ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಗ್ಯಾಸ್ ಸಿಲೆಂಡರ್ ಲೀಕ್ ಆಗಿದ್ದು, 1000ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, 10ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಅಲ್ಲದೇ, ಜನರೆಲ್ಲ ರಸ್ತೆಯಲ್ಲೇ ಉಸಿರಾಟದ ಸಮಸ್ಯೆಯಿಂದ ಒದ್ದಾಡುವ ದೃಶ್ಯ ಕಂಡುಬಂದಿದೆ.
300ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸುತ್ತಮುತ್ತಲಿನ ಐದಕ್ಕೂ ಹೆಚ್ಚು ಗ್ರಾಮಗಳಿಗೆ ತೊಂದರೆಯುಂಟಾಗಿದೆ. ಜನರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದ್ದು, ಬಟ್ಟೆಯನ್ನು ಒದ್ದೆ ಮಾಡಿ, ಮುಖಕ್ಕೆ ಮಾಸ್ಕ್‌ನಂತೆ ಕಟ್ಟಿಕೊಳ್ಳಲು ಸೂಚಿಸಲಾಗಿದೆ.
ಇನ್ನು ಅಲ್ಲಿನ ಸಿಎಂ ಜಗನ್‌ಮೋಹನ್ ರೆಡ್ಡಿ, ಪ್ರಧಾನಿ ಮೋದಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.ಘಟನೆ ಬಗ್ಗೆ ಜೂನಿಯರ್ ಎನ್‌ಟಿಆರ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದು, ವೈಜಾಗ್ ಗ್ಯಾಸ್ ಲೀಕ್ ಸುದ್ದಿ ನನ್ನನ್ನ ತೀವ್ರವಾಗಿ ಆತಂಕಕ್ಕೀಡು ಮಾಡಿದೆ, ಸ್ಟೇ ಸ್ಟ್ರಾಂಗ್ ವೈಜಾಗ್ ಎಂದು ಸಾಮಾಜಿಕ ಜಾಲತಾಣದ ಮೂಲಕ ಧೈರ್ಯ ತುಂಬಿದ್ದಾರೆ.
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ