ಮಹಾಭಾರತ ಹಾಗೂ ರಾಮಾಯಣ ಕಥೆಗಳನ್ನು ಎಷ್ಟು ಬಾರೀ ಕೇಳಿದರೂ ಎಷ್ಟು ಬಾರಿ ತೆರೆಯ ಮೇಲೆ ನೋಡಿದರೂ ಬೇಸರವಾಗುವುದಿಲ್ಲ. ಪೂರ್ವಜರಿಂದ ಇಂದಿನ ಪೀಳಿಗೆಯವರೆಗೂ ಬೋರ್ ಆಗದೇ ಇರುವ ಕಥೆಗಳು, ಧಾರಾವಾಹಿಗಳು ಅಂದರೆ ಇವೆರಡು ಅಂದರೆ ತಪ್ಪಾಗಲ್ಲ. ರಾಮಾಯಣ ಒಂದು ರೀತಿ ಕಥೆಯಾದರೆ ಮಹಾಭಾರತ ಮತ್ತೊಂದು ರೀತಿಯ ಕಥೆ.
ರಾಮಾಯಣ ನೋಡಿದ್ದ ಜನತೆ ಇದೀಗ ಮಹಾಭಾರತವನ್ನೂ ಹಿಂದಿಯಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿ ಇದೀಗ ಕನ್ನಡದಲ್ಲೂ ಪ್ರಸಾರವಾಗಲು ಪ್ರಾರಂಭವಾಗುತ್ತಿದೆ. ಅದೆಷ್ಟೋ ಮಂದಿ ಕನ್ನಡದಲ್ಲಿ ಈ ಧಾರಾವಾಹಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.
ಮೇ 11ರಿಂದ ಕನ್ನಡದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾತ್ರಿ 8ಗಂಟೆಗೆ ಮಹಾಭಾರತ ಪ್ರಸಾರಕ್ಕೆ ರೆಡಿಯಾಗಿದೆ. ಮಹಾಭಾರತವನ್ನು ಕನ್ನಡಕ್ಕೆ ಡಬ್ ಮಾಡಲಾಗಿದ್ದು, ಈ ಧಾರಾವಾಹಿಯಲ್ಲಿ ಸೌರಭ್ ರಾಜ್ ಜೈನ್, ಶಾಹೀರ್ ಶೇಕ್, ಪೂಜಾ ಶರ್ಮಾ, ಆರವ್ ಚೌಧರಿ, ಪ್ರಣೀತ್ ಭಟ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಒಟ್ನಲ್ಲಿ ಕನ್ನಡದಲ್ಲಿ ಮಹಾಭಾರತ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ