WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, June 7, 2021

Evening News: ಮೋದಿ ಭಾಷಣದಿಂದ ನಟ ಚೇತನ್​ ವಿರುದ್ಧದ ದೂರಿನವರೆಗೆ ನೀವು ಓದಲೇಬೇಕಾದ ಸುದ್ದಿಗಳಿವು

 

ದೇಶವನ್ನು ಉದ್ದೇಶಿಸಿ ಮೋದಿ ಮಾತು
ಕೋವಿಡ್​ ಸೋಂಕಿನ ವಿರುದ್ಧ ವಿಶ್ವದ ಪ್ರಮುಖ ದೇಶಗಳು ಹೋರಾಡುತ್ತಿದ್ದು, ಭಾರತ ಕೂಡ ಈ ಹೋರಾಟದಿಂದ ಹಿಂದೆ ಉಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿತರಣೆ ವೇಗವನ್ನು ಹೆಚ್ಚಸಿಲಾಗುವುದು.ಲಸಿಕೆ ಲಭ್ಯತೆ ಹೆಚ್ಚಿಸಲು ವಿದೇಶದಿಂದ ಕೂಡಲ ಲಸಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ. ಮಕ್ಕಳಿಗೂ ಲಸಿಕೆ ನೀಡುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಬಡವರ ಜೊತೆಗೆ ಸರ್ಕಾರ ಇದೆ. ನಮ್ಮ ಬಡ ಸಹೋದರ-ಸಹೋದರಿಯರು ಹೊಟ್ಟೆ ಹಸಿವಿನಿಂದ ಬಳಲಬಾರದು.ದೀಪಾವಳಿ ವರೆಗೂ ಅಂದರೆ ನವೆಂಬರ್​ವರೆಗೂ ಪ್ರಧಾನಿ ಮಂತ್ರಿ ಗರೀಬ್​ ಕಲ್ಯಾಣ ಯೋಜನೆ ಅಡಿ ನವೆಂಬರ್​ವರೆಗೂ ಉಚಿತ ರೇಷನ್​ ನೀಡಲಾಗುವುದು. ಇದರಿಂದ 80 ಕೋಟಿ ಜನರು ಲಾಭಾ ಪಡೆಯಲಿದ್ದಾರೆ ಎಂದು ಘೋಷಿಸಿದರು. ಬಿಎಸ್​ವೈ ನಮ್ಮ ನಾಯಕ ಎಂದ ಯೋಗೇಶ್ವರ್​
ಬಿ.ಎಸ್​.ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ವಿಚಾರಕ್ಕೆ ದೆಹಲಿ ಭೇಟಿ ಮೂಲಕ ತುಪ್ಪ ಸುರಿದಿದ್ದ ಸಚಿವ ಸಿ.ಪಿ.ಯೋಗೇಶ್ವರ್ ದಿಢೀರನೇ ಸಿಎಂ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ. ಹೈಕಮಾಂಡ್​ ಕೇಳಿದರೆ ರಾಜೀನಾಮೆ ಸಿದ್ಧ ಎನ್ನುವ ಮೂಲಕ ನಿನ್ನೆ ಯಡಿಯೂರಪ್ಪ ಅಚ್ಚರಿ ಮೂಡಿಸಿದ್ದರು. ಈ ಹೇಳಿಕೆ ಬೆನ್ನಲ್ಲೇ ರಾಜಕೀಯ ಲೆಕ್ಕಾಚಾರ ಬದಲಾದಂತೆ ಕಾಣುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತಿದೆ ಸಿಪಿ ಯೋಗೇಶ್ವರ್​ ಅವರ ಇಂದಿನ ಹೇಳಿಕೆ. ನಮ್ಮ‌ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ‌ ಇಚ್ಛೆ ಎನ್ನುವ ಮೂಲಕ ಸಿಪಿ ಯೋಗೇಶ್ವರ್​​ ಯೂಟರ್ನ್​​ ಹೊಡೆದಿದ್ದಾರೆ.

ಸಿಎಂ ಪರ ಸಹಿ ಸಂಗ್ರಹ
ಕೋವಿಡ್​ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯ ರಾಜಕೀಯ ಗರಿಗೆದ್ದರಿದ್ದು, ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಹೈ ಕಮಾಂಡ್​ ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ದ ಎಂದಿದ್ದರು. ಇದರ ಬೆನ್ನಲ್ಲೇ ಸಿಎಂ ಬಿಎಸ್​ವೈ ಪರ ವಿರೋಧ ಗುಂಪುಗಳು ಹೈಕಮಾಂಡ್​ಗೆ ಸುದ್ದಿ ಶಾಸಕರ ಅಭಿಪ್ರಾಯ ಸಹಿ ಸಂಗ್ರಹ ಮಾಡಿ ನೀಡಲು ಮುಂದಾಗಿವೆ. ಈಗಾಗಲೇ ಸಿಎಂ ಬಿಎಸ್​ ಯಡಿಯೂರಪ್ಪ ಪರ ಬ್ಯಾಟಿಂಗ್​ ನಡೆಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಬಿಎಸ್​ ಯಡಿಯೂರಪ್ಪ ಪರ ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಸಹಿ ಸಂಗ್ರಹಿಸದಂತೆ ತಾಕೀತುನಾಯಕತ್ವ ವಿಚಾರಣೆಯಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಈ ಸಹಿ ಸಂಗ್ರಹ ಅಭಿಯಾನ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಅವರಿಗೆ ಮುಜುಗರವನ್ನು ಮೂಡಿಸಿದ್ದು, ಈ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ. ಟ್ವಿಟರ್​ನಲ್ಲಿ ಈ ಕುರಿತು ತಿಳಿಸಿರುವ ಬಿಎಸ್​ ಯಡಿಯೂರಪ್ಪ, ಯಾರೂ ಕೂಡ ಸಹಿ ಸಂಗ್ರಹಿಸಬಾರದು. ರಾಜಕೀಯ ಹೇಳಿಕೆಯನ್ನು ನೀಡಬಾರದು ಎಂದು ಶಾಸಕರಿಗೆ, ಸಚಿವರಿಗೆ ಎಚ್ಚರಿಸಿದ್ದಾರೆ

ತವರು ತೊರೆದಂತೆ ಭಾಸ- ರೋಹಿಣಿ ಸಿಂಧೂರಿ
ಶನಿವಾರ ತಡರಾತ್ರಿ ಮೈಸೂರಿನಿಂದ ವರ್ಗಾವಣೆಯಾದ ರೋಹಿಣಿ ಸಿಂಧೂರಿ ಮೈಸೂರಿನ ಜನತೆಗೆ ಧನ್ಯವಾದ ಹೇಳಿದ್ದಾರೆ. ಮೈಸೂರು ನನಗೆ ತಾಯಿ ಮನೆ ಅನುಭವ ನೀಡಿದೆ. ಒಬ್ಬ ಮಗಳಾಗಿ ಮೈಸೂರಿನ ಎಲ್ಲಾ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಈ ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಒಳ್ಳೆಯ ಕೆಲಸ ಮಾಡುವ ಸಮಯದಲ್ಲಿ ಈ ವರ್ಗಾವಣೆ ಆಗಿದೆ. ಆದರೂ ಮಗಳು ತವರು ಮನೆ ಬಿಟ್ಟು ಹೋಗುವಂತೆ ಹೋಗ್ತಿದ್ದೇನೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಭಾವುಕರಾದರು.

ಚಿರು ಮೊದಲ ಪುಣ್ಯ ಸ್ಮರಣೆ
ಸ್ಯಾಂಡಲ್​ವುಡ್ ಯುವ ಸಾಮ್ರಾಟ್​ ಚಿರಂಜೀವಿ ಸರ್ಜಾ ಅವರ ಮೊದಲ ಪುಣ್ಯ ಸ್ಮರಣೆ ಇಂದು. ಕಳೆದ ವರ್ಷ ಅಂದರೆ 2020ರ ಜೂನ್ 07ರಂದು ಚಿರು ಇಹಲೋಕ ತ್ಯಜಿಸಿದ್ದರು. ಮೇಘನಾ ರಾಜ್ ಆಗಾಗ ಚಿರು ಫೋಟೋವನ್ನು ಹಂಚಿಕೊಳ್ಳುತ್ತಾ ಭಾವುಕರಾಗಿ ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ನಿನ್ನೆ ರಾತ್ರಿಯೂ ಮೇಘನಾ ಚಿರು ಜೊತೆಗಿರುವ ಒಂದು ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಹಾಗೂ ನನ್ನವನು ಎಂದು ಶೀರ್ಷಿಕೆ ನೀಡಿದ್ದಾರೆ

ನಟ ಚೇತನ್​ ವಿರುದ್ಧ ದೂರು
ಕನ್ನಡದ ನಟ ಚೇತನ್​​ ಸಿನಿಮಾಯೇತರ ಸಾಮಾಜಿಕ ವಿಷಯಗಳ ಕುರಿತು ನೇರ, ನಿಷ್ಠುರವಾಗಿ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಬ್ರಾಹ್ಮಣರ ವಿಚಾರವಾಗಿ ಟ್ವೀಟ್​ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ನಟ ಚೇತನ್​ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಟ್ವೀಟ್​ ಮಾಡಿದ್ದಾರೆಂದು ಆರೋಪಿಸಿ ಬಾಹ್ಮಣ ಸಮುದಾಯದ ಪೊಲೀಸ್​ ಆಯುಕ್ತರಿಗೆ ದೂರು ನೀಡಿದೆ. ಬ್ರಾಹ್ಮಣ ಸಮುದಾಯದ ಮುಖಂಡ ಸಚ್ಚಿದಾನ ಅವರು ಇಂದು ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
(ಕನ್ನಡ ಮಾಹಿತಿ ಕೃಪೆ News18 ಕನ್ನಡ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ