ಮಂಗಳೂರು, ಮೇ 3: ದ.ಕ.ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಪಡೆಯುವ ಬಗ್ಗೆ ದ.ಕ.ಜಿಲ್ಲಾ ಎಸ್ಪಿ ಮಾಹಿತಿ ಪ್ರಕಟಿಸಿದ್ದಾರೆ. ಅದರಂತೆ ಹೊರ ಜಿಲ್ಲೆಗಳಿಗೆ ಪುಯಾಣಿಸಲು ಬಯಸುವ ಸಾರ್ವಜನಿಕರು https://bit.ly/dkdicepass ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ.
*ಒಬ್ಬ ವ್ಯಕ್ತಿ ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಂದು ಬಾರಿ ಮಾತ್ರ ಅಂತರ್ ಜಿಲ್ಲಾ ಪ್ರಯಾಣದ ಪಾಸ್ ಪಡೆಯಬಹುದು.
*ಈ ಪಾಸ್ ಏಕಮುಖವಾಗಿದೆ. ಇದನ್ನು ಮರುಪ್ರಯಾಣಕ್ಕೆ ಬಳಸುವಂತಿಲ್ಲ.
*ಪಾಸ್‌ಗೆ ಅರ್ಜಿ ಸಲ್ಲಿಸುವಾಗ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಪಾಸ್‌ಗೆ ಸಂಬಂಧಿಸಿದ ಲಿಂಕ್ ಮೆಸೇಜ್ ಮೂಲಕ ಬರಲಿದ್ದು, ಈ ಲಿಂಕ್ ಕ್ಲಿಕ್ ಮಾಡಿ ಪಾಸ್ ಪಡೆಯಬಹುದು.
*ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರ ವಾಹನದ ಚಾಲಕರಿಗೆ ಪ್ರತ್ಯೇಕ ಪಾಸ್ ದೊರೆಯಲಿದೆ.

ಈ ಪಾಸ್ ಮೂಲಕ ವಾಹನದ ಚಾಲಕರು ಸಾರ್ವಜನಿಕರನ್ನು ತಲುಪಿಸಿ ಹಿಂದಿರುಗಲು ಅವಕಾಶವಿದೆ.
*ಹೊರ ಜಿಲ್ಲೆಯಿಂದ ದ.ಕ.ಜಿಲ್ಲೆಗೆ ಬಂದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಿಂತಿರುಗಲು ಸಾಧ್ಯವಾಗದಿರುವ ವ್ಯಕ್ತಿಗಳು ಮರಳಿ ತಮ್ಮ ಜಿಲ್ಲೆಗಳಿಗೆ ತೆರಳಲು ಈ ಪಾಸ್ ಮೂಲಕ ಏಕಮುಖ ಪ್ರಯಾಣಕ್ಕೆ ಅವಕಾಶವಿರುತ್ತದೆ.
ಹೆಚ್ಚಿನ ಮಾಹಿತಿಗೆ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ