ನವದೆಹಲಿ, ಮೇ 3-ಪ್ರಾಣವನ್ನೇ ಪಣವಾಗಿಟ್ಟು ಕೊರೊನಾ ವೈರಸ್ ವಿರುದ್ಧ ದೇಶದ ಜನರನ್ನು ರಕ್ಷಿಸುತ್ತಿರುವ ಕೊರೊನಾ ವಾರಿಯರ್ಸ್ (ವೈದ್ಯರು, ನರ್ಸ್‍ಗಳು, ಆರೋಗ್ಯ ರಕ್ಷಕರು, ಪೊಲೀಸರು, ರಕ್ಷಣಾ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರು) ಸಮೂಹಕ್ಕೆ ಮೂರು ಸಶಸ್ತ್ರ ಪಡೆಗಳು ಇದೇ ದೇಶದ ವಿವಿಧೆಡೆ ವಿಶೇಷ ಗೌರವ ಸಲ್ಲಿಸುತ್ತಿವೆ.
ಭಾರತೀಯ ಭೂ ಸೇನೆ, ವಾಯು ಪಡೆ ಮತ್ತು ನೌಕಾ ದಳಗಳು ಇಂದು ಬೆಳಗ್ಗೆಯಿಂದ ನವದೆಹಲಿ, ಮುಂಬೈ, ಕೊಲ್ಕತಾ, ಚೆನ್ನೈ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಗೌರವ ಸಲ್ಲಿಸುತ್ತಿವೆ. ಫ್ಲೈ ಫಾಸ್ಟ್ ಹೆಲಿಕಾಪ್ಟರ್‍ಗಳ ಮೂಲಕ ಆಗಸದಿಂದ ಕೊರೊನಾ ಹೋರಾಟಗಾರರ ಮೇಲೆ ಹೂವಿನ ಮಳೆಗರೆಯಲಾಗಿದೆ.
ಯುದ್ಧ ನೌಕೆಗಳಲ್ಲಿ ಇವರ ಗೌರವಾರ್ಥ ದೀಪಗಳನ್ನು ಬೆಳಗಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿನ ಆಸ್ಪತ್ರೆಗಳು ಮತ್ತು ಶುಶ್ರೂಷಾ ಕೇಂದ್ರಗಳ ಮೇಲೆ ಹಾರಾಡಿದ ಹೆಲಿಕಾಪ್ಟರ್‍ಗಳು ಪುಷ್ಪ ವೃಷ್ಟಿಗರೆದಿವೆ.ಅತ್ತ ಸಮುದ್ರದ ತೀರದ ಬಳಿ ಲಂಗರೂ ಹಾಕಿರುವ ಯುದ್ಧ ನೌಕೆಗಳಲ್ಲಿ ದೀಪಗಳು ಬೆಳಗುತ್ತಿವೆ.
ಭೂ ಸೇನಾ ಪಡೆ ಯೋಧರು ಸುಶ್ರಾವ್ಯವಾಗಿ ಮಿಲಿಟರಿ ಬ್ಯಾಂಡ್‍ಗಳನ್ನು ನುಡಿಸಿವೆ. ದೇಶದ ಈ ಮೂರು ಸಶಸ್ತ್ರ ಮೀಸಲು ಪಡೆಗಳು, ಡೆಡ್ಲಿ ಕೊರನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್‍ಗಳಾದ ವೈದ್ಯರು, ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ರಕ್ಷಣಾ ಕಾರ್ಯಕರ್ತರು ಮತ್ತು ನೈರ್ಮಲ್ಯ ರಕ್ಷಣೆ ಮಾಡುವ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿರುವುದು ಅತ್ಯಂತ ಪ್ರಶಂಸನೀಯ ಕಾರ್ಯವಾಗಿದೆ. ಇಂದು ಬೆಳಗ್ಗೆಯಿಂದ ಸಂಜೆವರೆಗೂ ದೇಶದ ಉದ್ದಗಲಕ್ಕೂ ಈ ಗೌರವ ಸಮರ್ಪಣೆ ಕಾರ್ಯಗಳು ನಡೆಲಿವೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ