WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, June 7, 2021

ಕರ್ನಾಟಕ ಅನ್‌ಲಾಕ್; ಸಬ್ ರಿಜಿಸ್ಟರ್ ಕಚೇರಿಗಳು ಓಪನ್

 


ಬೆಂಗಳೂರು, ಜೂನ್ 07; ಕರ್ನಾಟಕ ಸರ್ಕಾರ ಜೂನ್ 7ರಿಂದ 14ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆದರೆ ಅನ್‌ಲಾಕ್ ಪ್ರಕ್ರಿಯೆಗೆ ಸಹ ಚಾಲನೆ ನೀಡಿದೆ.
ಸರ್ಕಾರ ಭಾನುವಾರ ಸಬ್ ರಿಜಿಸ್ಟರ್ ಕಚೇರಿಗಳನ್ನು ತೆರೆಯಲು ಅನುಮಿತಿ ನೀಡಿದೆ. ರಾಜ್ಯದಲ್ಲಿರುವ 243 ಸಬ್ ರಿಜಿಸ್ಟರ್ ಕಚೇರಿಗಳು ಸೋಮವಾರದಿಂದಲೇ ತೆರೆಯಲಿವೆ.
ಸರ್ಕಾರಕ್ಕೆ ಆದಾಯ ತಂದುಕೊಂಡುವ ಪ್ರಮುಖ ಮೂಲ ಮುದ್ರಾಂಕ ಹಾಗೂ ನೋಂದಣಿ ಶುಲ್ಕ. ಹೀಗಾಗಿ ಸಬ್ ರಿಜಿಸ್ಟರ್ ಕಚೇರಿಗಳನ್ನು ಆರಂಭಿಸಲು ಒಪ್ಪಿಗೆ ಕೊಡಲಾಗಿದೆ.
ಈಗಾಗಲೇ ಸರ್ಕಾರ ರಫ್ತು ಆಧಾರಿತ ಕೈಗಾರಿಕೆಗಳು ಕಾರ್ಯ ನಿರ್ವಹಣೆ ಮಾಡಲು ಅವಕಾಶ ನೀಡಿತ್ತು. ಈಗ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುತ್ತಲೇ ಕಚೇರಿಗಳನ್ನು ಆರಂಭಿಸಲು ಒಪ್ಪಿಗೆ ನೀಡಿದೆ.
ಮೇ ತಿಂಗಳಿನಲ್ಲಿ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದ ಬಳಿಕ ಸಬ್ ರಿಜಿಸ್ಟರ್ ಕಚೇರಿಗಳನ್ನು ಮುಚ್ಚಲಾಗಿತ್ತು. ಸರ್ಕಾರ ಲಾಕ್‌ಡೌನ್ ಅನ್ನು ಜೂನ್ ತನಕ ವಿಸ್ತರಣೆ ಮಾಡಿದ ಹಿನ್ನಲೆ ಕಚೇರಿಗೆ ಬೀಗ ಬಿದ್ದಿತ್ತು.
ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಭಾನುವಾರದ ವರದಿಯಂತೆ 12,209 ಹೊಸ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ದರ ಶೇ 7.71ಕ್ಕೆ ಇಳಿಕೆಯಾಗಿದೆ.
(ಮಾಹಿತಿ ಕೃಪೆ Oneindia )

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ