WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Saturday, June 12, 2021

ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭ, 1 ರಿಂದ 10ನೇ ತರಗತಿ ಮಕ್ಕಳ ಪಠ್ಯದ ಹೊಸ ಮಾರ್ಗಸೂಚಿ ಬಿಡುಗಡೆ

 


ಬೆಂಗಳೂರು- ಪ್ರಸಕ್ತ ವರ್ಷದ (2021-22) ಶೈಕ್ಷಣಿಕ ವರ್ಷ ಜುಲೈ 1 ರಿಂದ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿ ಬದಲು ಆನ್'ಲೈನ್ ಮತ್ತು ಆಫ್'ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕಳೆದ ವರ್ಷದಂತೆ ಈ ವರ್ಷವೂ ದೂರದರ್ಶನ ಚಂದನ ವಾಹಿನಿಯಲ್ಲಿ ಸಂವೇದನಾ ಕಾರ್ಯಕ್ರಮದ ಮೂಲಕ 1662 ವಿಡಿಯೋ ಪಾಠ ಬೋಧನಾ ನಡೆಯಲಿದೆ. ಎಫ್‌ಎಂ ರೇಡಿಯೋದಲ್ಲಿ ಆಡಿಯೋ ಪಾಠಗಳ ಪ್ರಸಾರ ನಡೆಯಲಿದೆ.

ಕೇಂದ್ರ ಸರ್ಕಾರದ ದೀಕ್ಷಾ ಆಯಪ್ ನಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ 22 ಸಾವಿರಕ್ಕೂ ಹೆಚ್ಚು ಕಂಟೆಂಟ್ ಗಳನ್ನು ಆಪ್ ಲೋಡ್ ಮಾಡಲಾಗಿದೆ. ಈ ಆಯಪ್ ನಲ್ಲಿ ಮೌಲ್ಯವರ್ಧಿತ ಪಠ್ಯಪುಸ್ತಕಗಳೂ ದೊರೆಯಲಿವೆ. ಅವುಗಳೆಲ್ಲವನ್ನೂ ಡೌನ್ ಲೋಡ್ ಮಾಡಿಕೊಂಡು ಪಾಠ ಅಭ್ಯಾಸ ಮಾಡಬಹುದಾಗಿದೆ.

ಜೊತೆಗೆ ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೋ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು. ತರಗತಿವಾರು ಮಕ್ಕಳ ಪೋಷಕರ ವಾಟ್ಸ್ ಆಯಪ್ ಗುಂಪುಗಳನ್ನು ಮಾಡಿ ಅವರನ್ನು ನಿಗದಿತವಾಗಿ ಸಂಪರ್ಕಿಸಿ ಮಕ್ಕಳ ಕಲಿಕೆಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸಂಪರ್ಕಿಸಿ ಮೊಬೈಲ್ ಫೋನ್, ಇಂಟರ್ನೆಟ್, ರೇಡಿಯೋ ದೂರದರ್ಶನ ಸೇರಿದಂತೆ ಮತ್ತಿತರ ತಾಂತ್ರಿಕ ಸೌಲಭ್ಯ ಮಾಹಿತಿ ಪಡೆದು, ಅವುಗಳ ಮೂಲಕ ಹೇಗೆ ಶಿಕ್ಷಣ ಪಡೆಯಬೇಕು ಎಂಬ ಗ್ಗೆ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಶಿಕ್ಷಕರಿಗೆ ಇಲಾಖೆ ಸೂಚಿಸಿದೆ.

ಯಾವುದೇ ತಾಂತ್ರಿಕ ಸೌಲಭ್ಯವಿಲ್ಲದ ವಿದ್ಯಾರ್ಥಿಗಳ ಮನೆಯ ಸಮೀಪದ ಸಹೃದಯಿ ವ್ಯಕ್ತಿ ಗುರ್ತಿರಿ ಅವರ ಬಳಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವಾಗುವಂತೆ ಶಿಕ್ಷಕರು ಮನವೊಲಿಸುವಂತೆಯೂ ಇಲಾಖೆ ಶಿಕ್ಷಕರಿಸೆ ಸೂಚಿಸಿದೆ.

ವಿದ್ಯಾರ್ಥಿಗಳಿಗೆ ವಾರಕ್ಕೆ ಎರಡು ಬಾರಿ ಶಾಲೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದ್ದು, ಈ ವೇಳೆ ಪ್ರಾಕ್ಟೀಸ್ ಶೀಟ್ ಗಳನ್ನು ನೀಡುವ ಶಿಕ್ಷಕರು, ಅವುಗಳನ್ನು ಯಾವ ರೀತಿ ಬರೆಯಬೇಕೆಂಬುದನ್ನು ಮಕ್ಕಳಿಗೆ ವಿವರಿಸಬೇಕು. ಮಕ್ಕಳು ಅಭ್ಯಾಸ ಮಾಡಿದ ಈ ಹಾಳೆಗಳು ಮುಂದಿನ ದಿನಗಳಲ್ಲಿ ಮೌಲ್ಯಮಾಪನಕ್ಕೆ ಬಳಕೆಯಾಗಲಿದೆ. ಪ್ರತೀ ಶಿಕ್ಷಕರು 10-15 ಮಕ್ಕಳಿಗೆ ಬೋಧನೆ ಮಾಡುವ ಜವಾಬ್ದಾರಿ ತೆರೆದುಕೊಳ್ಳಬೇಕು. ಮನೆಗಳಲ್ಲಿ ಟಿವಿ ಸೌಲಭ್ಯ ಇರುವ ಮಕ್ಕಳೂ ಕೂಡ ಈ ಅಭ್ಯಾಸವನ್ನು ಮಾಡಬೇಕು.

ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಹಿಂದಿನ ವರ್ಷದ ಪಠ್ಯ ಕೂಡ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ 30 ದಿನಗಳ ಕಾಲ ಸೇತುಬಂಧ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಸೇತುಬಂಧ ಕಾರ್ಯಕ್ರಮದ ಅಂತಿಮ ದಿನಗಳಲ್ಲಿ ಈ ಸಂಬಂಧ ಮಕ್ಕಳಿಗೆ ಆನ್'ಲೈನ್ ಹಾಗೂ ಆಫ್'ಲೈನ್ ನಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಈ ಹಿಂದಿನ ವರ್ಷದಂತೆಯೇ ವಿದ್ಯಾರ್ಥಿಗಳೂ ಈ ಬಾರಿಯು ಸಿದ್ಧತೆಗಳನ್ನು ನಡೆಸಬೇಕು.

ಶಾಲೆಯ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ವೇಳಾಪಟ್ಟಿಯನ್ನು ಸಿದ್ಧಪಡಿಸಿ ವಾರಕ್ಕೊಮ್ಮೆ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಭೇಟಿ ನೀಡುವಂತೆ ಮಾಡಿ, ವಿದ್ಯಾರ್ಥಿಯ ಕಾರ್ಯಕ್ಷಮತೆ ಕುರಿತು ಮಾತುಕತೆ ನಡೆಸಬೇಕು.
ಪ್ರತಿ ವಿದ್ಯಾರ್ಥಿಯ ವಿಷಯವಾರು ಕೃತಿ ಸಂಪುಟ ನಿರ್ವಹಣೆ ಮಾಡಿ ಮೌಲ್ಯಮಾಪನ ಮಾಡಬೇಕು. ಇದರ ವಿವರವನ್ನು ಕಡ್ಡಾಯವಾಗಿ ವಿದ್ಯಾರ್ಥಿ ಸಾಮರ್ಥ್ಯ ಟ್ರಾಕಿಂಗ್ ವ್ಯವಸ್ಥೆ ತಂತ್ರಾಂಶದಲ್ಲಿ ಅಳವಡಿಸಬೇಕು ಎಂದು ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
(ಮಾಹಿತಿ ಕೃಪೆ ಈ ಸಂಜೆ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ