WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, June 8, 2021

ಗಾಂಧೀಜಿ ಅವರ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ದಕ್ಷಿಣ ಆಫ್ರಿಕಾ!

 


ಜೊಹಾನ್ಸ್​ಬರ್ಗ್​(ದಕ್ಷಿಣ ಆಫ್ರಿಕಾ): ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳು ಆಶಿಲ್​ ಲತಾ ರಾಮ್​ಗೋಬಿನ್(59)​ಗೆ ದಕ್ಷಿಣ ಆಫ್ರಿಕಾ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹಣಕಾಸು ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಆಶಿಲ್​ ಲತಾ ತಪ್ಪಿತಸ್ಥರು ಎಂದು ದಕ್ಷಿಣ ಆಫ್ರಿಕಾದ ಡರ್ಬನ್​ ವಾಣಿಜ್ಯ ವ್ಯಾಜ್ಯಗಳ ವಿಶೇಷ ನ್ಯಾಯಾಲಯ ನಿನ್ನೆ(ಸೋಮವಾರ) ತೀರ್ಪು ಪ್ರಕಟಿಸಿದೆ. ಅಲ್ಲದೆ, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾಲಾವಕಾಶವನ್ನೂ ನಿರಾಕರಿಸಿದೆ.
ಏನೀ ಪ್ರಕರಣ?: ಭಾರತದಿಂದ ದಕ್ಷಿಣ ಆಫ್ರಿಕಾಗೆ ಲತಾ ಅವರು ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕಸ್ಟಂ ಸುಂಕಕ್ಕಾಗಿ ದಕ್ಷಿಣ ಆಫ್ರಿಕಾದ ಉದ್ಯಮಿ, ನ್ಯೂ ಆಫ್ರಿಕಾ ಅಲೈಯನ್ಸ್​ ಕಂಪನಿ ನಿರ್ದೇಶಕ ಎಸ್​.ಆರ್​.ಮಹಾರಾಜ್​ ಎಂಬುವರಿಂದ 6 ದಶಲಕ್ಷ ಆಫ್ರಿಕನ್​ ರಾಂಡ್​ (ಅಂದಾಜು 3.22 ಕೋಟಿ ರೂಪಾಯಿ) ಪಡೆದಿದ್ದ ಲತಾ, ಬಂದ ಲಾಭದಲ್ಲಿ ಆ ಕಂಪನಿಗೂ ಪಾಲು ಕೊಡುವುದಾಗಿ ಹೇಳಿದ್ದರು. ಬಳಿಕ ಹಣ ಕೊಡದೆ ವಂಚಿಸಿದ್ದಾರೆ ಎಂದು 2015ರಲ್ಲಿ ಕೇಸ್​ ದಾಖಲಾಗಿತ್ತು.
ನ್ಯೂ ಅಲೈಯನ್ಸ್​ ಕಂಪನಿಯು ಲೆನಿನ್​ ಬಟ್ಟೆ ಮತ್ತು ಪಾದರಕ್ಷೆಗಳನ್ನು ಆಮದು ಮಾಡಿಕೊಳ್ಳುವ, ತಯಾರಿಸುವ ಹಾಗೂ ಮಾರಾಟ ಮಾಡುವ ಕೆಲವ ಮಾಡುತ್ತದೆ. ಈ ಕಂಪನಿಯು ಲಾಭ-ಷೇರು ಆದರದಲ್ಲಿ ಇತರ ಕಂಪನಿಗಳಿಗೆ ಹಣಕಾಸು ನೆರವು ನೀಡುತ್ತದೆ. 2015 ಆಗಸ್ಟ್​ನಲ್ಲಿ ದ.ಆ. ನೆಟ್​ಕೇರ್​ ಆಸ್ಪತ್ರೆಯ ಸಮೂಹ ಸಂಸ್ಥೆಗಳಿಗೆ ವಿತರಿಸಲು ಭಾರತದಿಂದ 3 ಕಂಟೇನರ್​ ಲೆನಿನ್​ ಬಟ್ಟೆಯನ್ನು ಆಮದು ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಂಬಿಸಲು ನಕಲಿ ದಾಖಲೆ ಸೃಷ್ಟಿಸಿ ನ್ಯೂ ಅಲೈಯನ್ಸ್​ ಕಂಪನಿಯಿಂದ ಲತಾ ರಾಮ್​ಗೋಬಿನ್​ 6.2 ದಶಲಕ್ಷ ರಾಂಡ್​ ಪಡೆದಿದ್ದರು ಎಂದು ವಿಚಾರಣೆ ವೇಳೆ ರಾಷ್ಟ್ರೀಯ ಪ್ರಾಸಿಕ್ಯೂಟಿಂಗ್​ ಪ್ರಾಧಿಕಾರ (ಎನ್​ಪಿಎ) ಬ್ರಿಗೇಡಿಯರ್​ ಹಂಗ್ವಾನಿ ಮುಲ್ವಾಡಿ ಹೇಳಿದ್ದರು. (ಏಜೆನ್ಸೀಸ್​)
(ಮಾಹಿತಿ ಕೃಪೆ ವಿಜಯವಾಣಿ )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ