ದುಬೈ : ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಗೆ ಔಷಧಿ ಕಂಡು ಹಿಡಿಯಲು ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಈ ನಡುವೆ ಕೊರೊನಾ ವೈರಸ್ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಇಟಲಿ ಹೇಳಿದೆ.
ರೋಮ್ ನಲ್ಲಿರುವ ಲಜ್ವಾರೋ ಸ್ವಾಲಾಂಜಾನಿ ಸಾಂಕ್ರಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯಲ್ಲಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಅದನ್ನು ಇಲಿಗಳ ಮೇಲೆ ಪ್ರಯೋಗಿಸಿದಾಗ ಆಯಂಟಿಬಾಡಿಗಳನ್ನು ಇಲಿಯಲ್ಲಿ ಸೃಷ್ಟಿಸಿದೆ. ಮಾನವನ ಜೀವಕೋಶಗಳಲ್ಲೂ ಅದು ಕೆಲಸ ಮಾಡಿದೆ ಎಂದು ಇಟಲಿ ಹೇಳಿಕೊಂಡಿದೆ.
ಇನ್ನು ವಿಶ್ವದಾದ್ಯಂತ ಸೋಂಕಿತರ ಸಂಖ್ಯೆ 35,73,864 ರಷ್ಟಿದ್ದು, 2,50,687 ಜನರು ಮೃತಪಟ್ಟಿದ್ದಾರೆ.ಅಮೆರಿಕಾದಲ್ಲಿ ಈವರೆಗೆ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಅತಿಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಲ್ಲಿ ಈವರೆಗೆ 1,161,805 ಜನ ಸೋಂಕಿತರಾಗಿದ್ದು, ಮೃತರ ಸಂಖ್ಯೆ 67,798 ಕ್ಕೆ ಏರಿಕೆಯಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ