WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Friday, May 28, 2021

ಕೆಎಎಸ್‌ ಅಧಿಕಾರಿ ಪತಿ ಕೋವಿಡ್‌ನಿಂದ ಸಾವು

 

ಶಿವಮೊಗ್ಗ: ಮದುವೆಯ ನಂತರ ಪತ್ನಿಯನ್ನು ಓದಿಸಿ, ಅವರ ಕೆಎಎಸ್‌ ಕನಸಿಗೆ ನೀರೆರೆದಿದ್ದ ಪತಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ನಗರದ ಕಾಮಾಕ್ಷಿ ಬೀದಿಯ ಎಲ್‌.ಶ್ರೀನಿವಾಸ್‌ (45) ಮೃತಪಟ್ಟವರು.

ಇವರು ಅಕ್ಕನ ಮಗಳನ್ನೇ ಮದುವೆಯಾಗಿದ್ದರು. ತಮ್ಮ ಸಾಧುಶೆಟ್ಟಿ ಸಮಾಜದಲ್ಲಿ ಹೆಣ್ಣುಮಕ್ಕಳು ಓದುವುದಿಲ್ಲ ಎಂಬ ಆಪಾದನೆಯಿಂದ ಮುಕ್ತವಾಗಬೇಕು ಎಂದು ಪತ್ನಿ ಅಶ್ವಿನಿಗೆ ಓದಲು ಪ್ರೇರಣೆ ನೀಡಿದ್ದರು. ಪತಿಯ ನಿರೀಕ್ಷೆ ಹುಸಿಗೊಳಿಸದ ಅಶ್ವಿನಿ ಪದವಿ ನಂತರ ಕೆಎಎಸ್‌ ತೇರ್ಗಡೆಯಾಗಿದ್ದರು. ಪ್ರಸ್ತುತ ತುಮಕೂರಿನಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ತಹಶೀಲ್ದಾರ್ ಹುದ್ದೆ ಪೂರ್ಣಪ್ರಮಾಣದಲ್ಲಿ ದೊರಕುವ ಮೊದಲೇ ಪತಿ ಶ್ರೀನಿವಾಸ್‌ ನಿಧನರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಶ್ರೀನಿವಾಸ್‌ ಚಿಕಿತ್ಸೆಗೆ ಸ್ಪಂದಿಸಲಿಲ್ಲ.

(ಮಾಹಿತಿ ಕೃಪೆ ಪ್ರಜಾವಾಣಿ )

ಬ್ಲ್ಯಾಕ್‌ ಫಂಗಸ್ ಗೆ ಕಾರಣಗಳು ಹಲವು

 

ಕೋವಿಡ್ ಸೋಂಕು ಹೆಚ್ಚುತ್ತಿದ್ದಂತೆ ಬ್ಲ್ಯಾಕ್‌ ಫ‌ಂಗಸ್‌ ಕೂಡ ಹೆಚ್ಚುತ್ತಿದೆ. ಇದು ಕೊರೊನಾಕ್ಕಿಂತ ಹೆಚ್ಚು ಅಪಾಯಕಾರಿ, ಮರಣಾಂತಿಕ. ಇದು ಬಂತೆಂದರೆ ಕಣ್ಣು, ಮೂಗು, ಮೂಗಿನ ಹತ್ತಿರದ ಮಾಂಸ, ಮೂಳೆಯನ್ನು ತೆಗೆಯಬೇಕಾದ ಅಪಾಯವಿದೆ.

ಮಧುಮೇಹ ಅಧಿಕ ಇದ್ದವರಿಗೆ ಬ್ಲ್ಯಾಕ್‌ ಫ‌ಂಗಸ್‌ (ಮ್ಯೂಕರ್‌ಮೈಕೋಸಿಸ್‌) ಬರುತ್ತದೆ. ಸ್ಟಿರಾಯ್ಡ ಔಷಧವನ್ನು ಕೊಟ್ಟಾಗ ಮಧುಮೇಹ ಹೆಚ್ಚಾಗುತ್ತದೆ. ಮಧುಮೇಹ ಇಲ್ಲದವರಿಗೆ ಕೊರೊನಾ ಬಂದರೆ ಮಧುಮೇಹ ಹೊಸದಾಗಿ ಅಂಟಿಕೊಳ್ಳುತ್ತದೆ. ಮಧುಮೇಹ ನಿಯಂತ್ರಣದಲ್ಲಿದ್ದ ವರಿಗೆ ಕೋವಿಡ್ ಬಂದರೆ ಒಮ್ಮೆಲೆ ಅಧಿಕ ವಾಗುತ್ತದೆ. ಕೊರೊನಾ ನಿಯಂತ್ರಿಸಲು ಸ್ಟಿರಾಯ್ಡ ಕೊಡಬೇಕಾಗುತ್ತದೆ. ಆಗ ಮಧುಮೇಹ ಜಾಸ್ತಿಯಾಗುತ್ತದೆ. ಇಂತಹ ಸಂದರ್ಭಕ್ಕಾಗಿಯೇ ಮ್ಯೂಕರ್‌ ಮೈಕೋ ಸಿಸ್‌ ಫ‌ಂಗಸ್‌ ಕಾದು ಕುಳಿತಿರುತ್ತದೆ. ಇಂತಹವರನ್ನೇ ಫ‌ಂಗಸ್‌ ಆಶ್ರಯಿಸುತ್ತದೆ.

ಕೊರೊನಾ ಸೋಂಕು ಬಂದು ಉಸಿ ರಾಟದ ಸಮಸ್ಯೆಯಾದಾಗ ಸಹಜವಾಗಿ ಆಕ್ಸಿಜನ್‌ ಅಗತ್ಯವಾಗುತ್ತದೆ. ಆಕ್ಸಿಜನ್‌ ಬೇಡಿಕೆ ಹೆಚ್ಚಾದ ಕಾರಣ ಎಲ್ಲಿ ಆಕ್ಸಿಜನ್‌ ಸಿಗುತ್ತದೋ ಅಲ್ಲಿಂದ ತರುವ ಸ್ಥಿತಿ ಇದೆ. ಹೀಗಾಗಿ ಕೈಗಾರಿಕಾ ಆಕ್ಸಿಜನ್‌ ಕೂಡ ಬಳಕೆಯಾಗುತ್ತಿದೆ. ಕೈಗಾರಿಕಾ ಆಕ್ಸಿಜನ್‌ ಅಷ್ಟು ಶುದ್ಧ ಆಗಿರುವುದಿಲ್ಲ. ಇದರಲ್ಲಿ ಸ್ವಲ್ಪ ಮಿಶ್ರಣ ಇರುತ್ತದೆ. ಆಕ್ಸಿಜನ್‌ ಕಾನ್ಸಂಟ್ರೇಟರ್‌ ಬಳಕೆಯಾಗುತ್ತಿದೆ. ಇದು ವಿದೇಶಗಳಿಂದ ದೇಣಿಗೆಯಾಗಿಯೂ ಬರುತ್ತಿದೆ. ಆಕ್ಸಿಜನ್‌ ಅನ್ನು ನೇರವಾಗಿ ಕೊಡಲು ಆಗುವುದಿಲ್ಲ, ನೀರಿನ ಮೂಲ ಕವೇ ಕೊಡಬೇಕು. ಆಗ ಬಹಳ ಜಾಗರೂಕತೆಯಿಂದ ಶುದ್ಧ ನೀರನ್ನು ಬಳಸಬೇಕು. ಎಲ್ಲ ಕಡೆ ಶುದ್ಧ ನೀರು ಸಿಗುತ್ತದೆಯೆ? ಎಲ್ಲ ಮನೆಗಳಲ್ಲಿಯೂ, ಎಲ್ಲ ಆಸ್ಪತ್ರೆಗಳಲ್ಲಿಯೂ ಇದನ್ನು ನಿರೀಕ್ಷಿ ಸುವುದು ಕಷ್ಟಸಾಧ್ಯ. ಯಾವುದೋ ನಳ್ಳಿ ನೀರನ್ನು ಬಳಸಿದರೆ ಅಪಾಯವಿದೆ. ಆದ್ದರಿಂದ ಪರಿಶುದ್ಧ ನೀರನ್ನೇ ಉಪಯೋಗಿಸಬೇಕು.

ಇತ್ತೀಚೆಗಿನ ಅಧ್ಯಯನವೊಂದರ ವರದಿಯ ಪ್ರಕಾರ ಬ್ಲ್ಯಾಕ್‌ ಫ‌ಂಗಸ್‌ ಕಾಣಿಸಿಕೊಳ್ಳಲು ಕೊರೊನಾ ಸೋಂಕಿನ ಪರೀಕ್ಷೆಯ ವೇಳೆ ಗಂಟಲ ದ್ರವ ಸಂಗ್ರಹಿ ಸಲು ಬಳಸಲಾಗುವ ನೈರ್ಮಲ್ಯ ಯುತ ವಾಗಿರದ ನಾಳಗಳೂ ಕಾರಣವಾಗುತ್ತಿ ರುವುದು ಸಾಬೀತಾಗಿದೆ. ಅಷ್ಟು ಮಾತ್ರ ವಲ್ಲದೆ ಬ್ಲ್ಯಾಕ್‌ ಫ‌ಂಗಸ್‌ನಿಂದ ಬಾಧಿತ ರಾಗಿರುವ ಶೇ.60ರಷ್ಟು ರೋಗಿಗಳಿಗೆ ಕೋವಿಡ್‌ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟಿರಾಯ್ಡ ಅಥವಾ ಆಮ್ಲಜನಕವನ್ನು ನೀಡ ಲಾಗಿರಲಿಲ್ಲ ಎಂಬುದೂ ಅಧ್ಯಯನದ ವೇಳೆ ಬೆಳಕಿಗೆ ಬಂದಿದೆ. ಇವೆಲ್ಲವೂ ಗಂಟಲದ್ರವ ಸಂಗ್ರಹಕ್ಕೆ ಬಳಸಲಾಗುವ ನಾಳಗಳು ಕೂಡ ಬ್ಲ್ಯಾಕ್‌ಫ‌ಂಗಸ್‌ ಹರ ಡಲು ಕಾರಣವಾಗುತ್ತಿದೆ ಎಂಬ ಬಲವಾದ ಸಂಶಯ ಮೂಡುವಂತೆ ಮಾಡಿದೆ.

ಅಸುರಕ್ಷಿತ ಮತ್ತು ಅನೈರ್ಮಲ್ಯ ದಿಂದ ಕೂಡಿದ ಪ್ರದೇಶಗಳಲ್ಲಿ ಈ ನಾಳಗಳನ್ನು ತಯಾರಿಸಿದರೆ ಅಪಾಯ ಕಟ್ಟಿಟ್ಟಬುತ್ತಿಯೇ ಸರಿ. ದೇಶಾದ್ಯಂತ ಕೋವಿಡ್‌ ಪಸರಿಸು ತ್ತಿರುವ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಕೊರೊನಾ ಪರೀಕ್ಷೆಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ನಾಳಗಳ ತಯಾರಿಕೆ ವೇಳೆ ನೈರ್ಮಲ್ಯದತ್ತ ಗಮನ ಹರಿಸಬೇಕಿದೆಯಲ್ಲದೆ ಗಂಟಲ ದ್ರವ ಸಂಗ್ರಹದ ವೇಳೆ ನಾಳದ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳುವುದು ಬಲುಮುಖ್ಯ. ಗಂಟಲ ದ್ರವ ಸಂಗ್ರಹಿಸುವವರಿಗೂ ಸೂಕ್ತ ತರಬೇತಿಯನ್ನು ನೀಡುವುದು ಅತ್ಯಗತ್ಯವಾಗಿದೆ. ನಾಳವನ್ನು ಮೂಗಿಗೆ ಎರಡು ಸೆಂಟಿಮೀಟರ್‌ ಹಾಕಿದರೆ ಸಾಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ನಾಲ್ಕು ಸೆಂಟಿಮೀಟರ್‌ ಆಳದವರೆಗೆ ಹಾಕಿ ತಿರುಗಿಸಿ ದ್ರವ ಸಂಗ್ರಹಿಸಲಾಗುತ್ತಿದೆ. ಇವೆಲ್ಲವೂ ತೀರಾ ಅಪಾಯಕಾರಿ. ಇವೆಲ್ಲದರ ಬಗೆಗೆ ನಿಗಾ ವಹಿಸುವ ಜತೆಯಲ್ಲಿ ಹೆಚ್ಚಿನ ಅಧ್ಯಯನಗಳು ನಡೆಯಬೇಕು. ಇತ್ತ ಸರಕಾರ ಮತ್ತು ವೈದ್ಯಕೀಯ ತಜ್ಞರು ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

(ಮಾಹಿತಿ ಕೃಪೆ ಉದಯವಾಣಿ )

Wednesday, May 26, 2021

ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ 'ಕೂ'ಗೆ 30 ಮಿಲಿಯನ್ ಡಾಲರ್ ಹೂಡಿಕೆ!

 

ಬೆಂಗಳೂರು: ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ ಕೂ'ಸಾಮಾಜಿಕ ಜಾಲತಾಣದ ಆಪ್ ಗೆ ಹೂಡಿಕೆ ಹರಿದುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂ'ಗೆ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ.

ಸೀರೀಸ್ ಸಿ ರೌಂಡ್ ನಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಟೈಗರ್ ಗ್ಲೋಬಲ್ ಈಗಿರುವ ಹೂಡಿಕೆ ಸಂಸ್ಥೆಗಳಾದ ಆಕ್ಸೆಲ್ ಪಾರ್ಟ್ನರ್ಸ್, ಕಲಾರಿ ಕ್ಯಾಪಿಟಲ್, ಬ್ಲೂಮ್ ವೆಂಚರ್ಸ್ ಹಾಗೂ ಡ್ರೀಮ್ ಇನ್ಕ್ಯುಬೇಟರ್ ಗಳೊಂದಿಗೆ ಹೂಡಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.

ಈ ಸುತ್ತಿನಲ್ಲಿ ಐಐಎಫ್‌ಎಲ್ ಹಾಗೂ ಮಿರೀ ಅಸೆಟ್ಸ್ ಹೊಸದಾಗಿ ಹೂಡಿಕೆ ಮಾಡಿದ್ದು, ಒಟ್ಟು 30 ಮಿಲಿಯನ್ ಡಾಲರ್ ಹೂಡಿಕೆ ಹರಿದುಬಂದಿದೆ ಎಂದು ಹೇಳಿದೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಕೂ'ಆಪ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಬುಕ್ ಮೈ ಶೋ ಸ್ಥಾಪಕ ಆಶೀಶ್ ಹೇಮರಂಜನಿ, ಉಡಾನ್ ನ ಸಹ ಸಂಸ್ಥಾಪಕ ಸುಜೀತ್ ಕುಮಾರ್, ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ಝಿರೋದಾ ಸ್ಥಾಪಕ ನಿಖಿಲ್ ಕಾಮತ್ ಚೀನಾದ ಶುನ್ವೈ ಕ್ಯಾಪಿಟಲ್ ನ ಶೇ.9 ರಷ್ಟು ಪಾಲನ್ನು ಹೂಡಿಕೆ ಮೂಲಕ ಖರೀದಿಸಿದ್ದಾರೆ.

"ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕ ಮಟ್ಟದ ಸಾಮಾಜಿಕ ಜಾಲತಾಣವಾಗಿ ಬೆಳೆಯುವುದಕ್ಕೆ ತೀವ್ರವಾದ ಯೋಜನೆಗಳನ್ನು ಹೊಂದಿದೆ ಎಂದು ಕೂ' ಸಂಸ್ಥೆ ತಿಳಿಸಿದ್ದು ಈ ಕನಸನ್ನು ನನಸಾಗಿಸಿಕೊಳ್ಳುವುದಕ್ಕೆ ಟೈಗರ್ ಗ್ಲೋಬಲ್ ಸಂಸ್ಥೆ ಸರಿಯಾದ ಪಾಲುದಾರ ಸಂಸ್ಥೆ ಎಂದು ಕೂ'ಆಪ್ ನ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

(ಮಾಹಿತಿ ಕೃಪೆ ಕನ್ನಡ ಪ್ರಭ )

ವಾಹನ ಸವಾರರಿಗೆ ಬಿಗ್ ಶಾಕ್ : 100 ರೂ. ಗಡಿ ಸಮೀಪ ಪೆಟ್ರೋಲ್ ಬೆಲೆ!

 

ನವದೆಹಲಿ : ತೈಲ ಮಾರಾಟ ಕಂಪನಿಗಳು ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಳೆದ ಕೆಲವು ದಿನಗಳಿಂದ ಇಂಧನ ಬೆಲೆಗಳು ಅಲ್ಲಲ್ಲಿ ಏರಿಕೆಗೆ ಸಾಕ್ಷಿಯಾಗಿವೆ.

ಇಂಧನ ದರಗಳನ್ನು ಮತ್ತೆ ಹೆಚ್ಚಿಸಿದ ನಂತರ ಮಂಗಳವಾರ ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳ ಗಡಿಯತ್ತ ಏರಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್ ಗೆ 23 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 25 ಪೈಸೆ ಹೆಚ್ಚಿಸಲಾಗಿದೆ. ಈ ತಿಂಗಳು 13ನೇ ಏರಿಕೆಯು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ದೇಶಾದ್ಯಂತ ದಾಖಲೆಯ ಮಟ್ಟಕ್ಕೆ ಏರಿಕೆ ಕಂಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 93.44 ರೂ.ಗೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 84.32 ರೂ.ಗೆ ಏರಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 99.71 ರೂ.ಗೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 91.57 ರೂ.ಗೆ ಏರಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಹಲವಾರು ನಗರಗಳಲ್ಲಿ ದರಗಳು 100 ರೂ.ಗಳ ಗಡಿ ಸಮೀಪಿಸಿವೆ.

(ಮಾಹಿತಿ ಕೃಪೆ Kannada News Now )

Health Tips: ಶೀತ, ಗಂಟಲು ಕಿರಿಕಿರಿ ಸಮಸ್ಯೆಯೇ? ಈ ಸರಳ ಮನೆಮದ್ದು ಮಾಡಿ ನೋಡಿ

 

ಕೊರೊನಾ ಸೋಂಕಿನ ಸಂದರ್ಭದಲ್ಲಿ ಸಾಮಾನ್ಯ ಶೀತ, ಸೀನು ಬರುವುದು, ಗಂಟಲು ಕಿರಿಕಿರಿ ಸಮಸ್ಯೆಗಳು ಕೂಡ ಬಹಳ ಕಾಡಬಲ್ಲದು. ಭಯ, ಆತಂಕ ಸೃಷ್ಟಿಮಾಡಬಹುದು. ಕೊರೊನಾ ಸೋಂಕಿನ ಲಕ್ಷಣಗಳಿಲ್ಲದೆ ಅಥವಾ ಕೊರೊನಾ ಅಲ್ಲ ಎಂದು ವರದಿ ಬಂದ ನಂತರವೂ ಸಣ್ಣ ಪುಟ್ಟ ಶೀತ, ಗಂಟಲು ಕೆರೆತ ನಮ್ಮನ್ನು ಚಿಂತೆಗೀಡುಮಾಡಬಹುದು. ಅಂತಹ ಸಣ್ಣಪುಟ್ಟ ಸಮಸ್ಯೆಗಳಿಗೆ ನಾವು ಆತಂಕ ಪಡಬೇಕಾಗಿಲ್ಲ. ಮನೆಮದ್ದುಗಳ ಮೂಲಕವೇ ಕೆಲವೇ ದಿನಗಳಲ್ಲಿ ಸಮಸ್ಯೆಯಿಂದ ಪಾರಾಗಬಹುದು.

ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಶುರುವಾಗುವ ಕೆಮ್ಮು ಮತ್ತು ಶೀತದಂತಹ ಸಮಸ್ಯೆಗಳು ಗಂಟಲು ಕಿರಿಕಿರಿಯಂತಹ ಸಣ್ಣ ತೊಂದರೆಯಿಂದ ಆರಂಭವಾಗುತ್ತದೆ. ಇದು ಸಣ್ಣ ಸಮಸ್ಯೆಯೇ ಆದರೂ ಹಲವರಿಗೆ ಬಹಳ ಕಷ್ಟ ಎಂದು ಅನಿಸಬಹುದು. ಇಂತಹ ತೊಂದರೆಗಳಿಗೆ ಮನೆಮದ್ದು ವಿವರ ಇಲ್ಲಿದೆ.

ಬಿಸಿನೀರ ಪಾನೀಯ ಕುಡಿಯಿರಿ
ಶೀತ ಅಥವಾ ಗಂಟಲು ಕಿರಿಕಿರಿ ಉಂಟಾದರೆ ಸಾದಾ ಬಿಸಿನೀರು ಕುಡಿಯುವುದು ಕೂಡ ಉತ್ತಮವೇ ಆಗಿದೆ.

ಕುದಿಸಿದ ಹದವಾದ ಬೆಚ್ಚಗಿನ ನೀರನ್ನು ಕಾಫಿ ಸೇವಿಸಿದಂತೆ ಸ್ವಲ್ಪಸ್ವಲ್ಪವೇ ಸೇವಿಸಬಹುದು. ಅಥವಾ ಏಲಕ್ಕಿ, ಲವಂಗ, ಲಿಂಬು ರಸ, ದಾಲ್ಚಿನ್ನಿ ಸೇರಿಸಿ ಕುದಿಸಿದ ನೀರಿಗೆ ಹಾಕಿ, ಸ್ವಲ್ಪ ಹೊತ್ತು ಹಾಗೇ ಬಿಟ್ಟು ನಂತರ ಬಿಸಿಬಿಸಿಯಾಗಿ ಕುಡಿಯಬಹುದು.

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ
ಇದು ಕೂಡ ಬಹಳ ಪರಿಣಾಮಕಾರಿ ಮದ್ದು. ಗಂಟಲು ಕಿರಿಕಿರಿ ಅಥವಾ ಗಂಟಲು ನೋವಿನಂತ ಸಮಸ್ಯೆಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಸಮಸ್ಯೆಯು ಬಹು ಬೇಗನೇ ಶಮನವಗುತ್ತದೆ. ದಿನಕ್ಕೆ ಒಂದು ಬಾರಿ ಅಂದರೆ, ರಾತ್ರಿ ಮಲಗುವುದಕ್ಕೆ ಮುಂಚೆ ಅಥವಾ ಅಗತ್ಯವಿದ್ದರೆ ಬೆಳಗ್ಗೆಯೂ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚದಷ್ಟು ಉಪ್ಪನ್ನು ಬೆರೆಸಿ, ಗಂಟಲು ಮತ್ತು ಬಾಯಿ ಮುಕ್ಕಳಿಸಬೇಕು. ನಂತರ ಅದನ್ನು ಸೇವಿಸುವುದು ಒಳ್ಳೆಯದಲ್ಲ. ಉಗುಳಬೇಕು.

ಜೇನು ಅಥವಾ ಕಲ್ಲುಸಕ್ಕರೆ ಸೇವಿಸಿ
ಗಂಟಲು ಸಮಸ್ಯೆಗೆ ಜೇನು ಸವಿಯುವುದು ಅಥವಾ ಕಲ್ಲುಸಕ್ಕರೆ ತಿನ್ನುವುದು ಉಪಕಾರಿ. ದಿನಕ್ಕೆ ಎರಡು ಬಾರಿ ಒಂದೊಂದು ಚಮಚ ಜೇನು ಸವಿಯಬಹುದು. ಕಲ್ಲುಸಕ್ಕರೆಯನ್ನು ಬಾಯಲ್ಲಿಟ್ಟುಕೊಳ್ಳಬಹುದು. ಹೀಗೆ ಮಾಡುವುದರಿಂದ ಗಂಟಲು ಕೆರೆತದಿಂದ ಕೆಮ್ಮು ಬರುವುದು ಕಡಿಮೆ ಆಗುತ್ತದೆ.

ಇವೆಲ್ಲಾ ಮನೆಯಲ್ಲೇ ಮಾಡಬಹುದಾದ ಸರಳ ಮತ್ತು ಸಾಧ್ಯವಿರುವ ಮದ್ದಾಗಿದೆ. ಸಣ್ಣಪುಟ್ಟ ಶೀತ, ಗಂಟಲು ಕೆರೆತಕ್ಕೆ ಇವನ್ನು ಬಳಸಬಹುದು. ಹಾಗೆಂದು ಸಮಸ್ಯೆ ಬಿಗಡಾಯಿಸಿದಾಗಲೂ ಮನೆಯಲ್ಲೇ ಮದ್ದು ಪ್ರಯೋಗಿಸುತ್ತಾ ಕೂರಲು ಇದು ಸೂಕ್ತ ಸಮಯವಲ್ಲ. ಕೊರೊನಾದ ಲಕ್ಷಣಗಳು ಕೂಡ ಶೀತ, ಜ್ವರದಂತಹ ಸಮಸ್ಯೆಗಳೇ ಆಗಿರುವುದರಿಂದ ಲಕ್ಷಣಗಳು ಗಂಭೀರ ಹಂತಕ್ಕೆ ಹೋಗದಂತೆ ನೋಡಿಕೊಳ್ಳುವುದು ಅವಶ್ಯಕ. ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ಎಂದಾದರೆ ಅಥವಾ ಸಾಮಾನ್ಯ ಶೀತ ಎಂದು ಖಚಿತವಿದ್ದರೆ ಅದಕ್ಕೆ ಈ ಪರಿಹಾರೋಪಾಯಗಳನ್ನು ಬಳಸಬಹುದು. ಕೊರೊನಾ ಎಂದಾದರೂ ಸೋಂಕಿಗೆ ಹೆದರಬೇಕಾದ ಅಗತ್ಯವಿಲ್ಲ. ಧೈರ್ಯದಿಂದ, ಜವಾಬ್ದಾರಿಯಿಂದ ಚಿಕಿತ್ಸೆಗೆ ಒಳಗಾದರೆ ಸೋಂಕು ಗೆಲ್ಲಬಹುದು.

(ಮಾಹಿತಿ ಕೃಪೆ ಕನ್ನಡTv9)


ಇಂದಿನಿಂದ ಈ ಆರು ರಾಶಿಯವರಿಗೆ ಗಜಕೇಸರಿ ಯೋಗ! ಮುಟ್ಟಿದ್ದೆಲ್ಲ ಚಿನ್ನ!

ಈ ಹುಣ್ಣಿಮೆಯ ಬಳಿಕ ಈ ರಾಶಿಗಳು ಗಜಕೇಸರಿ ಯೋಗವನ್ನು ಪಡೆಯುತ್ತವೆ. ಇದರಿಂದ ಕೆಲಸ ಕಾರ್ಯಗಳಲ್ಲಿನ ಜಯ ಮತ್ತು ಜೀವನದಲ್ಲಿ ಗುರಿ ತಲುಪುವ ಸಾಮರ್ಥ್ಯ ತುಂಬುತ್ತದೆ.

ಸೂರ್ಯ, ಭೂಮಿ ಮತ್ತು ಚಂದ್ರ ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಇದ್ದಾಗ ಮಾತ್ರ ಗ್ರಹಣಗಳು ಉಂಟಾಗುತ್ತವೆ. ಅಮಾವಾಸ್ಯೆಯ ಬಳಿ ಚಂದ್ರನು ಸೂರ್ಯ ಮತ್ತು ಭೂಮಿಗಳ ನಡುವೆ ಇದ್ದಾಗ ಸೂರ್ಯ ಗ್ರಹಣಗಳು ಉಂಟಾಗಬಹುದು. ಹೋಲಿಕೆಯಲ್ಲಿ ಚಂದ್ರ ಗ್ರಹಣಗಳು ಹುಣ್ಣಿಮೆಯ ಬಳಿ, ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಇರುವಾಗ ಚಂದ್ರ ಗ್ರಹಣಗಳು ಉಂಟಾಗುತ್ತವೆ.

ಚಂದ್ರನ ಕಕ್ಷೆಯು ಭೂಮಿಯ ಕಕ್ಷೆಯ ಸಮತಳಕ್ಕೆ ಸುಮಾರು 5 ಓರೆಯಲ್ಲಿ ಇರುವುದರಿಂದ ಪ್ರತಿ ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಗ್ರಹಣಗಳು ಉಂಟಾಗುವುದಿಲ್ಲ. ಗ್ರಹಣವಾಗಲು ಚಂದ್ರನು ಈ ಎರಡು ಕಕ್ಷಾ ಸಮತಳಗಳನ್ನು ಛೇದಿಸುವ ಬಿಂದುಗಳ ಬಳಿ ಇರಬೇಕು.

ಇಂತಹ ಗ್ರಹಣಗಳ ಕಾಲದ ನಂತರ ಮನುಷ್ಯರ ರಾಶಿಯ ಮೇಲೆ ಅನೇಕ ಬದಲಾವಣೆಗಳು ಕೂಡ ಆಗುತ್ತದೆ ಎಂದು ಜ್ಯೋತಿಷ್ಯ ಹೇಳುತ್ತದೆ.

ಜನಮನ್ನಣೆಗಳಿಸಿರುವ 22 ವರ್ಷಗಳಿಂದ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು
ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಖಂಡಿತ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

ಮಾರ್ಚ್ 26 2021ರ ನಡೆಯುವ ಚಂದ್ರಗ್ರಹಣದ ನಂತರ ಆರು ರಾಶಿಯವರು ಗಜಕೇಸರಿ ಯೋಗವನ್ನು ಪಡೆಯುತ್ತಾರೆ ಎಂದು ಜ್ಯೋತಿಷ್ಯವು ಹೇಳುತ್ತದೆ. ಈ ದಿನವು ವ್ಯಾಪಾರಸ್ಥರಿಗೆ ಅದ್ಭುತವಾದಂತಹ ದಿನವಾಗಿರುತ್ತದೆ.

ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ. ಉದ್ಯೋಗದಲ್ಲಿರುವ ಜನರಿಗೆ ಬೆಳವಣಿಗೆ ಅವಕಾಶವು ಕೂಡ ಇರುತ್ತದೆ. ವಿಶೇಷವಾಗಿ ಸಾಫ್ಟ್ವೇರ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅವರ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶವು ದೊರೆಯುತ್ತದೆ. ಹಣ ದೃಷ್ಟಿಯಿಂದ ಚಂದ್ರ ಗ್ರಹಣದ ಈದಿನ ಮಿಶ್ರ ಫಲಿತಾಂಶವನ್ನು ನೀಡುತ್ತದೆ.

ವೆಚ್ಚಗಳು ಕಡಿಮೆಯಾಗಿರುತ್ತದೆ ಆದರೆ ಸಿಗಬೇಕಾದ ಹಣವು ಸಿಗದೆ ಚಿಂತೆ ಮಾಡುತ್ತಾರೆ. ಉದ್ಯೋಗಸ್ಥರು ಅತ್ಯುತ್ತಮ ಅವಕಾಶವನ್ನು ಪಡೆಯಬಹುದಾಗಿದೆ. ವ್ಯಾಪಾರಿಗಳು ದೊಡ್ಡ ಹೂಡಿಕೆಯನ್ನು ಮಾಡುವ ಪೂರ್ವದಲ್ಲಿ ಸರಿಯಾದ ಸಲಹೆಯನ್ನು ತೆಗೆದುಕೊಂಡು ಮಾಡುವುದು ಉತ್ತಮವಾಗಿರುತ್ತದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ. ಪ್ರೀತಿಪಾತ್ರರಾದಂತವರ ಬೆಂಬಲವನ್ನು ಪಡೆಯುತ್ತಾರೆ. ದಂಪತಿಗಳ ಮಧ್ಯೆ ವೈಮನಸ್ಸು ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಉತ್ತಮ ದಿನವಾಗಿದೆ.

ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಉಳಿತಾಯದ ಕಡೆಗೆ ಹೆಚ್ಚು ಮನವನ್ನು ಹರಿಸಬೇಕಾಗುತ್ತದೆ. ಇಂತಹ ಎಲ್ಲ ಲಾಭಗಳನ್ನು ಪಡೆಯುತ್ತಿರುವ ರಾಶಿಗಳು ಯಾವುದು ಎಂದರೆ ಮೇಷ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ, ವೃಶ್ಚಿಕ ರಾಶಿ, ಕುಂಭ ರಾಶಿ. ಈ ರಾಶಿಯವರು ಮಾರ್ಚ್ 26 2021 ರ ಚಂದ್ರ ಗ್ರಹಣದ ನಂತರ ಇಂತಹ ಅನೇಕ ಲಾಭಗಳನ್ನು ಪಡೆದುಕೊಳ್ಳುತ್ತಾರೆ ಎಂದು ಈ ಹುಣ್ಣಿಮೆಯ ವಿಶೇಷ ಮೂಲಗಳು ಹೇಳುತ್ತದೆ.

ನಿಮ್ಮ ಯಾವುದೇ ಕಠಿಣ ಸಮಸ್ಯೆಗಳಿಗೆ ದೈವ ಶಕ್ತಿಯಿಂದ ಕೇವಲ 5 ದಿನದಲ್ಲಿ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ. ದೈವಜ್ಜ್ಞ:- ಶ್ರೀ ತೇಜಸ್ವಿ ನಾರಾಯಣ್ ಭಟ್ Call/WhatsApp Ph:- 9945665025

(ಮಾಹಿತಿ ಕನ್ನಡ ವಾಹಿನಿ)

 

Tuesday, May 25, 2021

ಆಮ್ಲಜನಕ ಪ್ರಮಾಣ ಅಳೆಯಲು ಆಕ್ಸಿಮೀಟರ್ ಸಿಗುತ್ತಿಲ್ಲವೇ? ಸ್ಮಾರ್ಟ್ ಫೋನ್ ಇದೆಯಲ್ಲ!

ಕೋವಿಡ್-19 ಸಂಕಷ್ಟದ ಈ ಕಾಲದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಉಂಟಾದ ಸಾವುನೋವುಗಳ ಬಗ್ಗೆ ಕೇಳಿದ್ದೇವೆ. ಸದಾ ಕಾಲವೂ ನಮ್ಮ ರಕ್ತದ ಆಮ್ಲಜನಕವನ್ನು ಪರಿಶೀಲಿಸುತ್ತಿರಬೇಕು ಎಂಬ ವೈದ್ಯರ ಸಲಹೆಯಿಂದಾಗಿ, ಆಕ್ಸಿಮೀಟರ್ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ಬೇಡಿಕೆ ಹೆಚ್ಚಿದೆ, ಪೂರೈಕೆ ಕಡಿಮೆಯಾಗಿದೆ. ಇದೇ ನೆಪವನ್ನಾಗಿಸಿ ಹೇಳಹೆಸರಿಲ್ಲದ ಕಂಪನಿಗಳೆಲ್ಲವೂ ಆಕ್ಸಿಮೀಟರ್ ಹೆಸರಿನಲ್ಲಿ ಕೆಲವು ನಕಲಿ ಯಂತ್ರಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡಿವೆ. ಆಕ್ಸಿಮೀಟರ್ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ, ಚಿಕಿತ್ಸೆಗಾಗಿ ಮೊದಲೇ ಹೈರಾಣಾಗಿರುವ ಜನಸಾಮಾನ್ಯರೇನು ಮಾಡಬೇಕು? ಅದಕ್ಕೆ ಪರ್ಯಾಯವಾಗಿ ಮೊಬೈಲ್ ಫೋನ್‌ನಲ್ಲೇ ನಮ್ಮ ದೇಹದ ರಕ್ತದ ಆಮ್ಲಜನಕದ ಪ್ರಮಾಣವೆಷ್ಟೆಂಬುದನ್ನು ತಿಳಿದುಕೊಳ್ಳಬಹುದು. ಅದೂ ಉಚಿತವಾಗಿ.

ಈ ಆಯಪ್ ವಿಶೇಷತೆ ಏನು?
ಕೇರ್‌ಪ್ಲಿಕ್ಸ್ ವೈಟಲ್ಸ್ (CarePlix Vitals) ಹೆಸರಿನ ಈ ಆಯಪ್ ಅನ್ನು ಅಭಿವೃದ್ದಿಪಡಿಸಿದ್ದು ಕೇರ್‌ಪ್ಲಿಕ್ಸ್ ಹೆಲ್ತ್‌ಕೇರ್‌ನ ಅಮೆರಿಕ ಮತ್ತು ಕೇರ್‌ನೌ ಹೆಲ್ತ್‌ಕೇರ್‌ನ ಕೋಲ್ಕತಾ ಘಟಕ. ಈ ಆಯಪ್ ಮೂಲಕ ನಮ್ಮ ದೇಹದಲ್ಲಿರುವ ರಕ್ತದ ಆಮ್ಲಜನಕ ಪ್ರಮಾಣ, ಹೃದಯ ಬಡಿತದ ವೇಗ ಮತ್ತು ಉಸಿರಾಟದ ವೇಗವನ್ನು ಅಳೆಯಬಹುದಾಗಿದೆ. ಕೇವಲ ಒಂದು ಸ್ಮಾರ್ಟ್ ಫೋನ್ ಹಾಗೂ ಇಂಟರ್‌ನೆಟ್ ಸಂಪರ್ಕವಿದ್ದರೆ ಸಾಕಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್ ಫೋನ್‌ಗಳಲ್ಲಿರುವ ಕ್ಯಾಮೆರಾ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಫ್ಲ್ಯಾಶ್ ಲೈಟ್ ಬಳಸಿಕೊಂಡು ಈ ಆಯಪ್ ಕೆಲಸ ಮಾಡುತ್ತದೆ. ನಾವು ಮಾಡಬೇಕಾದುದಿಷ್ಟೇ. ಆಯಪ್ ತೆರೆದು, ಹೆಸರು, ಜನ್ಮದಿನಾಂಕ ಹಾಗೂ ಇಮೇಲ್ ವಿಳಾಸದೊಂದಿಗೆ ನೋಂದಣಿ ಮಾಡಿಕೊಂಡು, ಪಾಸ್‌ವರ್ಡ್ ಸೆಟ್ ಮಾಡಿಕೊಂಡರಾಯಿತು. ನಂತರ, ತೆರೆಯುವ ಸ್ಕ್ರೀನ್ ಮೇಲೆ, ನಾಲ್ಕು ಆಯ್ಕೆಗಳು ಗೋಚರಿಸುತ್ತವೆ. ವೈಟಲ್ಸ್ (ಜೀವಚೈತನ್ಯಗಳ) ರೆಕಾರ್ಡ್, ವೈಟಲ್ಸ್ ಚರಿತ್ರೆ, ವೈಟಲ್ಸ್ ಅನಲಿಟಿಕ್ಸ್ (ವಿಶ್ಲೇಷಣೆ) ಹಾಗೂ ಅಪ್‌ಗ್ರೇಡ್ ಮಾಡುವ ಆಯ್ಕೆ (ಇದನ್ನು ಕೋವಿಡ್-19 ಸಂಕಷ್ಟಗಳಿಂದಾಗಿ ಈಗ ಉಚಿತವಾಗಿಯೇ ಒದಗಿಸಲಾಗುತ್ತಿದೆ).

ಆಕ್ಸಿಮೀಟರ್ ಅಥವಾ ಸ್ಮಾರ್ಟ್ ವಾಚ್‌ಗಳಂತಹಾ ಸಾಧನಗಳು ಬಳಸುವ ಫೋಟೋಪ್ಲೆಥಿಸ್ಮೋಗ್ರಫಿ ಅಥವಾ ಪಿಪಿಜಿ ತಂತ್ರಜ್ಞಾನವನ್ನು ಈ ಆಯಪ್ ಬಳಸುತ್ತದೆ. ಕೇವಲ ವ್ಯತ್ಯಾಸವೆಂದರೆ, ಆ ಸಾಧನಗಳು ಇನ್‌ಫ್ರಾರೆಡ್ ಕಿರಣಗಳನ್ನು ಬಳಸಿ ರಕ್ತದ ಆಮ್ಲಜನಕ ಮುಂತಾದವುಗಳನ್ನು ಅಳೆದರೆ, ಆಯಪ್ ಬಳಸುವುದು ಫ್ಲ್ಯಾಶ್ ಬೆಳಕನ್ನು. ಬೆರಳಿನ ಮೂಲಕ ಹಾದುಹೋಗುವ ಬೆಳಕಿನ ತೀಕ್ಷ್ಣತೆ ಆಧಾರದಲ್ಲಿ ಈ ಅಳತೆಗಳು ದೊರೆಯುತ್ತವೆ. ಕ್ಯಾಮೆರಾ ಹಾಗೂ ಫ್ಲ್ಯಾಶ್ ಲೈಟಿನ ಮೇಲೆ ಕೈಬೆರಳು ಇರಿಸಿ, ಈ ಆಯಪ್‌ನಲ್ಲಿ 'ರೆಕಾರ್ಡ್ ವೈಟಲ್ಸ್' ಎಂಬ ಬಟನ್ ಒತ್ತಿದರಾಯಿತು. ಬೆರಳು ಸರಿಯಾಗಿ ಇರಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನೆರವಾಗುತ್ತದೆ. ಒಟ್ಟಿನಲ್ಲಿ 30-40 ಸೆಕೆಂಡುಗಳಲ್ಲಿ ಆಮ್ಲಜನಕ, ಹೃದಯಬಡಿತ, ಉಸಿರಾಟದ ಪ್ರಮಾಣವು ಅಲ್ಲೇ ಕಾಣಿಸಿಕೊಳ್ಳುತ್ತದೆ. ಹೆಚ್ಚು ನಿಖರವಾಗಿ ತಿಳಿದುಕೊಳ್ಳಲು, ಕುಳಿತುಕೊಂಡು, ನಿಂತುಕೊಂಡು, ನಡೆಯುವಾಗ, ಓಡುವಾಗ ಕೂಡ ಇದನ್ನು ಪರೀಕ್ಷಿಸಿಕೊಳ್ಳಬಹುದು.

ಇದರಿಂದ ಲಭ್ಯವಾಗುವ ಅಂಕಿ-ಅಂಶಗಳೆಲ್ಲವನ್ನೂ ಆಯಪ್ ದಾಖಲಿಸಿಕೊಂಡು, ಬಳಿಕ ಅದನ್ನು ವಿಶ್ಲೇಷಣೆ ಮಾಡಿ ವರದಿ ಒಪ್ಪಿಸುತ್ತದೆ.

ಮಿತಿಗಳು
ಕೆಲವು ಒಂದು ಅಥವಾ ಎರಡು ಕ್ಯಾಮೆರಾ ಲೆನ್ಸ್ ಇರುವ ಫೋನ್‌ಗಳಲ್ಲಿ ಸುಲಭವಾಗಿ ಬೆರಳು ಇರಿಸಬಹುದು. ಆದರೆ, ಈಗಿನ ಹೊಸ ಮೊಬೈಲ್‌ಗಳಲ್ಲಿರುವ ತ್ರಿವಳಿ ಅಥವಾ ನಾಲ್ಕು ಲೆನ್ಸ್‌ಗಳಿರುವ ಕ್ಯಾಮೆರಾ ಮತ್ತು ಫ್ಲ್ಯಾಶ್ ಮೇಲೆ ಬೆರಳು ಇರಿಸುವುದು ಕಷ್ಟವಾದರೂ, ಮೊದಲ (ಪ್ರಧಾನ) ಕ್ಯಾಮೆರಾ ಲೆನ್ಸ್ ಕವರ್ ಆದರೆ ಸಾಕಾಗುತ್ತದೆ. ಇನ್ನು ಕೆಲವು ಮೊಬೈಲ್‌ನಲ್ಲಿ ಫ್ಲ್ಯಾಶ್ ಬೆಳಕಿನ ಪ್ರಖರತೆಯಿಂದ ಉಂಟಾಗುವ ಬಿಸಿ ಎಷ್ಟಿತ್ತೆಂದರೆ, ಐದೇ ಸೆಕೆಂಡುಗಳಲ್ಲಿ ಬೆರಳನ್ನು ಹಿಂತೆಗೆದುಕೊಳ್ಳಬೇಕಾಗಿ ಬಂತು.

ಎಚ್ಚರಿಕೆ ಬೇಕು
ಈ ಆಯಪ್ ಜೀವಚೈತನ್ಯಗಳ ಒಂದು ಅಂದಾಜು ನೋಟವನ್ನಷ್ಟೇ ನೀಡುತ್ತದೆ (ಶೇ.95ರಷ್ಟು ನಿಖರವಾಗಿರುತ್ತದೆ) ಮತ್ತು ಹೆಚ್ಚೇನೂ ಸಮಸ್ಯೆಯಿಲ್ಲದ ರೋಗಿಗಳಷ್ಟೇ ತಪಾಸಣೆಗಾಗಿ ಬಳಸಿಕೊಳ್ಳಬಹುದು. ಆಕ್ಸಿಮೀಟರ್ ರೀಡಿಂಗ್‌ಗೂ ಈ ಆಯಪ್ ಮೂಲಕ ದೊರೆತ ಫಲಿತಾಂಶಕ್ಕೂ ಹೆಚ್ಚೇನೂ ವ್ಯತ್ಯಾಸ ಕಂಡಿಲ್ಲ. ಆದರೆ, ತೀವ್ರತಮ ಕಾಯಿಲೆಯಿದ್ದವರು ಇದನ್ನು ಅವಲಂಬಿಸಬಾರದು. ಯಾವುದಕ್ಕೂ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆಯಪಲ್ ಐಫೋನ್ ಬಳಕೆದಾರರಿಗೆ ಉಚಿತವಾಗಿ ಲಭ್ಯವಿದ್ದ ಈ ಆಯಪ್, ಈಗ ಆಂಡ್ರಾಯ್ಡ್ ಫೋನ್‌ಗಳಿಗೂ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆತಿದ್ದು, ಲಕ್ಷಾಂತರ ಮಂದಿ ಬಳಸುತ್ತಿದ್ದಾರೆ.

ಎಚ್ಚರಿಕೆ

ಆಕ್ಸಿಮೀಟರ್ ಆಯಪ್ ಹೆಸರುಗಳಲ್ಲಿಯೂ ಸೈಬರ್ ವಂಚಕರು ತಮ್ಮ ಕೈಚಳಕ ಮೆರೆಯಲಾರಂಭಿಸಿದ್ದಾರೆ. ಇದರಲ್ಲಿ ಕ್ಯಾಮೆರಾ ಹಾಗೂ ಫ್ಲ್ಯಾಶ್ ಮೂಲಕವಾಗಿ ನಮ್ಮ ಬಯೋಮೆಟ್ರಿಕ್ ಮಾಹಿತಿಯೂ ಒಳಗೊಂಡಿರುವುದರಿಂದ, ವಂಚಕರು ನಕಲಿ ಆಯಪ್‌ಗಳ ಮೂಲಕ ಖಾಸಗಿ ಮಾಹಿತಿ ಸಂಗ್ರಹಿಸುವ ಅಪಾಯವಿದೆ. ಹೀಗಾಗಿ, ಬಳಕೆಯಲ್ಲಿ ಎಚ್ಚರಿಕೆ ಅತ್ಯಗತ್ಯ ಎಂದು ಈಗಾಗಲೇ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಬಯೋಮೆಟ್ರಿಕ್ ಮಾಹಿತಿಯ ಗೋಪ್ಯತೆ ಬಗ್ಗೆ ಎಚ್ಚರ ವಹಿಸಬೇಕಿದ್ದರೆ, ಈ ರೀತಿಯ ಆಯಪ್‌ಗಳನ್ನು ಬಳಸಬಾರದು ಎಂಬುದು ಅವರ ಸಲಹೆ.

(ಮಾಹಿತಿ ಕೃಪೆ ಪ್ರಜಾವಾಣಿ)


ಕಮಲಾಪುರದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ

 

ಹೊಸಪೇಟೆ ಮೇ 24:ಹೊಲ ಗದ್ದೆಗಳಿಗೆ ಹೋಗೋ ರೈತರಿಗೆ ವಿನಾ ಕಾರಣ ಕಿರಿ, ಕಿರಿ ಮಾಡ್ತಿರಿ ಎಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ರೈತರು,ಸಾರ್ವಜನಿಕರ ಪೂಲೀಸರ ಮದ್ಯ ವಾಗ್ವಾದ ವಾದ ಘಟನೆ ಜರುಗಿದೆ. 

ಬೆಳಗ್ಗೆ ಪೂಲೀಸರು ಕಾರ್ಯಾಚರಣೆ ಆರಂಭವಾಗುತ್ತದ್ದಂತೆ ಈ ವಾಗ್ವಾದದ ಘಟನೆ ನಡೆದಿದೆ. ಹೊಲ ಗದ್ದೆಗೆ ಹೋಗೋ ರೈತರನ್ನು ಪೊಲೀಸ್ ಠಾಣೆಗೆ ಕರ್ಕೊಂಡು ಹೋಗಿ ಕೂಡಿಸ್ತಿರಿ ರೈತರ ಬೈಕ್ ಗಳನ್ನ ಸೀಜ್ ಮಾಡ್ತಿರಿ ಎಂದು ಕಮಲಾಪುರ PSI ಅರುಣ್ ಕುಮಾರ್ ಅವರೊಂದಿಗೆ ಸಾರ್ವಜನಿಕರು ವಾಗ್ವಾದಕ್ಕಿಳಿದರು. 

ಕೆಟ್ಟ ಶಬ್ಧಗಳಲ್ಲಿ ಬಯ್ಯೋದು, ಲಾಠಿ ಬೀಸೋದನ್ನ ನಿಲ್ಲಿಸಿ, ಮುನೆಮುಂದೆ ಕುಳಿತವ್ರನ್ನು ಸ್ಟೇಷನ್ ಕರೆದುಕೊಂಡು ಹೋಗೋದು ಯಾವ ನ್ಯಾಯ ಎಂದು ಪೋಲೀಸರೂಂದಿಗೆ ಮಾತಿನ ಚಕಮಕಿ ಆದಪರಿಣಾಮ ಮಾತಿಗೆ ಮಾತು ಬೆಳದ ಪರಿಣಾಮ ವಾಗ್ವಾದ, ಮಾತಿನ ಚಕಮಕಿ ನಡೆಯಿತು. 

ಇಂದು ಅಗತ್ಯ ವಸ್ತುಗಳ ಖರೀದಿಗೆ 12 ಗಂಟೆಯವರೆಗೆ ಅವಕಾಶ ಇದ್ರೂ ಬೆಳಗ್ಗೆಯಿಂದಲೇ ಬೈಕ್ ಏಕೆ ಸೀಜ್ ಮಾಡುತ್ತೀದ್ದಿರಿ, ವಿನಾ ಕಾರಣ ಕಿರಿ, ಕಿರಿ ನೀಡುತ್ತಿರಿ ಎಂದು ಆರೋಪಿಸಿದ ಜನರ ಜೊತೆಗೆ ಜನಪ್ರತಿನಿಧಿಗಳು ಸಹ ವಾಗ್ವಾದಕ್ಕಿಳಿದರು.

(ಮಾಹಿತಿ ಕೃಪೆ ಈ ಸಂಜೆ)

Saturday, May 22, 2021

ಹಾಯಾಗಿದೆ ಎದೆಯೊಳಗೆ ಝಲ್ಲೆಂದಿದೆ ಈ ಗಳಿಗೆ

 



👉 
 *ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ತನನ ನನ್ನಾನೆ...ಹೇ ತನನ ನನ್ನಾನೆ...ಹೇ
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೊ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೇ...
ಹಾಯಾಗಿದೆ ಎದೆಯೊಳಗೆ...ಹೇ
ಝಲ್ಲೆಂದಿದೆ (ಈ ಗಳಿಗೆ)
ಆ ಆ ಆ ಆ ಆ
ಆ ಆ ಆ ಆ ಆ ಆ
ಈಗೀಗ ಏನೋ ನನ್ನನ್ನು ನೀನೆ
ದೋಚಿಟ್ಟ ಹಾಗೆ ಒಳಗೊಳಗೆ
ಲೈಲಾಮಜುನು ಆಗೋದೆ ನಾನು
ಬೇಜಾನು ಬ್ಯೂಟಿ ನೀ ನಗುವಾಗ
ಕೈಬೀಸಿ ನಿಂತಾಗ……ಹಾ
ಏನಾದೆ ನಾನೀಗ…..ಹಾ
ನೀ smile ಕೊಟ್ಟಾಗ....ಹಾಹಾ
ಕಳೆದೋದ ನಾನೀಗ...
ಹಾಯಾಗಿದೆ ಎದೆಯೊಳಗೆ...
ಝಲ್ಲೆಂದಿದೆ ಈ ಗಳಿಗೆ...
ನೀ ನೋಡೋ ನೋಟವೆಲ್ಲಾ
ನನ್ನನ್ನೇ ಕೊಲ್ಲೋ ಹಾಗೆ
ನೀ ಮೋಡಿ ಮಾಡುವಾಗ
ನಾ ಸೋತು ನಿಂತ ಹಾಗೆ
ನೀನೆಂತ ಮಾಯಾಗಾರ್ತಿಯೆ...
ಹಾಯಾದ ಎದೆಯೊಳಗೆ ಝಲ್ಲಂದಿದೆ…….
ಆ ಆ ಆ ಆ ಆ ಆ
ತನನ ನನ್ನಾನೆ ತನನ ನನ್ನಾನೆ

ಸ್ಮಾರ್ಟ್ ಫೋನಿನಲ್ಲಿ Instagram Reels ಡೌನ್ ಲೋಡ್ ಮಾಡುವ ಸರಳ ವಿಧಾನ ತಿಳಿಯಿರಿ

 

ನವದೆಹಲಿ : ಫೋಟೋ ಮತ್ತು ವೀಡಿಯೊ ಶೇರ್ ಮಾಡಲು ಇರುವ ಜನಪ್ರಿಯ ಅಪ್ಲಿಕೇಶನ್ ಗಳಲ್ಲಿ ಇನ್ಸ್ಟಾಗ್ರಾಮ್ ಕೂಡಾ ಒಂದು. ಹೆಚ್ಚಿನ ಸಂಖ್ಯೆಯ ಜನರು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ವೀಕ್ಷಿಸುವುದರಲ್ಲೇ ಕಾಲ ಕಳೆಯುತ್ತಾರೆ. ಇನ್‌ಸ್ಟಾಗ್ರಾಮ್ ಇದರಲ್ಲಿರುವ ಕಂಟೆಂಟ್ ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುವುದಿಲ್ಲ. ಆದರೂ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ Instagram ಕಂಟೆಟ್ ಗಳನ್ನು ಡೌನ್‌ಲೋಡ್ ಮಾಡಬಹುದು. 

ಬಳಕೆದಾರರು Instagram ಪೋಸ್ಟ್‌ಗಳು ಮತ್ತು ಸ್ಟೋರಿಗಳನ್ನು ಸೇವ್ ಮಾಡಿಕೊಳ್ಳಬಹುದು. ಹೀಗೆ ಸೇವ್ ಮಾಡಿಕೊಂಡ ವಿಡಿಯೋಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. ಅದೇ ರೀತಿ, ಅದೇ ರೀತಿ, ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು (Instagram Reels) ಸಹ ಸೇವ್ ಮಾಡಿಕೊಳ್ಳಬಹುದು, ಮಾತ್ರವಲ್ಲ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಅದನ್ನು ಡೌನ್‌ಲೋಡ್ ಕೂಡಾ ಮಾಡಿಕೊಳ್ಳಬಹುದು. ಮತ್ತು ವೀಡಿಯೊ ಪ್ಲೇಯರ್ ಅಪ್ಲಿಕೇಶನ್‌ ಸಹಾಯದಿಂದ ಅವುಗಳನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದು. 

ಇದನ್ನೂ ಓದಿ : face book ಡಾಟಾ ಲೀಕ್ ಆಗುವುದನ್ನು ತಡೆಯಲು ಈ setting ಇಟ್ಟುಕೊಳ್ಳಿ.. 


ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ಸೇವ್ ಮಾಡುವುದು ಹೇಗೆ ? 

- Instagram ರೀಲ್‌ಗಳನ್ನು ಸೇವ್ ಮಾಡಲು ಯಾವ Reels Video ಸೇವ್ ಮಾಡಬೇಕೋ ಅದನ್ನು ಒಪನ್ ಮಾಡಿ 

- ನಂತರ ಅಲ್ಲಿ ಕಾಣುವ ಮೂರು ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. 

- ನಂತರ ಸೇವ್ ಬಟನ್ ಕ್ಲಿಕ್ ಮಾಡಿ. 

- ಈಗ ಈ Reels ನೋಡಲು, ಸೆಟ್ಟಿಂಗ್‌ಗೆ ಹೋಗಿ ಮತ್ತು Account ಮೇಲೆ ಕ್ಲಿಕ್ ಮಾಡಿ ಮತ್ತು Save ವಿಭಾಗಕ್ಕೆ ಹೋಗಿ. 

- ಇಲ್ಲಿ ನೀವು ಸೇವ್ ಮಾಡಿರುವ ಎಲ್ಲಾ Reels ನೋಡಬಹುದು 

ಇದನ್ನೂ ಓದಿ : Xiaomi Mi 10i 5G: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ 

Instagram Reels ಡೌನ್‌ಲೋಡ್ ಮಾಡುವುದು ಹೇಗೆ? 

Instagram Reels ಡೌನ್‌ಲೋಡ್ ಮಾಡುವ ವಿಧಾನವೂ ತುಂಬಾ ಸುಲಭ. ಆನ್‌ಲೈನ್ ಟೂಲ್ಸ್ ಗಳನ್ನು ಬಳಸಿಕೊಂಡು ನೀವು ಅದನ್ನು ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಡೌನ್‌ಲೋಡ್ ಮಾಡಬಹುದು. 

- ಇದಕ್ಕಾಗಿ, ನೀವು ಮಾಡಬೇಕಾಗಿರುವುದು ಇಷ್ಟೇ.. Reels Videoದ URL ಅನ್ನು ಆನ್‌ಲೈನ್ ಟೂಲ್ಸ್ ಗೆ ಪೇಸ್ಟ್ ಮಾಡಿ. ಇಷ್ಟಾದರೆ ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ವಿಡಿಯೋ ಡೌನ್‌ಲೋಡ್ ಆಗಿರುತ್ತದೆ. 

- ಇದಕ್ಕಾಗಿ ನೀವು Instafista ಮತ್ತು Ingrammer ಸೇರಿದಂತೆ ಇತರ ಆನ್‌ಲೈನ್ ಟೂಲ್ಸ್ ಗಳನ್ನು ಬಳಸಬಹುದು. 

- ಇನ್‌ಸ್ಟಾಗ್ರಾಮ್ ರೀಲ್ಸ್ URL ಪಡೆಯಲು, ನೀವು Reels Videoದಲ್ಲಿನ ಮೂರು ಡಾಟ್ ಐಕಾನ್‌ಗೆ ಹೋಗಿ Copy Link Option ಮೇಲೆ ಕ್ಲಿಕ್ ಮಾಡಿ. URL ಕಾಪಿಯಾಗುತ್ತದೆ. 

- ಇದಲ್ಲದೆ, Google Play Storeಗೆ ಹೋಗಿ, ಥರ್ಡ್ ಪಾರ್ಟಿ ಆಯಪ್ ಮೂಲಕ ಕೂಡಾ Instagram Reelsಗಳನ್ನು ಡೌನ್‌ಲೋಡ್ ಮಾಡಬಹುದು. 

ಇದನ್ನೂ ಓದಿ : WhatsApp New Feature: WhatsAppನಲ್ಲಿ ಬಂತು ಮತ್ತೊಂದು ಹೊಸ ವೈಶಿಷ್ಟ್ಯ, ಇಲ್ಲಿದೆ ಡೀಟೇಲ್ಸ್ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 

Android Link - https://bit.ly/3hDyh4G 

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

(ಮಾಹಿತಿ ಕೃಪೆ Zee News ಕನ್ನಡ)

ಆಮ್ಲಜನಕ ಉತ್ಪಾದನಾ ಘಟಕಕ್ಕೆ ಭೂಮಿಪೂಜೆ

 

ಚನ್ನಗಿರಿ: 'ರಾಜ್ಯದಾದ್ಯಾಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಮನಗಂಡು ಕೆಎಸ್‌ಡಿಎಲ್‌ನಿಂದ ₹ 1 ಕೋಟಿ ವೆಚ್ಚದಲ್ಲಿ 500 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ತಯಾರಿಕಾ ಘಟಕವನ್ನು ಇಲ್ಲಿ ಪ್ರಾರಂಭಿಸುತ್ತಿರುವುದು ಸ್ವಾಗತಾರ್ಹ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಸುಧಾಕರ್ ತಿಳಿಸಿದರು. 


ಪಟ್ಟಣದ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಕೆಎಸ್‌ಡಿಎಲ್‌ನಿಂದ ಆಮ್ಲಜನಕ ತಯಾರಿಕಾ ಘಟಕದ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 


ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಸ್ವಂತ ಖರ್ಚಿನಿಂದ 30 ಹಾಸಿಗೆ, ದಿಂಬು, ಮಂಚಗಳನ್ನು ವ್ಯವಸ್ಥೆ ಮಾಡಿದ್ದಾರೆ. ಈ ಎಲ್ಲಾ ಹಾಸಿಗಗಳಿಗೂ ಅತಿ ಶೀಘ್ರದಲ್ಲಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ವೈದ್ಯರು ಹಾಗೂ ದಾದಿಯರ ಕೊರತೆ ಬಗ್ಗೆ ಗಮನಹರಿಸಲಾಗುವುದು. 6 ವೆಂಟಿಲೇಟರ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಇದ್ದು, ನಾಲ್ಕೈದು ದಿನಗಳಲ್ಲಿ ವೆಂಟಿಲೇಟರ್‌ಗಳನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. 


ಇನ್ನೊಂದು ವಾರದೊಳಗೆ ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಅಗತ್ಯವಾದ ಎಲ್ಲ ರೀತಿಯ ಸಲಕರಣೆಗಳನ್ನು ಇಲಾಖೆಯಿಂದ ಪೂರೈಸಲಾಗುವುದು. 30 ಆಮ್ಲಜನಕ ಕಾನ್ಸನ್‌ಟ್ರೇಟರ್‌ಗಳನ್ನು ವ್ಯವಸ್ಥೆ ಮಾಡಿರುವುದು ಸ್ವಾಗತಾರ್ಹ. ತಕ್ಷಣ ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಸತೀಶ್ ಅವರನ್ನು ಶಾಸಕರ ಮನವಿ ಮೇರೆಗೆ ನಿಯೋಜನೆ ಮಾಡಲು ಆದೇಶಿಸಲಾಗಿದೆ. ಆರೋಗ್ಯ ಕೇಂದ್ರಕ್ಕೆ 50 ಹಾಸಿಗೆಗಳಿಗೆ ಆಮ್ಲಜನಕ ಪೂರೈಸಲು ಹಾಗೂ 30 ಜಂಬೋ ಸಿಲಿಂಡರ್‌ಗಳನ್ನು ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಡಿಎಚ್‌ಒ ಡಾ. ನಾಗರಾಜ್, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ತಹಶೀಲ್ದಾರ್ ಪಟ್ಟರಾಜಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು ಇದ್ದರು.

(ಮಾಹಿತಿ ಕೃಪೆ ಪ್ರಜಾವಾಣಿ)


ಹ್ಯಾಪಿ ಬರ್ತ್​ಡೇ ಷೆರ್ಲಾಕ್ ಹೋಮ್ಸ್​!

 

ಸಾಮಾನ್ಯವಾಗಿ ಮಕ್ಕಳಿಗೆ ಓದುವ ಹವ್ಯಾಸ ಶುರುವಾಗುವುದು ಪತ್ತೆದಾರಿ ಪುಸ್ತಕಗಳ ಮೂಲಕ. ಇದರಲ್ಲಿ ಬರುವ ಕ್ಲಿಷ್ಟ ಸನ್ನಿವೇಶ, ವೈಜ್ಞಾನಿಕ ವಿವರ, ಅತ್ಯಾಧುನಿಕ ತಂತ್ರಜ್ಞಾನ… ಮುಂತಾದವು ಎಳೆಯ ಮನಸ್ಸಿಗೆ ಮುದ ನೀಡುವ ಕಾರಣ ಬಾಲ್ಯದ ಓದಿಗೆ ಎಲ್ಲಕ್ಕಿಂತ ಹೆಚ್ಚು ರುಚಿಸುವುದೇ ಇಂಥ ಪುಸ್ತಕಗಳು. ಇವುಗಳ ಪೈಕಿ ಶತಮಾನಗಳಿಂದಲೂ ಅತಿ ಹೆಚ್ಚು ಚಲಾವಣೆಯಲ್ಲಿ ಇರುವುದು ಡಿಟೆಕ್ಟಿವ್ ಷೆರ್ಲಾಕ್ ಹೋಮ್ಸ್. 

ಷೆರ್ಲಾಕ್‌ ಹೋಮ್ಸ್‌ ಪುಸ್ತಕದ ಲೇಖಕ ಸರ್ ಆರ್ಥರ್ ಕಾನನ್ ಡಾಯ್ಲ್ ಅವರ ಹುಟ್ಟಿದ ದಿನವಾದ ಮೇ 22. ಈ ದಿನವನ್ನು ಷೆರ್ಲಾಕ್ ಹೋಮ್ಸ್‌ ಬರ್ತ್‌ಡೇ ಎಂದು ಆಚರಿಸಲಾಗುತ್ತದೆ 

ಮನು ಎಚ್.ಎಸ್. ಹೆಗ್ಗೋಡು 

ಲಂಡನ್ ನಗರದ ಬೇಕರ್ ರಸ್ತೆಯ ಮನೆ ನಂಬರ್ 221B ಯಲ್ಲಿ ವಾಸಿಸುತ್ತಿರುವ, ಸದಾ ಕಪ್ಪು ಕನ್ನಡಕ ಧರಿಸಿರುವ ನುಣುಪು ಕೆನ್ನೆಯ ಷೆರ್ಲಾಕ್‌ ಹೋಮ್ಸ್‌ಗೆ ಈಗ ಹತ್ತಿರ 135 ವರ್ಷಗಳು! ಮೇ 22 ಈತನ ಜನ್ಮದಿನ. ಈ ವಿಳಾಸಕ್ಕೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಶತಮಾನದಿಂದಲೂ ಬರುತ್ತಿರುವ ಪತ್ರಗಳಿಗೆ ಲೆಕ್ಕವೇ ಇಲ್ಲ. ಆದರೆ ಈಗ ಯಾರಾದರೂ ಪತ್ರ ಬರೆದರೆ, ಷೆರ್ಲಾಕ್‌ ಅಭಿಮಾನಿಗಳು 'ಹೋಮ್ಸ್ ಈಗ ವೃದ್ಧಾಪ್ಯದಲ್ಲಿರುವ ಕಾರಣ, ಪತ್ತೇದಾರಿಕೆಯಿಂದ ನಿವೃತ್ತರಾಗಿದ್ದಾರೆ, ಯಾವ ಹೊಸ ಕೇಸ್‌ಗಳನ್ನೂ ತೆಗೆದುಕೊಳ್ಳುತ್ತಿಲ್ಲ. ಕ್ಷಮಿಸಿ' ಎಂದು ರಿಪ್ಲೈ ಬರೆಯಬಹುದಷ್ಟೆ! 

ಯೌವನದ ದಿನಗಳಲ್ಲಿ ಇದೇ ಷೆರ್ಲಾಕ್‌ ಅದೆಷ್ಟು ಸಾಹಸಗಳನ್ನು ಮಾಡಿದ್ದಾನೋ ಲೆಕ್ಕವೇ ಇಲ್ಲ. ಸಮಸ್ಯೆ ಹೇಳಿಕೊಂಡು ಒಂದು ಪತ್ರ ಬರೆದಿದ್ದರೂ ಸಾಕು, ಅವರ ಗಮನಕ್ಕೆ ಬರುವ ಮೊದಲೇ ಸಮಸ್ಯೆಯ ಮೂಲವನ್ನು ಕೆದಕಿ ಅದಕ್ಕೆ ಕಾರಣರಾದವರಿಗೆ ಒಂದು ಗತಿ ಕಾಣಿಸಿದ ಮೇಲೆ 'ಹೆದರಬೇಡಿ, ನಿಮ್ಮ ಸಮಸ್ಯೆ ಬಗೆಹರಿದಿದೆ. ಇಂತಿಂಥ ವ್ಯವಸ್ಥೆ ಮಾಡಿದ್ದೇನೆ' ಎನ್ನುವ ಅಭಯವನ್ನು ಕೊಡುವಂಥ ಆಪದ್ಬಾಂಧವ. 

ಈಗ ಮನೆ ನಂಬರ್ 221B ಹುಡುಕಿ ಹೋದರೂ ವೃದ್ಧ ಹೋಮ್ಸ್‌ನ ಭೇಟಿಗೆ ಅವಕಾಶ ಸಿಗುವುದಿಲ್ಲ. ಈತ ಬಳಸುತ್ತಿದ್ದ ಉದ್ದನೆಯ ಕೋಟು, ಕಪ್ಪು ಕನ್ನಡಕ, ಸದಾ ಧರಿಸುತ್ತಿದ್ದ ಹ್ಯಾಟ್, ಹೊರಗೆ ಹೋಗುವಾಗ ರಕ್ಷಣೆಗೆ ಬಳಸುತ್ತಿದ್ದ ಬೆತ್ತದ ಕೋಲು, ಪತ್ತೇದಾರಿಕೆ ಕೆಲಸದಲ್ಲಿ ಬಳಸುತ್ತಿದ್ದ ಭೂತಗನ್ನಡಿ… ಇವೆಲ್ಲವನ್ನೂ ಅಲ್ಲಿ ನೋಡಬಹುದು. ಆತನ ಮನೆ ಈಗ ಮ್ಯೂಸಿಯಂ! 

ಯಾರು ಈ ಷೆರ್ಲಾಕ್‌? 

ಸರ್‌ ಆರ್ಥರ್ ಕಾನನ್ ಡಾಯ್ಲ್ ಎಂಬ ಬ್ರಿಟಿಷ್ ಲೇಖಕ ಸೃಷ್ಟಿಸಿರುವ ಕಾಲ್ಪನಿಕ ಪಾತ್ರ ಈ ಷೆರ್ಲಾಕ್ ಹೋಮ್ಸ್‌. 56 ಸಣ್ಣ ಕತೆಗಳಲ್ಲಿ ಹಾಗೂ ನಾಲ್ಕು ಕಾದಂಬರಿಗಳಲ್ಲಿ ಪತ್ತೇದಾರನಾಗಿ ಷೆರ್ಲಾಕ್‌ ಕಾಣಿಸಿಕೊಂಡಿದ್ದಾನೆ. ಕನ್ನಡವೂ (ಅನುವಾದ: ವಾಸುದೇವರಾವ್‌) ಸೇರಿದಂತೆ 84 ಭಾಷೆಗಳಲ್ಲಿ ಈತನ ಎಲ್ಲ ಪುಸ್ತಕಗಳು ಭಾಷಾಂತರಗೊಂಡಿವೆ. ದೊಡ್ಡ ಸಂಖ್ಯೆಯ ಅಭಿಮಾನಿಗಳೂ ಜಗತ್ತಿನಾದ್ಯಂತ ಇದ್ದಾರೆ. ಈ ಅಭಿಮಾನ ಎಷ್ಟರಮಟ್ಟಿಗೆ ಎಂದರೆ, ವಾಸ್ತವದಲ್ಲಿ ಇಲ್ಲದಿದ್ದರೂ ಷೆರ್ಲಾಕ್‌ನನ್ನು ನೋಡುವ ಹಂಬಲ ಈ ಅಭಿಮಾನಿಗಳಿಗೆ… 

ಷೆರ್ಲಾಕ್‌ ಕತೆಗಳಲ್ಲಿ ಬರುವ ಕಾಲ್ಪನಿಕ ಪಾತ್ರದ ವಿಳಾಸ ಲಂಡನ್ ನಗರದ ಬೇಕರ್ ರಸ್ತೆ. ಬೇಕರ್‌ ಎನ್ನುವ ರಸ್ತೆಯೇನೋ ಇದೆ, ಆದರೆ ಅಲ್ಲಿ 221B ನಂಬರ್‌ನ ಯಾವ ಮನೆಯೂ ಇರಲಿಲ್ಲ. ಓದುಗರು ತಮ್ಮ ಸಮಸ್ಯೆಗಳನ್ನು ಈತ ಬಗೆಹರಿಸಬಲ್ಲ ಎಂದು ನಂಬಿ ಈ ವಿಳಾಸಕ್ಕೆ ಪತ್ರ ಬರೆಯುತ್ತಿದ್ದರು! ಇದರ ಬಗ್ಗೆ ಅರಿವಿದ್ದ ಪೋಸ್ಟ್‌ಮ್ಯಾನ್‌ಗಳು ಈ ಪತ್ರಗಳನ್ನು ಲೇಖಕ ಕಾನನ್‌ಗೆ ತಲುಪಿಸುತ್ತಿದ್ದರು. 

1930ರಲ್ಲಿ ಕಾನನ್ ಡಾಯ್ಲ್ ತೀರಿಕೊಂಡ ನಂತರ ಈ ವಿಳಾಸಕ್ಕೆ ಬರುವ ಪತ್ರಗಳನ್ನು ಏನು ಮಾಡುವುದು ಎಂದು ಅಂಚೆ ಇಲಾಖೆಯವರಿಗೆ ತಿಳಿಯದಾಯಿತು. ಆಗ ಅಭಿಮಾನಿಗಳು 'ಹೋಮ್ಸ್ ಅಭಿಮಾನಿ ಸಂಘ' ಹುಟ್ಟುಹಾಕಿದರು. ಕತೆಗಳಲ್ಲಿ ಬರುವ ವಿವರಗಳನ್ನೆಲ್ಲ ಒಳಗೊಂಡ ಮನೆಯನ್ನೇ ಲಂಡನ್‌ನ ಬೇಕರ್ ರಸ್ತೆಯಲ್ಲಿ ಕಟ್ಟಿಸಿದರು. ಅದೇ ಈಗ 'ಷೆರ್ಲಾಕ್‌ ಹೋಮ್ಸ್ ಮ್ಯೂಸಿಯಂ'. ಕಾಲ್ಪನಿಕ ಪಾತ್ರಕ್ಕೆ ಒಂದು ಮ್ಯೂಸಿಯಂ ಸ್ಥಾಪಿಸಿರುವುದು ಜಗತ್ತಿನಲ್ಲಿ ಏಕೈಕ ಎನ್ನಲಾಗಿದೆ. 

ಏನು ಈ ಪುಸ್ತಕಗಳ ವೈಶಿಷ್ಟ್ಯ? 

ಷೆರ್ಲಾಕ್‌ ಹೋಮ್ಸ್‌ ಪುಸ್ತಕಗಳಲ್ಲಿ ಡಾ. ವಾಟ್ಸನ್‌ ಎಂಬ ಪಾತ್ರ ಇರುತ್ತದೆ. ವೈದ್ಯನಾಗಿರುವ ಈತ ಷೆರ್ಲಾಕ್‌ನ ಸಹಾಯಕ ಹಾಗೂ ರೂಮ್‌ಮೇಟ್‌. ಬಿಡುವಿದ್ದಾಗ ಪತ್ತೇದಾರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದ. ನಮಗೆ ಆತ ಅಷ್ಟೇನೂ ಬುದ್ಧಿವಂತನಲ್ಲದ ಪಾತ್ರವಾಗಿ ಕಾಣಿಸುತ್ತಾನೆ. ಇಲ್ಲಿ ಓದುಗರಿಗೆ ಬರುವ ಸಂದೇಹಗಳೆಲ್ಲವೂ ವಾಟ್ಸನ್‌ಗೆ ಬರುತ್ತಿರುತ್ತದೆ. ಆತ ಷೆರ್ಲಾಕ್‌ಗೆ ಪ್ರಶ್ನೆ ಕೇಳುತ್ತಿರುತ್ತಾನೆ, ಅದಕ್ಕೆ ಷೆರ್ಲಾಕ್‌ ಉತ್ತರಿಸುತ್ತಾ ಹೋದಂತೆ ಅಲ್ಲಿರುವ ಡಾ. ವಾಟ್ಸನ್ ನಾವಾಗಿಬಿಡುತ್ತೇವೆ. ಷೆರ್ಲಾಕ್‌ ನಿಜವಾಗಿಯೂ ನಮ್ಮ ಮುಂದೆಯೇ ಕುಳಿತು ನಮ್ಮ ಜತೆ ಸಂಭಾಷಿಸುತ್ತಿರುವಂತೆ ಭಾಸವಾಗುತ್ತದೆ. ಆದ್ದರಿಂದ ಈ ಸನ್ನಿವೇಶದಲ್ಲಿ ನಾವೂ ಭಾಗಿಯಾಗಿಬಿಡುತ್ತೇವೆ. 

'ಸತ್ತ' ಷೆರ್ಲಾಕ್‌ನಿಗೆ ಜೀವ ಬಂತು! 

ನೌಕಾದಳದಲ್ಲಿ ವೈದ್ಯಾಧಿಕಾರಿಯಾಗಿದ್ದ ಕಾನನ್ ಡಾಯ್ಲ್, ಅನ್ಯ ಕೆಲಸದ ನಿಮಿತ್ತ ಷೆರ್ಲಾಕ್‌ ಹೋಮ್ಸ್‌ನ ಸರಣಿಯನ್ನು 'ದಿ ಫೈನಲ್‌ ಪ್ರಾಬ್ಲೆಮ್‌' ಎಂಬ ಪುಸ್ತಕದ ಮೂಲಕ ನಿಲ್ಲಿಸಿಬಿಟ್ಟರು. ಇದನ್ನು ಅಭಿಮಾನಿಗಳು ಅರಗಿಸಿಕೊಳ್ಳಲಾಗದೇ ಭಾರಿ ಪ್ರತಿಭಟನೆ ಮಾಡಿದರು. ಸತ್ತು ಹೋದ ಷೆರ್ಲಾಕ್‌ಗೆ ಮರುಜೀವ ನೀಡುವಂತೆ ಕಾನನ್‌ ಅವರಿಗೆ ಒತ್ತಾಯಿಸಿ ದೊಡ್ಡ ಪ್ರಮಾಣದ ಪತ್ರ ಚಳವಳಿಯೇ ನಡೆದುಹೋಯಿತು. ಎಂಟು ವರ್ಷಗಳ ನಿರಂತರ ಒತ್ತಡಕ್ಕೆ ಮಣಿದು ಕಾನನ್‌ ಅವರು 'ದಿ ರಿಟರ್ನ್‌ ಆಫ್‌ ಷೆರ್ಲಾಕ್‌ ಹೋಮ್ಸ್‌' ಪುಸ್ತಕದ ಮೂಲಕ ಸರಣಿ ಮುಂದುವರೆಸಿದರು. ಈ ಪುಸ್ತಕ ಇನ್ನೂ ಹೆಚ್ಚಿನ ಹುಚ್ಚೆಬ್ಬಿಸಿತು.

(ಮಾಹಿತಿ ಕೃಪೆ ವಿಜಯವಾಣಿ)

Tuesday, May 18, 2021

ಯಾರಿಲ್ಲಿ ಈ ತರಹಾ.... ಬರೆದೋರು ಹಣೆಬರಹಾ

 

👉*

 

ಯಾರಿಲ್ಲಿ ಈ ತರಹಾ.... 

ಬರೆದೋರು ಹಣೆಬರಹಾ 

ನೀ ಮೆಟ್ಟಿದ ಮಣ್ಣ ಮರೆತಿರುವೆ 

ಎಲ್ಲಿಗೆ ಅಂತ ಹೊರಟಿರುವೆ 

ಕೋಟಿಗೊಬ್ಬರಿಗೆ ಗಳಿಸಿದರು. 

ಜನರಿಗಾಗಿ ನೀ ತ್ಯಜಿಸಿರುವೆ 

ತ್ಯಾಗದ ಅರಮನೆಯ ಓ ಒಡೆಯ 

ಹೇಗಯ್ಯ ಸಿಡಿಲಿನ ಒಳಗಿಟ್ಟೆ ಗುಂಡಿಗೆಯ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಕಾಯುವ ಮಹಾರಾಜ 

ಗುಣದಲ್ಲಿ ಗುರು ನೀನು 

ಕಾವಿಯ ಮೊರೆ ಹೋದೆ 

ನ್ಯಾಯವೇ ಹೇಳಿನ್ನೂ 

ಬೇರೆ ಬದುಕನ್ನ ನೀನೆ ಹುಡುಕಿದರೆ 

ನಮಗಿಲ್ಲಿ ಯಾರು ದೊರೆ 

ಕೇಳದೆ ನಮ್ಮೀ ಕರೆ 

***** 

ಹೃದಯಗಳ ಯಜಮಾನ 

ನಿನಗ್ಯಾಕೆ ಅವಮಾನ 

ಒಳ್ಳೆತನಕ್ಕೆ ಈ ಭೂಮೀಲಿ 

ಕಷ್ಟ ಕಟ್ಟಿಟ್ಟ ಬುತ್ತಿ ಕಣೋ 

ಎಲ್ಲವಾ ತಡೆಯುವಾ ಶಕ್ತಿ 

ಒಳ್ಳೆ ಮನಸ್ಸೂರಿಗಷ್ಟೇ ಕಣೋ 

ಎಲ್ಲಾ ನಿನ್ನವರು ಹಣವಿರಲು... 

ಆದರೂ ಚಿಂತೆಯು ಬರದಯ್ಯ ಗುಣವಿರಲು 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ಬೇಲಿಯೇ ಹೊಲವನ್ನು ಮೇಯುವ ಹಾಗೆ 

ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ 

ನಂಬಿದಾ ಜನರೆಲ್ಲ ನಾಲಿಗೆ ಮರೆತಾಗ 

ಅವನ ಮುಂದೆಂದೂ 

ನೀ ಮನಸ್ಸಿನ ಸಾಹುಕಾರ

                                  *****

 ಯಾರಿಲ್ಲಿ..... ಈ ತರಹಾ... 

ಬರೆದೋರು ಹಣೆಬರಹಾ... 

ಬಂದು ಬೀಳುವ ಮಳೆಹನಿಯು 

ಸೇರೋ ಸ್ಥಳ ಯಾರು ಬಲ್ಲೋರು 

ನೂರು ಬಂಧ ಅನುಬಂಧದಲ್ಲಿ 

ಯಾರ ಮನಸಿಗೆ ಯಾರ್ಯಾರೋ 

ಏನೆಂದು ಕೇಳಲು ಯಾರು ಇಲ್ಲಾ... 

ಬಡವನಾ ನೀತಿಗೆ ಕಣ್ಣುಂಟು ನೋಟವಿಲ್ಲಾ... 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕಾ...... 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಅವನಿಗೆ ಅವಳೆಂದು ಅವ ಬರೆದಾ ಲೆಕ್ಕ 

ಲೆಕ್ಕವೇ ತಿಳಿದೇನೇ ಮನಸ್ಸಿಗೆ ಈ ದುಃಖ 

ಬಂಧಕೆ ಬಾಯಿಲ್ಲ ನ್ಯಾಯಕೆ ಕಣ್ಣಿಲ್ಲ 

ಎರಡಕ್ಕೂ ಕೊನೆಯಲ್ಲಿ... 

ಸೇರುವಾ ಮನೆಯೆಲ್ಲಿ ???