WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, May 29, 2021

BIG NEWS: ರಾಜ್ಯದಲ್ಲಿ 1,100 ಜನರಲ್ಲಿ ಬ್ಲಾಕ್ ಫಂಗಸ್ ಪತ್ತೆ..!

 

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಆರ್ಭಟದ ನಡುವೆಯೇ ದಿನದಿಂದ ದಿನಕ್ಕೆ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, 1,100 ಜನರಲ್ಲಿ ಕಪ್ಪು ಶಿಲೀಂದ್ರ ಸೋಂಕು ಪತ್ತೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ, ರಾಜ್ಯದಲ್ಲಿ 1,100 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ. ಸೋಂಕಿತರಿಗೆ ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೂ ಔಷಧ ವ್ಯವಸ್ಥೆ ಮಾಡಲಾಗಿದೆ ಎಂದರು.

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿದೆ, ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಕೂಡ ನಡೆದಿದೆ. ಇನ್ನು ಅನ್ ಲಾಕ್ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಲಾಕ್ ಡೌನ್ ಬಳಿಕ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ಲಾಕ್ ಡೌನ್ ವಿಸ್ತರಣೆ ಬಗ್ಗೆ ಪರಿಸ್ಥಿತಿ ನೋಡಿ ನಿರ್ಧರಿಸಲಾಗುವುದು ಎಂದು ಹೇಳಿದರು.

(ಮಾಹಿತಿ ಕೃಪೆ ಕನ್ನಡದುನಿಯಾ)

ಶ್ರೀಲಂಕಾ ಕರಾವಳಿ ತೀರಗಳಲ್ಲಿ ಆಸಿಡ್ ಮಳೆ..!

 

ಕೊಲಂಬೋ,ಮೇ.29-ಕಳೆದ ವಾರ ಕೊಲಂಬೊ ಸಮುದ್ರ ತೀರದಲ್ಲಿ ಸಿಂಗಾಪೂರ್‍ನ ಸರಕು ಸಾಗಾಣೆ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನೈಟ್ರೋಜನ್ ಡೈ ಆಕ್ಸೆಡ್ ಹೊರಸೂಸಿರುವುದರಿಂದ ಸಮೀಪದ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದ ಆಸಿಡ್ ಮಳೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಹೀಗಾಗಿ ಕೊಲಂಬೊ ಸುತ್ತಮುತ್ತಲಿನ ಜನ ಎಚ್ಚರಿಕೆ ವಹಿಸಬೇಕು ಎಂದು ಶ್ರೀಲಂಕಾ ಪರಿಸರ ಇಲಾಖೆ ಕರೆ ನೀಡಿದೆ.ಗುಜರಾತ್‍ನ ಹಜೀರಾದಿಂದ ಕೆಮಿಕಲ್ ಹಾಗೂ ಕಾಸ್ಮೇಟಿಕ್ ಕಚ್ಚಾ ವಸ್ತುಗಳನ್ನು ಕೊಲಂಬೊ ತರುತ್ತಿದ್ದ ಸಿಂಗಾಪೂರ್‍ನ ಎಂವಿ ಎಕ್ಸ್‍ಪ್ರೆಸ್ ಪರ್ಲ್ ಹಡಗಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು.

ಹಡಗಿನ ಟ್ಯಾಂಕಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಇತ್ತು. ಇದರ ಜತೆಗೆ 1486 ಟ್ಯಾಂಕರ್‍ಗಳಲ್ಲಿ ನೈಟ್ರಿಕ್ ಆಸಿಡ್ ಸಾಗಿಸಲಾಗುತಿತ್ತು. ಹೀಗಾಗಿ ಬೆಂಕಿ ಕಾಣಿಸಿಕೊಂಡಾಗ ನೈಟ್ರೋಜನ್ ಆಸಿಡ್ ಹೊರಸೂಸಿದೆ.

ಮಳೆಯಾಗುತ್ತಿದ್ದಾಗ ಅನಿಲ ಸೋರಿಕೆಯಾಗಿರುವುದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಆಸಿಡ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಜನ ಎಚ್ಚರ ವಹಿಸಬೇಕು ಎಂದು ಸಮುದ್ರ ಪರಿಸರ ರಕ್ಷಣಾ ಪ್ರಾಧಿಕಾರದ ಮುಖ್ಯಸ್ಥ ದಾರ್ಶನಿ ಲಹಂಡಾಪುರ್ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಈ ಸಂಜೆ)

RBI ಬಿಡುಗಡೆ ಮಾಡ್ತಿರುವ 100 ರೂ. ನೋಟಿನಲ್ಲೇನಿದೆ ವಿಶೇಷ..? ಇಲ್ಲಿದೆ ಈ ಕುರಿತ ಮಾಹ


ಭಾರತೀಯ ರಿಸರ್ವ್ ಬ್ಯಾಂಕ್, ಹೊಸ 100 ರ ನೋಟು ಹೊರ ತರಲು ನಿರ್ಧರಿಸಿದೆ. ಹೊಸ ನೋಟು ಹೊಳೆಯಲಿದ್ದು, ತುಂಬಾ ಬಾಳಿಕೆ ಬರಲಿದೆ. ವಾರ್ನಿಷ್ ಹೊಂದಿರುವ ಈ ನೋಟುಗಳನ್ನು ಮೊದಲು ಪ್ರಯೋಗಾರ್ಥ ಬಿಡುಗಡೆ ಮಾಡಲಾಗುವುದು. ನಂತ್ರ ದೊಡ್ಡ ಪ್ರಮಾಣದಲ್ಲಿ ಇದನ್ನು ಬಿಡುಗಡೆ ಮಾಡಲಾಗುವುದು.

ಆರ್ಬಿಐ ತನ್ನ ವಾರ್ಷಿಕ ವರದಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ವಾರ್ನಿಷ್ ಬಣ್ಣದಿಂದಾಗಿ ಹೊಸ ನೋಟು ನೀರಿನಲ್ಲಿ ಹರಿದು ಹೋಗುವುದಿಲ್ಲ, ಹಾಳಾಗುವುದಿಲ್ಲವೆಂದು ಹೇಳಿದೆ. ರಿಸರ್ವ್ ಬ್ಯಾಂಕ್ ಪ್ರತಿವರ್ಷ ಲಕ್ಷ ಕೋಟಿ ಮೌಲ್ಯದ ಮಣ್ಣಾದ ಅಥವಾ ಹರಿದ ನೋಟುಗಳನ್ನು ಬದಲಾಯಿಸುತ್ತದೆ. ಈ ಸಮಸ್ಯೆಯನ್ನು ತೊಡೆದುಹಾಕಲು ವಿಶ್ವದ ಅನೇಕ ದೇಶಗಳು ಪ್ಲಾಸ್ಟಿಕ್ ನೋಟುಗಳನ್ನು ಬಳಸುತ್ತಿವೆ. ದೃಷ್ಟಿಹೀನರು ಕೂಡ ಈ ನೋಟುಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ಆರ್ಬಿಐ ಹೇಳಿದೆ.

ವಾರ್ಷಿಕ ವರದಿಯಲ್ಲಿ 100 ರೂಪಾಯಿ ನೋಟಿನ ಜೊತೆಗೆ ಇನ್ನೂ ಕೆಲ ವಿಷ್ಯಗಳನ್ನು ಆರ್ಬಿಐ ಹೇಳಿದೆ. ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಆರ್ಬಿಐ ಹೇಳಿದೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಗಂಗಾವತಿ:- ಕೋವಿಡ್ ಮಾಹಿತಿ ಹೇಳಲು ಹೋದ ಆಶಾ ಕಾರ್ಯಕರ್ತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಿಂದನೆ

 

ಗಂಗಾವತಿ: ಕೋವಿಡ್ ಪಾಜಿಟೀವ್ ಕುರಿತು ಮಾಹಿತಿ ಹೇಳಲು ಮನೆಯ ಹತ್ತಿರ ಹೋದ ಆಶಾ ಕಾರ್ಯಕರ್ತೆರ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ನಗರಠಾಣೆ ಪೊಲೀಸರು ವಶಕ್ಕೆ ಪಡೆದ ಘಟನೆ ಹಿರೇಜಂತಗಲ್ ಸ್ವಾಗತ ರೈಸ್ ಪ್ರದೇಶದಲ್ಲಿ ಶನಿವಾರ ಮಧ್ಯಹ್ನ ಜರುಗಿದೆ.

ಸಂಗಮೇಶ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ. ಸಂಗಮೇಶ ಕುಟುಂಬದಲ್ಲಿ ಪಾಜಿಟೀವ್ ಬಂದ ಮಾಹಿತಿಯನ್ನು ಕೊಡಲು ಮನೆಯ ಹತ್ತಿರ ತೆರಳಿದ್ದ ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಅನ್ನಪೂರ್ಣ,ಗೌಸಿಯಾ ಇವರನ್ನು ಸಂಗಮೇಶ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಸ್ಥಳೀಯರು ಮಧ್ಯೆ ಪ್ರವೇಶ ಮಾಡಿ ಬಿಡಿಸಿಕೊಂಡಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಸಂಚಾರಿ ಪಿಐ ಸುವಾರ್ತಾ ಹಾಗೂ ಪೊಲೀಸ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಸಂಗಮೇಶ ಇವರನ್ನು ವಶಕ್ಕೆ ಪಡೆದಿದ್ದಾರೆ.

                                 

ಆಗ್ರಹ:ಕೊರೊನಾ ಸಂಕಷ್ಟದಲ್ಲಿ ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದು ಸಂಗಮೇಶ ಎಂಬ ವ್ಯಕ್ತಿ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ.ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಪೊಲೀಸ ಠಾಣೆಗೆ ದೂರು ನೀಡಲಾಗುತ್ತದೆ ಎಂದು ಆಶಾಕಾರ್ಯಕರ್ತೆ ಲಕ್ಷ್ಮಿದೇವಿ ತಿಳಿಸಿದ್ದಾರೆ

(ಮಾಹಿತಿ ಕೃಪೆ ಉದಯವಾಣಿ)

ಸಿಡಿ ಪ್ರಕರಣದಲ್ಲಿ ಆರೋಪಿ ರಕ್ಷಣೆಗೆ ಮುಂದಾಗಿರುವ ಸರಕಾರದ ನಡೆಯನ್ನು ಖಂಡಿಸುತ್ತೇವೆ:ಉಮಾಶ್ರೀ

 

ಬನಹಟ್ಟಿ: ಸಿಡಿ ಬಹಿರಂಗ ಪ್ರಕರಣದಲ್ಲಿ ರಮೇಶ ಜಾರಕಿಹೊಳಿಯವರನ್ನು ಈ ಕೂಡಲೇ ಬಂಧಿಸಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಗೆ ನ್ಯಾಯ ಕೊಡಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಸೇರಿದಂತೆ ಪಕ್ಷದ ವಕ್ತಾರಳಾದ ನಾನು ಒತ್ತಾಯಿಸುವುದಾಗಿ ಮಾಜಿ ಸಚಿವೆ, ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರಾದ ಉಮಾಶ್ರೀ ಹೇಳಿದರು.

ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸಿಡಿ ಪ್ರಕರಣದ ಸಂತ್ರಸ್ಥೆ ತನ್ನ ಮೇಲೆ ಅತ್ಯಾಚಾರ ಆಗಿದೆ. ನನ್ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅನ್ನುವ ಆರೋಪ ಮಾಡಿದ್ದಾಳೆ. ಆಕೆ ತನಗೆ ಆದ ಅನ್ಯಾಯವನ್ನು ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾಳೆ. ಅದಕ್ಕೂ ಮೊದಲೂ ಸಿಡಿ ಬಿಡುಗಡೆ ಆದಾಗ ಮಂತ್ರಿಗಳಾದಂತವರು ಇದು ನನ್ನನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಸರು ಕೆಡಿಸಲು, ವಿರೋಧಿಗಳು ಮಾಡುತ್ತಿದ್ದಾರೆ. ಸಿಡಿಯಲ್ಲಿ ಇರುವುದು ನಾನಲ್ಲ. ಆಕೆಯ ಪರಿಚಯವಿಲ್ಲ, ನಾನು ಆಕೆಯನ್ನು ಭೇಟಿ ಮಾಡಿಲ್ಲ ಎಂದೆಲ್ಲಾ ಹೇಳಿದರು. ಇದಾದ ನಂತರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಿತು. ಆಕೆ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆ ನೀಡಿದಳು, ಅಲ್ಲದೇ ಎಸ್‌ಐಟಿ ಮುಂದೆ ತನ್ನ ಲಿಖಿತ ಹೇಳಿಕೆ ನೀಡಿದ್ದಾಯಿತು. ಈ ಕಡೆ ಗೃಹ ಮಂತ್ರಿಗಳೇ ಹೇಳಿರುವಂತೆ ಆಕೆ ಬಂದು ದೂರು ಕೊಟ್ಟರೆ ಎಫ್‌ಐರ್ ದಾಖಲಿಸುತ್ತೇವೆ ಎಂದಿದ್ದರು. ಅದರಂತೆ ಸೆಕ್ಸೆನ್ 376 ಅಡಿಯಲ್ಲಿ ಎಫ್‌ಐರ್ ದಾಖಲಾಗಿದೆ. ಎಫ್‌ಐಆರ್ ದಾಖಲಾದ ನಂತರ ಅತ್ಯಾಚಾರದ ಆರೋಪವನ್ನು ಹೊತ್ತಿರುವ ಆರೋಪಿ ಯಾವುದೇ ಕಾರಣಕ್ಕೂ ಬಹಿರಂಗವಾಗಿ ಒಡಾಡಲು ಸಾಧ್ಯವಿಲ್ಲ. ಸಾಮಾನ್ಯದವರಾದರೆ ಕೂಡಲೇ ಬಂದಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಅವರನ್ನು ಬಂಧಿಸಿಲ್ಲ ಏಕೆ ತಿಳಿಯಲಿಲ್ಲ. ಅದಕ್ಕೆ ಕೊರೋನಾ ಕಾರಣ ನೀಡಿದ್ದರು. ಅದಾದ ನಂತರವು ಅವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಆದರೂ ಪೊಲೀಸರು ಅವರನ್ನು ಬಂಧಿಸುತ್ತಿಲ್ಲ. ಇದೆಲ್ಲವನ್ನು ನೋಡಿದಾಗ ಸರಕಾರ ಅವರ ರಕ್ಷಣೆಗೆ ನಿಂತಿದೆ ಎನ್ನುವ ಅನುಮಾನ ಉಂಟಾಗಿದೆ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಉಮಾಶ್ರೀ ಹೇಳಿದರು.

ಒಬ್ಬ ಜನ ಪ್ರತಿನಿಧಿಗಳು, ಸಮಾಜ ಸೇವಕರು ಹೇಳಿದ ಮಾತಿಗೆ ಬದ್ಧರಾಗಿರಬೇಕು. ಆರೋಪಿ ಸ್ಥಾನದಲ್ಲಿರುವಂತಹವರು ಕಾಂಗ್ರೆಸ್ ಹಾಗೂ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲೆ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡಿದರು. ಆ ಸಂತ್ರಸ್ಥೆಯ ಕುಟುಂಬದವರ ಮೇಲೆ ಒತ್ತಡ ಹಾಕಿ ಸಹೋದರನಿಂದ ಹೇಳಿಕೆ ಕೊಡಿಸುವ ಒತ್ತಡ ಹಾಕಿದರು. ಈಗ ಅದೇ ಸಂತ್ರಸ್ಥೆಯ ಕುಟುಂಬಕ್ಕೆ ಎಸ್‌ಐಟಿಯಿಂದ ನೋಟೀಸ್ ಕಳುಹಿಸಿ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂದು ಸಿಡಿಯಲ್ಲಿ ಇರುವುದು ನಾನಲ್ಲ ಎಂದು ಹೇಳಿರುವ ಆರೋಪಿ ಸ್ಥಾನದಲ್ಲಿರುವ ಮಹನೀಯರು ಇವತ್ತು ಹೇಗೆ ಆ ಸಿಡಿಯಲ್ಲಿರುವುದು ನಾನೇ, ಅವಳು ಅವಳೇ ಎನ್ನುತ್ತಿರುವುದು ನೋಡಿದರೆ ಇಷ್ಟು ದಿನ ಹೇಳಿದ್ದು ಬರೀ ಸುಳ್ಳು, ಆಕೆಯೊಂದಿಗೆ ಸಂಪರ್ಕ ಇದ್ದದು ನಿಜ, ಆಕೆಯೊಂದಿಗೆ ದುರುಪಯೋಗ ಮಾಡಿಕೊಂಡಿರುವುದು ನಿಜ. ಈಗ ಅವರು ಪರಸ್ಪರ ಒಪ್ಪಿಗೆ ಮೇರೆಗೆ ದೈಹಿಕ ಸಂಬಂಧಗಳನ್ನು ಮಾಡಿದ್ದೇವೆ ಎಂಬ ಮಾತನ್ನು ಆಡಿದ್ದಾರೆ. ಅವರು ಆಡಿದ ಮಾತಿಗೆ ಬದ್ದತೆಯಿಲ್ಲ. ತಪ್ಪು ಮಾಡಿದ್ದಾರೆ ಎಂದು ಅವರು ಮನಸ್ಸಿಗೆ ಗೊತ್ತಿದೆ ಎಂದರು.

ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನುನೂ ಇದೆ. ಸಣ್ಣವರು ಯಾವುದೋ ಒಂದು ತಪ್ಪ ಮಾಡಿದರೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ಕ್ರಮ ತೆಗದುಕೊಳ್ಳುತ್ತಾರೆ. ಆದರೆ ಈಗ ಯಾಕೆ ಚಾರ್ಜಶೀಟ್ ಹಾಕುತ್ತಿಲ್ಲ, ಇಂತಹ ಪ್ರಕರಣಗಳು 60 ರಿಂದ 90 ದಿನಗಳೊಳಗಾಗಿ ಮುಗಿಯಬೇಕು. ಆದರೆ 60 ದಿನಗಳು ಕಳೆದು ಹೋದರೂ ಸರಕಾರ ವಿಶೇಷ ತನಿಖಾದಳದ ಅಧಿಕಾರಿಗಳನ್ನು ರಜೆಯ ಮೇಲೆ ಮನೆಗೆ ಕಳುಹಿಸಿದ್ದಾರೆ. ಇದರ ಅರ್ಥ ಆರೋಪಿಯ ರಕ್ಷಣೆಗೆ ಸರಕಾರವೇ ಮುಂದಾಗಿದೆ ಎಂದು ಆರೋಪಿಸಿದರು.

ಪ್ರತಿಬಾರಿ ಏನೇ ನಡೆದರೂ ಕಾಂಗ್ರೆಸ್ ಮೇಲೆ ಗೂಭೆ ಕೂಡ್ರಿಸುವ ಕೆಲಸ ನಡೆದಿದೆ. ಈ ಪ್ರಕರಣದಲ್ಲಿಯೂ ಅದೇ ರೀತಿ ಆಗಿದೆ. ನಮ್ಮ ರಾಜ್ಯದಲ್ಲಿ ರಾಜಕೀಯ ಒತ್ತಡದಿಂದ ಪೊಲೀಸ್‌ರ ಕೈ ಕಟ್ಟಿ ಹಾಕಿದಂತಾಗಿದೆ. ಅವರಿಗೆ ಸ್ವಾತಂತ್ರö್ಯ ಕೊಟ್ಟಿದ್ದರೆ ಇಷ್ಟೋತ್ತಿಗೆ ತಪ್ಪಿತಸ್ಥರನ್ನು ಪೊಲೀಸರು ಬಂದಿಸುತ್ತಿದ್ದರು. ಅವರು ಕೆಲಸ ಮಾಡಲು ಸಾಧ್ಯ ಆಗದೇ ಇರುವ ವ್ಯವಸ್ಥೆ ಇಂದು ನಡೆಯುತ್ತಿದೆ. ಆರೋಪ ಹೊತ್ತಿರುವ ಮಂತ್ರಿಗಳು ಗೃಹ ಮಂತ್ರಿಗಳನ್ನು ಬೇಟ್ಟಿ ಮಾಡಿದ್ದಾರೆ. ಈ ಕುರಿತು ಗೃಹ ಮಂತ್ರಿಗಳು ವಿವರಣೆ ಕೊಡಬೇಕು. ಇಂತಹ ಪ್ರಕರಣದಲ್ಲಿ ಗೃಹಮಂತ್ರಿಗಳು ಇವರನ್ನು ಬಂದಿಸಲು ಆದೇಶ ನೀಡಿ ಬಂದಿಸಿದರೆ ಇವರ ವರ್ಚಸ್ಸು ಇನ್ನೂ ಹೆಚ್ಚಾಗುತ್ತದೆ. ಕಪ್ಪು ಚುಕ್ಕೆ ಬರುವುದಿಲ್ಲ. ಇತಿಹಾಸದಲ್ಲಿ ಉತ್ತಮ ಕೆಲಸ ಮಾಡಿದ ಗೃಹಮಂತ್ರಿ ಎಂಬ ಕೀರ್ತಿ ಇವರಿಗೆ ಸಲ್ಲುತ್ತದೆ. ಕಾರಣ ಅದು ಆಗಬೇಕು ಎಂದು ನಾವು ಒತ್ತಾಯಿಸುತ್ತೇವೆ.

ಡಿಎನ್‌ಎ ಟೆಸ್ಟ್ ಏಕೆ ಮಾಡಿಸಲಿಲ್ಲ: ಅತ್ಯಾಚಾರ ಪ್ರಕರಣದಲ್ಲಿ ಅಂತಹ ಆರೋಪವನ್ನು ಹೊತ್ತವರಿಂದ ಡಿಎನ್‌ಎ ಟೆಸ್ಟ್ ಆಗಲೇ ಬೇಕು ಎಂದು ಹೇಳಿ ಕಾನೂನಿನಲ್ಲಿ ಗಂಭೀರವಾಗಿ ಹೇಳಿದ್ದಾರೆ. ಯಾಕೆ ಅದು ಆಗಲಿಲ್ಲ? ತಮ್ಮ ಆರೋಪಿ ಅದರಲ್ಲಿ ಸಿಲುಕಿಕೊಂಡರೆ ಎನ್ನುವ ಆತಂಕ ಸರಕಾರಕ್ಕಿದೆಯೇ. ಒಬ್ಬ ಉನ್ನತ ಹುದ್ದೆಯಲ್ಲಿದ್ದವರು ಇಂತಹ ದೊಡ್ಡ ಅನ್ಯಾಯನ್ನು ಮಾಡಿದ್ದಾರೆ ಎಂದು ಪದೇ ಪದೇ ಮಹಿಳೆ ಹೇಳಿದರೂ ಅವರ ರಕ್ಷಣೆಗೆ ನೀವು ಬರದೇ ವ್ಯಕ್ತಿಯನ್ನು ರಕ್ಷಣೆ ಮಾಡುತ್ತೀರಿ ಎಂದರೆ ಕಾರಣ ಸ್ಪಷ್ಟವಾಗಿದೆ. ಏಕೆಂದರೆ ಅವರು ಪದೇ ಪದೇ ಹೇಳುವಂತೆ ನಾನು ಇಂತಹ ಸರಕಾರ ತರಬಲ್ಲೇ ಮತ್ತು ಕೆಡವು ಬಲ್ಲೇ ಎಂದು ಹೇಳಿದ್ದಾರೆ. ಕಾರಣ ಅವರು ಈ ಸರಕಾರ ಅಸ್ಥಿತ್ವಕ್ಕೆ ಬರಲು ಕಾರಣ ಅವರೇ ಎಂದು ಸರಕಾರಕ್ಕೆ ಗೊತ್ತಿರುವ ಕಾರಣ ಅಂತಹ ವ್ಯಕ್ತಿಯನ್ನು ರಕ್ಷಣೆ ಮಾಡುತ್ತಿರುವ ಸರಕಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಉಮಾಶ್ರೀ ಹೇಳಿದರು.

ನಮ್ಮ ಪಕ್ಷ, ವಿರೋಧ ಪಕ್ಷದ ನಾಯಕರು, ಅಧ್ಯಕ್ಷರು ನಮ್ಮ ಎಲ್ಲ ಶಾಸಕರು ಮತ್ತು ನಾಯಕರು ಒತ್ತಾಯಿಸುವುದೇನೆಂದರೆ ಈ ಕೂಡಲೇ ಅವರನ್ನು ಬಂಧಿಸುವುದರ ಜೊತೆಗೆ ಸರಕಾರ ರಚನೆಗೆ ಸಹಾಯ ಮಾಡಿದ ವ್ಯಕ್ತಿಯ ಋಣ ಸಂದಾಯ ನೀತಿಗೆ ಭಾಗಿಯಾಗದೇ, ಅನ್ಯಾಯಕ್ಕೆ ಒಳಗಾದ ಹೆಣ್ಣಿಗೆ ನ್ಯಾಯ ಕೊಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದರು.

ಆರೋಪಿ ಸ್ಥಾನದಲ್ಲಿದ್ದವರು ಎರಡು ಮುಖ, ಎರಡು ನಾಲಿಗೆ ಇರುವ ಇವರು ಒಂದು ಸಲ ನಾನಲ್ಲ ಎಂದು ಮತ್ತೋಂದು ಸಲ ನಾನೇ ಎಂದರು. ಇಂತಹ ದ್ವಿಮುಖ ನೀತಿಯ ವ್ಯಕ್ತಿಗಳನ್ನು, ಪಕ್ಷ, ರಾಜಕಾರಣದಲ್ಲಿ, ಸರಕಾರದಲ್ಲಿ ಇವರನ್ನು ನೋಡುತ್ತೇವೆಂದರೆ ಅದು ನಮ್ಮ ದೌರ್ಭಾಗ್ಯ. ಆದರಿಂದ ಕೂಡಲೇ ಮಾನ್ಯ ಮುಖ್ಯ ಮಂತ್ರಿಗಳಾಗಲಿ, ಸರಕಾರವಾಗಲಿ, ಕೇಂದ್ರದವರಾಗಲಿ ಯಾರೇ ಆದರೂ ಕೂಡಾ ಇವರ ರಕ್ಷಣೆಗೆ ಬರಬಾರದು ಒಂದು ಒತ್ತಾಯಿಸುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ಈ ಸಂದರ್ಭಲ್ಲಿ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ದೇಸಾರಟ್ಟಿ, ಮುಖಂಡರಾದ ಶಂಕರ ಜಾಲಿಗಿಡದ, ರಾಜು ಭದ್ರನ್ನವರ, ನೀಲಕಂಠ ಮುತ್ತೂರ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ, ಸಂಗಪ್ಪ ಕುಂದಗೋಳ, ನಸೀಮ ಮೋಕಾಸಿ ಸೇರಿದಂತೆ ಅನೇಕರು ಇದ್ದರು.

(ಮಾಹಿತಿ ಕೃಪೆ ಉದಯವಾಣಿ)

ಬಳ್ಳಾರಿ: ಒಂದೇ ದಿನದ ಅಂತರದಲ್ಲಿ ಅಕ್ಕ, ತಮ್ಮ ಕೋವಿಡ್ ಗೆ ಬಲಿ

 

ಬಳ್ಳಾರಿ: ಕೋವಿಡ್ ಸೋಂಕಿನಿಂದ ತಮ್ಮ ಸಾವನ್ನಪ್ಪಿದ ಮರುದಿನ ಅಕ್ಕನೂ ಸೋಂಕಿಗೆ ಬಲಿಯಾದ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಅಕ್ಕ ತಮ್ಮ ಇಬ್ಬರಿಗೂ ಕಳೆದ ವಾರ ಕೋವಿಡ್ ದೃಢಪಟ್ಟಿತ್ತು. ಇವರಲ್ಲಿ ತಮ್ಮ ಸಾವಿಯೋ ಸ್ಮಿತ್‌ (38) ಶುಕ್ರವಾರ ಸಾವನ್ನಪ್ಪಿದ್ದರೆ, ಇಂದು, ( ಶನಿವಾರ) ಅಕ್ಕ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ 8 ದಿನಗಳಿಂದ ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಕ, ತಮ್ಮ ಕೋವಿಡ್ ಮಹಾಮಾರಿಗೆ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಕಾಂಗ್ರೆಸ್ ಮಹಿಳಾ ಪಟಕ ರಾಜ್ಯ ಕಾರ್ಯದರ್ಶಿಯಾಗಿದ್ದರು.

(ಮಾಹಿತಿ ಕೃಪೆ ಉದಯವಾಣಿ)

ತಾಯಿಗೆ ಕೊರೊನಾ ನೆಗೆಟಿವ್, ನವಜಾತ ಶಿಶುವಿಗೆ ಪಾಸಿಟಿವ್

 

ವಾರಾಣಸಿ, ಮೇ 29: ಹೆರಿಗೆಗೂ ಮುನ್ನ ಗರ್ಭಿಣಿಗೆ ಕೊರೊನಾ ನೆಗೆಟಿವ್ ಬಂದಿದ್ದು, ನವಜಾತ ಶಿಶುವಿಗೆ ಪಾಸಿಟಿವ್ ಬಂದಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದಿದೆ.
ಪರೀಕ್ಷೆಗೊಳಗಾದ ಮರುದಿನ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ವೇಳೆ ಮಗುವಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಕೌಶನ್ ಕುಮಾರ್ ಗುಪ್ತಾ ತಿಳಿಸಿದ್ದಾರೆ. ಆರ್‌ಟಿ-ಪಿಸಿಆರ್ ಪರೀಕ್ಷೆಯು ಕೆಲವು ನ್ಯೂನತೆಗಳಿಂದ ಕೂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಿಎಚ್‍ಯು ಮೆಡಿಕಲ್ ಸುಪರಿಂಟೆಂಡೆಂಟ್ ತನಿಖೆಗೆ ಆದೇಶಿಸಿದ್ದಾರೆ. ಕೆಲವೇ ದಿನಗಳಲ್ಲಿ ಮತ್ತೆ ಇಬ್ಬರಿಗೂ ಹೊಸದಾಗಿ ಪರೀಕ್ಷೆ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸರ್ ಸುಂದರ್‌ಲಾಲ್ ಆಸ್ಪತ್ರೆಯಲ್ಲಿ ಹೆರಿಗೆಗೆ ಮುನ್ನ ತಾಯಿಗೆ ಮೇ 24 ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ನಡೆಸಲಾಗಿದೆ. ಈ ವೇಳೆ ನೆಗೆಟಿವ್ ಇರುವುದು ತಿಳಿದುಬಂದಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 1,73,790 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 3617ಮಂದಿ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಒಟ್ಟು 2,77,29,247 ಪ್ರಕರಣಗಳಿವೆ, ಇದುವರೆಗೆ 2,51,78,011 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 3,22,512 ಮಂದಿ ಮೃತಪಟ್ಟಿದ್ದಾರೆ, 22,28,724 ಸಕ್ರಿಯ ಪ್ರಕರಣಗಳಿವೆ.
ಇದುವರೆಗೆ ಒಟ್ಟು 20,89,02,445 ಮಂದಿಗೆ ಲಸಿಕೆ ನೀಡಲಾಗಿದೆ. ಮೇ 28ರವರೆಗೆ 34,11,19,909 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಂದೇ ದಿನದಲ್ಲಿ 20,80,048 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

(ಮಾಹಿತಿ ಕೃಪೆ Oneindia)

BIG NEWS: ಜೂನ್ 7ರ ಬಳಿಕ ಲಾಕ್ ಡೌನ್ ಇರುತ್ತಾ.? ಇರಲ್ವಾ..? ಸಿಎಂ ಯಡಿಯೂರಪ್ಪ ಹೇಳಿದ್ದೇನು.?

 

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆ ಕುರಿತು ಸ್ಪಷ್ಟನೆ ನೀಡಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸುವುದಾಗಿ ತಿಳಿಸಿದ್ದಾರೆ.
5 ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಹಲವು ಸಲಹೆಗಳನ್ನು ನೀಡಲಾಗಿದೆ. ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಸಧ್ಯ ಜಾರಿಯಲ್ಲಿರುವ ಲಾಕ್ ಡೌನ್ ನಲ್ಲಿ ಯಾವುದೇ ಬದಲಾವಣೆ ಇಲ್ಲ. ಲಾಕ್ ಡೌನ್ ವಿಸ್ತರಣೆ ಬಗ್ಗೆ ಜೂನ್ 7ರವರೆಗೆ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುವುದು. ಬಹುಶಃ ಜೂನ್ 7ರ ನಂತರ ಲಾಕ್ ಡೌನ್ ಅಗತ್ಯವಿರುವುದಿಲ್ಲ. ಸೋಂಕು ನಿಯಂತ್ರಣಕ್ಕೆ ಜನರು ಸಹಕಾರ ನೀಡಬೇಕು ಎಂದು ಹೇಳಿದರು.

(ಮಾಹಿತಿ ಕೃಪೆ ಕನ್ನಡದುನಿಯಾ)

Friday, May 28, 2021

ಕೋವಿಡ್ ಶಮನಕ್ಕೆ ಔಷಧ, ಶುದ್ಧ ಗಾಳಿ, ಪ್ರಾರ್ಥನೆ ಆಗತ್ಯ: ಮನೋವೈದ್ಯ ಸಲಹೆ


                           

ಹೊಸಪೇಟೆ (ವಿಜಯನಗರ): 'ಕೋವಿಡ್‌ ಸಾಂಕ್ರಾಮಿಕ ರೋಗ ಶಮನಕ್ಕೆ ದವಾ-ಹವಾ-ದುವಾ (ಔಷಧ-ಶುದ್ಧ ಗಾಳಿ-ಪ್ರಾರ್ಥನೆ) ಅಗತ್ಯವಿದೆ' ಎಂದು ಹೆಸರಾಂತ ಮನೋವೈದ್ಯ ಡಾ. ಅಜಯಕುಮಾರ್‌ ತಾಂಡೂರು ಹೇಳಿದರು.

ಇಷ್ಟಲಿಂಗ ಸಂಶೋಧನಾ ಕೇಂದ್ರ ಮತ್ತು ಸಖಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ಧರ್ಮದಗುಡ್ಡದಲ್ಲಿ ಗ್ರಾಮಸ್ಥರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಔಷಧಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

'ಉತ್ತಮ ಔಷಧಿ, ಶುದ್ಧ ಗಾಳಿ ಮತ್ತು ಶ್ರದ್ಧೆಯಿಂದ ಮಾಡುವ ಪ್ರಾರ್ಥನೆ ಇಲ್ಲದೇ ಯಾವುದೇ ರೋಗ ಗುಣವಾಗಲು ಸಾಧ್ಯವಿಲ್ಲ, ಹಾಗಾಗೀ ಎಲ್ಲರೂ ಈ ಮೂರು ಕ್ರಮಗಳನ್ನು ಅನುಸರಿಸಬೇಕು' ಎಂದು ಕಿವಿಮಾತು ಹೇಳಿದರು.

ತಾಲ್ಲೂಕು ಪಂಚಾಯ್ತಿ ಉಪನಿರ್ದೇಶಕ ಉಮೇಶ್ ಮಾತನಾಡಿ, 'ಯುವತಿಯರು ಮತ್ತು ಮಹಿಳೆಯರ ಋತುಚಕ್ರ, ಗ್ರಾಮ ನೈರ್ಮಲ್ಯೀಕರಣದ ಬಗ್ಗೆ ಪುರುಷರಿಗೆ ಸಂಪೂರ್ಣ ಮಾಹಿತಿ ಇರಬೇಕು. ಋತುಚಕ್ರದ ಸಮಯದಲ್ಲಿ ಮನೆಯ ಗಂಡಸರು ಮಹಿಳೆಯರ ಬೇಕು ಬೇಡಗಳಿಗೆ ನೆರವಾಗಬೇಕು. ಪ್ರತಿಯೊಬ್ಬರು ಹೋಮಿಯೋಪತಿ ಔಷಧ ವಿಶ್ವಾಸದಿಂದ ಸೇವಿಸಿದರೆ ಕೋವಿಡ್-19 ಮಹಾಮಾರಿಯನ್ನು ಸಮರ್ಪಕವಾಗಿ ಎದುರಿಸಲು ಸಾಧ್ಯವಿದೆ' ಎಂದರು.

ಕಳೆದ ವರ್ಷ ಕೊರೊನಾ ಸೈನಿಕರಿಗೆ ಔಷಧ ವಿತರಿಸಿದ್ದ ಇಷ್ಟಲಿಂಗ ಸಂಶೋಧನಾ ಕೇಂದ್ರ ಈ ಸಲ ಸಖಿ ಸಂಸ್ಥೆಯೊಂದಿಗೆ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೋಮಿಯೋಪತಿ ಔಷಧ ವಿತರಿಸುತ್ತಿದೆ. ಈಗಾಗಲೇ 18 ಸಾವಿರ ಜನರಿಗೆ ಔಷಧ ವಿತರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಡಾ.ಸತ್ಯಂ ಸಿಂಗ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಿಗೆಮ್ಮ, ಸಖಿ ಸಂಸ್ಥೆಯ ಭಾಗ್ಯಲಕ್ಷ್ಮಿ, ಇಷ್ಟಲಿಂಗ ಸಂಶೋಧನಾ ಕೇಂದ್ರದ ಮಾವಿನಹಳ್ಳಿ ಬಸವರಾಜ, ಪ್ರಾಧ್ಯಾಪಕ ಟಿ.ಎಚ್‌.ಬಸವರಾಜ, ಓಂಪ್ರಕಾಶ್, ದೇವರಮನಿ ಶ್ರೀನಿವಾಸ, ಮುಖಂಡರಾದ ಚಂದ್ರಶೇಖರ್, ಕಳಕಪ್ಪ, ವಡೆ ಬಸವರಾಜ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)

ಹಂಪಿ ರುದ್ರಭೂಮಿಯಲ್ಲಿ ಕೋವಿಡ್‌ ಮೃತರ ಶವ ಹೂಳದಂತೆ ಗ್ರಾಮಸ್ಥರ ಒತ್ತಾಯ

 

ಹೊಸಪೇಟೆ (ವಿಜಯನಗರ): 'ಕೋವಿಡ್‌-19ನಿಂದ ಮೃತಪಟ್ಟವರ ಶವಗಳನ್ನು ತಾಲ್ಲೂಕಿನ ಹಂಪಿ ರುದ್ರಭೂಮಿಯಲ್ಲಿ ಹೂಳಲು ಅವಕಾಶ ಕಲ್ಪಿಸಬಾರದು' ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

'ಒಂದುವೇಳೆ ಕೋವಿಡ್‌ನಿಂದ ನಿಧನ ಹೊಂದಿದವರ ಅಂತ್ಯಸಂಸ್ಕಾರ ಹಂಪಿಯಲ್ಲೇ ಮಾಡುವುದೇ ಆದರೆ ಶವಗಳನ್ನು ಸುಡಬೇಕು. ಆದರೆ, ಯಾವುದೇ ಕಾರಣಕ್ಕೂ ಹೂಳಬಾರದು' ಎಂದು ಒತ್ತಾಯಿಸಿದ್ದಾರೆ.

ಗ್ರಾಮಸ್ಥರಾದ ಸಂದೇಶ, ಸುರೇಶ, ಸಿದ್ದಪ್ಪ, ರಮೇಶ, ರಾಜೇಶ, ಪರಶುರಾಮ ಮೊದಲಾದವರು ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

Shocking news‌ : ಅಂತ್ಯಕ್ರಿಯೆ ಮುಗಿಸಿ ವಾರದ ಬಳಿಕ ಮನೆಯಲ್ಲಿ ಪ್ರತ್ಯಕ್ಷ್ಯನಾದ 'ಸತ್ತ ವ್ಯಕ್ತಿʼ : ಮುಂದೇನಾಯ್ತು ಗೊತ್ತ

 

ಡಿಜಿಟಲ್‌ ಡೆಸ್ಕ್:‌ ರಾಜಸ್ಥಾನದ ರಾಜ್ ಸಮಂದ್ ಎಂಬಲ್ಲಿ ಶಾಕಿಂಗ್‌ ಸಂಗಿತಿಯೊಂದು ನಡೆದಿದ್ದು, 40 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟನೆಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ ವಾರದ ಬಳಿಕ ಆತ ತನ್ನ ಮನೆಯಲ್ಲಿ ಪ್ರತ್ಯಕ್ಷ್ಯನಾಗಿದ್ದಾನೆ.
ಓಂಕಾರ್ ಲಾಲ್ ಗಾಡುಲಿಯಾ ಅನ್ನೋ ವ್ಯಕ್ತಿಯೊಬ್ಬ ಸಾವನ್ನಾಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅದ್ರಂತೆ, ಸಂಬಂಧಿಕರು ಆಸ್ಪತ್ರೆಯಿಂದ ಮೃತದೇಹ ತಂದು ಅಂತ್ಯಕ್ರಿಯೆ ಮಾಡಿದ್ದಾರೆ. ಆದ್ರೆ, ವಾರದ ಬಳಿಕ ಓಂಕಾರ್‌ ಲಾಲ್‌ ಮನೆಗೆ ಹಿಂದಿರುಗಿದ್ದಾರೆ. ಇಷ್ಟಕ್ಕೂ ಆಸ್ಪತ್ರೆಯಲ್ಲಿ ಆಗಿದ್ದೇನು? ನಿಜವಾಗ್ಲೂ ಆತ ಮೃತಪಟ್ಟಿದ್ನಾ?
ಅಸಲಿಗೆ ಓಂಕಾರ್ ಲಾಲ್ ಗಾಡುಲಿಯಾ ಮದ್ಯ ವ್ಯಸನಿಯಾಗಿದ್ದು, ಮೇ 11ರಂದು ತನ್ನ ಕುಟುಂಬಕ್ಕೆ ತಿಳಿಸದೆ ಉದಯಪುರಕ್ಕೆ ಹೋಗಿದ್ದನಂತೆ. ಯಕೃತ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಯಿಂದಾಗಿ ಆತನನ್ನ ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ದಿನ, ಗೋವರ್ಧನ್ ಪ್ರಜಾಪತ್ ಎನ್ನುವವರನ್ನೂ ಆರ್ ಕೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಆತ ಚಿಕಿತ್ಸೆಯ ಸಮಯದಲ್ಲಿ ಮೃತಪಟ್ಟಿದ್ದಾನೆ.
ಓಂಕಾರ್ ಲಾಲ್ ಕುಟುಂಬ ಸದಸ್ಯರು, ಮೃತ ದೇಹದ ಬಲಗೈ ಮತ್ತು ನೋಟದ ಮೇಲೆ ಇದೇ ರೀತಿಯ ಗಾಯದ ಗುರುತಿದೆ ಎಂದು ಹೇಳಿದ್ದು, ಮೃತದೇಹವನ್ನ ತಪ್ಪಾಗಿ ಗುರುತಿಸಿದ್ದಾರೆ. ಹಾಗಾಗಿ ಪೊಲೀಸರು ಯಾವುದೇ ಮರಣೋತ್ತರ ಮತ್ತು ಡಿಎನ್ ಎ ಪರೀಕ್ಷೆ ನಡೆಸದೆ ಶವವನ್ನು ಹಸ್ತಾಂತರಿಸಿದ್ದಾರೆ.
ಅದ್ರಂತೆ, ಆಸ್ಪತ್ರೆಯಲ್ಲಿ ಮೃತಪಟ್ಟ ಗೋವರ್ಧನ್ ಪ್ರಜಾಪತ್ ಅವ್ರ ಕೊಳೆತ ಶವವನ್ನ ತಪ್ಪಾಗಿ ಸ್ವಾಧೀನಪಡಿಸಿಕೊಂಡ ಓಂಕಾರ್‌ ಲಾಲ್‌ ಕುಟುಂಬದವ್ರು, ಮೇ 15ರಂದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಆದ್ರೆ, ಓಂಕಾರ್ ಲಾಲ್ ಗಾಡುಲಿಯಾ ಮೇ 23ರಂದು ಮನೆಗೆ ಮರಳಿದ್ದಾನೆ. ಸತ್ತನೆಂದು ಭಾವಿಸಿ ಅಂತ್ಯಕ್ರಿಯೆ ಮಾಡಿ ಮುಗಿಸಿದ ವ್ಯಕ್ತಿ ಏಕಾಏಕಿ ಮನೆಗೆ ಬಂದಿದ್ದನ್ನ ಕಂಡು ಕುಟುಂಬದವ್ರು ಆಘಾತಕ್ಕೆ ಒಳಗಾಗಿ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನ ಕೈಗೆತ್ತಿಕೊಂಡು ನಿಜ ಸಂಗತಿಯನ್ನ ಬಯಲಿಗೇಳೆದಿದ್ದಾರೆ.
(ಮಾಹಿತಿ ಕೃಪೆ Kannada News Now)

ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ : ರಾಜ್ಯ ಸರಕಾರಕ್ಕೆ ಮಾಜಿ ಸಚಿವೆ ಉಮಾಶ್ರೀ ಮನವಿ

 

ಮಹಾಲಿಂಗಪುರ : ಕಾರ್ಮಿಕ ಇಲಾಖೆಯಲ್ಲಿ ನೇಕಾರರನ್ನು ಕಾರ್ಮಿಕರು ಅಂತಾ ಸೇರಿಸಿ. ಪಾವರ್‌ ಲೂಮ್ ನೇಕಾರರಿಗೆ ಕನಿಷ್ಠ ಮೂರು ವರ್ಷ ನಿರಂತರ ಉಚಿತ ವಿದ್ಯುತ್ ನೀಡಬೇಕು. ಆ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನೇಕಾರರಿಗೆ ನೆರವಾಗಿ ಎಂದು ಮಾಜಿ ಸಚಿವೆ ಉಮಾಶ್ರೀ ಸರಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೃಹತ್ ಕೈಗಾರಿಕೆ ಹೊರತುಪಡಿಸಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ನಿರ್ಜೀವವಾಗಿವೆ. ಅನೇಕರು ನೇಣಿಗೆ ಶರಣಾಗಿದ್ದಾರೆ. ಮಾಧ್ಯಮಗಳ ಮುಖಾಂತರ ಕೆಲವು ಮಾತ್ರ ಬೆಳಕಿಗೆ ಬಂದಿವೆ. ಆರ್ಥಿಕ ಹಿನ್ನೆಡೆ ದೇಶ ಮಾತ್ರ ಆನುಭವಿಸುತ್ತಿಲ್ಲ. ಜನಸಾಮಾನ್ಯರೂ ಅನುಭವಿಸುತ್ತಿದ್ದು ಅದರಲ್ಲಿ ವಿವಿಧ ನೇಕಾರರೂ ಕೂಡಾ ಇದ್ದಾರೆ. ನೇಕಾರಿಕೆ ಉದ್ಯಮ ಪುನಶ್ಚೇತನಕ್ಕೆ ಸರ್ಕಾರ ಮುಂದೆ ಬರಲಿಲ್ಲ ಎಂದು ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಚಾಲಿತ ಮಗ್ಗಗಳ ಮಾಲಿಕರು ಹಾಕಿದ ಬಂಡವಾಳ ತುಕ್ಕು ಹಿಡಿದಿದೆ. ಈಗಾಗಲೇ ನೇಯ್ದ ಬಟ್ಟೆಯನ್ನು ಯಾರೂ ಖರೀದಿಸುತ್ತಿಲ್ಲ. ಮೊದಲು ಪವರಲೂಮ್‌ನಲ್ಲಿ ದಿನಕ್ಕೆ 3 ಸೀರೆ ನೇಯುತ್ತಿದ್ದ ನೇಕಾರನಿಗೆ ಗಂಜಿಯಾದರೂ ಸಿಗಲಿ ಎಂದು ಮಾಲಿಕರು 1 ಸೀರೆಯನ್ನಾದರೂ ನೇಯಲಿ ಎಂದು ಹೇಳಬೇಕೆಂದರೆ ನೂಲು, ಚಮಕಾ, ಬಣ್ಣ ಸಿಗುತ್ತಿಲ್ಲಾ. ಇದನ್ನೇ ನಂಬಿ ಬದುಕುವ ನೇಕಾರ ಏನು ಮಾಡಬೇಕು ಎಂದು ಸರಕಾರದ ವಿರುದ್ಧ ಕಿಡಿಕಾರಿದರು.

ಅನೇಕ ಅವಕಾಶಗಳಿದ್ದರೂ ಸರ್ಕಾರ ಉದ್ಯಮವನ್ನು ಪುನ:ಶ್ಚೇತನ ಮಾಡಲು ಮುಂದೆ ಬರಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಬರ, ಅತಿವೃಷ್ಠಿ, ಅನಾವೃಷ್ಠಿ ಇತ್ತಾದರೂ ಅವರು ಸಹಾಯಕ್ಕೆ ಧಾವಿಸಿದರು. ಸಾಲ ಮನ್ನಾ ಮಾಡಿದರು, ಖಾಸಗಿಯವರು ಯಾರೂ ಸಾಲ ವಾಪಸಾತಿಗೆ ಒತ್ತಾಯಿಸಬೇಡಿಯೆಂದು ತಾಕೀತು ಮಾಡಿದರು. ಆದರೆ ಇಂದು ಅದಕ್ಕಿಂತ ಕಠಿಣ ಪರಸ್ಥಿತಿ ರಾಜ್ಯದಲ್ಲಿ ಇದೆ. ಇಂದಿನ ಸರ್ಕಾರ ಏನು ಮಾಡ್ತಿದೆ. ಯಡಿಯೂರಪ್ಪನವರೆ ನೀವು ಮಹಾನ್ ನಾಯಕರು, ನೇಕಾರರ ಬಗ್ಗೆ ಬಹಳಷ್ಟು ಪ್ರೀತಿ ಉಳ್ಳವರು. ಆದರೆ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗುವದಿಲ್ಲವೆ ಎಂದು ಸರಕಾರದ ವಿರುದ್ಧ ಗುಡುಗಿದರು. ಕಳೆದ ವರ್ಷವೂ ಹೀಗೆ ಮಾಡಿದ್ದೀರಿ. ಈ ಬಾರಿಯೂ ನೆನಪಾಗಲಿಲ್ಲ. ಶಾಸಕರು ಬಂದು ನಿಮಗೆ ನೆನಪು ಮಾಡಬೇಕು. ನಿಮ್ಮ ಭಾಷಣದಲ್ಲಿ ನೇಕಾರರ ಬಗ್ಗೆ ಎಷ್ಟು ಕನಿಕರ, ಪ್ರೀತಿ ತೋರಿಸುತ್ತೀರಿ ಅದೇ ಪ್ಯಾಕೇಜ್ ಘೋಷಣೆ ಮಾಡುವಾಗ ನೇಕಾರರ ನೆನಪಾಗಲಿಲ್ಲವೆ. ನಿಮ್ಮ ಸುತ್ತಲಿದ್ದವರು ಯಾಕೆ ನೆನಪಿಸಲಿಲ್ಲ. ಇದರ ಅರ್ಥ ಚುನಾವಣೆಯಲ್ಲಿ ಮತ ಗಳಿಸಲಿಲು ಮಾತ್ರ ನೇಕಾರರು ಬೇಕು ಆದರೆ ಕೃತಿಯಲ್ಲಿ ಅಲ್ಲ ಎಂದರು.

ನೇಕಾರರಿಗೆ ಈಗ 2 ಸಾವಿರ ಕೊಡ್ತೀನಿ ಅಂತಿರಿ. ಆದರೆ ಪ್ರತಿ ನೇಕಾರ ಕುಟುಂಬಕ್ಕೆ 10 ಸಾವಿರ ಕೊಡಬೇಕು. ನೇಕಾರರಿಗೆ ಮಾತ್ರ ಅಲ್ಲ. ಟ್ಯಾಕ್ಸಿ, ರಿಕ್ಷಾ ಚಾಲಕರಿಗೆ, ಅಸಂಘಟಿತ ಕಾರ್ಮಿಕರಿಗೆ ,ಸವಿತಾ ಸಮಾಜ, ಕುಂಬಾರ, ಕಮ್ಮಾರ ಸಮಾಜ ಹೀಗೆ ಎಲ್ಲ ಕಾಯಕ ಜೀವಿಗಳಿಗೆ 10 ಸಾವಿರ ರೂ.ಕೊಡಿ. ಕೈ ಮುಗಿದು ಕೇಳುತ್ತೇವೆ ಎಂದು ಮನವಿ ಮಾಡಿದರು.. ಎಲ್ಲ ತರಹದ ನೇಕಾರರಿಗೆ ಅಂದಾಜು ೮೦೦ ರಿಂದ ೯೦೦ ಕೋಟಿ ಘೋಷಣೆ ಮಾಡಿ ಅಥವಾ ಯೋಜನೆಗಳನ್ನು ಸೃಷ್ಠಿ ಮಾಡಿ, ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು, ಬಾಕಿ ಇರುವ ಸಬ್ಸಿಡಿ ಬಿಡುಗಡೆ ಮಾಡಬೇಕು. ಒಂದು ವರ್ಷದ ವರೆಗೆ ಸಾಲದ ಅಸಲು ಬಡ್ಡಿ ಕೇಳಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ರಬಕವಿಯ ವಿದ್ಯುತ್ ಚಾಲಿತ ಮಗ್ಗಗಳ ಅಧ್ಯಕ್ಷ ನೀಲಕಂಠ ಮುತ್ತೂರ, ಮಲ್ಲಪ್ಪ ಭಾವಿಕಟ್ಟಿ, ರಾಜೇಂದ್ರ ಭದ್ರನ್ನವರ, ಶಂಕರ ಸೊನ್ನದ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ,ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ,ಪುರಸಭೆ ಸದಸ್ಯ ಜಾವೇದ ಬಾಗವಾನ, ರಾಜು ಭಾವಿಕಟ್ಟಿ, ಸತ್ಯಪ್ಪ ಮಗದುಮ್, ಹೊಳೆಪ್ಪ ಬಾಡಗಿ,ವಿಠ್ಠಲ ಸಂಶಿ, ಶಿವಾನಂದ ಗಾಳಿ ಮುಂತಾದವರು ಇದ್ದರು.

(ಮಾಹಿತಿ ಕೃಪೆ ಉದಯವಾಣಿ)

ಜೂನ್ 15 ರಿಂದ ಕೋವಾಕ್ಸಿನ್ ಸರಬರಾಜಿಗೆ ಸಿದ್ದ: ಭಾರತ್ ಬಯೋಟೆಕ್

 

ನವದೆಹಲಿ:ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್) ಜೂನ್ 15 ರಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೊವಾಕ್ಸಿನ್ ತಯಾರಿಸಲು ಅಗತ್ಯವಾದ ಔಷಧ ಪದಾರ್ಥದ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಇದನ್ನು ಜುಲೈ ವೇಳೆಗೆ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್‌ಗೆ ಸರಬರಾಜು ಮಾಡುತ್ತದೆ.

ಭಾರತೀಯ ಇಮ್ಯುನೊಲಾಜಿಕಲ್ಸ್ ತಿಂಗಳಿಗೆ ಸುಮಾರು 10-15 ಮಿಲಿಯನ್ ಡೋಸ್‌ಗಳಿಗೆ ಉತ್ಪಾದಿಸುವ ನಿರೀಕ್ಷೆಯಿದೆ ಎಂದು ಐಐಎಲ್‌ನ ಎಂಡಿ ಡಾ. ಆನಂದ್ ಕುಮಾರ್ ಹೇಳಿದರು. ಇದು ಆರಂಭದಲ್ಲಿ 2-3 ಮಿಲಿಯನ್ ಡೋಸ್ ಆಗಿರುತ್ತದೆ ಮತ್ತು ನಂತರ ತಿಂಗಳಿಗೆ 6-7 ಮಿಲಿಯನ್ ವರೆಗೆ ಅಳೆಯಲಾಗುತ್ತದೆ .
ಭಾರತ್ ಬಯೋಟೆಕ್,' ಒಂದು ಬ್ಯಾಚ್ ಕೋವಾಕ್ಸಿನ್ ತಯಾರಿಕೆ, ಪರೀಕ್ಷೆ ಮತ್ತು ಬಿಡುಗಡೆಯ ಸಮಯ ಸುಮಾರು 120 ದಿನಗಳು.ಈ ವರ್ಷದ ಮಾರ್ಚ್ನಲ್ಲಿ ಪ್ರಾರಂಭಿಸಲಾದ ಉತ್ಪಾದನಾ ಬ್ಯಾಚ್‌ಗಳು ಜೂನ್ ತಿಂಗಳಲ್ಲಿ ಮಾತ್ರ ಪೂರೈಕೆಗೆ ಸಿದ್ಧವಾಗುತ್ತವೆ. '
ಲಸಿಕೆ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಕೋವಾಕ್ಸಿನ್‌ನ ಔಷಧಿ ವಸ್ತುವನ್ನು ತಯಾರಿಸಲು ಭಾರತ್ ಬಯೋಟೆಕ್ ಹೈದರಾಬಾದ್ ಮೂಲದ ಐಐಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ, ಇದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಅಡಿಯಲ್ಲಿ ಸ್ಥಾಪಿಸಲಾಗಿದೆ.

(ಮಾಹಿತಿ ಕೃಪೆ Kannada News Now)