ಬೆಂಗಳೂರು : ಮಧ್ಯ ಕರ್ನಾಟಕದ ರಾಜಧಾನಿ ಹಾಗೂ ಬೆಣ್ಣೆ ನಗರಿ ದಾವಣಗೆರೆ ಒಂದರಲ್ಲೇ 21 ಪ್ರಕರಣ ಸೇರಿದಂತೆ ಭಾನುವಾರ ರಾಜ್ಯದಲ್ಲಿ ಒಟ್ಟು 34 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಇದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ್ದು,ಒಂದೇ ದಿನ 21 ಪ್ರಕರಣಗಳು ಕಂಡುಬಂದಿರುವುದರಿಂದ ಜಿಲ್ಲಾಡಳಿತದಿಂದ ತುರ್ತು ಸಭೆ ನಡೆಸಿದ್ದು, ಬೆಣ್ಣೆ ನಗರಿ ರೆಡ್ ಝೋನ್‌ಗೆ ಜಾರಿದೆ. ರಾಜ್ಯದಲ್ಲಿ ಇದುವರೆಗೂ 635 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ 4, ಕಲಬುರ್ಗಿಯಲ್ಲಿ 6 ಮತ್ತು ಬಾಗಲಕೋಟೆಯಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಅದರಲ್ಲೂ ದಾವಣೆಗೆರೆ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 21 ಜನರಿಗೆ ಮಾರಕ ಕೊರೊನಾ ವೈರಸ್ ಸೋಂಕು ತಗುಲಿದೆ.
ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯನ್ನು ಕಂಟೈನ್‌ಮೆಂಟ್ ಝೋನ್ ಆಗಿ ಘೋಷಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಯಾವುದೇ ಕಾರಣಕ್ಕೂ ಮನೆಯಿಂದ ಯಾರೂ ಹೊರಬರದಂತೆ ಶೀಘ್ರದಲ್ಲೇ ಆದೇಶ ಹೊರಡಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಸೋಂಕಿಗೆ ಒಳಗಾದವರ ಪ್ರಾಥಮಿಕ ಸಂಪರ್ಕಕ್ಕೆ ಹೋದವರನ್ನೆಲ್ಲ ಗುರುತಿಸಿ ಕ್ವಾರಂಟೈನ್ ಮಾಡಲಾಗಿತ್ತು.ಶುಕ್ರವಾರ 94 ಜನರ ಮತ್ತು ನಿನ್ನೆ (ಶನಿವಾರ) 74 ಮಂದಿಯ ಗಂಟಲು ದ್ರವದ ಮಾದರಿಯನ್ನು ತಪಾಸಣೆಗೆ ಕಳಿಸಲಾಗಿತ್ತು.
ಈಗ 37 ಜನರ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 21 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ದಾವಣಗೆರೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಇನ್ನೂ 296 ಮಂದಿಯ ವೈದ್ಯಕೀಯ ವರದಿ ಬರಬೇಕಿದೆ. ಇದು ಪ್ರಾಥಮಿಕ ವರದಿ. ಎರಡನೇ ರಿಪೋರ್ಟ್ ಬಳಿಕವಷ್ಟೇ ಪೇಷೆಂಟ್ ನಂಬರ್ ನೀಡುತ್ತೇವೆ. ಬಾಷಾ ನಗರ ಮತ್ತು ಜಾಲಿನಗರಗಳು ಸಂಪೂರ್ಣ ಸೀಲ್ಡೌನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಯಾರಿಂದ ಈ 21 ಮಂದಿಗೆ ಸೋಂಕು ತಗುಲಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಪ್ರಕರಣ ಸಂಖ್ಯೆ 533 ಮತ್ತು 556ರಿಂದ ಈ ಪ್ರಕರಣಗಳು ಬೆಳಕಿಗೆ ಬಂದಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಹರಿಹರಕ್ಕೂ ಕೊರೋನಾ ವೈರಸ್ ಸೋಂಕು ಹರಡಿರುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.
602ನೇ ರೋಗಿ ಕಲಬುರಗಿಯ 13 ವರ್ಷದ ಬಾಲಕಿಯಾಗಿದ್ದು, 532 ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. 603ನೇ ರೋಗಿ ಕಲಬುರಗಿಯ 54 ವರ್ಷದ ಪುರುಷನಾಗಿದ್ದು, 532 ರೋಗಿಯೊಂದಿಗೆ ಸಂಪರ್ಕ ಹೊಂದಿದ್ದವರಾಗಿದ್ದಾರೆ. 604ನೇ ರೋಗಿ ಕಲಬುರಗಿಯವರಾಗಿದ್ದು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. 605, 606ನೇ ರೋಗಿ ಬಾಗಲಕೋಟೆ ಜಿಲ್ಲೆಯ ಮುದೋಳದವರಾಗಿದ್ದಾರೆ. 607ನೇ ರೋಗಿ ಬಾದಾಮಿಯ ಮಹಿಳೆಯಾಗಿದ್ದಾರೆ.
ಇನ್ನು, 35 ವರ್ಷದ ಮಹಿಳೆ ಹಾಗೂ 78 ವರ್ಷದ ಪುರುಷನಿಗೆ ಐಎಲ್‌ಐ ಹಿನ್ನೆಲೆ ಇದ್ದು, ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಇದರ ಜೊತೆ 22 ವರ್ಷದ ಯುವಕನಿಗೂ ಸೋಂಕು ದೃಢಪಟ್ಟಿದ್ದು, ಸಂಪರ್ಕ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಬೆಂಗಳೂರು ನಗರದಲ್ಲಿ ರೋಗಿ ಸಂಖ್ಯೆ 350ರ ಸಂಪರ್ಕದಿಂದ 45 ವರ್ಷದ ಮಹಿಳೆ, 24 ವರ್ಷದ ಮಹಿಳೆ ಹಾಗೂ 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇನ್ನು, 24 ವರ್ಷದ ಪುರುಷನಿಗೆ ಬಿಬಿಎಂಪಿ ವಾರ್ಡ್‌ನಲ್ಲಿ ಓಡಾಡಿದ ಹಿನ್ನೆಲೆಯಿಂದ ಸೋಂಕು ಬಂದಿದೆ.
ಬಾಗಲಕೋಟೆಯ ಮುಧೋಳದಲ್ಲಿ ರೋಗಿ ಸಂಖ್ಯೆ 380ರ ದ್ವಿತೀಯ ಸಂಪರ್ಕದ 68 ವರ್ಷದ ಪುರುಷ ಹಾಗೂ 60 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗುಲಿದ್ದು, ಬಾದಾಮಿಯ 23 ವರ್ಷದ ಮಹಿಳೆಗೆ SಂಖI ಹಿನ್ನೆಲೆಯಿಂದ ಸೋಂಕು ದೃಢವಾಗಿದೆ.
608ನೇ ರೋಗಿ ಬೆಂಗಳೂರಿನ 24 ವರ್ಷದ ಯುವಕನಾಗಿದ್ದಾರೆ. 609, 610 ಮತ್ತು 611ನೇ ರೋಗಿ ಕಲಬುರಗಿಯವರಾಗಿದ್ದಾರೆ. 612, 613 ಮತ್ತು 614ನೇ ರೋಗಿಗಳು ಬೆಂಗಳೂರಿನ ಮಹಿಳೆಯರಾಗಿದ್ದಾರೆ. ಇವರೆಲ್ಲರಿಗೂ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಈವರೆಗೆ 25 ಮಂದಿ ಸಾವನ್ನಪ್ಪಿದ್ಧಾರೆ. ಇದರೊಂದಿಗೆ ರಾಜ್ಯದಲ್ಲಿ ಆಯಕ್ಟಿವ್ ಕೇಸ್ಗಳ ಸಂಖ್ಯೆ 295 ಮಾತ್ರ ಇದೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಇದೀಗ ಮೂವರು ಮಾತ್ರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿ-101, ಪಿ-349 ಮತ್ತು ಪಿ-536 ಅವರು ಐಸಿಯುನಲ್ಲಿರುವ ರೋಗಿಗಳು. ಇನ್ನುಳಿದ 293 ರೋಗಿಗಳ ಆರೋಗ್ಯದಲ್ಲಿ ಅಷ್ಟೇನೂ ಏರುಪೇರಾಗಿಲ್ಲ. ಈ ಎಲ್ಲರೂ ಕೂಡ ವಿವಿಧ ಆಸ್ಪತ್ರೆಗಳಲ್ಲಿ ಐಸೋಲೇಶನ್ ವಾರ್ಡ್ಗಳಲ್ಲಿ ದಾಖಲಾಗಿದ್ದಾರೆ.
ಮೈಸೂರಿನಲ್ಲಿ ಕೊರೋನಾ ಸೋಂಕಿನಿಂದ ದಾಖಲಾಗಿದ್ದ 88 ರೋಗಿಗಳ ಪೈಕಿ ಈವರೆಗೆ 75 ಮಂದಿ ಡಿಸ್ಚಾರ್ಜ್ ಆಗಿದ್ಧಾರೆ. ಅಲ್ಲಿ ಕೇವಲ 13 ಆಯಕ್ಟಿವ್ ಕೇಸ್ಗಳು ಮಾತ್ರ ಉಳಿದಿವೆ. ಈ ಮೂಲಕ ಮೈಸೂರು ಹೆಚ್ಚೂಕಡಿಮೆ ಅಪಾಯದಿಂದ ಪಾರಾಗಿದೆ.
ಆಕ್ಟಿವ್ ಕೇಸ್ಗಳಲ್ಲಿ ಅತಿ ಹೆಚ್ಚು ಇರುವುದು ಬೆಂಗಳೂರಲ್ಲೇ. ಇಲ್ಲಿ 70 ಮಂದಿ ಸೋಂಕಿತರಿದ್ದಾರೆ. ಬೆಳಗಾವಿ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ ಜಿಲ್ಲೆಗಳಲ್ಲಿ ಹಾಲಿ ಸೋಂಕಿತರ ಸಂಖ್ಯೆ ಎರಡಂಕಿ ಇದೆ.
ಇದರಲ್ಲಿ 25 ಜನ ಸಾವನ್ನಪ್ಪಿದ್ದರೆ, 293 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರದ ಸಂಜೆಯ ಮಾಧ್ಯಮ ವರದಿಯ ಪ್ರಕಾರ ಕೇವಲ 3 ಜಿಲ್ಲೆಗಳಲ್ಲಿ ಮಾತ್ರ ಕೊರೊನಾ ವೈರಸ್ ಪ್ರಕರಣಗಳು ಕಂಡುಬಂದಿವೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ