WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, May 4, 2020

ಲಾಕ್‌ಡೌನ್: ಗ್ರಾಮ ಪಂಚಾಯತ್​ ಎಲೆಕ್ಷನ್ ಡೌಟ್, ಬೇರೆ ತೀರ್ಮಾನ ಕೈಗೊಂಡ ಸರ್ಕಾರ

ಬೆಂಗಳುರು, (ಮೇ.04): ಲಾಕ್‌ಡೌನ್‌ ಪರಿಣಾಮ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯೋದು ಅನುಮಾನವಾಗಿದೆ.
ರಾಜ್ಯದ 6021 ಗ್ರಾಮ ಪಂಚಾಯತ್‌ಗಳ ಅವಧಿ ಇದೇ ಮೇ/ಜೂನ್ ತಿಂಗಳಿನಲ್ಲಿ ಅವಧಿ ಮುಕ್ತಾಯಗೊಳ್ಳಲಿದೆ. ಆದ್ದರಿಂದ ಚುನಾವಣೆ ನಡೆಸಬೇಕಿತ್ತು. ಆದರೆ, ಇದೀಗ ಕೊರೋನಾ ಇರುವುದರಿಂದ ಎಲೆಕ್ಷನ್‌ ನಡೆಸುವುದು ಅಸಾಧ್ಯ ಮಾತು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
'ಕೆಎಸ್‌ಆರ್‌ಟಿಸಿಗೆ ಕಾಂಗ್ರೆಸ್ ಕೊಟ್ಟ 1 ಕೋಟಿ ರೂ. ಚೆಕ್ ನಕಲಿ'
ಇದೀಗ ಸರ್ಕಾರ, ಆಡಳಿತ ಸಮಿತಿ ರಚನೆಗೆ ಚಿಂತನೆ ನಡೆಸಿದ್ದು, ಸಿಎಂ ಸೂಚನೆ ನೀಡಿರುವ ಮೇರೆಗೆ ನಾಳೆ (ಮಂಗಳವಾರ) ಸಚಿವರ ಸಮಿತಿಯ ಸಭೆ ನಡೆಯಲಿದೆ.ಯಾವ ರೀತಿಯಾಗಿ ಆಡಳಿತ ಸಮಿತಿಯನ್ನು ರಚನೆ ಮಾಡಬೇಕು? ಆಡಳಿತ ಸಮಿತಿ ರಚನೆ ಮಾಡಿದ ಸಂದರ್ಭದಲ್ಲಿ ಯಾರಿಗೆ ನೇತೃತ್ವ ವಹಿಸಬೇಕು? ಎನ್ನುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಬೇಕಿದೆ.
ಗ್ರಾಮ ಪಂಚಾಯಿತಿ PDOಗೆ ವಹಿಸಬೇಕೋ ಅಥವಾ ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿಗೆ ವಹಿಸಬೇಕೋ ಎನ್ನುವ ಬಗ್ಗೆ ಚರ್ಚೆಗಳು ನಡೆಯಲಿವೆ.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ