ಯುಎಎನ್ ಮೂಲಕ ಆನ್ಲೈನ್ನಲ್ಲಿ ಪಿಎಫ್ ಹಣ ಪರಿಶೀಲನೆ: ಯುಎಎನ್ ಪೋರ್ಟಲ್ ಲಾಗಿನ್ ಆಗುವ ಮೂಲಕ ನೌಕರರು ಪಿಎಫ್ ಕೊಡುಗೆ ಹಾಗೂ ಸಂಗ್ರಹವಾದ ಹಣದ ಸಂಪೂರ್ಣ ವಿವರವನ್ನು ಪಾಸ್ಬುಕ್ ಮೂಲಕ ವೀಕ್ಷಿಸಬಹುದು. ಈ ಇಂಟರ್ಫೇಸ್ ಬಳಸಿ ಚಂದಾದಾರರು ಯುಎಎನ್ ಕಾರ್ಡ್ ಕೂಡ ಡೌನ್ಲೋಡ್ ಮಾಡಬಹುದು. ಎಸ್ಎಂಎಸ್ ಮೂಲಕ: ನಿಮ್ಮ ಪಿಎಫ್ ಹಣ ಎಷ್ಟು ಇವೆ ಎಂದು ಪರಿಶೀಲಿಸಲು ಎಸ್ಎಂಎಸ್ ಸುಲಭ ಉಪಾಯ. ನೀವು ಮಾಡಬೇಕಾಗಿರುವುದು ಇಷ್ಟೆ. 7738299899 ನಂಬರ್ಗೆ ಮೆಸೇಜ್ ಮಾಡಬೇಕು. EPFOHO UAN ENG ಎಂದು ಟೈಪ್ ಮಾಡಿ ನಿಮ್ಮ ಪಿಎಫ್ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ನಿಂದ 7738299899 ನಂಬರ್ಗೆ ಸಂದೇಶ ರವಾನಿಸಿ. ಒಂದು ನಿಮಿಷದ ಒಳಗೆ ನಿಮ್ಮ ಪಿಎಫ್ ಹಣದ ಮಾಹಿತಿ ದೊರೆಯುತ್ತದೆ. ಇಲ್ಲಿ ನಮಗೆ ಬೇಕಾದ ಭಾಷೆಯಲ್ಲಿ ಎಸ್ಎಂಎಸ್ ಅನ್ನೂ ಪಡೆಯಬಹುದಾಗಿದೆ. ಉದಾಹರಣೆಗೆ ಕನ್ನಡ ಭಾಷೆಯಲ್ಲಿ ಎಸ್ಎಂಎಸ್ ಬೇಕು ಎಂದಾದರೆ EPFOHO UAN KAN ಎಂದು ಟೈಪ್ ಮಾಡಿ 7738299899 ನಂಬರ್ಗೆ ಸೆಂಡ್ ಮಾಡಿ. ಇನ್ನೊಂದು ಪ್ರಮುಖ ವಿಚಾರ ಎಂದರೆ ಎಎನ್ ಸಕ್ರಿಯಗೊಳಿಸಿರುವ ಉದ್ಯೋಗಿಗಳು ಮಾತ್ರ ಈ ಸೇವೆಯನ್ನು ಪಡೆಯಬಹುದು.
ಆಯಪ್ ಮೂಲಕ: ನಿಮ್ಮಲ್ಲಿ ಸ್ಮಾರ್ಟ್ಫೋನ್ ಇದ್ದರೆ ಆಯಪ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ಪಿಎಫ್ ಹಣದ ಮಾಹಿತಿ ಪಡೆಯಬಹುದು. ಸರ್ಕಾರ ಕಳೆದ ವರ್ಷ ಬಿಡುಗಡೆ ಮಾಡಿರುವ EPF ಮೊಬೈಲ್ ಆಯಪ್ನಲ್ಲಿ ಪರಿಶೀಲಿಸಬಹುದಾಗಿದೆ. ಇದಕ್ಕೂ ಯುಎಎನ್ ಹಾಗೂ ನೊಂದಾಯಿತ ಮೊಬೈಲ್ ಸಂಖ್ಯೆ ಮುಖ್ಯ.
(ಮಾಹಿತಿ ಕೃಪೆ News18 ಕನ್ನಡ )
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ