಹಿತಿ ಕೃಪೆ  ಪ್ರಜಾವಾಣಿ)   

 

ಹೊಸ ಜಿಲ್ಲೆ ವಿಜಯನಗರ

 

 

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆ ರಚಿಸಲು ಬುಧವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.'ಇದು ರಾಜ್ಯದ 31ನೇ ಜಿಲ್ಲೆಯಾಗಲಿದ್ದು, ಇದಕ್ಕೆ ಯಾವ ಯಾವ ತಾಲ್ಲೂಕುಗಳನ್ನು ಸೇರಿಸಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು' ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟದಲ್ಲಿ ಒಮ್ಮತದ ಒಪ್ಪಿಗೆ ಸಿಕ್ಕಿದೆ. ವಿಜಯನಗರ ಜಿಲ್ಲೆ ಸ್ಥಾಪನೆಗಾಗಿ ಹಲವು ದಶಕಗಳಿಂದ ಪಕ್ಷಾತೀತ ಹೋರಾಟ ನಡೆದಿತ್ತು. ಇದು ಜಿಲ್ಲಾ ಕೇಂದ್ರವಾಗಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯ ವಿಭಜನೆಗೆ ಕೆಲವರ ವಿರೋಧವಿತ್ತು. ಅಂತಿಮವಾಗಿ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡೇ ಈ ನಿರ್ಣಯ ತೆಗೆದುಕೊಳ್ಳಲಾಯಿತು' ಎಂದು ಆನಂದ್‌ ಸಿಂಗ್‌ ತಿಳಿಸಿದರು.

'ಉತ್ತಮ ನಿರ್ಧಾರ': ವಿಜಯನಗರ ಜಿಲ್ಲೆ ರಚಿಸಲು ಕೈಗೊಂಡ ತೀರ್ಮಾನವು ಆಡಳಿತಾತ್ಮಕವಾಗಿ ಉತ್ತಮ ನಿರ್ಧಾರ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

'ವಿಜಯನಗರ ಜಿಲ್ಲೆಯ ರಚನೆ ಬೇಡಿಕೆ ಮುಂದಿಟ್ಟು ಹೋರಾಟ ನಡೆದಿತ್ತು. ಈ ವಿಚಾರದಲ್ಲಿ ಕೆಲವು ಸಂದರ್ಭಗಳಲ್ಲಿ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಅಂತಿಮವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ತೆಗೆದುಕೊಳ್ಳಲಾಗಿದೆ' ಎಂದು ಶ್ರೀರಾಮುಲು ಹೇಳಿದರು.

(ಮಾಹಿತಿ ಕೃಪೆ  ಪ್ರಜಾವಾಣಿ)  

 

Tuesday, October 27, 2020

ಚೇಳು ಕಚ್ಚಿದ ತಕ್ಷಣ ಮಾಡಿ ಈ ಕೆಲಸ

 

ಚೇಳು ವಿಷಕಾರಿ ಎಂಬುದು ಎಲ್ಲರಿಗೂ ತಿಳಿದ ವಿಷ್ಯ. ಚೇಳು ಕಚ್ಚಿದ ನೋವು ಹೇಗಿರುತ್ತೆ ಎಂಬುದು ಕಚ್ಚಿಸಿಕೊಂಡ ವ್ಯಕ್ತಿಗೆ ಗೊತ್ತು. ಇಡೀ ಶರೀರ ತಡೆಯಲಾರದ ನೋವಿನಿಂದ ಕೂಡಿರುತ್ತದೆ. ಚೇಳು ಕಚ್ಚಿದ ತಕ್ಷಣ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಔಷಧಿ ಮಾಡಿ ಚೇಳಿನ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.

ಚೇಳು ಕಚ್ಚಿದ ತಕ್ಷಣ ಕಚ್ಚಿದ ಜಾಗದಿಂದ 4 ರಿಂದ 5 ಇಂಚು ಮೇಲ್ಬಾಗದಲ್ಲಿ ಬಟ್ಟೆಯನ್ನು ಬಿಗಿಯಾಗಿ ಕಟ್ಟಬೇಕು. ರಕ್ತದ ಮೂಲಕ ವಿಷ ದೇಹದ ಇತರ ಭಾಗ ಸೇರದಂತೆ ಮಾಡಲು ಬಟ್ಟೆ ಕಟ್ಟಬೇಕು. ಪಿನ್ ಅಥವಾ ಸ್ವಚ್ಛವಾದ ಚಿಮಿಟಿಗೆಯನ್ನು ಬಿಸಿ ಮಾಡಿ ಕಚ್ಚಿದ ಜಾಗದಲ್ಲಿರುವ ವಿಷವನ್ನು ನಿಧಾನವಾಗಿ ತೆಗೆಯಬೇಕು. ಇದಾದ ನಂತ್ರ ಈ ಕೆಳಗಿನ ಯಾವುದೇ ಒಂದು ವಿಧಾನವನ್ನು ಅನುಸರಿಸಬಹುದು.

20 ರಿಂದ 25 ಗ್ರಾಂ ಕಲ್ಲುಪ್ಪನ್ನು 40 ರಿಂದ 50 ಗ್ರಾಂ ಈರುಳ್ಳಿ ಜೊತೆ ಬೆರೆಸಿ ರುಬ್ಬಿಕೊಳ್ಳಿ. ಇದನ್ನು ಚೇಳು ಕಚ್ಚಿದ ಜಾಗಕ್ಕೆ ಹಚ್ಚಿ. ಕೆಲವೇ ಸಮಯದಲ್ಲಿ ಚೇಳಿನ ವಿಷ ಬಿಟ್ಟುಕೊಳ್ಳುತ್ತದೆ.

50-60 ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ. ಅದರ ರಸ ತೆಗೆಯಿರಿ. ಸ್ವಲ್ಪ ರಸವನ್ನು ಕಚ್ಚಿದ ಜಾಗಕ್ಕೆ ಹಚ್ಚಿ. ಉಳಿದ ರಸಕ್ಕೆ ನೀರು ಬೆರೆಸಿ ಚೇಳು ಕಚ್ಚಿದ ವ್ಯಕ್ತಿಗೆ ಕುಡಿಯಲು ನೀಡಿ.

(ಮಾಹಿತಿ ಕೃಪೆ  ಕನ್ನಡದುನಿಯಾ) 

Wednesday, October 21, 2020

ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶ್ನಾತೀತ ನಾಯಕ – ಸಚಿವ ಸೋಮಣ್ಣ

 ಇದು ಪಕ್ಷದ ಹೈಕಮಾಂಡ್‌ಗೂ ಕೂಡ ಇದು ಗೊತ್ತಿದೆ. ಯತ್ನಾಳ್ ಅವರಿಗೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ, ಇಂತಹ ಹೇಳಿಕೆಗಳನ್ನು ನೀಡುವವರ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ

ಸಿಎಂ ಬದಲಾವಣೆ ಹೇಳಿಕೆ ಹಳೆಯದು. ಪುನರಾವರ್ತನೆ ಮಾಡಿದರೆ ವ್ಯಕ್ತಿ ಗಾಂಭೀರ್ಯತೆ ಕಳೆದುಕೊಳ್ಳುತ್ತಾರೆ. ಪದೇ ಪದೇ ಹೇಳುವುದು ಒಳ್ಳೆಯ ಲಕ್ಷಣವಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಟಾಂಗ್ ನೀಡಿದ್ದಾರೆ.

ಶಿರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಪ್ರಚಾರ ನಡೆಸಲು ತೆರಳುವುದಕ್ಕೂ ಮೊದಲು ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಸ್ವಾಮೀಜಿಯನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಹೇಳಿದ್ದನ್ನೇ ಯಾರೂ ಹೇಳಬಾರದು. ಯತ್ನಾಳ್ ಅವರಿಗೆ ಮತ್ತೆ ಹೀಗೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಬಿ.ಎಸ್.ಯಡಿಯೂರಪ್ಪ ನಮ್ಮ ಪ್ರಶ್ನಾತೀತ ನಾಯಕ. ಪಕ್ಷದ ಹೈಕಮಾಂಡ್‌ಗೂ ಕೂಡ ಇದು ಗೊತ್ತಿದೆ. ಇಂತಹ ಹೇಳಿಕೆಗಳನ್ನು ನೀಡುವವರ ಬಗ್ಗೆ ಪಕ್ಷದ ವರಿಷ್ಠರು ನೋಡಿಕೊಳ್ಳುತ್ತಾರೆ ಎಂದು ಯತ್ನಾಳ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲಾಗಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ಸಿಎಂ ಕುರ್ಚಿ ಖಾಲಿ ಇಲ್ಲ. ಕುರ್ಚಿ ಖಾಲಿಮಾಡಿಸಿದರೆ ಏನಾಗುತ್ತದೆ ಎಂಬ ಸಂದೇಶ ಪಕ್ಷದ ವರಿಷ್ಠರಿಗೆ ಹೋಗಿದೆ. ಹಾಗಾಗಿ ವರಿಷ್ಠರು ಬಿ.ಎಸ್.ಯಡಿಯೂರಪ್ಪ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಹೇಳಿದರು.

 


 ಮುಖ್ಯಮಂತ್ರಿ ಯಡಿಯೂರಪ್ಪ ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಬಿಎಸ್.ವೈ ಶಕ್ತಿ ಸಾಮರ್ಥ್ಯ ಎಲ್ಲರಿಗೂ ಗೊತ್ತಿದೆ. ಹಿಂದೆ ಪ್ರವಾಹ ಬಂದಾಗ ಬೆಟ್ಟಗುಡ್ಡ ಹತ್ತಿಇಳಿದವರು ಬಿಎಸ್.ವೈ. ಎಂಥ ಕೆಟ್ಟ ಪರಿಸ್ಥಿತಿಯಲ್ಲೂ ಸಮರ್ಥವಾಗಿ ನಿಭಾಯಿಸಿದ್ದಾರೆ. ನಮ್ಮ ಸಿಎಂ ಮತ್ತು ಪಕ್ಷ ಜನರ ನಡುವೆ ಕೆಲಸ ಮಾಡುತ್ತದೆ. ಇದು ಜನರಿಗೂ ಗೊತ್ತಿದೆ ಎಂದು ಶ್ಲಾಘಿಸಿದರು.

ಶಿರಾದಲ್ಲಿ ಅನಿರೀಕ್ಷಿತವಾಗಿ ಉಪಚುನಾವಣೆ ಎದುರಾಗಿದೆ. ಸಧ್ಯದ ಸಂದಿಗ್ದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕೊರೊನ ನಿಯಂತ್ರಣಕ್ಕಾಗಿ ದುಡಿಯುತ್ತಿದ್ದಾರೆ. ನಮ್ಮ ಸರ್ಕಾರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಭಿವೃದ್ಧಿಯತ್ತ ಜನರ ಒಲವಿದೆ. ಹಾಗಾಗಿ ಆರ್.ಆರ್.ನಗರ ಮತ್ತು ಶಿರಾ ಮತ್ತು ಪದವೀಧರ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಸಾಮಾನ್ಯ ಜನರ ನೋವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದೆ. ಜನರ ಸಮಸ್ಯೆ ಗಳನ್ನು ಆಲಿಸಿ ಪರಿಹಾರ ಮಾಡುತ್ತಿದೆ. ಜನರೂ ನಮ್ಮ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ನಮ್ಮದು ಅಭಿವೃದ್ಧಿಯ ಸರ್ಕಾರ ಎಂದು ಸರ್ಕಾರದ ನಡೆಗಳನ್ನು ಬಲವಾಗಿ ಸಮರ್ಥಿಸಿಕೊಂಡರು.

(ಮಾಹಿತಿ ಕೃಪೆ  ನಾನು ಗೌರಿ)  

 

ಯೋಗರಾಜ್ ಭಟ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಜತೆಗೆ ಪ್ರಭುದೇವ ಸಾಥ್!

 

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಯೋಗರಾಜ್ ಭಟ್ ಜತೆಗೆ ಚಿತ್ರವೊಂದನ್ನು ಮಾಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದ್ದು ಭಟ್ರ ಚಿತ್ರಕಥೆಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಶಿವಣ್ಣನ ಜತೆಗೆ ದಕ್ಷಿಣ ಭಾರತದ ಖ್ಯಾತ ನಟ ಪ್ರಭುದೇವ ಸಹ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸೆನ್ಶೇಷನ್ ಮೂಡಿಸಿದೆ.

ನಾನು ಸ್ಕ್ರಿಪ್ಟ್ ಓದಿದ್ದೇನೆ. ಪ್ರಭುದೇವ ಮತ್ತು ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಶಿವರಾಜ್‌ಕುಮಾರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಯೋಗರಾಜ್ ಭಟ್ ಅಸಾಧಾರಣ ಕಥೆಯೊಂದಿಗೆ ಬಂದಿದ್ದಾರೆ. ಕಥಾಹಂದರ ಅನನ್ಯವಾಗಿದೆ. ಅವರು ಪ್ರಭುದೇವ ಮತ್ತು ನನ್ನ ಎರಡೂ ಪಾತ್ರಗಳನ್ನು ಸಮಾನವಾಗಿ ತೋರಿಸಲಿದ್ದಾರೆ. ಪ್ರೀತಿಯ ಅಂಶವು ಇಡೀ ಚಿತ್ರಕ್ಕೆ ಸಾಕಷ್ಟು ತೂಕವನ್ನು ನೀಡುತ್ತದೆ" ಎಂದು ಶಿವಣ್ಣ ಹೇಳುತ್ತಾರೆ. ಪ್ರಭುದೇವ ಕೂಡ ಸ್ಕ್ರಿಪ್ಟ್ ಕೇಳಿದ್ದಾರೆ ಮತ್ತು ಅವರು ಅದನ್ನು ಇಷ್ಟಪಟ್ಟಿದ್ದಾರೆ. ಮೈಸೂರು ಮೂಲದ ಪ್ರಭುದೇವ ದಕ್ಷಿಣ ಭಾರತದ ಚಲನಚಿತ್ರೋದ್ಯಮ ಮತ್ತು ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ದೇಶಕರಾಗಿದ್ದಾರೆ.

ಪ್ರಭುದೇವ ಕಡೆಯ ಬಾರಿಗೆ ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ "ಎಚ್ ಟು ಓ" ನಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಉಪೇಂದ್ರ ಮತ್ತು ಪ್ರಿಯಾಂಕಾ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದರು. ಪ್ರಸ್ತುತ ಅವರು ಸಲ್ಮಾನ್ ಖಾನ್ ಅಭಿನಯದ "ರಾಧೆ" ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಭಟ್ರ ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ 2021 ರಲ್ಲಿ ಪ್ರಾರಂಭವಾಗಲಿದೆ.

"ಆರ್‌ಡಿಎಕ್ಸ್" ಚಿತ್ರದ ಶೂಟಿಂಗ್ ನವೆಂಬರ್ ನಲ್ಲಿ ಪ್ರಾರಂಭವಾಗಬೇಕಿದ್ದದ್ದು ಮುಂದೂಡಿಕೆಯಾಗಿದೆ ಶಿವಣ್ಣ ಅದನ್ನು ಪೂರ್ಣಗೊಳಿಸಬೇಕಿದೆ. ಇದಾಗಲೇ ಶಿವಣ್ನ ನಿರ್ದೇಶಕ ಎ ಹರ್ಷ ಅವರ "ಭಜರಂಗಿ 2" ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಮತ್ತು ಅವರ ಮುಂದಿನ ಯೋಜನೆಗಾಗಿ ನವೆಂಬರ್ ಗೆ ಸಿದ್ದವಾಗಿದ್ದಾರೆ. ಸತ್ಯಜ್ಯೋತಿ ಫಿಲ್ಮ್ಸ್ ನ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ರವಿ ಅರಸು ಅವರ "ಆರ್‌ಡಿಎಕ್ಸ್" ಮೊದಲು ತಯಾರಾಗಬೇಕಿತ್ತು. ಆದರೆ ಈಗ ಅದನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಶಿವಣ್ಣ ಈಗ ಛಾಯಾಗ್ರಾಹಕ, ನಿರ್ದೇಶಕ ವಿಜಯ್ ಮಿಲ್ಟನ್ ಅವರ ಯೋಜನೆಯಲ್ಲಿ ಕಾಣಿಸಿಕೊಳ್ಳಲು ತೀರ್ಮಾನಿಸಿದ್ದಾರೆ.

"ಆರ್‌ಡಿಎಕ್ಸ್"ಅನ್ನು ಮುಂದಿನ ಡೇಟ್ ಗೆಮುಂದೂಡಲಾಗಿದೆ. ಹಾಗಾಗಿ ಕೃಷ್ಣ ಸಾರ್ಥಕ್ ನಿರ್ಮಿಸಿದ ನಿರ್ದೇಶಕ ವಿಜಯ್ ಮಿಲ್ಟನ್ ಅವರ ಚಿತ್ರದ ಡೇಟ್ಸ್ ಗಳನ್ನು ನಾನು ನಿಗದಿಪಡಿಸುತ್ತೇನೆ, ಅದು ನವೆಂಬರ್ ಮೂರನೇ ವಾರದಲ್ಲಿ ಇದು ಪ್ರಾರಂಭವಾಗಲಿದೆ. ನಾನು ಏಕಕಾಲದಲ್ಲಿ ಮತ್ತೊಂದು ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇನೆ, ಎಲ್ಲವೂ ದೃಢಪಟ್ಟ ನಂತರ ಅದರ ವಿವರಗಳು ಬಹಿರಂಗಗೊಳ್ಳುತ್ತವೆ 'ಎಂದು ಶಿವಣ್ಣ ಹೇಳಿದ್ದಾರೆ. 

(ಮಾಹಿತಿ ಕೃಪೆ ಕನ್ನಡ ಪ್ರಭ)   

ಶಾಸಕ ಯತ್ನಾಳ ಹೇಳಿಕೆ ಕುರಿತು ಪ್ರತಿಕ್ರಿಯೆಗೆ ಯಡಿಯೂರಪ್ಪ ನಕಾರ

 

 

ಬಳ್ಳಾರಿ: 'ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಹೆಚ್ಚು ದಿನ ಉಳಿಯುವುದಿಲ್ಲ' ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಿ.ಎಸ್‌.ಯಡಿಯೂರಪ್ಪ ನಿರಾಕರಿಸಿದರು.

ಉತ್ತರ ಕರ್ನಾಟಕ ಜಿಲ್ಲೆಗಳ ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನ ಜಿಂದಾಲ್‌ನ ಏರ್ ಸ್ಟ್ರಿಪ್‌ಗೆ ಬಂದಿಳಿದ ಅವರು, ಯತ್ನಾಳ ಹೇಳಿಕೆ ಕುರಿತು ಯಾವ ಪ್ರತಿಕ್ರಿಯೆಯನ್ನೂ ನೀಡದೆ ನಿರ್ಗಮಿಸಿದರು.

'ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಿದೆ, ಇಂದು ಕಲಬುರ್ಗಿ, ವಿಜಯಪುರ, ಯಾದಗಿರಿಗೆ ವೈಮಾನಿಕ ಸಮೀಕ್ಷೆಗೆ ಹೋಗುತ್ತಿದ್ದೇನೆ. ನಂತರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು' ಎಂದು ಸುದ್ದಿಗಾರರಿಗೆ ತಿಳಿಸಿದರು‌

'ಮನೆ ಕಳೆದುಕೊಂಡವರು ಹಾಗೂ, ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದು ಪರಿಹಾರ ಕೊಡಲಾಗುವುದು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಮಾಡಲಾಗಿದೆ' ಎಂದರು.

'ರಾಜ್ಯದಲ್ಲಿ ಆದ ಮಳೆ ನಷ್ಟದ ಕುರಿತು ಪ್ರಧಾನಮಂತ್ರಿಯ ಗಮನವನ್ನೂ ಸೆಳೆಯಲಾಗಿದೆ' ಎಂದರು.

(ಮಾಹಿತಿ ಕೃಪೆ ಪ್ರಜಾವಾಣಿ)  

 

PV Web Exclusive: ಗೇಲ್ 'ಯೂನಿವರ್ಸ್ ಬಾಸ್' ಆದದ್ದು ಹೀಗೆ...

 

 

ಬ್ರಯಾನ್ ಲಾರಾ ಪಾದಚಲನೆ, ರನ್ ಗಳಿಕೆಯ ವೇಗದಲ್ಲಿ ಬೆವರ ಹನಿಗಳು ಹೊಮ್ಮುತ್ತಿದ್ದವು. ಅದೇ ದೇಶವನ್ನು ಪ್ರತಿನಿಧಿಸಿದ ಕ್ರಿಸ್ ಗೇಲ್ ನಿಂತಲ್ಲೇ ಸಿಕ್ಸರ್ ಹೊಡೆದು ಮುಖ ಅರಳಿಸುತ್ತಾರೆ. ತಮ್ಮನ್ನು ತಾವೇ 'ಯೂನಿವರ್ಸ್ ಬಾಸ್' ಎಂದು ಅವರು ಕರೆದುಕೊಂಡಿದ್ದಾರೆ. ಅವರು ಹೊಡೆದಿರುವ ಸಿಕ್ಸರ್‌ಗಳನ್ನು ಎಣಿಸುತ್ತಾ ಬಂದರೆ ಆ ಮಾತಿನಲ್ಲಿ ಇರುವುದು ಆತ್ಮವಿಶ್ವಾಸ ಎನ್ನುವುದು ಸ್ಪಷ್ಟವಾಗುತ್ತದೆ.

ಬ್ರಯಾನ್ ಲಾರಾಗೆ ಒಂದು ಬಿರುದಿತ್ತು, 'ಪ್ರಿನ್ಸ್ ಆಫ್ ವೆಸ್ಟ್‌ಇಂಡೀಸ್' ಅಂತ. ಕ್ರಿಸ್‌ ಗೇಲ್ 2013ರಲ್ಲಿ ತಮಗೆ ತಾವೇ ಒಂದು ಬಿರುದು ಕೊಟ್ಟುಕೊಂಡರು, 'ಯೂನಿವರ್ಸ್ ಬಾಸ್' ಅಂತ. ಬ್ಯಾಟ್‌ನ ಹಿಂಬದಿಯಲ್ಲಿ ಕೂಡ 'ದಿ ಬಾಸ್' ಎಂದು ಬರೆದುಕೊಂಡು ಓಡಾಡುವಷ್ಟು ನಿಸ್ಸಂಕೋಚಿ. ಲಾರಾ ಮುಖದ ನಿರಿಗೆಗಳ ನಡುವೆ ಸದಾ ಸಂಕೋಚ ತುಳುಕುವಂತೆ ಕಾಣುತ್ತಿತ್ತು. ಗೇಲ್ ರಕ್ಕಸ ವಂಶದ ಕುಡಿಯಂದದಿ ಬೀಗುತ್ತಾರೆ. 1994ರಲ್ಲಿ ವಾರ್ವಿಕ್‌ಷೈರ್ ಪರವಾಗಿ ದುರ್ಹಮ್ ತಂಡದ ವಿರುದ್ಧ ಲಾರಾ 501 ರನ್ ಹೊಡೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಾದ ಅತಿ ಹೆಚ್ಚು ರನ್‌ಗಳು ಅವು. ಆ ದಾಖಲೆಯನ್ನು ಯಾರೂ ಅಳಿಸಲು ಆಗಿಲ್ಲ. ಅದಾದ ಮೇಲೆ ಇನ್ನೂ ಒಂದೂವರೆ ದಶಕ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದರು. ಐದಡಿ ಎಂಟು ಇಂಚು ಎತ್ತರದ ಲಾರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 34 ಶತಕಗಳನ್ನು ಒಳಗೊಂಡ 11,953 ರನ್‌ಗಳನ್ನು ಸೇರಿಸಿದವರು. 52.88ರ ಸರಾಸರಿಯಲ್ಲಿ ಅಷ್ಟೊಂದು ರನ್ ಗಳಿಸುವುದೆಂದರೆ ಹೆಮ್ಮೆಯ ವಿಷಯ. ಗೇಲ್ ವಯಸ್ಸಿನಲ್ಲಿ ಲಾರಾ ಅವರಿಗಿಂತ ಹತ್ತು ವರ್ಷ ಚಿಕ್ಕವರು. ಈಗ 41ರ ಹರೆಯ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ತಾವು ಯಾಕೆ ಬಾಸ್ ಎನ್ನುವುದನ್ನು ಸಾರುವಂತೆ ಇವತ್ತೂ ಅವರು ಸಿಕ್ಸರ್ ಹೊಡೆಯುತ್ತಿದ್ದಾರೆ. ಲಾರಾ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಹೊಡೆದದ್ದು ಟೆಸ್ಟ್‌ನಲ್ಲಿ 88 ಹಾಗೂ ಏಕದಿನದ ಪಂದ್ಯಗಳಲ್ಲಿ 133 ಸಿಕ್ಸರ್‌ಗಳನ್ನು. ಅವರಿಗಿಂತ 28 ಕಡಿಮೆ ಟೆಸ್ಟ್ ಪಂದ್ಯಗಳಲ್ಲೇ ಗೇಲ್ 98 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಲಾರಾ ಅವರಿಗಿಂತ ಒಂದೇ ಒಂದು ಹೆಚ್ಚು ಏಕದಿನದ ಪಂದ್ಯಗಳನ್ನು ಆಡಿರುವ ದೈತ್ಯ 331 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟ್ವೆಂಟಿ20 ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನೂ ಸೇರಿಸಿಕೊಂಡರೆ ಅಕ್ಟೋಬರ್ 20ರ ವರೆಗೆ ಒಟ್ಟು 869 ಸಿಕ್ಸರ್‌ಗಳನ್ನು ಅವರು ಹೊಡೆದಿರುವುದನ್ನು ನೋಡಿ ಕಣ್ಣರಳಿಸಲೇಬೇಕು. ಬೌಂಡರಿಗಳನ್ನು ಲೆಕ್ಕ ಹಾಕಿದರೆ ಕಣ್ಣುಗಳು ಮತ್ತಷ್ಟು ಅಗಲಗೊಂಡಾವು. ಎಲ್ಲಾ ಪ್ರಕಾರದ ಕ್ರಿಕೆಟ್‌ಗಳಿಂದ 2678 ಬೌಂಡರಿಗಳು ಗೇಲ್‌ ಬ್ಯಾಟ್‌ನಿಂದ ಹರಿದಿವೆ. ಅವರ ವೃತ್ತಿಪರ ಕ್ರಿಕೆಟ್‌ ಬದುಕಿನ ಇದುವರೆಗಿನ ಒಟ್ಟು ರನ್‌ ಗಳಿಕೆ 23,912. ಅದರಲ್ಲಿ ಬೌಂಡರಿ ಹಾಗೂ ಸಿಕ್ಸರ್‌ಗಳಿಂದ ಜಮೆಯಾಗಿರುವ ಮೊತ್ತ 15,926. ಅಂದರೆ 7986 ರನ್‌ಗಳನ್ನಷ್ಟೇ ಅವರು ಓಡಿ ಗಳಿಸಿರುವುದು. ಹಾಗೆ ನೋಡಿದರೆ ಲಾರಾ ಬೌಂಡರಿ ಗಳಿಕೆಯಲ್ಲಿ ಗೇಲ್‌ ಅವರಿಗಿಂತ ಮುಂದು. ಯಾಕೆಂದರೆ, ಬರೀ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಅವರು 2594 ಬೌಂಡರಿಗಳನ್ನು ಹೆಕ್ಕಿದ್ದಾರೆ.

ಅಂಕಿಸಂಖ್ಯೆಗೂ 'ಬಾಸ್‌' ಆಗುವುದಕ್ಕೂ ಸಂಬಂಧ ಇರುತ್ತದೆ. ಲಾರಾ, ಗೇಲ್ ಇಬ್ಬರೂ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದವರು. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು. ತಾಂತ್ರಿಕವಾಗಿ ಕಣ್ಣಿಗೆ ಹಿತವೆನ್ನಿಸುವ ಆಟವನ್ನು ಲಾರಾ ಆಡಿದರೆ, ಎದುರಾಳಿಗಳ ಧೂಳೀಪಟ ಮಾಡುವಂತೆ ಗೇಲ್ ಸಿಕ್ಸರ್‌ಗಳನ್ನು ಹೊಡೆಯುತ್ತಾರೆ. ಫಿಟ್‌ನೆಸ್ ವಿಷಯದಲ್ಲಿ ಲಾರಾಗೆ ಹೆಚ್ಚು ಅಂಕ ಸಲ್ಲುತ್ತದೆ. ಗೇಲ್ ಆರೋಗ್ಯ ಪದೇ ಪದೇ ಕೈಕೊಟ್ಟಿದೆ. ಅದಕ್ಕೆ ತಾಜಾ ಉದಾಹರಣೆ ಈ ಸಲ ಐಪಿಎಲ್ ಆಡಲು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಅವರು ಸೇರಿಕೊಂಡ ಮೇಲೂ ಫುಡ್ ಪಾಯ್ಸನಿಂಗ್‌ನಿಂದ ಬಳಲಿದ್ದರು. ಲಾರಾ ನಡೆ-ನೋಟ-ನಿಲುವಿನಲ್ಲಿ ವಿನಯ ಕಾಣುತ್ತದೆ. ಗೇಲ್ ಇವತ್ತಿಗೂ ತುಡುಗು ಹುಡುಗನಂತೆ ಭಾಸವಾಗುತ್ತಾರೆ. ಅವರ ವೇಷಭೂಷಣವೂ ಹಾಗೆಯೇ ಇದೆ. ಸಂಕೋಚವನ್ನು ದೂರದಲ್ಲೆಲ್ಲೋ ಇಟ್ಟುಬಂದಂತೆ ಅವರು ನಗಬಲ್ಲರು. ಭುಜಬಲ ತೋರಿಸಿ, ನಿಧಾನಕ್ಕೆ ಕೈಕಾಲು ಆಡಿಸಿ ನಗಿಸಲೂ ಬಲ್ಲರು.

ಇಪ್ಪತ್ತು ವರ್ಷಗಳ ಹಿಂದೆ ಗೇಲ್ ಅಂತರರಾಷ್ಟ್ರೀಯ ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ ಲಾರಾ ಇನ್ನೂ ಒಳ್ಳೆಯ ಫಾರ್ಮ್‌ನಲ್ಲಿ ಇದ್ದರು. ಅವರಿಂದ ಗೇಲ್ ಅದೇನನ್ನು ಕಲಿತರೋ ಗೊತ್ತಿಲ್ಲ. ಆದರೆ, ಟೆಸ್ಟ್ ಕ್ರಿಕೆಟ್ ಮೇಲಿನ ಪ್ರೀತಿಯನ್ನಂತೂ ಉಳಿಸಿಕೊಂಡರು. ಇಂದಿಗೂ ಅವರು ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತರಾಗಿಲ್ಲ. ಅವಕಾಶ ಸಿಕ್ಕರೆ ಮತ್ತೊಮ್ಮೆ ಆಡಲು ಸೈ ಎನ್ನುತ್ತಾರೆ. ಸರ್ ಡಾನ್ ಬ್ರಾಡ್‌ಮನ್, ಬ್ರಯಾನ್ ಲಾರಾ, ವೀರೇಂದ್ರ ಸೆಹ್ವಾಗ್ ಇವರೆಲ್ಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ತ್ರಿಶತಕಗಳ ಸರದಾರರೆನ್ನಿಸಿಕೊಂಡಿದ್ದರು. ಆ ಪಟ್ಟಿಗೂ ಗೇಲ್ ಸೇರಿಕೊಂಡರು. ಏಕದಿನ ಪಂದ್ಯಗಳಲ್ಲಿ ಅತಿ ವೇಗದ ದ್ವಿಶತಕ ದಾಖಲಾಗಿದ್ದುದು ವೀರೇಂದ್ರ ಸೆಹ್ವಾಗ್ ಹೆಸರಿನಲ್ಲಿ. ಕ್ಯಾನ್‌ಬೆರಾದಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 147 ಎಸೆತಗಳಲ್ಲೇ ಆ ಗಡಿಯನ್ನು ದಾಟಿದ ಗೇಲ್ ಆ ದಾಖಲೆಯನ್ನೂ ಅಳಿಸಿಹಾಕಿದರು. 2015ರಲ್ಲಿ ಆ ಇನಿಂಗ್ಸ್ ಬಂದಾಗ ಗೇಲ್ ವಯಸ್ಸು 36 ವರ್ಷ. ವಿಂಡೀಸ್ ಪರವಾಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರೂ ಅವರೇ (10,480).

ಗೇಲ್‌ ವೇಗವಾಗಿ ಓಡಲಾರರು. ಅವರ ಯೌವನದ ದಿನಗಳಲ್ಲೂ ಪರಿಸ್ಥಿತಿ ಹಾಗೆಯೇ ಇತ್ತು. ಅದಕ್ಕೇ ಅವರು ಹಾರ್ಡ್ ಹಿಟಿಂಗ್ ಅನ್ನೇ ತಮ್ಮ ಆಟದ ಶೈಲಿಯಾಗಿಸಿಕೊಂಡದ್ದು. ಟೆಸ್ಟ್‌ ಪಂದ್ಯದ ಮೊದಲ ಎಸೆತವನ್ನು ವಿಶ್ವದ ಬೇರೆ ಯಾವ ಬ್ಯಾಟ್ಸ್‌ಮನ್ ಕೂಡ ಸಿಕ್ಸರ್‌ಗೆ ಅಟ್ಟಿಲ್ಲ. ಯಾವ ಪ್ರಕಾರದ ಆಟವಾಗಲಿ, ಹೊಡಿ-ಬಡಿ ಎನ್ನುವುದೇ ತಮ್ಮ ತಂತ್ರ ಎಂದುಕೊಂಡವರು ಆರಡಿಗೂ ಎತ್ತರದ ಈ ದೈತ್ಯ. 2007ರಲ್ಲಿ ಐಸಿಸಿ ವಿಶ್ವ ಟ್ವೆಂಟಿ20 ಕ್ರಿಕೆಟ್ ಟೂರ್ನಿ ಪ್ರಾರಂಭವಾಯಿತು. ಲಾರಾ ಏಕದಿನ ಪಂದ್ಯಗಳಿಗೆ ಗುಡ್‌ಬೈ ಹೇಳಿದ ವರ್ಷವೂ ಅದೇ. ದಕ್ಷಿಣ ಆಫ್ರಿಕಾ ವಿರುದ್ಧವೇ ವಿಂಡೀಸ್‌ನ ಮೊದಲ ಪಂದ್ಯ. ಗೇಲ್ 57 ಎಸೆತಗಳಲ್ಲಿ 117 ರನ್ ಗಳಿಸಿದರು. ಹತ್ತು ಸಿಕ್ಸರ್‌ಗಳನ್ನು ಆ ಇನಿಂಗ್ಸ್ ಒಳಗೊಂಡಿತ್ತು. ಆಡಿದ ಮೊದಲ ಚುಟುಕು ಪಂದ್ಯದಲ್ಲೇ ಶತಕ ಗಳಿಸಿ, ಅವರು ಇನ್ನೊಂದು ದಾಖಲೆ ಬರೆದರು. ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿ ಶುರುವಾದಾಗ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಅವರನ್ನು ದೊಡ್ಡ ಮೊತ್ತಕ್ಕೆ ಹರಾಜಿನಲ್ಲಿ ಪಡೆದುಕೊಂಡಿತು. ಅಂದುಕೊಂಡಷ್ಟು ಚೆನ್ನಾಗಿ ಅವರು ಆಡಲಿಲ್ಲ. 2011ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡ ಮೇಲೆ ಅದೃಷ್ಟ ಬದಲಾಯಿತು. 332 ಎಸೆತಗಳಲ್ಲಿ 608 ರನ್‌ಗಳನ್ನು ಆ ವರ್ಷ ಗೇಲ್ ಕಲೆಹಾಕಿದರು. ಅದರ ನಂತರದ ವರ್ಷ 708 ರನ್ ಜಮೆ ಮಾಡಿ, ಫಾರ್ಮ್ ಮುಂದುವರಿಸಿದರು. 2014ರಲ್ಲಿ ಮತ್ತೆ ವೈಫಲ್ಯ. 2015ರಲ್ಲಿ 491 ರನ್‌ಗಳನ್ನು ಐಪಿಎಲ್‌ನಲ್ಲಿ ಗಳಿಸಿದರು. ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ಅವರ ಮೇಲೆ ಭರವಸೆ ಇಟ್ಟಿದೆ. ಕಳೆದ ಋತುವಿನಲ್ಲಿ 319 ಎಸೆತಗಳಲ್ಲಿ 490 ರನ್‌ ಗಳಿಸಿ ವಯಸ್ಸಾದಷ್ಟೂ ತಾವು ಪ್ರಭಾವಿ ಎನ್ನುವುದನ್ನು ಗೇಲ್ ಸಾಬೀತುಪಡಿಸಿದ್ದರು. ಎರಡು ಮೂರು ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಗೆಲುವನ್ನು ಒಬ್ಬರೇ ನಿಂತು ದಕ್ಕಿಸಿಕೊಟ್ಟಿದ್ದರು.

ಇಂಗ್ಲೆಂಡ್‌ನಲ್ಲಿ ಮೊದಲು ವೃತ್ತಿಪರ ಕ್ರಿಕೆಟ್ ಶುರುವಾದಾಗ 1871ರಲ್ಲಿ ಡಬ್ಲ್ಯುಜಿ ಗ್ರೇಸ್ ತಮ್ಮದೇ ನೆಲದಲ್ಲಿ ಹೆಸರುವಾಸಿಯಾಗಿದ್ದರು. ಯಾಕೆಂದರೆ, 23 ವರ್ಷ ತುಂಬುವಷ್ಟರಲ್ಲಿ ಹತ್ತು ಶತಕಗಳು ಅವರ ಬ್ಯಾಟ್‌ನಿಂದ ಹೊಮ್ಮಿದ್ದವು. ಮೊದಲ 17 ಶತಕಗಳಲ್ಲಿ ಅವರದ್ದೇ ಅಷ್ಟೊಂದು ಎನ್ನುವುದು ಆ ಕಾಲಘಟ್ಟದಲ್ಲಿ ದೊಡ್ಡ ಸುದ್ದಿ. ಸಸೆಕ್ಸ್ ವಿರುದ್ಧ 104 ರನ್ ಗಳಿಸಿ ಗ್ಲೌಸೆಸ್ಟರ್ ತಂಡಕ್ಕೆ ಜೀವಾನಿಲವೆಂಬಂತೆ ಇಂಗ್ಲೆಂಡ್‌ನ ಗ್ರೇಸ್ ಆಡಿದಾಗ 50ನೇ ಶತಕ ಅವರ ಬ್ಯಾಟ್‌ನಿಂದ ದಾಖಲಾಯಿತು. 1876ರ ಹೊತ್ತಿಗೆ ಅಂಥದೊಂದು ಸಾಧನೆಯನ್ನು ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಾಡಿದ್ದರು. ಶತಕ ಗಳಿಸುವುದು ಕ್ರಿಕೆಟ್ ಪ್ರಾರಂಭವಾದ ಶತಮಾನದಲ್ಲಿ ಹೆಮ್ಮೆಯ ಸಂಗತಿಯಾಗಿತ್ತು. ಇವತ್ತಿಗೂ ಆ ವಿಷಯದಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಟ್ವೆಂಟಿ20 ಕ್ರಿಕೆಟ್‌ನಲ್ಲಿ ಶತಕ ದಾಖಲಿಸುವುದು ಕಷ್ಟವೇ ಸರಿ. ಗೇಲ್ ಇದುವರೆಗೆ ಐಪಿಎಲ್‌ನಲ್ಲೇ ಆರು ಶತಕಗಳನ್ನು ಕಲೆಹಾಕಿದ್ದಾರೆ. ಗ್ರೇಸ್‌ ಬ್ಯಾಟ್ಸ್‌ಮನ್‌ಷಿಪ್ ರೀತಿಯೂ ಗೇಲ್ ಆಟಕ್ಕೂ ಅಜಗಜಾಂತರ. 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಬರೀ 31 ಎಸೆತಗಳಲ್ಲಿ ನೂರು ರನ್‌ಗಳ ಗಡಿ ದಾಟಿ, ಆಮೇಲೆ 175ರ ವರೆಗೆ ಮೊತ್ತ ಹಿಗ್ಗಿಸಿ, ಔಟಾಗದೆ ಉಳಿದ ಇನಿಂಗ್ಸ್‌ ಅನ್ನು ಮರೆಯಲಾಗದು. ಆರ್‌ಸಿಬಿ ಕೂಡ ಅದನ್ನು ಮರೆಯುವುದಿಲ್ಲ. 66 ಎಸೆತ, 13 ಬೌಂಡರಿ, 17 ಸಿಕ್ಸರ್-ಇದು ಆ ಇನಿಂಗ್ಸ್‌ನ ವೈಶಿಷ್ಟ್ಯ.

ಈಗ ಕೆ.ಎಲ್. ರಾಹುಲ್ ಕಿಂಗ್ಸ್‌ ಇಲೆವೆನ್ ತಂಡದ ನಾಯಕ. ಅವರ ಆಟ ಕೂಡ ಗ್ರೇಸ್ ಆಡುತ್ತಿದ್ದಂತೆಯೇ ಇದೆ. ವಿರಾಟ್‌ ಕೊಹ್ಲಿ ಹೇಗೆ ಬೌಂಡರಿಗಳನ್ನು ಗಳಿಸುತ್ತಾ, ಆಗೀಗ ಸಿಕ್ಸರ್ ಹೊಡೆಯುವರೋ ಹಾಗೆ. ಇಂತಹ ನಾಯಕ ಸೂಪರ್‌ಓವರ್‌ನಲ್ಲಿ ಮತ್ತೆ ನಲವತ್ತೊಂದರ ಗೇಲ್‌ ಕೈಗೇ ಮೊನ್ನೆ ಮೊನ್ನೆ ಬ್ಯಾಟ್‌ ಕೊಟ್ಟು ಕಳುಹಿಸಬೇಕಾಯಿತು. ಟ್ರೆಂಟ್ ಬೌಲ್ಟ್ ಹಾಕಿದ ಫುಲ್‌ಟಾಸನ್ನು ಸಿಕ್ಸರ್‌ಗೆ ಎತ್ತಿ, ತಂಡವನ್ನು ಗೆಲುವಿನ ಹಳಿ ಮೇಲೆ ತಂದು ನಿಲ್ಲಿಸಿ ಮತ್ತೆ ಈ ದೈತ್ಯ ನಕ್ಕರು. ಅದಕ್ಕೂ ಮೊದಲು ಅವರಿಗೆ ಸಿಟ್ಟು ಬಂದಿತ್ತಂತೆ. ಚೆನ್ನಾಗಿ ಆಡಿಯೂ ಈ ಬಾರಿ ಐಪಿಎಲ್‌ನ ಮೊದಲರ್ಧದಲ್ಲಿ ಸೋಲುಗಳನ್ನೇ ಹೆಚ್ಚಾಗಿ ಕಂಡ ಪಂಜಾಬ್‌ಗೆ ಈಗ ಗೇಲ್ ಇಂಧನದಂತೆ ಕಾಣುತ್ತಿದ್ದಾರೆ. ಮೂರು ಪಂದ್ಯಗಳಲ್ಲಿ ಅವರು 106 ರನ್‌ಗಳನ್ನು ಗಳಿಸಿದ್ದರೂ ಟ್ರೇಡ್‌ ಮಾರ್ಕ್ ಸಿಕ್ಸರ್‌ಗಳು ಕಾಣಸಿಗುತ್ತಿವೆ. ಹಿಂದೊಮ್ಮೆ ಅವರು ಆಸ್ಟ್ರೇಲಿಯಾದ ಬ್ರೆಟ್‌ ಲೀ ಎಸೆತವನ್ನು ಸಿಕ್ಸರ್‌ಗೆ ಎತ್ತಿದಾಗ ಚೆಂಡು ಓವಲ್ ಕ್ರೀಡಾಂಗಣದ ಹೊರಗಿದ್ದ ಲಾರ್ಡ್‌ ಟೆನಿಸನ್ ಸ್ಕೂಲ್‌ ಬಳಿಗೆ ಹೋಗಿ ಬಿದ್ದಿತ್ತು. ಅದಕ್ಕೇ ಮಕ್ಕಳಿಗೆ ಅವರ ಆಟವೆಂದರೆ ಇಷ್ಟ. ಐಪಿಎಲ್‌ನಲ್ಲಿ ಇದುವರೆಗೆ 335 ಸಿಕ್ಸರ್‌ಗಳನ್ನು ಹೊಡೆದಿರುವ ಅವರು ತಮ್ಮನ್ನು ತಾವು 'ಯೂನಿವರ್ಸ್ ಬಾಸ್' ಎಂದು ಕರೆದುಕೊಳ್ಳುವುದನ್ನು ನಿರ್ಲಜ್ಜೆಯ ಸಂಕೇತ ಎಂದುಕೊಳ್ಳಲಾಗದು; ಅದು ಆತ್ಮವಿಶ್ವಾಸದ ರುಜು.

(ಮಾಹಿತಿ ಕೃಪೆ ಪ್ರಜಾವಾಣಿ) 

 

ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ 54,044 ಮಂದಿಗೆ ಕೊರೊನಾ, 717 ಸಾವು..!

 


ನವದೆಹಲಿ/ಮುಂಬೈ, ಅ.21-ಭಾರತದಲ್ಲಿ ಕೊರೊನಾ ವೈರಸ್‍ನ ಹಾವಳಿಯ ಏರಿಳಿತ ಮುಂದುವರಿದಿದ್ದರೂ, ಹೆಮ್ಮಾರಿಯ ಆರ್ಭಟ ಗರಿಷ್ಠಕ್ಕೇರಿ ಇಳಿಮುಖವಾಗುತ್ತಿರುವ ಸ್ಪಷ್ಟ ಸೂಚನೆಗಳು ಕಂಡುಬರುತ್ತಿವೆ. ನಿನ್ನೆ ಮತ್ತೆ ಹೊಸ ಪ್ರಕರಣಗಳಲ್ಲಿ ತುಸು ಏರಿಕೆ ಕಂಡುಬಂದಿದ್ದರೂ, ಸತತ ಮೂರನೇ ದಿನ 60,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳು ವರದಿಯಾಗಿವೆ. ಅಲ್ಲದೆ, ಸತತ ಐದನೆ ದಿನವೂ ಸಕ್ರಿಯ ಸೋಂಕು ಪ್ರಕರಣಗಳು 8 ಲಕ್ಷಕ್ಕಿಂತ ಕಡಿಮೆ ಮಟ್ಟದಲ್ಲಿ ಇಳಿಮುಖದತ್ತ ಸಾಗಿದೆ. ಇದೇ ವೇಳೆ ಸಾವಿನ ಪ್ರಮಾಣ ಕೊಂಚ ಏರಿಕೆ ಗೋಚರಿಸಿದೆ.

24 ತಾಸುಗಳ ಅವಧಿಯಲ್ಲಿ 54,044 ಮಂದಿಗೆ ಹೊಸದಾಗಿ ರೋಗ ಕಾಣಿಸಿಕೊಂಡಿದೆ. ಮೊನ್ನೆ 46,760 ಹೊಸ ಕೇಸ್‍ಗಳು ದಾಖಲಾಗಿತ್ತು. ಮೂರು ತಿಂಗಳ ಬಳಿಕ ಇಷ್ಟು ಪ್ರಮಾಣದಲ್ಲಿ ಹೊಸ ಪ್ರಕರಣಗಳು ತಗ್ಗಿರುವುದು ಇದೇ ಮೊದಲು. ಭಾನುವಾರ 55,722ರಷ್ಟು ಕೇಸ್ ವರದಿಯಾಗಿತ್ತು. ದಿನನಿತ್ಯದ ಪಾಸಿಟಿವ್ ಕೇಸ್‍ಗಳಲ್ಲಿ ಸತತ ಮೂರನೆ ದಿನ 60,000ಕ್ಕಿಂತ ಕಡಿಮೆ ವರದಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಇದೇ ವೇಳೆ ದಿನನಿತ್ಯದ ಸಾವು ಪ್ರಕರಣಗಳಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, 24 ತಾಸುಗಳ ಅವಧಿಯಲ್ಲಿ 717 ಮಂದಿ ಸೋಂಕು ರೋಗಕ್ಕೆ ಬಲಿಯಾಗಿದ್ದಾರೆ. ಮೊನ್ನೆ 587 ರೋಗಿಗಳನ್ನು ಹೆಮ್ಮಾರಿ ಆಪೋಶನ ತೆಗೆದುಕೊಂಡಿತ್ತು. ಇವುಗಳ ನಡುವೆಯೂ ದೇಶದಲ್ಲಿ ಸೋಂಕಿತರ ಪ್ರಮಾಣ 76.51 ಲಕ್ಷ ಮತ್ತು ಮೃತರ ಸಂಖ್ಯೆ 1.16 ಲಕ್ಷ ದಾಟಿರುವುದು ಜನರಲ್ಲಿ ಭಯಾಂತಕ ಮುಂದುವರಿಯುವಂತೆ ಮಾಡಿದೆ.

ಈವರೆಗೆ ಗುಣಮುಖರಾದ ಸೋಂಕಿತರ ಸಂಖ್ಯೆ 67.95 ಲಕ್ಷ ದಾಟಿದೆ. ಚೇತರಿಕೆ ಪ್ರಮಾಣ ಶೇ.88.810ರಷ್ಟು ಏರಿಕೆ ಮತ್ತು ಸಾವಿನ ಪ್ರಮಾಣ ಶೇ.1.51ರಷ್ಟು ತಗ್ಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ. ದೇಶದಲ್ಲಿ ಮೃತರ ಸಂಖ್ಯೆ 1,15,924 ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಒಟ್ಟು ರೋಗಿಗಳ ಸಂಖ್ಯೆ 76,51,107ರಷ್ಟಿದ್ದು, ನಾಳೆ ವೇಳೆಗೆ 77 ಲಕ್ಷ ದಾಟಲಿದೆ.

ಆಗಸ್ಟ್ 7ರಂದು 20 ಲಕ್ಷ ಇದ್ದ ಪಾಸಿಟಿವ್ ಪ್ರಕರಣಗಳು ಆ.23ಕ್ಕೆ 30 ಲಕ್ಷಕ್ಕೇರಿತ್ತು. ನಂತರ ಸೆಪ್ಟೆಂಬರ್ 5ರಂದು 40 ಲಕ್ಷ ದಾಟಿತ್ತು. ಕೇವಲ 11 ದಿನಗಳಲ್ಲಿ ಅಂದರೆ ಸೆ.16ರಂದು 50 ಲಕ್ಷ ದಾಟಿದೆ. ಸೆ.28ರಂದು 60 ಲಕ್ಷ ಮೀರಿದೆ. ಅ.11ರಂದು 70 ಲಕ್ಷ ತಲುಪಿದೆ. ಇನ್ನೆರಡು ದಿನಗಳಲ್ಲಿ 80 ಸಾವಿರ ತಲುಪುವ ಆತಂಕವೂ ಇದೆ. 45 ದಿನಗಳ ಬಳಿ ಕಳೆದ ನಾಲ್ಕು ದಿನಗಳಿಂದ 8 ಲಕ್ಷಕ್ಕಿಂತ ಕಡಿಮೆ ಇಳಿದಿದ್ದು, ನಿನ್ನೆ 7,40,090 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಇಂದು ಬೆಳಗ್ಗೆಯಿಂದಲೂ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಮತ್ತು ಸಾವಿನ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಹಾರಾಷ್ಟ್ರ ರಾಜ್ಯವು ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ ಈ ಮಧ್ಯೆ ಐಸಿಎಂಆರ್ ದೇಶಾದ್ಯಂತ ನಿನ್ನೆ 10.83 ಲಕ್ಷ ಮಂದಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದ್ದು, ಈವರೆಗೆ 9.72 ಜನರನ್ನು ಕೋವಿಡ್-19 ಸ್ಯಾಂಪಲ್ ಟೆಸ್ಟ್‍ಗೆ ಒಳಪಡಿಸಲಾಗಿದೆ.

(ಮಾಹಿತಿ ಕೃಪೆ ಈ ಸಂಜೆ)