21 ವರ್ಷದ ರಚಿತಾ ಎಂಬುವವರೇ ಸಾವಿಗೆ ಶರಣಾದ ಗೃಹಿಣಿ. ಕಳೆದ ಎರಡೂವರೆ ವರ್ಷದ ಹಿಂದೆಯಷ್ಟೇ ವೀರಣ್ಣ ಎಂಬುವರ ಜೊತೆ ರಚಿತಾ ಮದುವೆಯಾಗಿತ್ತು.
ಸಿವಿಲ್ ಇಂಜಿನಿಯರ್ ಆಗಿರುವ ವೀರಣ್ಣ, ಮದುವೆ ಬಳಿಕ ಹಣಕ್ಕಾಗಿ ಪೀಡಿಸಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಮಂಗಳವಾರ ಕೂಡ ಹಣ ತವರು ಮನೆಯಿಂದ ಹಣ ತರುವಂತೆ ಕಿರುಕುಳ ನೀಡಿ, ಗಲಾಟೆ ಮಾಡಿದ್ದ. ಇದರಿಂದ ಬೇಸತ್ತು ಮನೆಯಲ್ಲೇ ರಚಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಚಿತಾ ಸಾವು ಸಂಬಂಧ ಪತಿ ವೀರಣ್ಣ, ಮಾವ ಚಂದ್ರಕಾಂತ, ಅತ್ತೆ ಲಕ್ಷ್ಮಿಬಾಯಿ, ಮೈದುನ ಪವನ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
(ಮಾಹಿತಿ ಕೃಪೆ ಉದಯವಾಣಿ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ