WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, March 6, 2021

ಬಿಎಸ್ಸಿ ಪಠ್ಯಕ್ಕೆ ಮಂಜಮ್ಮ ಜೋಗತಿ ಜೀವನ ಚರಿತ್ರೆ

 

ವಿಜಯನಗರ (ಹೊಸಪೇಟೆ): ಜಾನಪದ ಆಕಾಡೆಮಿ ಅಧ್ಯಕ್ಷೆ ಹಾಗೂ ಪದ್ಮಶ್ರೀ ಪುರಸ್ಕೃತೆ ಮರಿಯಮ್ಮನಹಳ್ಳಿಯ ಮಂಜಮ್ಮ ಜೋಗತಿ ಅವರ ಜೀವನ ಚರಿತ್ರೆ 'ನಡುವೆ ಸುಳಿವ ಹೆಣ್ಣು' ಅನ್ನು ಪುಸ್ತಕ ಗುಲ್ಬರ್ಗಾ ವಿಶ್ವ ವಿದ್ಯಾಲಯ ಪಠ್ಯಕ್ರಮದಲ್ಲಿ ಅಳವಡಿಸುವ ಕಾರ್ಯ ನಡೆದಿದೆ.

ಅರುಣ್ ಜೋಳದ ಕೂಡ್ಲಿಗಿ ನಿರೂಪಣೆ ಮಾಡಿರುವ 'ನಡುವೆ ಸುಳಿವ ಹೆಣ್ಣು' ಪುಸ್ತಕ ವಿಶ್ವವಿದ್ಯಾಲಯದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಬೇಸಿಕ್ ಕನ್ನಡ ವಿಷಯದ ಪಠ್ಯಕ್ರಮಕ್ಕೆ ಆಳವಡಿಸಲು ಪಠ್ಯಕ್ರಮ ಅಧ್ಯಯನ ಮಂಡಳಿ ಶಿಫಾರಸ್ಸು ಮಾಡಿದ್ದು, ಮುಂಬರುವ ಶೈಕ್ಷಣಿಕ ಸಾಲಿನ ಪಠ್ಯಕ್ರಮದಲ್ಲಿ ಸೇರ್ಪಡೆಯಾಗುವುದು ಖಚಿತವಾಗಿದೆ.

ಈ ಹಿಂದೆ ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದಲ್ಲಿ ಮಂಜಮ್ಮ ಜೋಗತಿಯವರ ಕುರಿತ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿತ್ತು. ಈ ಬಾರಿ ಅವರ ಸಂಪೂರ್ಣ ಜೀವನ ಚರಿತ್ರೆ ಪಠ್ಯಕ್ರಮವಾಗುತ್ತಿದ್ದು. ಸಮಗ್ರ ಪುಸ್ತಕವನ್ನು 100 ಪುಟಗಳಷ್ಟು ಸಂಕೀರ್ಣಗೊಳಿಸಿ ಮರುಮುದ್ರಿಸಲು ಪಲ್ಲವ ಪ್ರಕಾಶನಕ್ಕೂ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಧನೆಗೈದವರ ಜೀವನ ಕುರಿತಂತೆ ಗುಲ್ಬರ್ಗಾ ವಿವಿ ತನ್ನ ಪಠ್ಯಕ್ರಮಗಳಲ್ಲಿ ಅಳವಡಿಸುತ್ತಾ ಬಂದಿದ್ದು, ಈಗ 'ನಡುವೆ ಸುಳಿವ ಹೆಣ್ಣು' ಪುಸ್ತಕವನ್ನು ಅಳವಡಿಸಲಾಗುತ್ತಿದೆ. ಇದಕ್ಕೆ ಕುಲಪತಿ ಪ್ರೊ.ದಯಾನಂದ ಅಗಸರ ಅವರ ಇಚ್ಛಾಶಕ್ತಿ ಕಾರಣ ಎಂದು ವಿವಿಯ ಕಲಾ ನಿಕಾಯದ ಡೀನ್ ಪ್ರೊ. ಎಚ್.ಟಿ.ಪೋತೆ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

(ಮಾಹಿತಿ ಕೃಪೆ ಪ್ರಜಾವಾಣಿ)

Friday, March 5, 2021

ಹೊಸಪೇಟೆ: ರಾಜ್ಯ ಬಜೆಟ್‌ನಲ್ಲಿ ನಮ್ಮೂರಿಗೇನು ಬೇಕು?

 

ವಿಜಯನಗರ (ಹೊಸಪೇಟೆ): ಪ್ರತಿ ಸಲ ರಾಜ್ಯ ಬಜೆಟ್‌ಗೆ ದಿನಗಳು ಸಮೀಪಿಸುತ್ತಿರುವಂತೆ ಸಹಜವಾಗಿಯೇ ಆಯಾ ಊರಿನವರ ನಿರೀಕ್ಷೆಗಳು ಹೆಚ್ಚಾಗುತ್ತವೆ. ಅದರಲ್ಲೂ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯ ಜನರ ಪಾಲಿಗೆ ಈ ಸಾಲಿನ ಆಯವ್ಯಯ ಮಹತ್ವದ್ದು.

ಜಿಲ್ಲಾಡಳಿತ ಭವನ ನಿರ್ಮಾಣ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಓಡಾಟಕ್ಕೆ ವಾಹನಗಳ ಖರೀದಿ, ರಸ್ತೆ ನಿರ್ಮಾಣ ಹೀಗೆ ಹತ್ತು ಹಲವು ಕೆಲಸಕ್ಕಾಗಿ ಅನುದಾನದ ಅಗತ್ಯ ಇರುತ್ತದೆ. ಒಂದರ್ಥದಲ್ಲಿ ಈಗಿರುವ ನಗರದ ಮರು ನಿರ್ಮಾಣ ಎಂದೇ ಹೇಳಬಹುದು.

ಇದರ ಜೊತೆಯಲ್ಲಿ ಜಿಲ್ಲೆ ವ್ಯಾಪ್ತಿಯ ತಾಲ್ಲೂಕುಗಳ ದಶಕಗಳ ಬೇಡಿಕೆಗಳಿಗೂ ಬಜೆಟ್‌ನಲ್ಲಿ ಮನ್ನಣೆ ಸಿಗಬಹುದೇ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ತಾಲ್ಲೂಕುಗಳಲ್ಲಿ ಕೆರೆ, ಕಟ್ಟೆ ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಿಸಬೇಕು ಎನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಅದೇ ರೀತಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಕರ್ಯಕ್ಕೆ ಸಂಬಂಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಎರಡೂ ತಾಲ್ಲೂಕಿನ ಅರ್ಧ ಭಾಗ ಈಗಲೂ ಮಳೆಯನ್ನೇ ಅವಲಂಬಿಸಿದೆ.

ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಇತರೆ ತಾಲ್ಲೂಕುಗಳಲ್ಲಿ ವಲಸೆ ಹೆಚ್ಚಿನ ಪ್ರಮಾಣದಲ್ಲಿ. ಅದರಲ್ಲೂ ತಾಂಡಾ ನಿವಾಸಿಗಳು ಉದ್ಯೋಗ ಅರಸಿಕೊಂಡು ಬೇರೆಡೆ ಗುಳೇ ಹೋಗುತ್ತಾರೆ. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ನಂತರ ಸ್ವಲ್ಪ ಪ್ರಮಾಣದಲ್ಲಿ ವಲಸೆ ತಡೆಯಲು ಯಶಸ್ವಿಯಾಗಿದೆ. ಆದರೆ, ಇನ್ನೂ ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯ ಬಹುತೇಕರಲ್ಲಿ ಕೌಶಲ ಇಲ್ಲ. ಕೈಗಾರಿಕೆಗಳಿದ್ದರೂ ಹೊರಗಿನವರು ಅಲ್ಲಿ ಆಕ್ರಮಿಸಿಕೊಂಡಿದ್ದಾರೆ.

'ವಿಜಯನಗರ ಜಿಲ್ಲೆ ಮಾಡಿರುವುದರಿಂದ ಜಿಲ್ಲಾ ಕೇಂದ್ರದ ಅಂತರ ತಗ್ಗಿರುವುದು ಒಳ್ಳೆಯ ವಿಷಯ. ನಮ್ಮ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜನರಿಗೆ ಕೃಷಿ ಬಿಟ್ಟರೆ ಬೇರೆ ಉದ್ಯೋಗಗಳಿಲ್ಲ. ನೀರಿನ ಸಮಸ್ಯೆ ಬಗೆಹರಿಸಬೇಕು. ಕೈಗಾರಿಕೆಗಳನ್ನು ಸ್ಥಾಪಿಸಿ, ಜನರಿಗೆ ಉದ್ಯೋಗ ಕೊಡಬೇಕು' ಎನ್ನುತ್ತಾರೆ ಕೊಟ್ಟೂರಿನ ಯುವಕರಾದ ಬಸವರಾಜ, ಮಲ್ಲಿಕಾರ್ಜುನ.

ಹಂಪಿಯಲ್ಲಿ ಮೂಲಸೌಕರ್ಯಕ್ಕೆ ಸಿಕ್ಕಿತ್ತೇ ಹಣ?:

ವಿಶ್ವಪ್ರಸಿದ್ಧ ಹಂಪಿಯಲ್ಲಿ ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎನ್ನುವುದು ದಶಕಗಳ ಬೇಡಿಕೆಯಾಗಿದೆ. ಆದರೆ, ಅದು ಈಡೇರಿಲ್ಲ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನದಿ ತಟದಲ್ಲಿ ಸ್ನಾನಗೃಹ, ಶೌಚಾಲಯ, ಕಡಿಮೆ ದರದಲ್ಲಿ ಕೊಠಡಿ ಬಾಡಿಗೆ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ.

ಹಿಂದಿನ ಬಜೆಟ್‌ ಅನುದಾನವೇ ಸಿಕ್ಕಿಲ್ಲ:

ಹಂಪಿ ಮಾತಂಗ ಬೆಟ್ಟದ ಅಭಿವೃದ್ಧಿ ಕಾರ್ಯಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ₹1 ಕೋಟಿ ಮೀಸಲಿಡಲಾಗಿತ್ತು. ಎರಡು ವರ್ಷಗಳಾದರೂ ಆ ಹಣ ಬಿಡುಗಡೆಯಾಗಿಲ್ಲ.

'ಮಾತಂಗ ಬೆಟ್ಟದ ಅಭಿವೃದ್ಧಿಗೆ ಸರ್ಕಾರ ಘೋಷಿಸಿದ ಹಣ ಬಿಡುಗಡೆಯಾಗದೇ ಇರುವುದು ಬೇಸರ ಮೂಡಿಸಿದೆ. ನೆರೆ ನೆಪವೊಡ್ಡಿ ಆ ವರ್ಷ ಸಮ್ಮಿಶ್ರ ಸರ್ಕಾರ ಅನುದಾನ ನೀಡಿರಲಿಲ್ಲ. ಈ ವರ್ಷವಾದರೂ ಸರ್ಕಾರ ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಹುಸಿ ಭರವಸೆಗಳನ್ನು ಕೊಡಬಾರದು' ಎಂದು ಮಾತಂಗ ಸಮಾಜದ ಮುಖಂಡ ನಿಂಬಗಲ್‌ ರಾಮಕೃಷ್ಣ ಹೇಳಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ವಿಭಜಿತ ಬಳ್ಳಾರಿ ಉಸ್ತುವಾರಿ ಯಾರಿಗೆ?

 

ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕವಾದ ಬೆನ್ನಲ್ಲೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ಅವಿಭಜಿತ ಬಳ್ಳಾರಿ ಜಿಲ್ಲೆ ಉಸ್ತುವಾರಿ ವಹಿಸಿಕೊಂಡಿರುವ ಆನಂದ ಸಿಂಗ್‌ ಅವರೇ ಸದ್ಯ ಉಭಯ ಜಿಲ್ಲೆಗಳ ಉಸ್ತುವಾರಿಯಾಗಿದ್ದಾರೆ. ಆದರೆ ವಿಜಯ ನಗರ ಜಿಲ್ಲಾಭಿವೃದ್ಧಿ, ಅಧಿಕಾರಿಗಳ ನೇಮಕ ಸೇರಿ ಅಗತ್ಯ ಕೆಲಸಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಆನಂದ ಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನಷ್ಟೇ ವಹಿಸಿಕೊಳ್ಳಲಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಯ ಜಿ.ಸೋಮ ಶೇಖರ ರೆಡ್ಡಿ, ಸಿರುಗುಪ್ಪದ ಎಂ.ಎಸ್‌. ಸೋಮಲಿಂಗಪ್ಪ ಇಬ್ಬರು ಶಾಸಕರಿದ್ದಾರೆ. ಆದರೆ ಈ ಇಬ್ಬರನ್ನು ಹೊರತುಪಡಿಸಿ ಬಳ್ಳಾರಿ ಮೂಲದ ಮೊಳಕಾ ಲ್ಮೂರು ಶಾಸಕ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೆಸರು ಕೇಳಿಬರುತ್ತಿದೆ. ಬಳ್ಳಾರಿ ಜಿಲ್ಲೆ ವಿಭಜನೆಗೆ ತೀವ್ರವಾಗಿ ವಿರೋಧಿಸಿದ್ದ ಶಾಸಕ ಜಿ. ಸೋಮಶೇಖರ ರೆಡ್ಡಿ ಸಚಿವ ಆನಂದ ಸಿಂಗ್‌ ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಯಾಗಿ ಮುಂದುವರಿಯಬಾರದು ಎಂದು ಈಗಾಗಲೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಯನ್ನು ಸಚಿವ ಬಿ.ಶ್ರೀರಾಮುಲು ಅವರಿಗೆ ನೀಡಲಿ ಎಂದೂ ಸಹಮತ ವ್ಯಕ್ತಪಡಿಸಿ ದ್ದಾರೆ. ಇತ್ತ ಸಚಿವ ಆನಂದ ಸಿಂಗ್‌ ಸಹ ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವರಾಗಿ ನಾನೇ ಇರಬೇಕು. ಇಲ್ಲದಿದ್ದರೆ ಸಚಿವ ಬಿ. ಶ್ರೀರಾಮುಲು ಆಗಬೇಕು. ಹೊರಗಿನವರಿಗೆ ಬಿಟ್ಟು ಕೊಡಲು ನಾನು ಒಪ್ಪಲ್ಲ ಎಂದು ಖಡಕ್ಕಾಗಿಯೇ ಹೇಳಿದ್ದಾರೆ. ಹೀಗಾಗಿ ರಾಮುಲು ಅವರಿಗೇ ಜಿಲ್ಲೆಯ ಉಸ್ತುವಾರಿ ಲಭಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಉಸ್ತುವಾರಿಗಾಗಿ ರಾಮುಲು ಯತ್ನ: ಮೂಲಗಳ ಪ್ರಕಾರ ವಿಭಜಿತ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಲು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತೆರೆಮರೆಯ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ರಾಮುಲು ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾತು ಕಮಲ ಪಕ್ಷದಲ್ಲಿ ಕೇಳಿ ಬರುತ್ತಿದೆ. ಮೇಲಾಗಿ ಆನಂದ ಸಿಂಗ್‌ ಮತ್ತು ಶ್ರೀರಾಮುಲು ಇಬ್ಬರೂ ಆಪ್ತ ರಾಗಿದ್ದಾರೆ. ಈ ಕಾರಣದಿಂದಲೇ ಬಳ್ಳಾರಿ ವಿಭಜನೆಗೆ ಸೋಮಶೇಖರ ರೆಡ್ಡಿ ವಿರೋಧಿ ಸಿದ್ದರೂ ರಾಮುಲು ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಸಹಮತ ವ್ಯಕ್ತಪಡಿಸಿದ್ದರು.

ಭವಿಷ್ಯದ ರಾಜಕೀಯ ದೃಷ್ಟಿಯಿಂದ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಬಿ.ಶ್ರೀರಾಮುಲು, ಸಹಮತ ವ್ಯಕ್ತಪಡಿಸಿ ದ್ದಾರೆ.2022ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಹ ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಸ್ಪರ್ಧಿಸಿದಲ್ಲಿ ಇದಕ್ಕೆ ಸಿಂಗ್‌ ಬೆಂಬಲವು ಸಹ ಸಿಗಲಿದೆ ಎನ್ನಲಾಗಿದೆ.

-ವೆಂಕೋಬಿ ಸಂಗನಕಲ್ಲು

(ಮಾಹಿತಿ ಕೃಪೆ ಉದ್ಯವಾಣಿ)

ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ, ಕಾಂತರಾಜು ಆಯೋಗ ವರದಿ ಬಹಿರಂಗಕ್ಕೆ ಆಗ್ರಹ


 ಬೆಂಗಳೂರು: ಮೀಸಲಾತಿಗಾಗಿ ವಿವಿಧ ಸಮುದಾಯದವರು ನಡೆಸಿರುವ ಹೋರಾಟ ಗುರುವಾರ ವಿಧಾನ ಪರಿಷತ್‌ನಲ್ಲಿಯೂ ಪ್ರತಿಧ್ವನಿಸಿತು. ಪಕ್ಷಭೇದ ಮರೆತು ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿದರು.

ಎಚ್‌. ಕಾಂತರಾಜು ನೇತೃತ್ವದ ಆಯೋಗದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಸರ್ಕಾರ ಸ್ವೀಕರಿಸಿ, ಬಹಿರಂಗಪಡಿಸಿದರೆ ಮೀಸಲಾತಿಗೆ ಸಂಬಂಧಿಸಿದ ಎಷ್ಟೋ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಸದಸ್ಯರು ಒಕ್ಕೊರಲಿನಿಂದ ಪ್ರತಿಪಾದಿಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಬಿಜೆಪಿಯ ಕೆ.ಪಿ. ನಂಜುಂಡಿ, 'ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಜನಗಣತಿ ಸಮೀಕ್ಷಾ ವರದಿ ಸಿದ್ಧವಾಗಿ ಎರಡು ವರ್ಷಗಳೇ ಆಗಿವೆ. ಹಿಂದುಳಿದವರು ಮಾತ್ರವಲ್ಲದೆ, ಮೇಲ್ವರ್ಗದವರೂ ಈಗ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಯಾವ ಸಮುದಾಯದವರು ಎಷ್ಟಿದ್ದಾರೆ, ಯಾರಿಗೆ ಮೀಸಲಾತಿ ಅವಶ್ಯಕತೆ ಇದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಲಿದ್ದು, ಅದನ್ನು ಬಿಡುಗಡೆ ಮಾಡುವುದು ಹೆಚ್ಚು ಪ್ರಸ್ತುತ' ಎಂದರು. ಬಿಜೆಪಿಯ ಎಚ್. ವಿಶ್ವನಾಥ್, 'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ₹162 ಕೋಟಿ ವೆಚ್ಚದಲ್ಲಿ ವೈಜ್ಞಾನಿಕವಾಗಿ ಈ ಜಾತಿಗಣತಿ ಮಾಡಿಸಿದ್ದಾರೆ. ಅವರ ಸರ್ಕಾರ ಮತ್ತು ನಂತರ ಅಧಿಕಾರ ನಡೆಸಿದ ಸರ್ಕಾರಗಳು ವರದಿ ಬಿಡುಗಡೆಗೆ ಏಕೆ ಹಿಂದೇಟು ಹಾಕುತ್ತಿವೆ ಎಂಬುದು ಅರ್ಥವಾಗುತ್ತಿಲ್ಲ' ಎಂದರು.

'ಸಂವಿಧಾನ ಉಲ್ಲಂಘನೆ'

'ಧರ್ಮಾತೀತ ಮತ್ತು ಜಾತ್ಯತೀತವಾಗಿ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಸಚಿವರು ಅವರ ಜಾತಿಗೆ ಸಂಬಂಧಿಸಿದ ಮೀಸಲಾತಿ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇದು ಸಂವಿಧಾನದ ಉಲ್ಲಂಘನೆ' ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ದೂರಿದರು.

'ಜಾತಿಗಣತಿ ವರದಿ ಬಿಡುಗಡೆ ಮಾಡುವುದು ಬಿಟ್ಟು, ಕಾಲಹರಣ ಮಾಡುವ ಉದ್ದೇಶದಿಂದ ಸರ್ಕಾರವು ತ್ರಿಸದಸ್ಯ ಸಮಿತಿ ರಚಿಸುವ ಬಗ್ಗೆ ಮಾತನಾಡುತ್ತಿದೆ' ಎಂದೂ ಅವರು ಟೀಕಿಸಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

Thursday, March 4, 2021

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಾಳೆ ಅಧಿಕಾರ ಸ್ವೀಕಾರ


 ಬೆಂಗಳೂರು : ನಾಳೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ಕೃಷಿ ಇಲಾಖೆಯ ರಾಯಭಾರಿಯಾಗಲಿದ್ದಾರೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಕನ್ನಡದ ಜನಪ್ರಿಯ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಧಿಕಾರ ಸ್ವೀಕಾರ ಸಮಾರಂಭ ದಿನಾಂಕ: 05-03-2021 ರಂದು ವಿಕಾಸಸೌಧ, ಬೆಂಗಳೂರಿನಲ್ಲಿ ನಡೆಯಲಿದೆ ಎಂದಿದ್ದಾರೆ.

ಕೃಷಿ ಮತ್ತು ಪ್ರಾಣಿಗಳ ಬಗ್ಗೆ ಹೆಚ್ಚು ಒಲವವನ್ನು ಹೊಂದಿರು ದರ್ಶನ್ ರಾಯಭಾರಿಯಾಗಲು ಸಂಭಾವನೆಯನ್ನು ಪಡೆದಿಲ್ಲ ಎನ್ನಲಾಗಿದೆ.

(ಮಾಹಿತಿ ಕೃಪೆ ಉದಯವಾಣಿ)

ಹುಟ್ಟುಹಬ್ಬದ ಸಂಭ್ರಮದಲ್ಲಿ ಹಿರಿಯ ನಟಿ ತಾರಾ


 ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟಿ ತಾರಾ ಇಂದು ತಮ್ಮ 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ ತಾರಾ 1984ರಂದು 'ಇಂಗೆಯುಮ್ ಒರು ಗಂಗೈ' ಎಂಬ ತಮಿಳು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 1985ರಂದು 'ತುಳಸಿ ದಳ' ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ಕನ್ನಡದಲ್ಲೇ ಹೆಚ್ಚಾಗಿ ನಟಿಸಿರುವ ಇವರು ತೆಲುಗು, ತಮಿಳಿನಲ್ಲೂ ಕೆಲ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.  ಹಲವಾರು ಪ್ರಶಸ್ತಿಗಳನ್ನು ಪಡೆದುಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ನಟಿ ತಾರಾ 1973 ಮಾರ್ಚ್ 4ರಂದು ಜನಿಸಿದ್ದು, ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

(ಮಾಹಿತಿ ಕೃಪೆ ಕನ್ನಡದುನಿಯಾ)

ಕೋಲಾರದಲ್ಲಿ ಪಿಎಸ್‌ಐ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡಿ ಆರೋಪಿ ಪರಾರಿ

 

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ಬಂಧಿಸಲು ಕೋಲಾರಕ್ಕೆ ತೆರಳಿದಾಗ ಆರೋಪಿ ಪಿಎಸ್‌ಐ ಮೇಲೆಯೇ ಲಾಂಗ್‌ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ನಗರದ ವೈಟ್‌ಫೀಲ್ಡ್ ಉಪವಿಭಾಗ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಅಪ್ಟೆನ್, ಹಲವು ದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದನು. ಕೆಜಿಎಫ್‌ ನಲ್ಲಿಆರೋಪಿ ಇರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಹದೇವಪುರ ಠಾಣೆ ಪಿಎಸ್‌ಐ ಹರಿನಾಥ್ ಹಾಗೂ ಸಿಬ್ಬಂದಿ ಬುಧವಾರ ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು.

ಈ ವೇಳೆ ಆರೋಪಿ ಪಿಎಸ್‌ಐ ಬಲಗೈಗೆ ‌ಲಾಂಗ್ ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದನು. ಹೀಗಾಗಿ ತಮ್ಮ ಆತ್ಮರಕ್ಷಣೆಗಾಗಿ ಪಿಎಸ್‌ಐ ಆರೋಪಿ ಮೇಲೆ ಗುಂಡು ಹಾರಿಸಿದ್ದರು. ಅದರಿಂದ ತಪ್ಪಿಸಿಕೊಂಡು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಗಾಯಗೊಂಡಿರುವ ಪಿಎಸ್‌ಐ ಹರಿನಾಥ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಾರಿಯಾದ ಆರೋಪಿ ಪತ್ತೆಗೂ ಶೋಧ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.

(ಮಾಹಿತಿ ಕೃಪೆ ಕನ್ನಡಪ್ರಭ)

ಸದನದಲ್ಲೇ ಅಂಗಿ ಬಿಚ್ಚಿದ ಶಾಸಕ! ಸಿಎಂ ಮತ್ತು ಈಶ್ವರಪ್ಪ ವಿರುದ್ಧ ಆಕ್ರೋಶ.


 ಬೆಂಗಳೂರು: ಭದ್ರಾವತಿ ಕ್ಷೇತ್ರದಲ್ಲಿ ಭಾರಿ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಕುಟುಂಬದ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸಿದ್ದಾರೆ. ರಾಜ್ಯ ಸರ್ಕಾರ ನನ್ನ ವಿರುದ್ಧ ಸೇಡಿನ ರಾಜಕಾರಣ ಮಾಡ್ತಿದೆ. ನೀವು ನನ್ನ ರಕ್ಷಣೆಗೆ ಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಇಂದು ಬೆಳಗ್ಗೆ ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ಶಾಸಕ ಸಂಗಮೇಶ್ ಅಳಲು ತೋಡಿಕೊಂಡಿದ್ದರು. ಇದಾದ ಕೆಲವೇ ಹೊತ್ತಿನಲ್ಲಿ ಸದನದಲ್ಲಿ ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದರು.

ಸದನದಲ್ಲೇ ಶಾಸಕ ಬಿ.ಕೆ. ಸಂಗಮೇಶ್ ಶರ್ಟ್ ಬಿಚ್ಚಿ ಹೆಗಲ ಮೇಲೆ ಹಾಕಿಕೊಂಡು ಪ್ರತಿಭಟಿಸಿದ್ದಕ್ಕೆ ಗರಂ ಆದ ಸ್ಪೀಕರ್, ಸದನ ಅಂದ್ರೆ ಏನ್​ ಅನ್ಕೊಂಡಿದ್ದೀರಿ? ಸದನ ಅಂದ್ರೆ ತಮಾಷೆನಾ? ನಿಮ್ಮ ಈ ವರ್ತನೆ ಮೂಲಕ ಕ್ಷೇತ್ರದ ಜನತೆಗೆ ಅಗೌರವ ತಂದಿದ್ದೀರಿ. ಸಭ್ಯತೆ ಮರೆತು ವರ್ತಿಸಿದ್ದೀರಿ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಒಂದು ವಾರ ಸದನಕ್ಕೆ ಬಾರದಂತೆ ಅಮಾನತು ಮಾಡಿದ್ದಾರೆ. ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಸಂಗಮೇಶ್​, ತನ್ನ ಮೇಲೆ ಸಿಎಂ ಕುಟುಂಬಸ್ಥರೇ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈದಿದ್ದಾರೆ.

ನನ್ನನ್ನು ಅಮಾನತು ಮಾಡಿದ ಸ್ಪೀಕರ್ ಆದೇಶ ಹಿಂದೆ ಸಚಿವ ಈಶ್ವರಪ್ಪ, ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಇದ್ದಾರೆ. ನಾನು ಸ್ಪೀಕರ್ ಆದೇಶ ಒಪ್ಪಲ್ಲ. ಸ್ಪೀಕರ್ ರಾಜಕೀಯ ಏಜೆಂಟ್. ಬಿಜೆಪಿ ಸರ್ಕಾರದ ಏಜೆಂಟ್ ಆಗಿದ್ದಾರೆ. ನಾನು ಸದನಕ್ಕೆ ಹೋಗುತ್ತೇನೆ. ಸದನಕ್ಕೆ ಬರುವಂತೆ ಡಿಕೆಶಿ, ಸಿದ್ದರಾಮಯ್ಯ ಹೇಳಿದ್ದಾರೆ. ಆದೇಶ ಹಿಂಪಡೆಯದಿದ್ರೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡ್ತೀವಿ ಎಂದು ಸಂಗಮೇಶ್​ ತಿಳಿಸಿದರು.

ಹೌದು, ಸದನದಲ್ಲಿ ನಾನು ಶರ್ಟ್ ಬಿಚ್ಚಿದ್ದು ನಿಜ. ಶರ್ಟ್ ಬಿಚ್ಚಿ ಪ್ರತಿಭಟನೆ ಮಾಡುವುದು ತಪ್ಪಲ್ಲ. ಪ್ಯಾಂಟ್-ಬನಿಯನ್ ಬಿಚ್ಚಿಲ್ಲ, ಯಾರ್ಯಾರೋ ಏನೇನೋ ಬಿಚ್ಚಿದ್ದಾರೆ, ಅಂಥವರ ಬಗ್ಗೆ ಕ್ರಮ ಇಲ್ಲ ಎಂದು ಟೀಕಿಸಿದರು. ಭದ್ರಾವತಿ ಕ್ಷೇತ್ರದಲ್ಲಿ ಬಿಜೆಪಿ ಡೆಪಾಸಿಟ್ ಇಲ್ಲ. ಭದ್ರಾವತಿ ಜನರನ್ನ ಹೊಡೆಯುವ ಕೆಲಸ ಮಾಡ್ತಿದ್ದಾರೆ. ನಾನು ಹಿಂದು, ಎಲ್ಲರೂ ಭಾರತೀಯರು. ಇವರು ಢೋಂಗಿ ರಾಮನ ಭಕ್ತರು. ನಾವು ಆತ್ಮದಲ್ಲಿ ರಾಮನನ್ನ ಇಟ್ಟುಕೊಂಡಿದ್ದೇವೆ. ನನ್ನನ್ನು ಯಾವ ಕಾರಣಕ್ಕೆ ಸಸ್ಪೆಂಡ್ ಮಾಡಿದ್ರು? ಒಂದು ವಾರ ಅಲ್ಲ, ಇನ್ನೊಂದು ವಾರ ಅಮಾನತು ಮಾಡ್ಲಿ ನಾನು ಹೆದರಲ್ಲ ಎಂದು ಎಚ್ಚರಿಸಿದರು.

ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಿಎಂ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಕೇಸ್ ಹಾಕಿದ್ದಾರೆ. ನನ್ನ ಮನೆಯವರು ತಲೆ ಮರೆಸಿಕೊಂಡಿದ್ದಾರೆ. ತಾಕತ್ತಿದ್ದರೆ ಈಶ್ವರಪ್ಪ ನನ್ನನ್ನು ಜೈಲಿಗೆ ಕಳಿಸಲಿ. ನಾವು ಅವರಂತೆ ಸಿಡಿ ಮಾಡಿಲ್ಲ. ಭ್ರಷ್ಟಾಚಾರ ಮಾಡಿಲ್ಲ, ಅನ್ಯಾಯ ಮಾಡಿಲ್ಲ, ಶಿವಮೊಗ್ಗದಲ್ಲಿ‌ ಗಣಿ ಸ್ಫೋಟವಾಯ್ತು. ಅದರಲ್ಲಿ ಮೂವರು ಇನ್ನೂ ಸಿಕ್ಕಿಲ್ಲ ಎಂದು ಸಂಗಮೇಶ್​ ಕಿಡಿಕಾರಿದರು.

ಇತ್ತ ಮಧ್ಯಾಹ್ನ ಸದನಕ್ಕೆಂದು ಹೊರಟ ಶಾಸಕ ಸಂಗಮೇಶ್​ರನ್ನ ಪೂರ್ವ ಭಾಗಿಲಿನಲ್ಲೇ ತಡೆದ ಮಾರ್ಷಲ್​ಗಳು, ಒಳಬಿಡುವಂತಿಲ್ಲ, ಸ್ಪೀಕರ್ ಆದೇಶ ಇದೆ ಎಂದರು. ಅಷ್ಟರಲ್ಲಿ ಗರಂ ಆದ ಮಾಜಿ ಸಿಎಂ ಸಿದ್ದರಾಮಯ್ಯ,ಏಯ್ ಮಾರ್ಷಲ್, ಆದೇಶದ ಪ್ರತಿ ಇದ್ಯಾ? ಆದೇಶ ಬರುವವರೆಗೂ ಹೇಗೆ ತಡೆಯುತ್ತೀಯಾ? ಪರ್ಮನೆಂಟ್ ಆಗಿ ಅಮಾನತು ಮಾಡ್ತೀರಾ? ಎಂದರು. ನಡಿಯೋ ಒಳಗೆ ಎನ್ನುತ್ತಾ ಶಾಸಕ ಸಂಗಮೇಶ್​ರನ್ನು ವಿಧಾನಸಭೆ ಅಧಿವೇಶನ ಕಾರಿಡಾರ್​ಗೆ ಕರೆದೊಯ್ದರು.

(ಮಾಹಿತಿ ಕೃಪೆ ವಿಜಯವಾಣಿ)

ಪಡಿತರ ಪಡೆಯುವಲ್ಲಿ ಸಮಸ್ಯೆ ಉಂಟಾಗುತ್ತಿದ್ದರೆ ಈ ಟೋಲ್‌ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಿ


 ಪಡಿತರ ಚೀಟಿ ಸರ್ಕಾರದಿಂದ ನೀಡಲಾಗುವ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಪಡೆಯುವ ಸೌಲಭ್ಯವನ್ನು ನೀಡುತ್ತದೆ. ಆದರೆ ಪ್ರತಿನಿತ್ಯ ಪಡಿತರ ಚೀಟಿ ಫಲಾನುಭವಿಗಳು ಆಹಾರ ಧಾನ್ಯವನ್ನು ಪಡೆಯುವಲ್ಲಿ ಒಂದಲ್ಲಾ ಒಂದು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಚೀಟಿ ಇದ್ದರೂ ಕೂಡ ಅವರಿಗೆ ಸಲ್ಲಬೇಕಾದ ಆಹಾರ ಧಾನ್ಯವನ್ನ ಸರಿಯಾದ ಪ್ರಮಾಣದಲ್ಲಿ ನೀಡುತ್ತಿಲ್ಲ ಎಂಬುದು ಹೆಚ್ಚಾಗಿ ಕೇಳಿಬರುತ್ತಿರುವ ದೂರು. ಹೀಗಾಗಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ( ಎನ್‌ ಎಫ್‌ಎಸ್‌ಎ) ಗ್ರಾಹಕರಿಗೆ ಸರಿಯಾದ ಪ್ರಮಾಣದಲ್ಲಿ ಪಡಿತರ ನೀಡುವ ಸೌಲಭ್ಯ ಒದಗಿಸಲು ಹಾಗೂ ಇಂತಹ ದೂರುಗಳಿಗೆ ತಕ್ಷಣ ಸ್ಪಂದಿಸಲು ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯನ್ನ ಮೀಸಲಿಟ್ಟಿದೆ. ಪಡಿತರ ಪಡೆಯುವಲ್ಲಿ ಸಮಸ್ಯೆ ಉಂಟಾದರೆ ಈ ಟೋಲ್‌ ಪ್ರೀ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬಹುದು ಅಥವಾ https://nfsa.gov.in/ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಬಹುದು. ಭ್ರಷ್ಟಾಚಾರ ನಿಯಂತ್ರಣದಲ್ಲಿ ಹಾಗೂ ಪಡಿತರ ಪಡೆಯುವಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ದೂರು ಸಹಾಯಕವಾಗಲಿದೆ.

ಕರ್ನಾಟಕ: 1800-425-9339
ಕೇರಳಾ- 1800-425-1550
ಮಹಾರಾಷ್ಟ್ರ- 1800-22-4950
ಗೋವಾ- 1800-233-0022
ಆಂದ್ರಪ್ರದೇಶ- 1800-425-2977
ಮಧ್ಯಪ್ರದೇಶ- 181
ಬಿಹಾರ-  1800-3456-194 
ಗುಜರಾತ್- 1800-233-5500
ಉತ್ತರಪ್ರದೇಶ- 1800-180-0150
ಪಶ್ಚಿಮ ಬಂಗಾಳ- 1800-345-5505
ತೆಲಂಗಾಣ- 1800-4250-0333
ಪಂಜಾಬ್- 1800-3006-1313

(ಮಾಹಿತಿ ಕೃಪೆ ಒನ್ ಇಂಡಿಯಾ ಎಕ್ಸ್ಕ್ಲೂಸಿವ್)

ಕಾಳಸಂತೆಯಲ್ಲಿ ಮಾರಲು ರೈಸ್ ಮಿಲ್ ಗಳಲ್ಲಿ ಸಂಗ್ರಹಿಸಿದ್ದ ಅಕ್ರಮ ಅಕ್ಕಿ ಪತ್ತೆ


 ರಾಯಚೂರಿನ 4 ರೈಸ್ ಮಿಲ್ ಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.

ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ನೇತೃತ್ವದಲ್ಲಿ ಗುರುವಾರ ಮುಂಜಾನೆ ನಡೆದ ದಾಳಿ ವೇಳೆ 4 ರೈಸ್ ಗಳಲ್ಲಿ 6.61,980 ರೂ. ಮೌಲ್ಯದ 884 ಚೀಲ ಪಡಿತರ ಅಕ್ಕಿ ಪತ್ತೆಯಾಗಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.

ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅಕ್ರಮ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ.

ಮಂಚಾಲಪುರ ರಸ್ತೆಯಲ್ಲಿನ ಕೃಷ್ಣ ಸ್ವಾಮಿ ರೈಸ್ ಮಿಲ್ ಮೇಲೆ ದಾಳಿ ನಡೆಸಿ 2 ಲಕ್ಷ 23 ಸಾವಿರದ 150 ರೂ. ಮೌಲ್ಯದ 337 ಚೀಲ ಅಕ್ಕ ವಶಪಡಿಸಿಕೊಳ್ಳಲಾಗಿದೆ. ಗದ್ವಾಲ್ ರಸ್ತೆಯಲ್ಲಿನ ಬರುವ ನರಸಿಂಹ ರೈಸ್ ಮಿಲ್ ನಲ್ಲಿ 67,650 ಮೌಲ್ಯದ 109 ಚೀಲ ಹಾಗೂ ಚಂದ್ರಿಕಾ ರೈಸ್ ಮಿಲ್ ನಲ್ಲಿ 46,500 ರೂ. ಮೌಲ್ಯದ 60 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. 

(ಮಾಹಿತಿ ಕೃಪೆ ಕನ್ನಡದ ವಾಹಿನಿ) 

ಆರೋಪ ಬಂದಾಗಲೇ ರಮೇಶ ರಾಜೀನಾಮೆ ಕೊಡಬೇಕಿತ್ತು: ಸತೀಶ ಜಾರಕಿಹೊಳಿ


 ಬೆಳಗಾವಿ: 'ಆರೋಪ ಕೇಳಿಬಂದ ಕೂಡಲೇ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಒಂದು ದಿನ ಕಾಯುವ ಅಗತ್ಯವಿರಲಿಲ್ಲ' ಎಂದು ಸಹೋದರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಗೋಕಾಕದಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ವಿರೋಧ ಪಕ್ಷ, ಆಡಳಿತ ಪಕ್ಷ ಹಾಗೂ ಜನರ ಆಗ್ರಹದಂತೆ ರಾಜೀನಾಮೆ ನೀಡಿದ್ದಾರೆ. ಈಗ
ನೈತಿಕತೆಯ ವಿಚಾರ ಮುಗಿದಿದೆ. ಇನ್ನೇನಿದ್ದರೂ ಕಾನೂನು ಹೋರಾಟವಷ್ಟೆ. ಆ ಸಿ.ಡಿ. ನಕಲಿಯೋ, ಅಸಲಿಯೋ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು. ಸತ್ಯ ಬಯಲಿಗೆಳೆಯಬೇಕು' ಎಂದರು.

'ನಾವು ಸಹೋದರರಿರಬಹುದು. ಆದರೆ, ಪಕ್ಷ ಬೇರೆ. ಪಕ್ಷವೆಂದು ಬಂದಾಗ ನಮ್ಮ ಪಕ್ಷದ ಪರ ನಿಲ್ಲುತ್ತೇವೆ. ಎಲ್ಲದ್ದಕ್ಕೂ ಕುಟುಂಬ ಬೆರೆಸುವುದು ಸರಿಯಲ್ಲ' ಎಂದು ಹೇಳಿದರು.

'ರಮೇಶಗೆ ಅವರ ಪಕ್ಷದಲ್ಲೂ ಆಗದವರು ಇರುತ್ತಾರೆ. ಎಚ್ಚರಿಕೆಯಿಂದ ಇರಬೇಕು' ಎಂದು ಸಲಹೆ ನೀಡಿದರು.

(ಮಾಹಿತಿ ಕೃಪೆ ಪ್ರಜಾವಾಣಿ)

ರಾಸಲೀಲೆ ವಿಡಿಯೊ: ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು


ಬೆಂಗಳೂರು: ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೊ ಬಹಿರಂಗಪಡಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಕಬ್ಬನ್‌ ಪಾರ್ಕ್‌ ಠಾಣೆಗೆ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ದೂರು ನೀಡಿದೆ.

'ರಾಸಲೀಲೆ ವಿಡಿಯೊ ಬಹಿರಂಗದ ಹಿಂದೆ ರಾಜಕೀಯ ಷಡ್ಯಂತ್ರ ಇದೆ. ರಮೇಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಕುಗ್ಗಿಸುವ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ವಿಡಿಯೊಗೆ ಹಾಗೂ ದಿನೇಶ್ ಅವರಿಗೆ ಯಾವುದೇ ಸಂಬಂಧವಿಲ್ಲ. ಯುವತಿಗೆ ನಿಜವಾಗಿ ಅನ್ಯಾಯವಾಗಿದ್ದರೆ ಏಕೆ ದೂರು ನೀಡಿಲ್ಲ?' ಎಂದು ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಇದನ್ನೂ ನೋಡಿ..

'ವಿಡಿಯೊದಲ್ಲಿ ಸಮ್ಮತಿಯುತ ಲೈಂಗಿಕ ಕ್ರಿಯೆ ವ್ಯಕ್ತವಾಗಿದೆ. ವೈಯಕ್ತಿಕ ವಿಚಾರವನ್ನು ಅಪಪ್ರಚಾರ ಮಾಡಲಾಗುತ್ತಿದ್ದು, ಇದರ ಹಿಂದೆ ಪ್ರಭಾವಿಗಳು ಇರಬಹುದು. ಇದೊಂದು ಬ್ಲ್ಯಾಕ್‌ಮೇಲ್ ರಾಜಕಾರಣ. ವಿಡಿಯೊ ಕುರಿತು ಸಮಗ್ರ ತನಿಖೆಯಾಗಬೇಕು. ದಿನೇಶ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ. ನಾಳೆ ಠಾಣೆಗೆ ಬರುವಂತೆ ನೋಟಿಸ್: ರಾಸಲೀಲೆ ವಿಡಿಯೊ ಪ್ರಕರಣ ಸಂಬಂಧ ಕಬ್ಬನ್‌ ಪಾರ್ಕ್‌ ಠಾಣೆಗೆ ಗುರುವಾರ (ಮಾ.4) ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ದಿನೇಶ್‌ ಕಲ್ಲಹಳ್ಳಿ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ರಾಸಲೀಲೆ ವಿಡಿಯೊ ಸಂಬಂಧ ದಿನೇಶ್‌ ಅವರು ಇದೇ ಠಾಣೆಗೆ ದೂರು ನೀಡಿದ್ದರು. ಹೆಚ್ಚಿನ ವಿಚಾರಣೆ ನಡೆಸಲು ಸಲುವಾಗಿ ನೋಟಿಸ್ ನೀಡಿರುವುದಾಗಿ ಮೂಲಗಳು ತಿಳಿಸಿವೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಜನ ಮರಳೋ ಜಾತ್ರೆ ಮರಳೋ.. ತಾಯಿಗೆ ಮಗಳು ಸೀರೆ ಕೊಡಿಸಬೇಕು! ಬಳ್ಳಾರಿಯಲ್ಲಿ ಹಬ್ಬಿದೆ ವದಂತಿ

 

ಬಳ್ಳಾರಿ : ಗಣಿನಾಡು ಬಳ್ಳಾರಿಯಲ್ಲಿ ವದಂತಿಯೊಂದು ಹಬ್ಬಿದ್ದು, ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಹಬ್ಬಿದ್ದು, ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣಾ ಭಾಗದಲ್ಲಿ ತಾಯಿಗೆ ಮಗಳು ಸೀರೆ ಕೊಡಿಸಬೇಕು. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಗೆ ಸೀರೆ ಖರೀದಿಸಲು ಮುಗಿಬಿದ್ದಿದ್ದಾರೆ. ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಸಲು ಮುಂದಾಗಿದ್ದಾರೆ. ಸೀರೆ ಖರೀದಿಸಿ ಮಹಿಳೆಯರು ತವರಿಗೆ ಹೋಗಿ ತಾಯಿ ಹಣೆಗೆ ಕುಂಕಮ ಇಟ್ಟು ಸೀರೆ ಕೊಟ್ಟು ಬರುತ್ತಿದ್ದಾರೆ. ಕಳೆದ ವಾರದಿಂದ ಈ ವದಂತಿ ಹಬ್ಬಿದೆ ಎನ್ನಲಾಗಿದ್ದು, ವದಂತಿಯಿಂದ ಸೀರೆ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ.

(ಮಾಹಿತಿ ಕೃಪೆ ಕನ್ನಡ ನ್ಯೂಸ್ ನೌವ್)