ಭಾರತೀಯ ಚಾರ್ಟರ್ಡ್ ಅಕೌಂಟೆನ್ಸಿ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪಡೆದ ಬಳಿಕ ಪರೀಕ್ಷೆಗೆ ಹಾಜರಾಗಿ ಎಂದು ಮನವಿ ಮಾಡಿದೆ.
ಜುಲೈ ತಿಂಗಳಲ್ಲಿ ಪರೀಕ್ಷೆಯ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಪೋಷಕರಿಂದ ಒಪ್ಪಿಗೆ ಪತ್ರವನ್ನ ಐಸಿಎಐಗೆ ಸಲ್ಲಿಸತಕ್ಕದ್ದು. ಪರೀಕ್ಷೆಯನ್ನ ಮುಂದೂಡುವ ಬಗ್ಗೆ ವಿದ್ಯಾರ್ಥಿಗಳು ಒತ್ತಾಯಿಸಿದ ಬಳಿಕ ಐಸಿಎಐ ಈ ನಿರ್ಧಾರವನ್ನ ಪ್ರಕಟಿಸಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಪ್ರವೇಶ ಪತ್ರಗಳು ಸಿಗಲಿವೆ. ಆದರೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಸರ್ಕಾರ ಹಾಗೂ ಐಸಿಎಐ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನ ಪಾಲನೆ ಮಾಡೋದು ಕಡ್ಡಾಯವಾಗಿ ಇರಲಿದೆ. ಅಲ್ಲದೇ ಪೋಷಕರಿಂದ ಸಂಪೂರ್ಣ ಒಪ್ಪಿಗೆ ಪಡೆದು ಪರೀಕ್ಷೆಗೆ ಹಾಜರಾಗುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಸಾಕ್ಷ್ಯ ಪತ್ರವನ್ನ ನೀಡಲೇಬೇಕು ಎಂದು ಐಸಿಎಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಜ್ವರದ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನುಮತಿ ಇರೋದಿಲ್ಲ. ಸಾಮಾನ್ಯ ಉಷ್ಣಾಂಶಕ್ಕಿಂತ ಹೆಚ್ಚಿನ ದೇಹ ತಾಪಮಾನ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ಬರಲು ನಿರ್ಬಂಧ ಹೇರಿದ್ದೇವೆ ಎಂದು ಐಸಿಎಐ ನೋಟಿಸ್ನಲ್ಲಿ ತಿಳಿಸಿದೆ.
ಐಸಿಎಐ ಜುಲೈನಲ್ಲಿ ನಡೆಯಲಿರುವ ಸಿಎ ಪರೀಕ್ಷೆಗೆ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಅಭ್ಯರ್ಥಿಗಳು ಪರೀಕ್ಷೆಗಾಗಿ ಹೆಚ್ಚು ದೂರ ಪ್ರಯಾಣಿಸೋದು ಬೇಡ ಎಂಬ ಕಾರಣಕ್ಕೆ ಐಸಿಎಐ 192 ಜಿಲ್ಲೆಗಳಲ್ಲಿ ಪರೀಕ್ಷೆಯನ್ನ ಆಯೋಸಿದೆ .
(ಮಾಹಿತಿ ಕೃಪೆ ಕನ್ನಡದುನಿಯಾ)
No comments:
Post a Comment
ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ