ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾದ 3 ನೇ ದಿನ 216 ಕೋಟಿ ರೂಪಾಯಿಯಷ್ಟ ಮದ್ಯ ಮಾರಾಟವಾಗಿದೆ.
ಮೇ 4ರ ಸೋಮವಾರದಿಂದ ರಾಜ್ಯದಲ್ಲಿ ಮದ್ಯ ಮಾರಾಟ ಆರಂಭವಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಮತ್ತು ಎರಡನೇ ದಿನಕ್ಕಿಂತ ಮೂರನೇ ದಿನ ಹೆಚ್ಚು ಮದ್ಯ ಮಾರಾಟ ಆಗಿದೆ.
ಕರ್ನಾಟಕ ಪಾನೀಯ ನಿಗಮ ಮೂರನೇ ದಿನ 230 ಕೋಟಿ ರೂಪಾಯಿ ವಹಿವಾಟು ನಡೆಸಿದೆ. 216 ಕೋಟಿ ರೂಪಾಯಿ ಮೌಲ್ಯದ 39 ಲಕ್ಷ ಲೀಟರ್ ಭಾರತೀಯ ಮದ್ಯ, 15.6 ಕೋಟಿ ರೂಪಾಯಿ ಮೌಲ್ಯದ 7 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ.
ಮೊದಲ ದಿನ 45 ಕೋಟಿ ರೂಪಾಯಿ ಹಾಗೂ ಎರಡನೇ ದಿನ 197 ಕೋಟಿ ರೂಪಾಯಿ ವಹಿವಾಟು ನಡೆದಿದ್ದು, ಈ ಎರಡು ದಿನದ ದಾಖಲೆಗಳನ್ನು ಮೂರನೇ ದಿನದ ವಹಿವಾಟು ಹಿಂದಿಕ್ಕಿದೆ ಎಂದು ಹೇಳಲಾಗಿದೆ. ಇನ್ನು ರಾಜ್ಯ ಸರ್ಕಾರ ಮದ್ಯದ ಮೇಲೆ ಶೇಕಡ 6 ರಷ್ಟು ಹಾಗೂ ಶೇಕಡ 11 ರಷ್ಟು ಸೇರಿ ಒಟ್ಟು ಶೇಕಡ 17 ರಷ್ಟು ಅಬಕಾರಿ ಸುಂಕ ಹೆಚ್ಚಳ ಮಾಡಿದೆ ಎನ್ನಲಾಗಿದೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ