ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೊದಲ ಹಾಗೂ 2ನೇ ಅಲೆಯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವಂತ ಅನೇಕ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸೋಂಕಿಗೆ ಬಲಿಯಾಗಿದ್ದಾರೆ. ಹೀಗೆ ಕರ್ತವ್ಯದಲ್ಲಿ ಇದ್ದಾಗಲೇ ಮೃತಪಟ್ಟಂತ ಅಧಿಕಾರಿ, ಸಿಬ್ಬಂದಿಗಳ ಕುಟುಂಬಸ್ಥರಿಗೆ ರಾಜ್ಯ ಸರ್ಕಾರದಿಂದ ಯಾವೆಲ್ಲಾ ಆರ್ಥಿಕ ಸಹಾಯ ದೊರೆಯಲಿದೆ ಎನ್ನುವ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಈ ಕುರಿತಂತೆ ರಾಜ್ಯದ ಡಿಜಿ ಮತ್ತು ಐಡಿಪಿ ಪ್ರವೀಣ್ ಸೂದ್ ಅವರು ಮಾಹಿತಿಯನ್ನು ಹಂಚಿಕೊಂಡಿದ್ದು, ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು, ಕುಟುಂಬಸ್ಥರ ಬಗ್ಗೆ ಸರ್ಕಾರದ ಹೆಮ್ಮೆ ಪಡುತ್ತಿದೆ. ಸೋಂಕಿನ ಈ ಸಂದರ್ಭದಲ್ಲೂ ಹಗಲಿರುಳು ದುಡಿಯುತ್ತಿದ್ದಾರೆ. ಇದರ ಮಧ್ಯೆ ಸೋಂಕಿನಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಾವನ್ನಪ್ಪಿದ್ದು ದುಖದ ಸಂಗತಿಯಾಗಿದೆ ಎಂದಿದ್ದಾರೆ.ಹೀಗೆ ಕೊರೋನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮೃತಪಟ್ಟಂತ ಅಧಿಕಾರಿ, ಸಿಬ್ಬಂದಿಗಳ ಕುಟುಂಬಸ್ಥರೊಂದಿಗೆ ಪೊಲೀಸ್ ಇಲಾಖೆ, ಸರ್ಕಾರವಿದೆ. ಮೃತ ಕುಟುಂಬಸ್ಥರಿಗೆ ಈ ಕೆಳಗಿನಂತೆ ಆರ್ಥಿಕ ಸಹಾಯವನ್ನು ಸರ್ಕಾರದಿಂದ ನೀಡಲಿದ್ದು, ಉಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ
(ಮಾಹಿತಿ ಕೃಪೆ Kannada News Now )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ