ಬೆಂಗಳೂರು : ರಾಜ್ಯ ಸರ್ಕಾರದಿಂದ ಈಗ ಸರ್ಕಾರದ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್ ದೊರೆತಿದೆ. ಇದುವರೆಗೆ ಸರ್ಕಾರದಿಂದ ವಿವಿಧ ಫಲಾನುಭವಿಗಳಿಗೆ ನೀಡಲಾಗುತ್ತಿದ್ದಂತ ಹಣವನ್ನು ಮತ್ತಷ್ಟು ಪಾರದರ್ಶಕವಾಗಿ ತಲುಪುವ ವ್ಯವಸ್ಥೆ ಮಾಡಿದೆ. ಇದಕ್ಕಾಗಿ ವಿವಿಧ ಫಲಾನುಭವಿಗಳು, ಜಸ್ಟ್ ಈ ಒಂದು ಆಪ್ ಡೌನ್ ಲೋಡ್ ಮಾಡಿಕೊಂಡ್ರೇ ಸಾಕು, ಇನ್ಮುಂದೆ ನಿಮ್ಮ ಖಾತೆಗೆ ಸರ್ಕಾರದ ಹಣ ಜಮೆ ಆಗಲಿದೆ. ಹಾಗಾದ್ರೇ.. ಅದೇಗೆ..? ಅದೇನು ಅನ್ನುವ ಸಂಪೂರ್ಣ ಮಾಹಿತಿ, ಮುಂದೆ ಓದಿ..
ಹೌದು.. ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ನೇರವಾಗಿ ವರ್ಗಾವಣೆ ಮಾಡಲು, ಇಂದು ನೇರ ನಗದು ವರ್ಗಾವಣೆ (DBT) ಮೊಬೈಲ್ ಆಪ್ ಅನ್ನು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ. ಈ ಆಪ್ ಅನ್ನು ರಾಜ್ಯದ ವಿವಿಧ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು, ಫಲಾನುಭವದ ಮಾಹಿತಿ ದಾಖಲಿಸಿದ್ರೇ.. ನೇರವಾಗಿಯೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಈ ಆಪ್ ಬಿಡುಗಡೆಗೊಳಿಸಿದ ನಂತ್ರ ಮಾತನಾಡಿದಂತ ಸಿಎಂ ಯಡಿಯೂರಪ್ಪ ಅವರು, ಸರ್ಕಾರದ 120 ಯೋಜನೆಗಳನ್ನು ಡಿಬಿಟಿ ಆಪ್ ನೊಂದಿಗೆ ಜೋಡಣೆ ಮಾಡಲಾಗಿದ್ದು, ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವಂತ ಫಲಾನುಭವಿಗಳಿಗೆ, ಈ ಪದ್ದತಿಯ ಮೂಲಕ ನೇರವಾಗಿಯೇ ಅವರ ಖಾತೆಗೆ ಹಣ ವರ್ಗಾವಣೆ ಆಗಲಿದೆ ಎಂದರು.
ಅಂದಹಾಗೇ, ಕಳೆದ 2 ವರ್ಷಗಳಲ್ಲಿ 12 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಇದೀಗ ಇಂದು ಬಿಡುಗಡೆಗೊಳಿಸಲಾಗಿರುವಂತ ಡಿಬಿಟಿ ಆಪ್ ವ್ಯವಸ್ಥೆ ಮೂಲಕ, ವಿವಿಧ ಯೋಜನೆಗಳಲ್ಲಿ ಹಣದ ಸೋರಿಕೆ ತಡೆಗಟ್ಟಲು ಹೆಚ್ಚು ಅನುಕೂಲ ಆಗಲಿದೆ ಎಂದರು.
DBT ಆಪ್ ಬಗ್ಗೆ ಮಾಹಿತಿ
ಈ ಡಿಬಿಟಿ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು, ಆಧಾರ್ ಇ-ಕೆವೈಸಿ ಮೂಲಕ ನೊಂದಣಿ ಮಾಡಿಕೊಳ್ಳಬೇಕಾಗಿದೆ.
ಈ ಆಪ್ NPCI ( National Payment Corporation of India) ಸಂಪರ್ಕಿಸಿ ಆಧಾರ್ ಬ್ಯಾಂಕ್ ಸೀಡಿಂಗ್ ನ ಪ್ರಸ್ತುತ ಸ್ಥಿತಿಯನ್ನು ನೀಡುತ್ತದೆ.
ಡಿಬಿಟಿ ಮೊಬೈಲ್ ಆಪ್ ನಲ್ಲಿ, ಯೋಜನೆವಾರು ವಿವಿಧ ಕಂತುಗಳಲ್ಲಿ ವರ್ಗಾಹಿಸಿದ ಪಾವತಿ ಮೊತ್ತ, ಪಾವತಿ ದಿನಾಂಕ, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಯುಟಿಆರ್ ಸಂಖ್ಯೆ ಮಾಹಿತಿ ಕೂಡ ಲಭ್ಯವಿದೆ.
ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡುವ ಎಲ್ಲಾ ಯೋಜನೆಗಳನ್ನು ಡಿಬಿಟಿ ವೇದಿಕೆಯಡಿ ತರಗಾಗಿದ್ದು, ಈ ವೇದಿಕೆಯಲ್ಲಿ ಫಲಾನುಭವಿಯನ್ನು ಆಧಾರ್ ಸಂಖ್ಯೆ ಮೂಲಕ ಗುರುತಿಸಿ, ಫಲಾನುಭವಿಯ ಆಧಾರ್ ಅನ್ನು ಆರ್ಥಿಕ ವಿಳಾಸವಾಗಿ ( Financial Address ) ಪರಿಗಣಿಸಿ, ನಗದು ವರ್ಗಾವಣೆಯನ್ನು ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ.
(ಮಾಹಿತಿ ಕೃಪೆ Kannada News Now)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ